ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಓಲಾ ಎಲೆಕ್ಟ್ರಿಕ್ (Ola electric ) ಕಾರ್ಯನಿರ್ವಹಕ ಅಧಿಕಾರಿ (CEO) ಭವೀಶ್ ಅಗರ್ವಾಲ್, ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದಾರೆ.
ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಓಲಾ ಎಲೆಕ್ಟ್ರಿಕ್ (Ola electric ) ಕಾರ್ಯನಿರ್ವಹಕ ಅಧಿಕಾರಿ (CEO) ಭವೀಶ್ ಅಗರ್ವಾಲ್, ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ್ದಾರೆ.ಈ ಕುರಿತು ಅಗರ್ವಾಲ್ ತಮ್ಮ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸಚಿವರು ಈ ಸಂದರ್ಭದಲ್ಲಿ ಕಂಪನಿಯ ಎಸ್1 ಪ್ರೋ (S1 pro) ಎಲೆಕ್ಟ್ರಿಕ್ ಸ್ಕೂಟರ್ನ ಪ್ರಾತ್ಯಕ್ಷಿಕೆ ಪ್ರದರ್ಶನದಲ್ಲಿ ಕೂಡ ಭಾಗಿಯಾಗಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಅಗರ್ವಾಲ್ ಸಚಿವರನ್ನು ಭೇಟಿ ಮಾಡಿ ವಿಶ್ವದ ಇವಿ ಹಬ್ (EV hub) ಮತ್ತು ಓಲಾದ ಯೋಜನೆಗಳ ಕುರಿತು ಚರ್ಚಿಸಿದ್ದಾಗಿ ತಿಳಿಸಿದ್ದಾರೆ. ದೇಶದಲ್ಲಿ ಎಲೆಕ್ಟ್ರಿಕ್ ಕ್ರಾಂತಿ ಹುಟ್ಟುಹಾಕುವ ಅವರ ಯೋಜನೆ ಸ್ಫೂರ್ತಿದಾಯಕವಾಗಿದೆ ಎಂದಿದ್ದಾರೆ.
undefined
ಇದನ್ನೂ ಓದಿ: ಎಲೆಕ್ಟ್ರಿಕ್ ವಾಹನಗಳ ಚಿಲ್ಲರೆ ಮಾರಾಟ ಮೂರು ಪಟ್ಟು ಜಿಗಿತ-ಎಫ್ಎಡಿಎ ವರದಿ
“ನಿತಿನ್ ಗಡ್ಕರಿ ಜಿ ಅವರನ್ನು ಭೇಟಿ ಮಾಡಿ, ಭಾರತ ವಿಶ್ವದ ಇವಿ ಹಬ್ ಆಗುವ ಸಂಭಾವ್ಯತೆಗಳು ಹಾಗೂ ಓಲಾದ ಯೋಜನೆಗಳ ಕುರಿತು ಚರ್ಚಿಸಿದೆವು. ಜೊತೆಗೆ, ಸ್ಕೂಟರ್ನ ಡೆಮೋ ಕೂಡ ತೋರಿಸಿದೆವು. ದೇಶದಲ್ಲಿ ಎಲೆಕ್ಟ್ರಿಕ್ ಕ್ರಾಂತಿ ಹುಟ್ಟು ಹಾಕುವ ಹಾಗೂ ಸುಸ್ಥಿರ ಮೊಬಿಲಿಟಿಯ ಕನಸನ್ನು ನನಸಾಗಿಸುವ ಅವರ ಯೋಜನೆಗಳು ನಿಜಕ್ಕೂ ಸ್ಫೂರ್ತಿದಾಯಕವಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
Met Shri ji and discussed India's potential to become world's EV hub and Ola’s plans. Demoed the scooter to him! His belief in bringing together an electric revolution and making sustainable mobility a reality is really inspiring for us at ! pic.twitter.com/eRhHcOHfOd
— Bhavish Aggarwal (@bhash)
ದೇಶಾದ್ಯಂತ ಸಂಭವಿಸುತ್ತಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಬೆಂಕಿ ಅವಘಢಗಳ ಕುರಿತು ತನಿಖೆ ನಡೆಸುವಂತೆ ಕೇಂದ್ರ ಸರ್ಕಾರ ಆದೇಶ ನೀಡಿದ ಬೆನ್ನಲ್ಲೇ ಈ ಭೇಟಿ ಕುತೂಹಲ ಮೂಡಿಸಿದೆ. ಇತ್ತೀಚೆಗೆ ಪುಣೆಯಲ್ಲಿ ಎಸ್1 ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ, ಈ ಕಂಪನಿಯ ವಾಹನಗಳು ಕೂಡ ತನಿಖೆಗೊಳಪಡಲಿವೆ. ಘಟನೆಯಲ್ಲಿ ಯಾರಿಗೂ ಹಾನಿಯಾಗಿರಲಿಲ್ಲವಾದರೂ, ಸ್ಕೂಟರ್ ಸಂಪೂರ್ಣವಾಗಿ ಸುಟ್ಟು ಹೋಗಿತ್ತು. ಇದು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಸುರಕ್ಷತೆ ಕುರಿತು ಪ್ರಶ್ನೆಗಳು ಎದ್ದಿದ್ದವು.
