Cyborg GT 120 Bike ಭಾರತದಲ್ಲಿ ಸೈಬೊರ್ಗ್ ಎಲೆಕ್ಟ್ರಿಕ್ ಸ್ಪೋರ್ಟ್ಸ್ ಬೈಕ್ ಅನಾವರಣ, 180 ಕಿ.ಮೀ ಮೈಲೇಜ್!

By Suvarna NewsFirst Published Jan 28, 2022, 3:53 PM IST
Highlights
  • ಪುಣೆ ಮೂಲದ ಇಗ್ನಿಟ್ರಾನ್ ಮೋಟೋಕಾರ್ಪ್ ಸ್ಟಾರ್ಟ್ಅಪ್
  • ಸೈಬೊರಾಗ್ ಬ್ರ್ಯಾಂಡ್ ಅಡಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆ
  • ಕ್ರ್ಯೂಸರ್ ಬೈಕ್ ಬಳಿಕ ಇದೀಗ ಸ್ಪೋರ್ಟ್ಸ್ ಬೈಕ್ ಅನಾವರಣ
  • ಅತ್ಯಾಕರ್ಷಕ ಶೈಲಿ, ಅತ್ಯುತ್ತಮ ಮೈಲೇಜ್ ಸೇರಿದಂತೆ ಹಲವು ವಿಶೇಷತೆ
     

ಪುಣೆ(ಜ.28): ಪುಣೆ ಮೂಲದ ಇಗ್ನಿಟ್ರಾನ್ ಮೋಟೋಕಾರ್ಪ್( Ignitron Motocorp) ಸ್ಟಾರ್ಟ್ಅಪ್ ಕಂಪನಿ ಈಗಾಗಲೇ ಭಾರತದಲ್ಲಿ ಸೈಬೊರಾಗ್(Cyborg) ಯೋಧಾ ಕ್ರ್ಯೂಸರ್ ಎಲೆಕ್ಟ್ರಕ್ ಬೈಕ್, ಸೈಬೊರ್ಗ್ ಬಾಬ್ ಸ್ಪೋರ್ಟ್ಸ್ ಬೈಕ್ ಅನಾವರಣ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಹೈಸ್ಪೀಡ್ ಸ್ಪೋರ್ಟ್ಸ್ ಬೈಕ್‌ನ್ನು ಇಗ್ನಿಟ್ರಾನ್ ಮೋಟೊಕಾರ್ಪ್ ಅನಾವರಣ ಮಾಡಿದೆ. GT 120 ಹೈಸ್ಪೀಡ್ ಸ್ಪೋರ್ಟ್ಸ್ ಬೈಕ್(High Speed Sports Bike) ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.

ಈಗಾಗಲೇ ಸೈಬೊರ್ಗ್ ಬ್ರ್ಯಾಂಡ್ ಅಡಿ ಭಾರಿ ಸದ್ದು ಮಾಡುತ್ತಿರುವ ಇಗ್ನಿಟ್ರಾನ್ ಇದೀಗ 3ನೇ ಎಲೆಕ್ಟ್ರಿಕ್ ಬೈಕ್(Electric Sports Bike) ಅನಾವರಣ ಮಾಡಿದೆ. ಈ ಮೂಲಕ ದೇಶದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಸಜ್ಜಾಗುತ್ತಿದೆ. ನೂತನ ಸೈಬೊರ್ಗ್ GT 120 ಹೈಸ್ಪೀಡ್ ಸ್ಪೋರ್ಟ್ಸ್ ಬೈಕ್ ಹಲವು ಹೊಸ ತಂತ್ರಜ್ಞಾನಗಳನ್ನು ಒಳಗೊಂಡಿದೆ. 

Electric Bike ಯುವ ಜನತೆಗಾಗಿ ಸೈಬಾರ್ಗ್ ಬಾಬ್ ಇ ಎಲೆಕ್ಟ್ರಿಕ್ ಬೈಕ್ ಅನಾವರಣ, 110KM ಮೈಲೇಜ್!

