78 ಸಾವಿರ ರೂಪಾಯಿಗೆ 2023ರ ಹೊಚ್ಚ ಹೊಸ ಹೋಂಡಾ ಆ್ಯಕ್ಟಿವಾ 125 ಬಿಡುಗಡೆ!

By Suvarna NewsFirst Published Mar 30, 2023, 9:19 PM IST
Highlights

ಕೈಗೆಟುಕುವ ದರದಲ್ಲಿ ಹೊಚ್ಚ ಹೊಸ ಹೋಂಡಾ ಆ್ಯಕ್ಟೀವಾ 125 ಸ್ಕೂಟರ್ ಬಿಡುಗಡೆಯಾಗಿದೆ. ನೂತನ ಸ್ಕೂಟರ್ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಜೊತೆಗೆ ಅತ್ಯಾಕರ್ಷಕ ವಿನ್ಯಾಸ ಹೊಂದಿದೆ. ಸ್ಕೂಟರ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

ನವದೆಹಲಿ(ಮಾ.30):  ಭಾರತದಲ್ಲಿ ಹೋಂಡಾ ಆ್ಯಕ್ಟಿವಾ ಸ್ಕೂಟರ್ ಬಹುಬೇಡಿಕೆಯ ದ್ವಿಚಕ್ರವಾಹನ. ಜನಪ್ರಿಯ ಸ್ಕೂಟರ್ ಕಾಲಕ್ಕೆ ತಕ್ಕಂತೆ ಅಪ್‌ಗ್ರೇಡ್ ಆಗುತ್ತಾ ಬಂದಿದೆ. ಇದೀಗ 2023ರ ಹೋಂಡಾ ಆ್ಯಕ್ಟೀವಾ 125 ಸ್ಕೂಟರ್ ಬಿಡುಗಡೆ ಮಾಡಿದೆ. ಹೊಸ ಸ್ಕೂಟರ್ ಬೆಲೆ 78,920 ರೂಪಾಯಿಂದ ಆರಂಭಗೊಳ್ಳುತ್ತಿದೆ.ಸ್ಮಾರ್ಟ್ ಪವರ್, ಸ್ಮಾರ್ಟ್ ಅನ್‌ಲೌಕ್, ಎಂಜಿನ್ ಸ್ಟಾರ್ಟ್ ಹಾಗೂ ಸ್ಟಾಪ್ ಬಟನ್ ಸೇರಿದಂತೆ ಹಲವು ವಿಶೇಷತೆಗಳು ನೂತನ ಸ್ಕೂಟರ್‌ನಲ್ಲಿದೆ.   

ಹೊಚ್ಚ ಹೊಸ ಆ್ಯಕ್ಟೀವಾ 125 ಸ್ಕೂಟರ್ ಬೆಲೆ:
ಎಚ್-ಸ್ಮಾರ್ಟ್: 88,093 ರೂಪಾಯಿ(ಎಕ್ಸ್ ಶೋ ರೂಂ)
ಡಿಸ್ಕ್:  86,093 ರೂಪಾಯಿ(ಎಕ್ಸ್ ಶೋ ರೂಂ)
ಡ್ರಂ ಅಲಾಯ್ :82,588 ರೂಪಾಯಿ(ಎಕ್ಸ್ ಶೋ ರೂಂ)
ಡ್ರಂ ರೂ: 78,920 ರೂಪಾಯಿ(ಎಕ್ಸ್ ಶೋ ರೂಂ) 

ಗ್ರಾಹಕರಿಗೆ ಬಂಪರ್ ಕೊಡುಗೆ, ಕೇವಲ 64 ಸಾವಿರ ರೂಪಾಯಿಗೆ ಹೋಂಡಾ ಶೈನ್ ಬೈಕ್ ಬಿಡುಗಡೆ!

ಮುಂದುವರಿದ ತಂತ್ರಜ್ಞಾನ
ಹೆಚ್ಚಿನ ಸ್ಮಾರ್ಟ್‌ ಪವರ್‌ನಿಂದ (ಇಎಸ್‌ಪಿ) ಬಲತುಂಬಿದ ಒಬಿಡಿ೨ ಕಾಂಪ್ಲಿಯಂಟ್‌ ಹೋಂಡಾದ ವಿಶ್ವಾಸಾರ್ಹ ೧೨೫ಸಿಸಿ ಪಿಜಿಎಂ-ಎಫ್‌I ಎಂಜಿನ್‌ ಹೊಸ ಆಕ್ಟಿವಾ೧೨೫ನ ಹೃದಯ ಭಾಗದಲ್ಲಿ ತಾಳ ಹಾಕುತ್ತಿದೆ.