ಬೆಂಕಿ ಅವಘಡಗಳ ಕುರಿತು ತನಿಖೆ ನಡೆಸುವಂತೆ ಕೇಂದ್ರ ಸರ್ಕಾರ ಅಗ್ನಿ ಸ್ಫೋಟಕ ಮತ್ತು ಪರಿಸರ ಸುರಕ್ಷತೆ –ಸಿಎಫ್ಇಇಎಸ್ (Fire explosive and environment safety –CFEES)ಗೆ ಆದೇಶ ನೀಡಿದೆ. ಜೊತೆಗೆ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ನಿವಾರಣಾ ಕ್ರಮಗಳನ್ನು ಸೂಚಿಸುವಂತೆ ಡಿಆರ್ಡಿಓ ಲ್ಯಾಬ್ನ ಸಿಸ್ಟಮ್ ಅನಾಲಿಸಿಸ್ ಮತ್ತು ಮಾಡೆಲಿಂಗ್ –ಸ್ಯಾಮ್ ಗೆ ಕೂಡ ಸರ್ಕಾರ ಮನವಿ ಮಾಡಿದೆ.
ಇದನ್ನೂ ಓದಿ: ಈ ಎಲೆಕ್ಟ್ರಿಕ್ ಕಾರಿನಲ್ಲಿ 60 ಕಿ.ಮೀ ಕ್ರಮಿಸಲು ಕೇವಲ 5 ರೂಪಾಯಿ ಖರ್ಚು!
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಗಿರಿಧರ್ ಅರಮನೆ ಅವರು, ಅಗತ್ಯಬಿದ್ದಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿ ಅಧಿಕಾರಿಗಳಿಂದ ವಿವರಣೆ ಕೇಳಲಾಗುವುದು ಎಂದು ಕೂಡ ಹೇಳಿಕೆ ನೀಡಿದ್ದಾರೆ.
ಇನ್ನೊಂದೆಡೆ, ಓಲಾ ಎಲೆಕ್ಟ್ರಿಕ್ ಕೂಡ ಘಟನೆಯ ಆಂತರಿಕ ತನಿಖೆ ಆರಂಭಿಸಿದೆ. ಕಳೆದ ತಿಂಗಳು ಈ ಕುರಿತು ಟ್ವೀಟ್ ಮಾಡಿದ್ದ ಅಗರ್ವಾಲ್, “ಘಟನೆಯ ಮೂಲ ಕಾರಣದ ತನಿಖೆ ನಡೆಸುತ್ತಿದ್ದು, ಮುಂದಿನ ಕೆಲ ದಿನಗಳಲ್ಲಿ ಇದರ ಮಾಹಿತಿ ಹಂಚಿಕೊಳ್ಳಲಾಗುವುದು” ಎಂದಿದ್ದರು.
ಇತ್ತೀಚಿನ ದಿನಗಳಲ್ಲಿ ಇವಿ ಬೆಂಕಿ ಅವಘಡಗಳು ಹೆಚ್ಚಳವಾಗುತ್ತಿದೆ. ಕಳೆದ ತಿಂಗಳಲ್ಲಿ ಇವಿ ದ್ವಿಚಕ್ರ ವಾಹನಗಳ ಮಾರಾಟ ಶೇ.370ರಷ್ಟು ಪ್ರಗತಿ ಕಂಡಿದೆ. ಮಾರ್ಚ್ ತಿಂಗಳೊಂದರಲ್ಲೇ 50 ಸಾವಿರ ವಾಹನಗಳ ಮಾರಾಟ ದಾಖಲಾಗಿದೆ. 2021ರ ಏಪ್ರಿಲ್ನಿಂದ ಕಳೆದ ತಿಂಗಳವರೆಗೆ ಒಟ್ಟು 2.31 ಲಕ್ಷ ಇವಿ ದ್ವಿಚಕ್ರ ವಾಹನಗಳು ಮಾರಾಟವಾಗಿವೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಇದು ಅತಿ ಹೆಚ್ಚಾಗಿದೆ. ಕಳೆದ ವರ್ಷ ಕೇವಲ 41,046 ವಾಹನಗಳು ಮಾರಾಟವಾಗಿದ್ದರು. ಈ ಬಾರಿ ಇದು ಶೇ.564ರಷ್ಟು ಹೆಚ್ಚಳವಾಗಿದೆ