ಸೈಬೊರ್ಗ್  GT 120 ಹೈಸ್ಪೀಡ್ ಸ್ಪೋರ್ಟ್ಸ್ ಬೈಕ್ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಒಂದು ಬ್ಲಾಕ್ ಹಾಗೂ ಮತ್ತೊಂದು ಡಾರ್ಕ್ ಪರ್ಪಲ್. 4.68kWH ಲಿಥಿಯಂ ಐಯಾನ್ ಬ್ಯಾಟರಿ ಬಳಸಲಾಗಿದೆ.  ಈ ಬೈಕ್ ಗರಿಷ್ಠ ವೇಗ 125kmph. ಒಂದು ಬಾರಿ ಚಾರ್ಜ್ ಮಾಡಿದರೆ 180 ಕಿ.ಮೀ ಮೈಲೇಜ್ ನೀಡಲಿದೆ. ಈ ಬೈಕ್‌ನಲ್ಲಿ ಲೊಕೇಟ್ ಹಾಗೂ ಜಿಯೋಫೆನ್ಸಿಂಗ್, ಬ್ಯಾಟರಿ ಸ್ಟೇಟಸ್, USB ಚಾರ್ಜಿಂಗ್, ಬ್ಲೂಟೂಥ್, ಕೀಲೆಸ್ ಇಗ್ನಿಶನ್(ಸ್ಮಾರ್ಟ್‌ಫೋನ್ ಮೂಲಕ ಕಂಟ್ರೋಲ್ ಮಾಡಬಲ್ಲ ಇಗ್ನಿಶನ್),  LED ಡಿಜಿಟಲ್ ಕ್ಲಸ್ಟರ್, ಹಮಾಮಾನ ಹಾಗೂ ಶಾಕ್‌ನಿಂದ ಸಂಪೂರ್ಣ ಸುರಕ್ಷತೆ ನೀಡಬಲ್ಲ ಬ್ಯಾಟರಿ ಪ್ಯಾಕ್ ಹೊಂದಿದೆ.

ಇನ್ನು ಸೈಬೊರ್ಗ್  GT 120 ಹೈಸ್ಪೀಡ್ ಸ್ಪೋರ್ಟ್ಸ್ ಬೈಕ್ ಚಾರ್ಜಿಂಗ್ ಮನೆಯಲ್ಲಿನ 15Amp ಫಾಸ್ಟ್ ಪ್ಲಗ್ ಸಾಕೆಟ್ ಮೂಲಕ ಮಾಡಿಕೊಳ್ಳಬಹುದು. ಇದರಲ್ಲಿ ಸಂಪೂರ್ಣ ಚಾರ್ಜ್ ಆಗಲು 5 ಗಂಟೆ ತೆಗೆದುಕೊಳ್ಳಲಿದೆ. ಇನ್ನು 3 ಗಂಟೆಯಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ. ಇನ್ನು ಸ್ಪೋರ್ಟ್ಸ್ ಬೈಕ್ 2.5 ಸೆಕೆಂಡ್‌ಗಳಲ್ಲಿ 0-40 ಕಿ.ಮೀ ವೇಗ ಪಡೆದುಕೊಳ್ಳಲಿದೆ. 

Electric Bike 120 ಕಿ.ಮೀ ಮೈಲೇಜ್ ನೀಡಬಲ್ಲ ಆಕರ್ಷಕ ಸೈಬಾರ್ಗ್ ಯೋದಾ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್ ಅನಾವರಣ!

