Fire Ambulance ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕನ್ನು ಅಗ್ನಿಶಾಮಕವಾಗಿ ಪರಿವರ್ತನೆ, 13.5 ಲಕ್ಷ ರೂ!

By Suvarna NewsFirst Published Jan 26, 2022, 9:45 PM IST
Highlights
  • ಅಗ್ನಿಶಾಮಕ ಸೇವೆ ಅತೀ ವೇಗದಲ್ಲಿ ಲಭ್ಯವಾಗಲು ಹೊಸ ಪ್ಲಾನ್
  • ಬೈಕ್‌ನ್ನು ಅಗ್ನಿಶಾಮಕ ವಾಹನವನ್ನಾಗಿ ಮಾಡಿಫಿಕೇಶನ್
  • ರಾಯನ್ ಎನ್‌ಫೀಲ್ಡ್ ಹಿಮಾಲಯನ್ ಅಗ್ನಿಶಾಮಕ ವಾಹನ

ನವದೆಹಲಿ(ಜ.26):  ಅಗ್ನಿಶಾಮಕ ಸೇವೆ ತುರ್ತು(Fire Ambulance) ಸೇವೆಯಾಗಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣವೇ ಸ್ಥಳಕ್ಕೆ ಧಾವಿಸಿದರೆ ಹೆಚ್ಚಿನ ಅಪಾಯವಿಲ್ಲದೆ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸಾಧ್ಯ. ಇಲ್ಲವಾದರೆ ದುಬಾರಿ ಬೆಲೆ ತೆರಬೇಕಾಗುತ್ತದೆ. ಆದರೆ ಕೆಲ ಸಂದರ್ಭಗಳಲ್ಲಿ ಅಗ್ನಿಶಾಮಕ ವಾಹನ ಕೆಲ ಸ್ಥಳಕ್ಕೆ ತಲುಪಲು ಸಾಧ್ಯವಾಗುದಿಲ್ಲ. ಇದೀಗ ಹೀಗೆ ಅಗ್ನಿಶಾಮಕ ವಾಹನ ತಲುಪಲು ಸಾಧ್ಯವಾಗದ ಹಾಗೂ ಕಡಿಮೆ ಸಮಯದಲ್ಲಿ ಸ್ಥಳಕ್ಕೆ ಧಾವಿಸಲು ನೆರವಾಗಬಲ್ಲ ಅಗ್ನಿಶಾಮಕ ವಾಹನ ಇದೀಗ ಭಾರತದ ರಸ್ತೆಗಿಳಿದೆ. ಇದು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಫೈರ್ ಆ್ಯಂಬುಲೆನ್ಸ್.

ನಗರ ಪ್ರದೇಶದಲ್ಲಿನ ಟ್ರಾಫಿಕ್ ನಡುವೆ ಅಗ್ನಿಶಾಮಕ ವಾಹನ ನಿಗದಿತ ಸ್ಥಳ ತಲುಪಲು ವಿಳಂಬವಾಗಲಿದೆ. ಇಲ್ಲಿ ಬೈಕ್ ಹೆಚ್ಚು ನೆರವಾಗಲಿದೆ. ಹೀಗಾಗಿ ಇದೀಗ ಹಿಮಾಲಯನ್ ಬೈಕನ್ನು(Royal Enfield Himalayan Fire Ambulance) ಅಗ್ನಿಶಾಮಕ ವಾಹನವಾಗಿ ಪರಿವರ್ತಿಸಲಾಗಿದೆ. ಈಗಾಗಲೇ ಕೆಲ ನಗರಗಳಲ್ಲಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಅಗ್ನಿಶಾಮಕ ವಾಹನ ಸೇವೆ ನೀಡುತ್ತಿದೆ.

Royal Enfield Bike Price ಹೊಸ ವರ್ಷದಲ್ಲಿ ಬೈಕ್ ಪ್ರಿಯರಿಗೆ ಶಾಕ್, ಕ್ಲಾಸಿಕ್ 350, ಮೆಟಿಯೋರ್ ಬೆಲೆ ಹೆಚ್ಚಳ

500 ಸಿಸಿ ಹಿಮಾಲಯನ್ ಬೈಕ್‌ಗೆ ಅಗ್ನಿ ನಿಯಂತ್ರಿಸಬಲ್ಲ ಎಲ್ಲಾ ಸಾಧನಗಳನ್ನು ಅಳವಡಿಸಲಾಗಿದೆ. ಈ ಅಗ್ನಿಶಾಮಕ ಬೈಕ್‌ನ್ನು ಪುಣೆಯ(Pune) ಪಿಂಪ್ರಿ ಚಿಂಚಿವಾಡ್ ಮಹಾನಗರ ಪಾಲಿಕೆಯಲ್ಲಿ ನಿಯೋಜಿಸಲಾಗಿದೆ. ಈ ಹಿಮಾಲಯನ್ ಅಗ್ನಿಶಾಮಕ ಬೈಕ್‌ನಲ್ಲಿ 20 ಲೀಟರ್ ನೀರಿನ ಟ್ಯಾಂಕ್(Water Tank) ಅಳವಡಿಸಲಾಗಿದೆ. ಇನ್ನು 100 ಫೀಟ್ ಪೈಪ್‌ಗಳಲ್ಲಿ ಸುತ್ತಿಡಲು ಸ್ಥಳವಕಾಶ ನೀಡಲಾಗಿದೆ. ಇನ್ನು ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಕುಳಿತು ಪ್ರಯಾಣಿಸಲು ಅವಕಾಶವಿದೆ.

