ಬೆಂಗಳೂರು(ಮಾ.15): ಹೋಳಿ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಲು ಓಲಾ ಎಲೆಕ್ಟ್ರಿಕ್ ಲಿಮಿಟೆಡ್ ಎಡಿಶನ್ ಸ್ಕೂಟರ್ ಬಿಡುಗಡೆ ಮಾಡಿದೆ. ಓಲಾ ಗೆರುವಾ ಎಡಿಶನ್ ಹೊಸ ಬಣ್ಣದ ಈ ಸ್ಕೂಟರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿದೆ. ಮಾರ್ಚ್ 17 ಹಾಗೂ 18ಕ್ಕೆ ಮಾತ್ರ ಈ ಸ್ಕೂಟರ್ ಲಭ್ಯವಿದೆ.
ಕಾಯ್ದಿರಿಸುವಿಕೆಯನ್ನು ಹೊಂದಿರುವ ಎಲ್ಲಾ ಗ್ರಾಹಕರು 17ರಂದು ಇದನ್ನು ಖರೀದಿಸಲು ವಿಶೇಷ ಆರಂಭಿಕ ಪ್ರವೇಶಕ್ಕೆ ಅರ್ಹರಾಗಿರುತ್ತಾರೆ. ಎಲ್ಲಾ ಇತರ ಗ್ರಾಹಕರು ಮಾರ್ಚ್ 18 ರಂದು ಖರೀದಿಸಲು ಸಾಧ್ಯವಾಗುತ್ತದೆ. ಗೆರುವಾ ಬಣ್ಣವನ್ನು 17 ಮತ್ತು 18 ರಂದು ಮಾತ್ರ ಖರೀದಿಸಬಹುದು ಮತ್ತು ನಂತರ ಲಭ್ಯವಿರುವುದಿಲ್ಲ. ಓಲಾ ಎಸ್1 ಪ್ರೊ ಸರಣಿಯಲ್ಲಿ ಈಗಾಗಲೇ ಬಂದಿರುವ ಇತರ 10 ಸುಂದರವಾದ ಬಣ್ಣಗಳಲ್ಲಿ ಯಾವುದನ್ನಾದರೂ ಗ್ರಾಹಕರು ಖರೀದಿಸಬಹುದು.
undefined
ಸಂಪೂರ್ಣ ಡಿಜಿಟಲ್ ಪಾವತಿ ಪ್ರಕ್ರಿಯೆಯು ಓಲಾ ಅಪ್ಲಿಕೇಶನ್ ಮೂಲಕ ಮಾತ್ರ ಇರುತ್ತದೆ. ಓಲಾ ಫ್ಯೂಚರ್ ಫ್ಯಾಕ್ಟರಿಯಿಂದ ಓಲಾ ಎಸ್1ಪ್ರೊ ನ ಈ ಹೊಸ ಕಾರ್ಯಾದೇಶಗಳ ರವಾನೆಯು ಏಪ್ರಿಲ್ 2022 ರಿಂದ ಪ್ರಾರಂಭವಾಗುತ್ತದೆ. ಗ್ರಾಹಕರ ಮನೆ ಬಾಗಿಲಿಗೆ ವಾಹನ ತಲುಪಿಸಲಾಗುತ್ತದೆ.
ಒಲಾ S1 ಪ್ರೋ ಸ್ಕೂಟರ್ ನಿಜವಾದ ಮೈಲೇಜ್ ರೇಂಜ್ ಎಷ್ಟು?
ಎಸ್1 ಪ್ರೊ ಅದರ ಅತ್ಯುತ್ತಮ ವಿನ್ಯಾಸ, ಅತ್ಯುತ್ತಮ ಕಾರ್ಯಕ್ಷಮತೆ ಮತ್ತು ಅತ್ಯುತ್ತಮ ತಂತ್ರಜ್ಞಾನದೊಂದಿಗೆ ದೇಶದ ಉದ್ದ ಮತ್ತು ಅಗಲದ ಗ್ರಾಹಕರಿಗೆ ಇಗಿ ಗಳನ್ನು ಲಭ್ಯವಾಗುವಂತೆ ಮಾಡಿದೆ. ಓಲಾ ಫ್ಯೂಚರ್ ಫ್ಯಾಕ್ಟರಿಯಲ್ಲಿ ಸ್ಕೂಟರ್‌ಗಳನ್ನು ತಯಾರಿಸಲಾಗುತ್ತಿದೆ, ಇದು ವಿಶ್ವದ ಅತಿದೊಡ್ಡ ಮತ್ತು ಅತ್ಯಾಧುನಿಕ ಕಾರ್ಖಾನೆಯಾಗಿದೆ. ಅಗಾಧ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಕಂಪನಿಯು ಪ್ರಸ್ತುತ ಓಲಾ ಎಸ್1 ಪ್ರೊ ಸ್ಕೂಟರ್‌ನ ಉತ್ಪಾದನೆ ಮತ್ತು ವಿತರಣೆಯನ್ನು ಹೆಚ್ಚಿಸುತ್ತಿದೆ.
