10 ರೂ ನಾಣ್ಯ ಕೂಡಿಟ್ಟು 1.10 ಲಕ್ಷ ಬೆಲೆಯ ಎದರ್ ಸ್ಕೂಟರ್ ಖರೀದಿ,ಸಂತಸ ವ್ಯಕ್ತಪಡಿಸಿದ ಸಿಇಒ!

By Suvarna NewsFirst Published Feb 19, 2024, 3:32 PM IST
Highlights

ಎಂದಿನಂತೆ ಎಂದರ್ ಸ್ಕೂಟರ್ ಶೂ ರೂಂ ತೆರೆದಿತ್ತು. ವ್ಯಕ್ತಿಯೊಬ್ಬರು ಭಾರವಾದ ಬ್ಯಾಗ್‌ನೊಂದಿಗೆ ಆರಂಭಿಸಿದ ಎದರ್ ಖರೀದಿಗೆ ಸಿಬ್ಬಂದಿಗಳ ಜೊತೆ ಮಾತುಕತೆಗೆ ಕುಳಿತಿದ್ದರು. ಸಿಬ್ಬಂದಿಗಳು ಸಾಲ ಸೌಲಭ್ಯದ ಕುರಿತು ವಿವರಣೆ ನೀಡುವಾಗ, ಇಲ್ಲಾ, ಫುಲ್ ಕ್ಯಾಶ್ ಎಂದಿದ್ದಾರೆ. ಇಷ್ಟೇ ಅಲ್ಲ ಬ್ಯಾಗ್‌ನಿಂದ 10 ರೂಪಾಯಿ ನಾಣ್ಯಗಳ ಕಟ್ಟು ತೆಗೆದು ಮುಂದಿಟ್ಟಿದ್ದಾನೆ. ಸಿಬ್ಬಂದಿಗಳು ಒಂದು ಕ್ಷಣ ಅಚ್ಚರಿಗೊಂಡರು 10 ರೂಪಾಯಿ ನಾಣ್ಯದಲ್ಲೇ ಸ್ಕೂಟರ್ ಖರೀದಿಸಿದ ಘಟನೆ ಎದರ್ ಸಿಇಒ ಸಂಭ್ರಮ ಡಬಲ್ ಮಾಡಿದೆ.

ಜೈಪುರ(ಫೆ.19) ದೇಶದ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಪೈಕಿ ಎದರ್ ಮುಂಚೂಣಿಯಲ್ಲಿದೆ. ಪ್ರತಿ ದಿನ ಗ್ರಾಹಕರು ಎದರ್ ಕುರಿತು ವಿಚಾರಣೆ ಮಾಡುತ್ತಾರೆ. ಹಲವರು ಬುಕಿಂಗ್ ಮಾಡುತ್ತಿದ್ದರೆ, ಮತ್ತೆ ಕೆಲವರಿಗೆ ಎದರ್ ಸ್ಕೂಟರ್ ಮನೆಗೆ ತಂದ ಸಂಭ್ರಮ. ಹೀಗಾಗಿ ಜೈಪುರದ ಎದರ್ ಶೋ ರೂಂನಲ್ಲಿ ಸಿಬ್ಬಂದಿಗಳಿಗೆ ಅಚ್ಚರಿಯಾದ ಘಟನೆ ಇದೀಗ ವೈರಲ್ ಆಗಿದೆ. ವ್ಯಕ್ತಿಯೊಬ್ಬ 10 ರೂಪಾಯಿ ನಾಣ್ಯಗಳನ್ನು ಕೂಡಿಟ್ಟು 1.10 ಲಕ್ಷ ರೂಪಾಯಿ ಅಧಿಕ ಮೌಲ್ಯದ ಎದರ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ದಾರೆ. ಸಂಪೂರ್ಣ ಮೊತ್ತವನ್ನು 10 ರೂಪಾಯಿ ನಾಣ್ಯದ ಮೂಲಕವೇ ಪಾವತಿ ಮಾಡಲಾಗಿದೆ. 

ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಕಂಪನಿ ಎದರ್ ದೇಶಾದ್ಯಂತ ಎಲೆಕ್ಟ್ರಿಕ್ ಸ್ಕೂಟರ್ ವಿಚರಣೆ ಮಾಡುತ್ತಿದೆ. ಜೈಪುರದ ಎದರ್ ಶೋ ರೂಂ ಸಿಬ್ಬಂದಿಗಳು ಬುಕಿಂಗ್ ಮಾಡಿದ ಗ್ರಾಹಕರಿಗೆ ಬೈಕ್ ವಿತರಿಸುತ್ತಾ, ಬುಕಿಂಗ್ ಮಾಡಲು ಬಂದ ಗ್ರಾಹಕರಿಗೆ ಮಾಹಿತಿ ನೀಡುತ್ತಾ ತಮ್ಮ ಕೆಲಸದಲ್ಲಿ ಬ್ಯೂಸಿಯಾಗಿದ್ದರು. ಈ ವೇಳೆ ವ್ಯಕ್ತಿಯೊಬ್ಬರು ಭಾರವಾದ ಬ್ಯಾಗ್ ಹಿಡಿದು ಶೋ ರೂಂಗೆ ಆಗಮಿಸಿದ್ದಾರೆ.

