ಅಗ್ನಿ ಅವಘಡ ಹಿನ್ನೆಲೆ: ತಪಾಸಣೆಗಾಗಿ 3,215 ವಾಹನಗಳನ್ನು ಹಿಂಪಡೆದ ಒಕಿನಾವ

By Suvarna News  |  First Published Apr 18, 2022, 10:39 AM IST

Fire in Electric Scooters: ಇತ್ತೀಚೆಗೆ ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಇದ್ದಕ್ಕಿದ್ದಂತೆ ಉರಿದುಹೋಗುವ ಘಟನೆಗಳು ಆಗಾಗ ಕೇಳಿ ಬರುತ್ತಿದೆ. ಇದರ ಹಿನ್ನೆಲೆ ಒಕಿನಾವಾ ಸಂಸ್ಥೆ ತನ್ನ ಸ್ಕೂಟರ್‌ಗಳನ್ನು ಹಿಂಪಡೆದಿದೆ.


ಒಕಿನಾವ ಆಟೋಟೆಕ್ (Okinawa Autotech) ತನ್ನ ಓಕಿನಾವ ಪ್ರೈಸ್ ಪ್ರೋ (Okinawa Price Pro) ಮಾದರಿಯ 3,215 ವಾಹನಗಳನ್ನು ಹಿಂದಕ್ಕೆ ಪಡೆದುಕೊಂಡಿದೆ. ಈ ವಾಹನಗಳಲ್ಲಿ ಬ್ಯಾಟರಿ ಸಂಬಂಧಿತ ಸಮಸ್ಯೆಗಳನ್ನು ಪರಿಶೀಲಿಸಲು ಮತ್ತು ಅದರ ದುರಸ್ತಿಗಾಗಿ ಈ ಕ್ರಮ ಕೈಗೊಂಡಿರುವುದಾಗಿ ಕಂಪನಿ ತಿಳಿಸಿದೆ. ಈ ಕ್ರಮ ಕಂಪನಿಯ ಸಂಗ್ರಹ ಪವರ್ ಪ್ಯಾಕ್ ಹೆಲ್ತ್ ಚೆಕ್-ಅಪ್ ಕ್ಯಾಂಪ್ಗಳ ಭಾಗವಾಗಿದೆ ಎಂದು  ಓಕಿನಾವ ತಿಳಿಸಿದೆ. ಇತ್ತೀಚಿಗೆ ದೇಶದ ಜನತೆಯ ಗಮನ ಸೆಳೆದಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೆಂಕಿ ಅವಘಡಗಳ ಹಿನ್ನೆಲೆಯಲ್ಲಿ ಕಂಪನಿ ಈ ಕ್ರಮ ಕೈಗೊಂಡಿದೆ.

ಈ ಇವಿಗಳ ಬ್ಯಾಟರಿಗಳಲ್ಲಿ ಲೂಸ್ ಕನೆಕ್ಷನ್ಗಳಿವೆಯೇ ಅಥವಾ ಯಾವುದೇ ಹಾನಿಯಾಗಿದೆಯೇ ಎಂದು ಪರಿಶೀಲಿಸಿ ಅಗತ್ಯವಿದ್ದಲ್ಲಿ, ದೇಶಾದ್ಯಂತ ಒಕಿನಾವ ಅಧಿಕೃತ ಡೀಲರ್ಶಿಪ್ಗಳಲ್ಲಿ ಉಚಿತವಾಗಿ ದುರಸ್ತಿ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಈ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾಕರು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ದುರಸ್ತಿ ಕೆಲಸಗಳನ್ನು ಒದಗಿಸಲು ಡೀಲರ್ಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಈ ಸ್ವಯಂಚಾಲಿತ ಅಭಿಯಾನವನ್ನು ಇತ್ತೀಚಿನ ಥರ್ಮಲ್ ಘಟನೆ ಮತ್ತು ಗ್ರಾಹಕರ ಸುರಕ್ಷತೆ ಕುರಿತ ಕಂಪನಿಯ ದೀರ್ಘಾವಧಿಯ ಬದ್ಧತೆಯ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