2 ದಿನದಲ್ಲಿ 1100 ಕೋಟಿ ಮೌಲ್ಯದ ಓಲಾ ಸ್ಕೂಟರ್ ಮಾರಾಟ
ಬೆಂಗಳೂರು ಮೂಲದ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗೆ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಎರಡು ದಿನದಲ್ಲಿ ಬರೋಬ್ಬರಿ 1,100 ಕೋಟಿ ರು. ಮೊತ್ತದ ಸ್ಕೂಟರ್‌ಗಳು ಮಾರಾಟವಾಗಿವೆ. ಇದು ವಾಹನ ಕ್ಷೇತ್ರದಲ್ಲಿ ಮಾತ್ರವಲ್ಲದೇ, ಭಾರತದ ಇ- ಕಾಮರ್ಸ್ ಇತಿಹಾಸದಲ್ಲಿಯೇ ಒಂದು ದಿನದಲ್ಲಿ ನಡೆದ ಅತಿ ದೊಡ್ಡ ಮೊತ್ತದ ಮಾರಾಟ ದಾಖಲೆ ಎನಿಸಿಕೊಂಡಿದೆ.
Ola E cycle ಹೊಸ ವರ್ಷದಲ್ಲಿ ಒಲಾ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ? ಕುತೂಹಲ ಮೂಡಿಸಿದ CEO ಟ್ವೀಟ್!
ಎರಡು ದಿನಗಳಲ್ಲಿ ನಿರೀಕ್ಷೆಗೂ ಮೀರಿ ಗ್ರಾಹಕರಿಂದ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೀಪಾವಳಿಯ ಸಂದರ್ಭದಲ್ಲಿ ಅಂದರೆ ನ.1ರಂದು ಮತ್ತೆ ಮಾರಾಟ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಓಲಾ ಸಹ ಸಂಸ್ಥಾಪಕ ಭವೀಶ್ ಅಗರ್ವಾಲ್ ಹೇಳಿದ್ದಾರೆ. ಈಗ ಖರೀದಿ ಆದ ಸ್ಕೂಟರ್‌ಗಳು ಅಕ್ಟೋಬರ್ ವೇಳೆಗೆ ಗ್ರಾಹಕರನ್ನು ತಲುಪಲಿದೆ.ಮೊದಲ ದಿನವೇ 600 ಕೋಟಿ ರು. ಮೌಲ್ಯದ ಸ್ಕೂಟರ್‌ಗಳು ಮಾರಾಟವಾಗಿದ್ದವು. ಎಸ್.1 ಮತ್ತು ಎಸ್.1 ಪ್ರೋ ಮಾದರಿಯ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಓಲಾ ಆ.15ರಂದು ಬಿಡುಗಡೆ ಮಾಡಿದೆ. ಸೆ.1 ಮಾದರಿಯ ಸ್ಕೂಟರ್‌ಗೆ 99,999 ರು. ಮತ್ತು ಎಸ್.1 ಪ್ರೋ ಮಾದರಿಯ ಸ್ಕೂಟರ್‌ಗೆ 1,29,999 ರು. ದರವನ್ನು ನಿಗದಿಪಡಿಸಲಾಗಿದೆ.
ಓಲಾ ಭಾರತದ ಅತಿದೊಡ್ಡ ಚಲನಶೀಲ ವೇದಿಕೆಯಾಗಿದೆ. ಓಲಾ ತನ್ನ ರೈಡ್ ಹೈಲಿಂಗ್ ಪ್ಲಾಟ್‌ಫಾರ್ಮ್ ಮೂಲಕ ಮತ್ತು ಅದರ ಫ್ಯೂಚರ್ ಫ್ಯಾಕ್ಟರಿಯಲ್ಲಿ ತಯಾರಿಸಲಾದ ಸುಧಾರಿತ ಎಲೆಕ್ಟ್ರಿಕ್ ವಾಹನಗಳ ಮೂಲಕ ಜಗತ್ತನ್ನು ಸುಸ್ಥಿರ ಚಲನಶೀಲತೆಗೆ ಚಲಿಸುವುದನ್ನು ಮುಂದುವರೆಸಿದೆ, ಇದು ವಿಶ್ವದ ಅತಿದೊಡ್ಡ, ಅತ್ಯಾಧುನಿಕ ಮತ್ತು ಸುಸ್ಥಿರ ದ್ವಿಚಕ್ರ ವಾಹನ ಕಾರ್ಖಾನೆಯಾಗಿದೆ. ಓಲಾ ತನ್ನ ಹೊಸ ವಾಹನ ವಾಣಿಜ್ಯ ವೇದಿಕೆಯನ್ನು ಓಲಾ ಕಾರ್‌ಗಳೊಂದಿಗೆ ತಡೆರಹಿತ, ಡಿಜಿಟಲ್ ಖರೀದಿ, ಮಾರಾಟ ಮತ್ತು ವಾಹನಗಳ ಮಾಲೀಕತ್ವವನ್ನು ಗ್ರಾಹಕರಿಗೆ ತರುತ್ತದೆ. ಓಲಾ ಜಗತ್ತನ್ನು ಸುಸ್ಥಿರ ಚಲನಶೀಲತೆಗೆ ಪರಿವರ್ತಿಸಲು ಮತ್ತು ನಾವು ಕಂಡುಕೊAಡಿದ್ದಕ್ಕಿAತ ಜಗತ್ತನ್ನು ಉತ್ತಮಗೊಳಿಸಲು ಸಮರ್ಪಿಸಲಾಗಿದೆ.