ಹೀರೋ ಮಾವ್ರಿಕ್ 440 ಬೈಕ್ ಬುಕಿಂಗ್ಸ್ ಆರಂಭ, ಬೆಲೆ ಜೊತೆಗೆ ಬಂಪರ್ ಕೊಡುಗೆ ಘೋಷಣೆ!

By Suvarna News  |  First Published Feb 15, 2024, 6:22 PM IST

ಹೀರೋ ಮಾವ್‌ರಿಕ್ 440 ಬೈಕ್ ಬುಕಿಂಗ್ ಆರಂಭಗೊಂಡಿದೆ. ಮಾರ್ಚ್ 15ರೊಳಗೆ ಬೈಕ್ ಬುಕಿಂಗ್ ಮಾಡುವ ಗ್ರಾಹಕರಿಗೆ ವಿಶೇಷ ಆಫರ್ ಕೂಡ ಲಭ್ಯವಿದೆ. ನೂತನ ಬೈಕ್ ಬೆಲೆ, ಆಫರ್ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.


ಬೆಂಗಳೂರು(ಫೆ.15) :ಹೀರೋ ಮೋಟೋಕಾರ್ಪ್  ಬೈಕ್‌ಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಕೈಗೆಟುಕುವ ದರದಲ್ಲಿ ಹೀರೋ ಬೈಕ್‌ಗಳನ್ನು ನೀಡುತ್ತಿದೆ. ಇದೀಗ  ಹೀರೋ ಮೋಟೋಕಾರ್ಪ್ ಹೊಚ್ಚ ಹೊಸ ಮಾವ್‌ರಿಕ್ 440ದ ಬುಕಿಂಗ್ಸ್ ಆರಂಭಿಸಿದೆ. ಹೀರೋ ಶೋರೂಂ ಅಥವಾ ಆನ್‌ಲೈನ್ ಮೂಲಕ ಬೈಕ್ ಬುಕ್ ಮಾಡಿಕೊಳ್ಳಬಹುದು. ಮಾವ್‌ರಿಕ್ 440 ಮೂರು ವೇರಿಯಂಟ್‌ಗಳಲ್ಲಿ ಲಭ್ಯವಿರುತ್ತದೆ.  ಬೇಸ್, ಮಿಡ್ ಮತ್ತು ಟಾಪ್ ಮಾಡೆಲ್ ಕ್ರಮವಾಗಿ, 199,000 ರೂಪಾಯಿ(ಬೇಸ್), 214,000 ರೂಪಾಯಿ (ಮಿಡ್)  ಹಾಗೂ 224,000 ರೂಪಾಯಿ (ಟಾಪ್) ಆಕರ್ಷಕ ಬೆಲೆಗಳಲ್ಲಿ ಲಭ್ಯವಿದೆ. ಮಾವ್‌ರಿಕ್ ಕ್ಲಬ್ ಕೊಡುಗೆಗೆ ಸ್ವಾಗತ ಅನ್ನೋ ಹೊಸ ಆಫರ್ ಕೂಡ ಘೋ,ಣೆ ಮಾಡಲಾಗಿದೆ. ಇದರಡಿ ಮಾರ್ಚ್ 15ರೊಳಗೆ ಮ್ಆವ್‌ರಿಕ್ 440 ಬುಕ್ ಮಾಡುವ ಗ್ರಾಹಕರಿಗೆ ಕೆಲ ವಿಶೇಷ ಆಫರ್ ಲಭ್ಯವಿದೆ. ಗ್ರಾಹಕರಿಗೆ ರೂ.10,000/- ಮೌಲ್ಯದ ಮಾವ್‌‌ರಿಕ್ ಕಿಟ್ ಆಫ್ ಆ್ಯಕ್ಸಸರಿಸ್ ಮತ್ತು ಮರ್ಕಂಡೈಸ್ ದೊರೆಯಲಿದೆ.