Tap to resize

Latest Videos

ಏಪ್ರಿಲ್ 16ರಂದು ತಮಿಳುನಾಡಿನ ಒಕಿನಾವ ಡೀಲರ್ಶಿಪ್ನಲ್ಲಿ ಬೆಂಕಿ ಅವಘಡ ಕಾಣಿಸಿಕೊಂಡಿತ್ತು. ಇದಕ್ಕೆ ಕಾರಣ ಅಲ್ಲಿ ನಿಲ್ಲಿಸಿದ್ದ ಎಲೆಕ್ಟ್ರಿಕ್ ಸ್ಕೂಟರ್ ಎಂದು ಗುರುತಿಸಲಾಗಿತ್ತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ,  ಡೀಲರ್ಶಿಪ್ನಲ್ಲಿ ಉಂಟಾಗಿರುವ ಹಾನಿಯ ಕುರಿತು ಇನ್ನೂ ಅಂದಾಜಿಸಲಾಗಿಲ್ಲ. 
ಕಳೆದ ತಿಂಗಳು, ಪುಣೆಯಲ್ಲಿ ಓಲಾ ಎಲೆಕ್ಟ್ರಿಕ್ (Ola electric) ಸ್ಕೂಟರ್ಗೆ ಬೆಂಕಿ ಹತ್ತಿಕೊಂಡ ನಂತರ, ಕೇಂದ್ರ ಸರ್ಕಾರ ಘಟನೆಯ ಕುರಿತು ಸಮಗ್ರ ತನಿಖೆಗೆ ಆದೇಶಿಸಿದೆ. ಅಗ್ನಿ ಸ್ಫೋಟಕ ಮತ್ತು ಪರಿಸರ ಸುರಕ್ಷತೆ (ಸಿಎಫ್ಇಇಎಸ್-CFEES))ಗೆ ಈ ಜವಾಬ್ದಾರಿ ವಹಿಸಲಾಗಿದೆ. ಘಟನೆಗೆ ಕಾರಣವಾದ ಸನ್ನಿವೇಶಗಳನ್ನು ಪತ್ತೆ ಹಚ್ಚುವ ಜೊತೆಗೆ, ಇದಕ್ಕೆ ಪರಿಹಾರ ಕ್ರಮಗಳನ್ನು ಸೂಚಿಸುವಂತೆ ರಸ್ತೆ ಸಾರಿಗೆ ಸಚಿವಾಲಯ ಸೂಚನೆ ನೀಡಿದೆ.

ಏಪ್ರಿಲ್ 9ರಂದು ಮತ್ತೊಂದು ಘಟನೆಯಲ್ಲಿ ಮಹಾರಾಷ್ಟ್ರದ ನಾಸಿಕ್ನಲ್ಲಿನ ಜಿತೇಂದ್ರ ನ್ಯೂ ಇವಿ (Jitendra new EV) ಟೆಕ್ನ ಕಾರ್ಖಾನೆ ಗೇಟ್ ಬಳಿ ವಾಹನಗಳನ್ನು ಸಾಗಿಸುವಾಗ ದ್ವಿಚಕ್ರ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. 

