ಬೆಂಗಳೂರು(ಆ.15): ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದಲ್ಲಿ ಒಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ಕಡಿಮೆ ಬೆಲೆ, ಗರಿಷ್ಠ ಮೈಲೇಜ್ ಸೇರಿದಂತೆ ಹಲವು ವಿಶೇಷತೆಗಳು ಈ ಸ್ಕೂಟರ್‌ನಲ್ಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿ.ಮೀ ಮೈಲೇಜ್ ನೀಡಬಲ್ಲ ಸ್ಕೂಟರ್ ಇದಾಗಿದೆ.
ಮತ್ತೊಂದು ಗುಡ್‌ನ್ಯೂಸ್ ನೀಡಿದ ಓಲಾ ಎಲೆಕ್ಟ್ರಿಕ್ ಸ್ಕೂಟರ್; 10 ಆಕರ್ಷಕ ಬಣ್ಣಗಳಲ್ಲಿ ಲಭ್ಯ!
ಒಲಾ ಎಲೆಕ್ಟ್ರಿಕ್ ಸ್ಕೂಟರ್ ಎರಡು ವೇರಿಯೆಂಟ್ ಬಿಡುಗಡೆಯಾಗಿದೆ. ಒಲಾ ಎಲೆಕ್ಟ್ರಿಕ್ S1 ಹಾಗೂ ಒಲಾ ಎಲೆಕ್ಟ್ರಿಕ್ S1 Pro ಎಂಬ ಎರಡು ವೇರಿಯೆಂಟ್ ಸ್ಕೂಟರ್ ಲಭ್ಯವಿದೆ. ಸ್ಕೂಟರ್ ಬೆಲೆ 99,999 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ.
ಒಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ
ಒಲಾ ಎಲೆಕ್ಟ್ರಿಕ್ S1 = 99,999 ರೂಪಾಯಿ
ಒಲಾ ಎಲೆಕ್ಟ್ರಿಕ್ S1 Pro = 1,29,999 ರೂಪಾಯಿ
ಒಂದೇ ದಿನಕ್ಕೆ 1 ಲಕ್ಷ ಬುಕಿಂಗ್; ದಾಖಲೆ ಬರೆದ ಓಲಾ ಎಲೆಕ್ಟ್ರಿಕ್ ಸ್ಕೂಟರ್!
ಒಲಾ ಎಲೆಕ್ಟ್ರಿಕ್ S1
ಒಲಾ ಎಲೆಕ್ಟ್ರಿಕ್ S1 ಸ್ಕೂಟರ್ 3.9 kWh ಬ್ಯಾಟರಿ ಹೊಂದಿದೆ. 750W ಪೋರ್ಟೇಬಲ್ ಚಾರ್ಜರ್ ಮೂಲಕ ಸ್ಕೂಟರ್ ಚಾರ್ಜ್ ಮಾಡಲು 6 ಗಂಟೆ ಸಮಯ ಬೇಕು. ಇನ್ನು ಓಲಾ ಸೂಪರ್ ಚಾರ್ಜರ್ ಮೂಲಕ ಚಾರ್ಜ್ ಸುಲಭವಾಗಿದೆ. ಶೇಕಡಾ 50 ರಷ್ಟು ಚಾರ್ಜ್ 18 ನಿಮಿಷದಲ್ಲಿ ಆಗಲಿದೆ. ಒಂದು ಸಂಪೂರ್ಣ ಚಾರ್ಜ್‌ಗೆ 150 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ.
ಒಲಾ ಎಲೆಕ್ಟ್ರಿಕ್ S1 Pro
ಎರಡನೇ ವೇರಿಯೆಂಟ್ ಸ್ಕೂಟರ್‌ನಲ್ಲಿ ಕೇವಲ ಒಂದು ಬದಲಾವಣೆ ಇದೆ. ಅದು ಬ್ಯಾಟರಿ. S1 Pro ಸ್ಕೂಟರ್‌ನಲ್ಲಿ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದೆ. ಇದರ ಮೈಲೇಜ್ 181 ಕಿ.ಮೀ. ಹೀಗಾಗಿ ಇದರ ಬೆಲೆ ಕೂಡ ಹೆಚ್ಚಾಗಿದೆ.
ವಿಶ್ವದ ಅತೀ ದೊಡ್ಡ ಫ್ಯಾಕ್ಟರಿ; ಒಲಾ ಘಟಕದಲ್ಲಿ ಪ್ರತಿ 2 ನಿಮಿಷಕ್ಕೊಂಡು ಸ್ಕೂಟರ್ ನಿರ್ಮಾಣ!
ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ರಿವರ್ಸ್ ಮೂಡ್ ಗೇರ್ ಕೂಡ ಲಭ್ಯವಿದೆ. ಪಾರ್ಕ್ ಮಾಡಿದ ಸ್ಕೂಟರ್ ಹಿಂದಕ್ಕೆ ತೆಯಗಲು ಸೇರಿದಂತೆ ಹಲವು ಕಾರಣಗಳಿಗೆ ರಿವರ್ಸ್ ಗೇರ್ ಕೂಡ ನೀಡಲಾಗಿದೆ. ಇನ್ನು ಕಾರಿನಲ್ಲಿರುವಂತೆ ಹಿಲ್ ಹೋಲ್ಡ್ ಅಸಿಸ್ಟ್(HSA) ಫೀಚರ್ಸ್ ಕೂಡ ಲಭ್ಯವಿದೆ.
ಓಲಾ ಸ್ಕೂಟರ್ ಗರಿಷ್ಠ ವೇಗ 115 ಕಿ.ಮೀ ಪ್ರತಿ ಗಂಟೆಗೆ. ಇನ್ನು ಮೂರು ರೈಡಿಂಗ್ ಮೊಡ್ ಲಭ್ಯವಿದೆ. ನಾರ್ಮಲ್, ಸ್ಪೂರ್ಟ್ಸ್ ಹಾಗೂ ಹೈಪರ್ ಮೊಡ್ ಫೀಚರ್ಸ್ ಇದೆ. 10 ಬಣ್ಣಗಳಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿದೆ. ನೂತನ ಓಲಾ ಎಲೆಕ್ಟ್ರಿಕ್ ಸ್ಕೂಟರ್ TVS iಕ್ಯೂಬ್, ಬಜಾಜ್ ಚೇತಕ್, ಎದರ್ 450X ಸೇರಿದಂತೆ ಭಾರತದ ಕೆಲ ಎಲೆಕ್ಟ್ರಿಕ್ ಸ್ಕೂಟರ್‌ಗೆ ಪ್ರತಿಸ್ಪರ್ಧಿಯಾಗಿದೆ.