ಮಧ್ಯಮ-ತೂಕದ ಮೋಟಾರುಸೈಕಲ್ ವರ್ಗಕ್ಕೆ ಹೀರೋ ಮೋಟೋಕಾರ್ಪ್‌ ಮಾವ್‌ರಿಕ್ 440 ಬೈಕ್ ಹಲವು ಹೊಸತನಕ್ಕೆ ಕಾರಣವಾಗಿದೆ. ಜನವರಿ 23ರಂದು ಜೈಪುರದಲ್ಲಿ ನಡೆದ ಹೀರೋ ವರ್ಲ್ಡ್ 2024ದಲ್ಲಿ ಅತಿದೊಡ್ಡ ನಿರೀಕ್ಷೆಯೊಂದಿಗೆ ಅನಾವರಣಗೊಂಡ ಈ ಕ್ರಿಯಾಶೀಲ ಮೋಟಾರುಸೈಕಲ್, ಸರಿಸಾಟಿಯಿಲ್ಲದ ಕಾರ್ಯಕ್ಷಮತೆ, ಸ್ಟೈಲ್ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ.

Latest Videos

undefined

ಒಂದು ತಿಂಗಳಲ್ಲಿ ದಾಖಲೆ ಬುಕಿಂಗ್ ಕಂಡ ಹೀರೋ ಕರಿಜ್ಮಾXMR , ಏನಿದರ ವಿಶೇಷತೆ?

ಸಂಚಾರದಟ್ಟಣೆಯಲ್ಲಿ ಕ್ಷಿಪ್ರ ಹಾಗೂ ತ್ವರೆಯಾಗಿರುವ ಆದರೂ ದೀರ್ಘ ಪ್ರಯಾಣಗಳಿಗೆ ಅತ್ಯಂತ ಬಲಿಷ್ಟ ಹಾಗೂ ಆರಾಮದಾಯಕವಾಗಿರುವ ಶಕ್ತಿಶಾಲಿ ಇಂಜಿನ್ ಹೊಂದಿರುವ ಮಾವ್‌ರಿಕ್ 440, ತನ್ನ ವಿಶಿಷ್ಟವಾದ, ಆಧುನಿಕ ಹಾಗೂ ಯುವ ವಿನ್ಯಾಸ ಮತ್ತು ಎಲ್ಲವೂ-ಲೋಹ ಬಾಡಿಯೊಂದಿಗೆ ಧೀಮಂತ ರಸ್ತೆ ಅಸ್ತಿತ್ವ ಪ್ರದರ್ಶಿಸುವುದರ ಜೊತೆಜೊತೆಗೇ ಪ್ರೇರನಾತ್ಮಕವಾದ ಚಾಲನಾ ಅನುಭವದ ಹೊಸ ಜಗತ್ತನ್ನೇ ತೆರೆದಿಡುತ್ತದೆ.

