ಪುಣೆ(ಜ.26): ಪುಣೆ ಮೂಲದ ಟಾರ್ಕ್ ಮೋಟಾರ್ಸ್(Tork Motors) ಹಾಗೂ ಭಾರತ್ ಪೋರ್ಜ್(Bharat Forge) ಕಂಪನಿ ಜಂಟಿಯಾಗಿ ಹೊಚ್ಚ ಹೊಸ ಟಾರ್ಕ್ ಕ್ರಾಟೊಸ್(Kratos) ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದೆ. ಕೇವಲ ಒಂದು ಗಂಟೆಯಲ್ಲಿ ಸಂಪೂರ್ಣ ಚಾರ್ಜ್ ಆಗಬಲ್ಲ ಎಲೆಕ್ಟ್ರಿಕ್ ಬೈಕ್ ಇದಾಗಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 120 ಕಿಲೋಮೀಟರ್ ಮೈಲೇಜ್ ರೇಂಜ್ ನೀಡಲಿದೆ.
ಟಾರ್ಕ್ ಕ್ರಾಟೊಸ್ ಹಾಗೂ ಟಾರ್ಕ್ ಕ್ರಾಟೊಸ್ ಆರ್ ಎಂಬು ಎರಡು ವೇರಿಯೆಂಟ್ ಬೈಕ್ ಬಿಡುಗಡೆಯಾಗಿದೆ. 999 ರೂಪಾಯಿ ನೀಡಿ ನೂತನ ಬೈಕ್ ಬುಕ್ ಮಾಡಿಕೊಳ್ಳಬಹುದು. ಹೊಚ್ಚ ಹೊಸ ಟಾರ್ಕ್ ಕ್ರಾಟೊಸ್ ಎಲೆಕ್ಟ್ರಿಕ್ ಬೈಕ್(Electric Bike) ಬೆಲೆ 1.08 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಕ್ರಾಟೋಸ್ ಆರ್ ಬೈಕ್ ಬೆಲೆ 1.23 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಮೊದಲ ಹಂತದಲ್ಲಿ ಟಾರ್ಕ್ ಮೋಟಾರ್ಸ್ ಎಲೆಕ್ಟ್ರಿಕ್ ಬೈಕ್ ಭಾರತದ ಪುಣೆ, ಮುಂಬೈ, ಹೈದರಾಬಾದ್ ಹಾಗೂ ದೆಹಲಿ ನಗರಗಳಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಇತರ ನಗರ ಹಾಗೂ ಭಾರತದ ಎಲ್ಲಾ ಕಡೆ ಈ ಎಲೆಕ್ಟ್ರಿಕ್ ಬೈಕ್ ಲಭ್ಯವಾಗಲಿದೆ.
undefined
Electric Bike ಬೆಂಗಳೂರಿನ ಒಬೆನ್ ಎಲೆಕ್ಟ್ರಿಕ್ ಬೈಕ್ ಸ್ಟಾರ್ಟ್‌ಅಪ್‌ಗೆ ಹರಿದು ಬಂತು 1 ಮಿಲಿಯನ್ ಡಾಲರ್ ಹಣ!
ಟಾರ್ಕ್ ಕ್ರಾಟೊಸ್ ಎಲೆಕ್ಟ್ರಿಕ್ ಬೈಕ್‌ನಲ್ಲಿ IP67 ರೇಟೆಡ್ 4 Kwh ಲಿಥಿಯಂ ಐಯಾನ್ ಬ್ಯಾಟರಿ ಬಳಸಲಾಗಿದೆ. 48V ವೋಲ್ಟೇಜ್ ಬ್ಯಾಟರಿ ಇದಾಗಿದ್ದು, IDC ರೇಂಜ್ ಪ್ರಕಾರ 180 ಕಿ.ಮೀ ಮೈಲೇಜ್ ನೀಡಲಿದೆ. ಪ್ರಾಯೋಗಿಕವಾಗಿ ಈ ಬೈಕ್ ಮೈಲೇಜ್ 120 ಕಿ.ಮೀ ಒಂದು ಸಂಪೂರ್ಣ ಚಾರ್ಜ್‌ಗೆ. ಟಾರ್ಕ್ ಕ್ರಾಟೋಸ್ ಎಲೆಕ್ಟ್ರಿಕ್ ಬೈಕ್ ಗರಿಷ್ಠ ವೇಗ 100 ಕಿ.ಮೀ ಪ್ರತಿ ಗಂಟೆಗೆ.
