ಬಜಾಜ್ ಆಟೋ ಇದೀಗ ತನ್ನ ಅತ್ಯಧಿಕ ಮಾರಾಟ ದಾಖಲೆ ಹೊಂದಿರುವ ಪಲ್ಸಾರ್ ಬೈಕ್ ಹೊಸ ಅವತಾರದಲ್ಲಿ ಅನಾವರಣ ಮಾಡಿದೆ. ಬಜಾಜ್ ಪಲ್ಸಾರ್ NS160 ಹಾಗೂ NS200 ಬೈಕ್ ಅನಾವರಣ ಮಾಡಿದೆ. ನೂತನ ಬೈಕ್ ಹಲವು ವಿಶೇಷತೆಗಳನ್ನೂ ಹೊಂದಿದೆ.
ನವದೆಹಲಿ(ಫೆ.17) ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿರುವ ಬಜಾಜ್ ಇದೀಗ ಹೊಸ ಅವತಾರದಲ್ಲಿ ಪಲ್ಸಾರ್ ಅನಾವರಣ ಮಾಡಿದೆ. ಬಜಾಜ್ ಪಲ್ಸಾರ್ NS160 ಹಾಗೂ NS200 ಬೈಕ್ ಅನಾವರಣಗೊಂಡಿದೆ. ನೂತನ ಬೈಕ್ ಹಲವು ವಿಶೇಷತೆ ಜೊತೆಗೆ ಕೆಲ ಹೊಸತವನ್ನೂ ಹೊಂದಿದೆ. 2024ರ NS160 ಹಾಗೂ NS200 ಬೈಕ್‌ನಲ್ಲಿ ಎಲ್‌ಇಡಿ ಹೆಡ್‌ಲ್ಯಾಂಪ್ಸ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್, ಹ್ಯಾಲೋಜಿನ್ ಲ್ಯಾಂಪ್ಸ್ ಸೇರಿದಂತೆ ಹಲವು ಆಧುನಿಕ ಲೈಟ್ಸ್‌ಗಳೊಂದಿಗೆ ಹೊಸ ಬೈಕ್ ಅಂದ ಮತ್ತಷ್ಟು ಹೆಚ್ಚಿದೆ.
ಹೊಸ ಬೈಕ್‌ನಲ್ಲಿ ನೂತನ ಡಿಜಿಟಲ್ ಇನ್ಸ್‌ಸ್ಟ್ರುಮೆಂಟ್ ಕ್ಲಸ್ಟರ್ ಬಳಸಲಾಗಿದೆ. ನೂತನಇನ್ಸ್‌ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ಗೇರ್, ಇಂಡಿಕೇಟರ್, ಮೊಬೈಲ್ ನೋಟಿಫಿಕೇಶನ್ ಅಲರ್ಟ್, ಇಂದನ ಮಾಹಿತಿ, ಸರಾಸರಿ ಮೈಲೇಜ್ ಸೇರಿದಂತೆ ಮಾಹಿತಿಗಳು ಇದರಲ್ಲಿರಲಿದೆ. ಇನ್ನು ಅತ್ಯಂತ ಆಕರ್ಷಕ ಡಿಸೈನ್, ಗ್ರಾಫಿಕ್ ಸೇರಿದಂತೆ ಹಲವು ಹೊಸನತಗಳು ಈ ಬೈಕ್‌ನಲ್ಲಿದೆ.
undefined
ಕೇವರ 59 ಸಾವಿರ ರೂ ನಿಂದ ಆರಂಭ, ಇಲ್ಲಿದೆ ಭಾರತದ ಕಡಿಮೆ ದರದ ಉತ್ತಮ ಬೈಕ್ ಲಿಸ್ಟ್!
ನೂತನ ಬಜಾಜ್ ಪಲ್ಸಾರ್ NS160 ಹಾಗೂ NS200 ಬೈಕ್ ಎಂಜಿನ್‌ನಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. ಪಲ್ಸಾರ್ NS200 ಬೈಕ್ 24.16 bhp(9,750 rpm) ಪವರ್ ಹಾಗೂ 18.74 Nm (8,000 rpm) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇನ್ನು ಪಲ್ಸರ್ NS160 ಬೈಕ್ 16.96 bhp(9,000 rpm) ಪವರ್ ಹಾಗೂ 14.6 Nm (7,250 rpm) ಟಾರ್ಕ್ ಉತ್ಪಾದಿಸಲಿದೆ.
ಹೊಚ್ಚ ಹೊಸ NS160 ಹಾಗೂ NS200 ಬೈಕ್ ಬೆಲೆ ಕುರಿತು ಸಾಕಷ್ಟು ಕುತೂಹಲಗಳಿವೆ. ಸದ್ಯ ಬೈಕ್ ಅನಾವರಣಗೊಂಡಿದೆ. ಆದರೆ ಬೆಲೆ ಮಾಹಿತಿ ಬಹಿರಂಗವಾಗಿಲ್ಲ. ಸದ್ಯ ಮಾರುಕಟ್ಟೆಯಲ್ಲಿರುವ ಬಜಾಜ್ ಪಲ್ಸಾರ್ NS160 ಹಾಗೂ NS200 ಬೈಕ್‌ಗಿಂತ ಕೊಂಚ ದುಬಾರಿಯಾಗಲಿದೆ ಅನ್ನೋ ಮಾಹಿತಿಗಳು ಮಾತ್ರ ಲಭ್ಯವಿದೆ.
29 ವರ್ಷ ಹಳೆಯ ಬಜಾಜ್ ಚೇತಕ್ ಸ್ಕೂಟರ್‌ಗೆ ಮರುಜೀವ: ವಿಡಿಯೋ ವೈರಲ್
ಬಜಾಜ್ ಆಟೋ
ಬಜಾಜ್ ಆಟೋ ದ್ವಿಚಕ್ರ ವಾಹನಗಳ ಜೊತೆ ಮೂರು ಚಕ್ರದ ವಾಹನಗಳಲ್ಲೂ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಇತ್ತೀಚೆಗೆ ಬಜಾಜ್ ಎಲೆಕ್ಟ್ರಿಕ್ ತ್ರಿಚಕ್ರ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಸರಕು ಸಾಗಣೆಯ ಬಜಾಜ್ ಮ್ಯಾಕ್ಸಿಮಾ ಕಾರ್ಗೋ ಇ-ಟೆಕ್ 9.0 ಮತ್ತು ಎಕ್ಸ್‌ಎಲ್ ಕಾರ್ಗೋ ಇ-ಟೆಕ್ 12.0 ತ್ರಿಚಕ್ರ ವಾಹನಗಳನ್ನು ಬಿಡುಗಡೆ ಮಾಡಿದೆ.