ಮಾವ್‌ರಿಕ್ 440, ತನ್ನದೇ ರೀತಿಯಲ್ಲಿ ಒಂದು ಸ್ಟೈಲ್ ಐಕಾನ್ ಆಗಿದೆ. ಇದರ ಮೂಲ ನೋಟ, ತೆರೆದುಕೊಂಡಿರುವ ಆರ್ಕಿಟೆಕ್ಚರ್ ಸಿದ್ಧಾಂತದೊಂದಿಗೆ ನಿರ್ಮಾಣಗೊಂಡಿರುವ ಮುಂಬದಿ ಫಾರ್ವರ್ಡ್ ಮಾಸ್ ಕಾರಣದಿಂದಾಗಿ ಇದು ಅತಿದೂರದಿಂದಲೇ ತಕ್ಷಣ ಗುರುತಿಸಬಹುದಾದ ಉತ್ಪನ್ನವಾಗಿದೆ. ಅತಿನಿಖರವಾದ ರೋಡ್‌ಸ್ಟರ್ ಸೌಂದರ್ಯ ಹಾಗೂ ಬಲಿಷ್ಟ ಸ್ಟೈಲಿಂಗ್ ನಡುವೆ ಸಮತೋಲನ ಕಾಯ್ದುಕೊಂಡಿರುವ ಈ ಮೋಟಾರುಸೈಕಲ್, ವಿಶಿಷ್ಟವಾದ ರಸ್ತೆ ಅಸ್ತಿತ್ವ ಮತ್ತು ಯುವ ಅಪೀಲ್ ಪ್ರದರ್ಶಿಸುತ್ತದೆ. ಹತ್ತಿರದಿಂದ ನೋಡಿದರೆ, ಧೀಮಂತವೆನಿಸುವ ಫ್ಯುಯೆಲ್ ಟ್ಯಾಂಕ್, ಫ್ರಂಟ್ ಪೆಂಡರ್, ಶ್ರೌಡ್ಸ್, ಫ್ಯುಯೆಲ್ ಟ್ಯಾಂಕ್ ಮತ್ತು ಆಮ್ಪ್ ಮುಂತಾದ ಲೋಹದ ಬಾಡಿ ಭಾಗಗಳಂತಹ ಐತಿಹಾಸಿಕ ವಿವರಗಳನ್ನು ನೀವು ಗುರುತಿಸಬಲ್ಲಿರಿ; ಎಲ್ಲಕ್ಕಿಂತ ಮಿಗಿಲಾಗಿ, ಇದರಲ್ಲಿ ಪರಸ್ಪರ ಸಂವಾದದ ಟೆಲಿಮ್ಯಾಟಿಕ್ಸ್ ಸಾಧನಗಳು ಹಾಗೂ ಅಗಲವಾದ ಹ್ಯಾಂಡಲ್‌ಬಾರ್‌ಗಳು ಇವೆ. ವಿಶಿಷ್ಟವಾದ ಹಾಗೂ ಗುಣವಿಶೇಷತೆಯುಳ್ಳ ಎಕ್ಸಾಸ್ಟ್ ನೋಟ್ ನಿಮ್ಮ ಸವಾರಿಗೆ ಜೊತೆಯಾಗಿರುತ್ತದೆ. ನಿಮಗಿಂತ ಮೊದಲೇ ರಸ್ತೆಗೆ ದೀಪ ಒದಗಿಸುವ ಈ ಮೋಟಾರುಸೈಕಲ್, ದುಂಡನೆಯ LED ಪ್ರೊಜೆಕ್ಟರ್ ಹೆಡ್‌ಲೈಟ್ಸ್, ಹಗಲಿನ ರನ್ನಿಂಗ್ ಲೈಟ್ಸ್, ಮತ್ತು ಸ್ಟೈಲ್ ಹಾಗೂ ಸುರಕ್ಷತೆಗಾಗಿ ಬುದ್ಧಿಶಾಲಿಯಾದ ಬೆಳಕನ್ನು ಹೊಂದಿರುವ ಆಲ್- LED ಲೈಟಿಂಗ್ ಸೆಟ್ ಹೊಂದಿದೆ.

82 ಸಾವಿರ ರೂಗೆ ಹೊಚ್ಚ ಹೊಸ ಹೀರೋ ಗ್ಲಾಮರ್, ಸುಲಭ ಸಾಲ ಸೌಲಭ್ಯ!

ಶಕ್ತಿ ಮತ್ತು ಕಾರ್ಯಕ್ಷಮತೆ
ಶಕ್ತಿಶಾಲಿಯಾದ ಮಾವ್‌ರಿಕ್ 440ದಲ್ಲಿ, ಎಲೆಕ್ಟ್ರಾನಿಕ್ ಫ್ಯುಯೆಲ್ ಇಂಜೆಕ್ಷನ್ ಇರುವ ಆಯಿಲ್ ಕೂಲರ್ 2V ಸಿಂಗಲ್-ಸಿಲಿಂಡರ್ 440cc ‘TorqX’ ಏರ್ ಕೂಲ್ಡ್ ಇಂಜಿನ್ ಅಳವಡಿಸಲಾಗಿದೆ. ಈ ಉದ್ದ-ಸ್ಟ್ರೋಕ್‌ನ ಇಂಜಿನ್   27 bhp @ 6000 rpm ಮತ್ತು 36 Nm @ 4000 rpm ಟಾರ್ಕ್ ಒದಗಿಸುತ್ತದೆ. ಹೈ ಲೋ-ಎಂಡ್ ಟಾರ್ಕ್‌ಗಾಗಿಯೇ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿರುವ ಪೀಕ್ ಟಾರ್ಕ್‌ನ 90%ಗಿಂತ ಹೆಚ್ಚಿನ ಟಾರ್ಕ್‌ಅನ್ನು ಕೇವಲ 2000 rpm ನಿಂದ ಪಡೆದುಕೊಳ್ಳಬಹುದಾದ್ದರಿಂದ, ನಗರ ಸವಾರಿ ಹಾಗೂ ಹೆದ್ದಾರಿ ಪ್ರಯಾಣಗಳಲ್ಲೂ ಅನಾಯಾಸವಾದ ಹಾಗೂ ಒತ್ತಡ ರಹಿತ ಸವಾರಿ ಒದಗಿಸುತ್ತದೆ.

click me!