ಬೆಂಗಳೂರು(ಆ.14): ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗ ಹಲವು ವಿಶೇಷತೆಗಳಿವೆ. ಇದರ ಜೊತೆಗೆ ದೇಶದಲ್ಲಿ ಎರಡು ಪ್ರಮುಖ ಹಾಗೂ ಭಾರಿ ಭರವಸೆ ಮೂಡಿಸಿರುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಲಿದೆ. ಒಂದು ಓಲಾ ಎಲೆಕ್ಟ್ರಿಕ್ ಸ್ಕೂಟರ್, ಮತ್ತೊಂದು ಸಿಂಪಲ್ ಎನರ್ಜಿ ಸಂಸ್ಥೆ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್.
ಬರುತ್ತಿದೆ ಬೆಂಗಳೂರಿನ ಸಿಂಪಲ್ ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್
undefined
ಸಿಂಪಲ್ ಎನರ್ಜಿ ಸ್ಟಾರ್ಟ್ ಅಪ್ ಕಂಪನಿ ಬೆಂಗಳೂರು ಮೂಲದ ಕಂಪನಿ. ಸಿಂಪಲ್ ಒನ್ ಹೆಸರಿನಲ್ಲಿ ಭಾರತದ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಅತ್ಯಂತ ಮುಂಚೂಣಿಯ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ನಾಳೆ( ಆಗಸ್ಟ್ 15) ಸ್ಕೂಟರ್ ಬಿಡುಗಡೆಯಾಗುತ್ತಿದೆ. ಈ ಸ್ಕೂಟರ್ ವಿಶೇಷತೆ ಒಂದು ಬಾರಿ ಚಾರ್ಜ್ ಮಾಡಿದರೆ ಬರೋಬ್ಬರಿ 240 ಕಿ.ಮೀ ಪ್ರಯಾಣ ಮಾಡಬಹುದು.
ಸ್ವಾತಂತ್ರ್ಯ ದಿನಾಚರಣೆಗೆ ಬಿಡುಗಡೆಯಾಗುತ್ತಿರುವ ಸಿಂಪಲ್ ಒನ್ ಸ್ಕೂಟರ್ ಬುಕ್ ಮಾಡಲು 1947 ರೂಪಾಯಿ ಪಾವತಿಸಿದರೆ ಸಾಕು. 1947 ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ವರ್ಷವಾಗಿದೆ. ಹೀಗಾಗಿ ಇದೇ ಸ್ಕೂಟರ್ ಬುಕಿಂಗ್ ಬೆಲೆಯನ್ನು 1947 ಮಾಡಲಗಿದೆ. ನಾಳೆ 5 ಗಂಟೆಯಿಂದ ಬುಕಿಂಗ್ ಆರಂಭಗೊಳ್ಳಲಿದೆ. ಬುಕಿಂಗ್ ಆರ್ಡರ್‌ನಂತೆ ವಿತರಣೆ ಕೂಡ ಆರಂಭಗೊಳ್ಳಲಿದೆ.
ಆಗಸ್ಟ್ 15ಕ್ಕೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ; 50 ಸಾವಿರ ರೂ ಸಬ್ಸಿಡಿ ಸಾಧ್ಯತೆ!
ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಲಭ್ಯವಿರುವ ಗರಿಷ್ಠ ಮೈಲೇಜ್ ನೀಡಬಲ್ಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸ್ಕೂಟರ್ ಗರಿಷ್ಠ ವೇಗ 100KMPH. 0 ಯಿಂದ 50 kmph ವೇಗವನ್ನು ಕೇವಲ 3.6 ಸೆಕೆಂಡ್‌ಗಳಲ್ಲಿ ಪಡೆದುಕೊಳ್ಳಲಿದೆ. ಮತ್ತೊಂದು ವಿಶೇಷ ಅಂದರೆ ಕೇವಲ 1 ನಿಮಿಷ ಚಾರ್ಜ್ ಮಾಡಿದರೆ 2.5 ಕಿ.ಮೀ ಪ್ರಯಾಣ ಮಾಡಬಹುದು.
ಸ್ಕೂಟರ್ ಬೆಲೆ:
240 ಕಿ.ಮೀ ಮೈಲೇಜ್ ನೀಡಬಲ್ಲ ಸಿಂಪಲ್ ಒನ್ ಸ್ಕೂಟರ್ ಬೆಲೆ 1.30 ರಿಂದ 1.40 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಬಿಡುಗಡೆ ವೇಳೆ ನೂತನ ಸ್ಕೂಟರ್ ಬೆಲೆ ಬಹಿರಂಗವಾಗಲಿದೆ.
ಕರ್ನಾಟಕ ಸೇರಿ 13 ರಾಜ್ಯದಲ್ಲಿ ಲಭ್ಯ:
ಬೆಂಗಳೂರಿನ ಸಿಂಪಲ್ ಒನ್ ಸ್ಕೂಟರ್ ಕರ್ನಾಟಕ ಸೇರಿ ದೇಶದ 13 ರಾಜ್ಯಗಳಲ್ಲಿ ಲಭ್ಯವಿದೆ. ತಮಿಳುನಾಡು, ಗೋವಾ, ದೆಹಲಿ, ಉತ್ತರ ಪ್ರದೇಶ ಸೇರಿದಂತೆ 13 ರಾಜ್ಯಗಳಲ್ಲಿ ಸ್ಕೂಟರ್ ಲಭ್ಯವಾಗಲಿದೆ.
ಚಾರ್ಜಿಂಗ್:
ಕರ್ನಾಟಕ ಸೇರಿದಂತೆ 13 ರಾಜ್ಯಗಳಲ್ಲಿ ಚಾರ್ಜಿಂಗ್ ಸ್ಟೇಶನ್ ನಿರ್ಮಾಣ ಕಾರ್ಯಗಳು ನಡೆಯುತ್ತಿದೆ. 300 ಚಾರ್ಜಿಂಗ್ ಸ್ಟೇಶನ್ ಸ್ಥಾಪಿಸಲು ಸಿಂಪಲ್ ಒನ್ ಮುಂದಾಗಿದೆ. ಇನ್ನು 350 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಲ್ಲಿ ಕಂಪನಿ ಸ್ಕೂಟರ್ ಉತ್ಪಾದಕತೆ ವೇಗವನ್ನು ಹೆಚ್ಚಿಸಲು ನಿರ್ಧರಿಸಿದೆ.