ಹೊಸ ಬಣ್ಣ, ಮತ್ತಷ್ಟು ಫೀಚರ್ಸ್, ಎಥರ್ 450X ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!

ಸಿಬ್ಬಂದಿಗಳ ಈ ವ್ಯಕ್ತಿ ಬಳಿ ಬಂದು ಎದರ್ ಸ್ಕೂಟರ್ ಕುರಿತು ಮಾಹಿತಿ ನೀಡಿದ್ದಾರೆ. ಸ್ಕೂಟರ್ ಮಾಡೆಲ್, ವೇರಿಯೆಂಟ್ ಕುರಿತು ಮಾಹಿತಿ ಪಡೆದುಕೊಂಡು ವ್ಯಕ್ತಿ ಬುಕಿಂಗ್ ಮಾಡಲು ಸೂಚಿಸಿದ್ದಾನೆ. ಈ ವೇಳೆ ಡೌನ್‌ಪೇಮೆಂಟ್, ಸಾಲ ಸೌಲಭ್ಯದ ಕುರಿತು ಸಿಬ್ಬಂದಿಗಳು ಮಾಹಿತಿ ನೀಡಲು ಆರಂಭಿಸಿದ್ದಾರೆ. ಈ ವೇಳೆ ಸಾಲ ಬೇಡ, ಸಂಪೂರ್ಣ ಪಾವತಿ ಮಾಡುವುದಾಗಿ ಹೇಳಿದ್ದಾರೆ. 

ಚೆಕ್, ಯುಪಿಐ, ಬ್ಯಾಂಕ್ ಟ್ರಾನ್ಸ್‌ಫರ್ ಸೇರಿದಂತೆ ಇತರ ಹಣ ಪಾವತಿ ವಿಧಾನ ಕೇಳಿದ್ದಾರೆ. ಈ ವೇಳೆ ವ್ಯಕ್ತಿ ತಾನು ನಗದು ಪಾವತಿ ಮಾಡುವುದಾಗಿ ಹೇಳಿದ್ದಾರೆ. ಬಳಿಕ ತಂದಿದ್ದ ಬ್ಯಾಗ್‌ನಿಂದ ಒಂದೊಂದೆ ಕಟ್ಟು ನಾಣ್ಯ ಹೊರತೆಗೆದಿದ್ದಾರೆ. ಬರೋಬ್ಬರಿ 1.10 ಲಕ್ಷ ರೂಪಾಯಿಗೂ ಅಧಿಕ ಮೊತ್ತವನ್ನು 10 ರೂಪಾಯಿ ನಾಣ್ಯದ ಮೂಲಕ ನೀಡಿದ್ದಾರೆ.

ಎಥರ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ, ಟೆಸ್ಟ್ ರೈಡ್ ಮತ್ತಷ್ಟು ಸುಲಭ; ಬೆಂಗಳೂರಿನಲ್ಲಿ 2ನೇ ಸೆಂಟರ್ ಆರಂಭ!

ಇಬ್ಬರು  ಸಿಬ್ಬಂದಿಗಳು, ಮ್ಯಾನೇಜರ್ ಸೇರಿದಂತೆ ಒಟ್ಟ ಐವರು ಈ ನಾಣ್ಯಗಳನ್ನು ಎಣಿಸಿದ್ದಾರೆ. ಕೆಲ ಕಾಲ ನಾಣ್ಯಗಳನ್ನು ಎಣಿಸಿದ್ದಾರೆ. ಈ ವ್ಯಕ್ತಿ ಯಾವ ಮಾಡೆಲ್ ಎದರ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ದಾರೆ ಅನ್ನೋ ಮಾಹಿತಿ ಇಲ್ಲ. ಎದರೆ ಸ್ಕೂಟರ್ ಆರಂಭಿಕ ಬೆಲೆ 1.10 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದ್ದು, ಗರಿಷ್ಠ 1.89 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).

ಬೇಸ್ ವೇರಿಯೆಂಟ್ ಸ್ಕೂಟರ್ ಖರೀದಿಸಿದರೆ ಎಕ್ಸ್ ಶೋ ರೂಂಬೆಲೆ 1.10 ಲಕ್ಷ ರೂಪಾಯಿ ಇದನ್ನೂ ಈತ 10 ರೂ ನಾಣ್ಯದ ಮೂಲಕ ನೀಡಿದ್ದರೆ ಕನಿಷ್ಠ 11,000 ನಾಣ್ಯಗಳನ್ನು ನೀಡಬೇಕು. ಇನ್ನು ವಿಮೆ ಸೇರಿದಂತೆ ಇತರ ಮೊತ್ತ ಇದಕ್ಕೆ ಸೇರಿಕೊಳ್ಳಲಿದೆ.

click me!