ಇದನ್ನೂ ಓದಿ: ಎಲೆಕ್ಟ್ರಾನಿಕ್‌ ವಾಹನ ಬೆಂಕಿ ಅವಘಡ ವರದಿಗಳ ನಡುವೆಯೇ ಓಲಾ ಸಿಇಓ ಭವೀಶ್‌ ಅಗರ್ವಾಲ್‌-ನಿತಿನ್ ಗಡ್ಕರಿ ಭೇಟಿ

ಓಕಿನಾವಾ ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ 80,613 ರೂ.ಗಳಿಂದ ಆರಂಭವಾಗುತ್ತದೆ. ಇದು ಕೇವಲ 1 ವೇರಿಯಂಟ್ ಮತ್ತು 4 ಬಣ್ಣಗಳಲ್ಲಿ ಲಭ್ಯವಿದೆ. ಓಕಿನಾವಾ ಪ್ರೈಸ್ ತನ್ನ ಮೋಟಾರ್ನಿಂದ 1000 ವ್ಯಾಟ್ ಪವರ್ ಉತ್ಪಾದಿಸುತ್ತದೆ. ಮುಂಭಾಗ ಮತ್ತು ಹಿಂಭಾಗದ ಎರಡೂ ಡಿಸ್ಕ್ ಬ್ರೇಕ್ಗಳೊಂದಿಗೆ, ಓಕಿನಾವಾ ಪ್ರೈಸ್ ಎಲೆಕ್ಟ್ರಾನಿಕ್ ನೆರವಿನ ಬ್ರೇಕಿಂಗ್ ಸಿಸ್ಟಮ್ನೊಂದಿಗೆ ಬರುತ್ತದೆ.

ಓಕಿನಾವಾ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್  ಪ್ರೈಸ್ ಮತ್ತು ಪ್ರೈಸ್ಪ್ರೊ ವೇರಿಯಂಟ್ಗಳಲ್ಲಿ ಲಭ್ಯವಿದೆ. ಇದರಲ್ಲಿ ಸೈಡ್-ಸ್ಟ್ಯಾಂಡ್ ಇಂಡಿಕೇಟರ್, ಆಂಟಿ-ಥೆಫ್ಟ್ ಸೆನ್ಸಾರ್, ಕೀಲೆಸ್ ಎಂಟ್ರಿ ಮತ್ತು ಫೈಂಡ್-ಮೈ ಸ್ಕೂಟರ್ನಂತಹ ವೈಶಿಷ್ಟ್ಯಗಳಿವೆ

ಇದನ್ನೂ ಓದಿ: Traffic Rules ದ್ವಿಚಕ್ರ ವಾಹನಕ್ಕೆ 2 ಮಿರರ್, ಇಂಡಿಕೇಟರ್ ಕಡ್ಡಾಯ, ಉಲ್ಲಂಘಿಸಿದರೆ ಬೀಳುತ್ತೆ ದಂಡ!

ಸ್ಕೂಟರ್ ಮೂರು ವಿಧಾನಗಳನ್ನು ಪಡೆಯುತ್ತದೆ- ಇಕೋ, ಸ್ಪೋರ್ಟ್ ಮತ್ತು ಟರ್ಬೊ. ಉನ್ನತ ವೇಗದ ಅಂಕಿಅಂಶಗಳ ಪ್ರಕಾರ, ಇ-ಸ್ಕೂಟರ್ ಇಕೋ ಮೋಡ್ನಲ್ಲಿ 30-35 ಕಿಮೀ, ಸ್ಪೋರ್ಟ್ಸ್ ಮೋಡ್ನಲ್ಲಿ 50-60 ಕಿಮೀ ಮತ್ತು ಟರ್ಬೊ ಮೋಡ್ನಲ್ಲಿ 65-70 ಕಿಮೀ ವೇಗದಲ್ಲಿ ಚಲಿಸಬಲ್ಲದು. ಓಕಿನಾವಾ ಪ್ರೈಸ್ ಕಪ್ಪು, ಕಪ್ಪು-ನೀಲಿ ಹಾಗೂ ಚಿನ್ನ-ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ. ಇದರ ಪ್ರೈಸ್ ಪ್ರೋ ಕೆಂಪು-ಕಪ್ಪು ಹಾಗೂ ಹೊಳೆಯುವ ಕಪ್ಪು ಬಣ್ಣಗಳಲ್ಲಿ ಲಭ್ಯವಿವೆ.

click me!