ನೂತನ GT 120 ಹೈಸ್ಪೀಡ್ ಸ್ಪೋರ್ಟ್ಸ್ ಬೈಕ್‌ನಲ್ಲಿ ಮೂರು ರೈಡಿಂಗ್ ಮೊಡ್‌ಗಳಿವೆ. ಇಕೊ, ನಾರ್ಮಲ್ ಹಾಗೂ ಸ್ಪೋರ್ಟ್ಸ್ ಮೊಡ್‌ಗಳಲ್ಲಿ ರೈಡ್ ಮಾಡಬಬುದು. ಇನ್ನು ರಿವರ್ಸ್ ಗೇರ್, ಪಾರ್ಕಿಂಗ್ ಅಸಿಸ್ಟ್, ಹೆಚ್ಚುವರಿ ಸೌಂಡ್ ಆಯ್ಕೆಯೂ ನೀಡಲಿದೆ. ಮುಂಭಾಗಕ್ಕೆ ಟೆಲಿಸ್ಕೋಪಿಕ್ ಫೋರ್ಕ್, ರೇರ್‌ನಲ್ಲಿ ಮೊನೋ ಶಾಕ್ ಸಸ್ಪೆನ್ಶನ್ ಬಳಸಲಾಗಿದೆ. ಇದರ ಜೊತೆಗೆ 5 ವರ್ಷ ಮೋಟಾರ್, ಬ್ಯಾಟರಿ ಹಾಗೂ ಬೈಕ್ ವಾರೆಂಟಿಯನ್ನು ನೀಡಲಾಗುತ್ತಿದೆ.

ಸುರಕ್ಷತೆಯಲ್ಲೂ ಹೆಚ್ಚಿನ ಮುತುವರ್ಜಿವಹಿಸಲಾಗಿದೆ. ಹಲವು ಕಾರಣಗಳಿಂದ ಸೈಬಾರ್ಗ್  GT 120 ಹೈಸ್ಪೀಡ್ ಸ್ಪೋರ್ಟ್ಸ್  ಗೇಮ್ ಚೇಂಜರ್ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಇಗ್ನಿಟ್ರಾನ್ ಮೋಟಾರ್ಕ್ ಕಾರ್ಪ್ ಸ್ಟಾರ್ಟ್ಅಪ್ ಸಂಸ್ಥಾಪಕ ರಾಘವ್ ಕಾಲ್ರಾ ಸಂತಸ ವ್ಯಕ್ತಪಡಿಸಿದ್ದಾರೆ. ಇಗ್ನಿಟ್ರಾನ್ ಮೋಟೋಕಾರ್ಪ್ 3ನೇ ಎಲೆಕ್ಟ್ರಿಕ್ ವಾಹನ ಅನಾವರಣ ಮಾಡುತ್ತಿರುವುದು ಹೆಚ್ಚು ಸಂತಸ ತಂದಿದೆ. ಯೋಧಾ, ಬಾಬ್ ಬಳಿಕ ಇದೀಗ ಮತ್ತೊಂದು ವಿಭಿನ್ನ ಶೈಲಿಯ, ಹೊಸ ತಂತ್ರಜ್ಞಾನಗಳ ಸ್ಪೋರ್ಟ್ಸ್ ಬೈಕ್ ಅನಾವರಣ ಮಾಡಲಾಗಿದೆ. ಅತ್ಯಂತ ಸ್ಟೈಲೀಶ್ ಲುಕ್, ಮೈಲೇಜ್ ರೇಂಜ್, ಸಾಮರ್ಥ್ಯ ಗ್ರಾಹಕರನ್ನು ಮತ್ತಷ್ಟು ಆಕರ್ಷಿಸಲಿದೆ ಎಂದು ರಾಘವ್ ಕಾಲ್ರಾ ಹೇಳಿದ್ದಾರೆ.

ಸೈಬಾರ್ಗ್ ಬ್ರ್ಯಾಂಡ್ ಅಡಿ ಮೂರು ಎಲೆಕ್ಟ್ರಿಕ್ ಬೈಕ್ ಅನಾವರಣಗೊಂಡಿದೆ. ದೇಶದಲ್ಲಿ ಈಗಾಗಲೇ ಹಲವು ಸ್ಟಾರ್ಟ್ಅಪ್ ಕಂಪನಿಗಳು ಹೊಸ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆ ಮಾಡುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಇತರ ರಾಜ್ಯಗಳಿಗಿಂತ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಸ್ಟಾರ್ಟ್ಅಪ್ ಕಂನಿಗಳು ಕಾರ್ಯನಿರ್ವಹಿಸುತ್ತಿದೆ.
 

click me!