ನೂತನ ಬೈಕ್ 7.5 Kw ಎಲೆಕ್ಟ್ರಿಕ್ ಮೋಟಾರ್ ಬಳಸಲಾಗಿದೆ. ಇದರಿಂದ ಈ ಬೈಕ್ 28Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 0-40 ಕಿ.ಮೀ ವೇಗವನ್ನು ಕೇವಲ 4 ಸೆಕೆಂಡ್‌ಗಳಲ್ಲಿ ತಲುಪಲಿದೆ. ಇನ್ನು ಟಾರ್ಕ್ ಕ್ರಾಟೊಸ್ ಆರ್ ಬೈಕ್‌ನಲ್ಲಿ ಹೆಚ್ಚು ಶಕ್ತಿಶಾಲಿ ಬ್ಯಾಟರಿ ಹಾಗೂ ಮೋಟಾರ್ ಬಳಸಲಾಗಿದೆ. 9.0 Kw/38 Nm ಪವರ್ ಹೊಂದಿದೆ. ಕ್ರಾಟೋಸ್ ಆರ್ ಬೈಕ್ ಗರಿಷ್ಠ ವೇಗ 105 ಕಿ.ಮೀ ಪ್ರತಿ ಗಂಟೆಗೆ.
Electric Bike ಊಹೆಗೂ ಮೀರಿದ ಆಕರ್ಷಕ ಆರ್ಕ್ ವೆಕ್ಟರ್ ಎಲೆಕ್ಟ್ರಿಕ್ ಬೈಕ್ ಡೆಲಿವರಿ ಆರಂಭ, ಬೆಲೆ 91 ಲಕ್ಷ ರೂ!
ಟಾರ್ಕ್ ಮೋಟಾರ್ಸ್ ಬಿಡುಗಡೆ ಮಾಡಿರುವ ಕ್ರಾಟೊಸ್ ಎಲೆಕ್ಟ್ರಿಕ್ ಬೈಕ್ ಚಾರ್ಜಿಂಗ್ ಸಮಯ ಇತರ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್‌ಗಳಿಗಿಂತ ಕಡಿಮೆಯಾಗಿದೆ. ಕೇವಲ 1 ಗಂಟೆ ಸಮಯದಲ್ಲಿ ಕ್ರಾಟೋಸ್ ಬೈಕ್ ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಲಿದೆ. ಇನ್ನು ಮನೆಯಲ್ಲಿನ ಸಾಮಾನ್ಯ ಪ್ಲಗ್ ಪಾಯಿಂಟ್‌ನಲ್ಲೂ ಕ್ರಾಟೋಸ್ ಬೈಕ್ ಚಾರ್ಜ್ ಮಾಡಲು ಸಾಧ್ಯವಿದೆ. ಟಾರ್ಕ್ ಮೋಟಾರ್ಸ್ ಈಗಾಗಲೇ ನಗರಗಳಲ್ಲಿ ಟಿ ನೆಟ್ ಹೆಸರಿನಲ್ಲಿ ಚಾರ್ಜಿಂಗ್ ಸ್ಟೇಶನ್ ಅಳವಡಿಸುತ್ತಿದೆ. ದೇಶಾದ್ಯಂತ ಚಾರ್ಜಿಂಗ್ ನೆಟ್‌ವರ್ಕ್ ವಿಸ್ತರಿಸಲು ಯೋಜನೆ ಹಾಕಿಕೊಂಡಿದೆ.
ಕ್ರಾಟೊಸ್ ಎಲೆಕ್ಟ್ರಿಕ್ ಬೈಕ್ ಹಲವು ಫೀಚರ್ಸ್ ಹೊಂದಿದೆ. ಜಿಯೋ ಫೆನ್ಸಿಂಗ್, ವಾಹನ ಪತ್ತೆ ಹಚ್ಚಿ ಕೀ ಫಂಕ್ಷನ್, ಮೋಟಾರ್ ವಾಕ್ ಅಸಿಸ್ಟ್, ಕ್ರಾಶ್ ಅಲರ್ಟ್, ಟ್ರಾಕ್ ಮೊಡ್ ಆನಾಲಿಸಿಸ್ಟ್, ಸ್ಮಾರ್ಟ್ ಚಾರ್ಜ್ ಅನಾಲಿಸಿಸ್ಟ್, ವೇಕೇಶನ್ ಮೊಡ್ ಸೇರಿದಂತೆ ಹಲವು ಫೀಚರ್ಸ್ ಈ ಬೈಕ್‌ನಲ್ಲಿದೆ.
ಶೀಘ್ರದಲ್ಲೇ ದೇಶದ 100 ನಗರಗಳಲ್ಲಿ ಟಾರ್ಕ್ ಮೋಟಾರ್ಸ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯಾಗಲಿದೆ. ಹಲವು ಕಾರಣಗಳಿಂದ ಬಿಡುಗಡೆ ವಿಳಂಬವಾಗಿದ್ದ ಟಾರ್ಕ್ ಬೈಕ್ ಕೊನೆಗೂ ಹಲವು ವಿಶೇಷತೆಗಳೊಂದಿಗೆ ಬಿಡುಗಡೆಯಾಗಿದೆ. ಟಾರ್ಕ್ ಮೋಟಾರ್ಸ್ ಅಧಿಕೃತ ವೆಬ್‌ಸೈಟ್ ಮೂಲಕ ಬೈಕ್ ಬುಕ್ ಮಾಡಿಕೊಳ್ಳಬಹುದು.