ಹಿಮಾಲಯನ್ ಬೈಕ್ 20 ಲೀಟರ್ ಅಗ್ನಿಶಾಮಕ ನಿಯಂತ್ರಿಸಬಲ್ಲ ನೀರು, ಪೈಪ್, ಇತರ ಸಲಕರಣೆ ಸೇರಿದಂತೆ ಎಲ್ಲಾ ಭಾರವನ್ನು(India) ಹೊರುವ ಸಾಮರ್ಥ್ಯ ಹೊಂದಿದೆ. ಬೈಕ್ ಅಗ್ನಿಶಾಮಕ ಆಗಿರುವ ಕಾರಣ ನಗರದ ಟ್ರಾಫಿಕ್ ನಡುವೆ ಅತೀ ವೇಗವಾಗಿ, ಕಡಿಮೆ ಸಮಯದಲ್ಲಿ ನಿಗದಿತ ಸ್ಥಳ ತಲುಪಲಿದೆ. ಇಷ್ಟೇ ಅಲ್ಲ ಮಹಾ ದುರಂತವನ್ನು ತಪ್ಪಿಸಲು ಸಾಧ್ಯವಾಗಲಿದೆ.

Royal Enfield record sales: 2 ನಿಮಿಷದಲ್ಲಿ 120 ಬೈಕ್ ಮಾರಾಟ, ರಾಯಲ್ ಎನ್‌ಫೀಲ್ಡ್ ಹೊಸ ದಾಖಲೆ

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಅಗ್ನಿಶಾಮಕ ಬೈಕ್ ಬೆಲೆ ಒಟ್ಟು 13.5 ಲಕ್ಷ ರೂಪಾಯಿ. ಇದು ಅಗ್ನಿಶಾಮಕ ಸಲಕರಣೆಗಳನ್ನು ಅಳವಡಿಸಲು ಇತರ ಮಾಡಿಫಿಕೇಶನ್‌ ಸೇರಿ ಒಟ್ಟು ಬೈಕ್ ಬೆಲೆಯಾಗಿದೆ. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಬೆಲೆ 2.16 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).  ಅಗ್ನಿಶಾಮಕ ಬೈಕ್ 411ಸಿಸಿ ಎಂಜಿನ್ ಹೊಂದಿದೆ. ಏರ್‌ ಕೂಲ್ಡ್, SOHC ಯುನಿಟ್ ಎಂಜಿನ್ ಹೊಂದಿರುವ ಹಿಮಾಲಯನ್ ಬೈಕ್  24.3BHP ಪವರ್ ಹಾಗೂ 32NM ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಗೇರ್‌ಬಾಕ್ಸ್ ಹೊಂದಿದೆ.

ಈ ಮಾಡಿಫಿಕೇಶನ್ ಬೈಕ್ ಕೆಂಪು ಹಾಗೂ ಹಳದಿ ಬಣ್ಣದಲ್ಲಿ ಲಭ್ಯವಿದೆ. ಪುಣೆ ಮಾತ್ರವಲ್ಲ, ಮುಂಬೈ, ಹೈದರಾಬಾದ್ ಹಾಗೂ ಕೊಟ್ಟಾಯಂ ನಗರಗಳಲ್ಲಿ ಸೇವೆ ಸಲ್ಲಿಸುತ್ತಿದೆ.  ಇದೀಗ ಹೆಚ್ಚಿನ ನಗರಗಳಲ್ಲಿ ಅಗ್ನಿಶಾಮಕ ಬೈಕ್ ಸೇವೆ ಸಲ್ಲಿಸಲು ಸಜ್ಜಾಗುತ್ತಿದೆ. ಹೆಚ್ಚಿನ ಮಹಾನಗರ ಪಾಲಿಕೆ ಈ ಹಿಮಾಲಯನ್ ಬೈಕ್ ನಿಯೋಜಿಸಲು ಮುಂದಾಗಿದೆ.

ರಾಯಲ್ ಎನ್‌‌ಫೀಲ್ಡ್ ಬೈಕ್ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಅದರಲ್ಲೂ ಹಿಮಾಲಯನ್ ಸೇರಿದಂತೆ 500 ಸಿಸಿ ಬೈಕ್ ಗರಿಷ್ಠ ಪವರ್ ಹಾಗೂ ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಹೀಗಾಗಿ ಅತೀ ಹೆಚ್ಚು ಬಾರ ಇದ್ದರೂ ಹಿಮಾಲಯನ್ ಬೈಕ್ ಸಲೀಸಾಗಿ ಸಾಗಲಿದೆ. ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ವಿಶೇಷವಾಗಿ ಆಫ್ ರೋಡ್ ಬೈಕ್(off Road) ಆಗಿದೆ. ಇತರ ಬಳಕೆಗೂ ಉಪಯುಕ್ತವಾಗಿದೆ.

click me!