ಅತ್ಯಾಧುನಿಕ, ನಿಖರ ಮತ್ತು ಸೂಕ್ಷ್ಮ ಹೆಚ್ಚಿನ ಸ್ಮಾರ್ಟ್‌ ಪವರ್‌ (ಇಎಸ್‌ಪಿ) ಜಾಗತಿಕ ಮಾನದಂಡಗಳೊಂದಿಗೆ ಭಾರತಕ್ಕೆ ಬಂದಿದೆ. ಎಂಜಿನ್‌ನ ಕಾರ್ಯಕ್ಷಮತೆಯ ವೇಗವರ್ಧಕವಾದ ಹೋಂಡಾ ಹೆಚ್ಚಿನ ಸ್ಮಾರ್ಟ್‌ ಪವರ್‌ (ಇಎಸ್‌ಪಿ) ತಂತ್ರಜ್ಞಾನವು ದಕ್ಷ ದಹನಕ್ರಿಯೆ ಮೂಲಕ ಶಕ್ತಿ ಉತ್ಪಾದನೆಯನ್ನು ಗರಿಷ್ಠಗೊಳಿಸುತ್ತದೆ ಮತ್ತು ಮೌನ ಆರಂಭ ಹಾಗೂ ಪ್ರಕೃತಿ-ಸ್ನೇಹಿ ಎಂಜಿನ್‌ನಿಂದಾಗಿ ಘರ್ಷಣೆಯನ್ನು ಕನಿಷ್ಠಗೊಳಿಸುತ್ತದೆ.

ಸ್ಮಾರ್ಟ್‌ ಅನ್‌ಲಾಕ್
ಸ್ಮಾರ್ಟ್‌ ಕೀ ವ್ಯವಸ್ಥೆಯು ಹೊಚ್ಚಹೊಸ ತಂತ್ರಜ್ಞಾನ ಫೀಚರ್‌ ಆಗಿದ್ದು ಭೌತಿಕ ಬೀಗದ ಕೈಯನ್ನು ಬಳಸದೇ ವಾಹನಗಳಿಗೆ ಬೀಗ ಹಾಕಲು ಹಾಗೂ ಬೀಗ ತೆರೆಯಲು ನೆರವಾಗುತ್ತದೆ. ಸಕ್ರಿಯಗೊಳಿಸಿದ ೨೦ ಸೆಕೆಂಡ್‌ಗಳ ನಂತರ ವ್ಯವಸ್ಥೆಯು ಯಾವುದೇ ಚಟುವಟಿಕೆಗಳನ್ನು ಪತ್ತೆ ಮಾಡದಿದ್ದರೆ ಸ್ಕೂಟರ್‌ ತನ್ನಿಂತಾನೇ ನಿಷ್ಕ್ರಿಯಗೊಳ್ಳುತ್ತದೆ.

ಸ್ಮಾರ್ಟ್‌ ಸ್ಟಾರ್ಟ್:
ಸ್ಮಾರ್ಟ್‌ ಕೀ ವಾಹನದ ಎರಡು ಮೀಟರ್‌ ಫಾಸಲೆಯೊಳಗೆ ಇದ್ದರೆ ಆಗ ರೈಡರ್‌ ವಾಹನವನ್ನು ಸರಾಗವಾಗಿ ಆರಂಭಿಸಬಹುದು. ಎಲ್‌ಒಸಿ ಮೋಡ್‌ನಲ್ಲಿನ ನಾಬ್‌ಅನ್ನು ಸುತ್ತಿಸಿ ಇಗ್ನಿಷನ್‌ ಸ್ಥಾನಕ್ಕೆ ತರಬಹುದು ಮತ್ತು ಬೀಗದ ಕೈಯನ್ನು ಹೊರಗೆ ತೆಗೆಯದೇ ಸ್ಟಾರ್ಟ್‌ ಗುಂಡಿಯನ್ನು ತಳ್ಳಬಹುದು.

ಹಬ್ಬದ ಸೀಸನ್‌ಗೆ ಕೈಗೆಟುಕುವ ದರ ಹೋಂಡಾ ಶೈನ್ ಸೆಲೆಬ್ರೇಷನ್ ಮಾಡೆಲ್ ಬೈಕ್ ಬಿಡುಗಡೆ!

ಸ್ಮಾರ್ಟ್‌ ಸೇಫ್:
ಆಕ್ಟಿವಾ೧೨೫ ಸ್ಮಾರ್ಟ್‌ ಇಸಿಯುವನ್ನು ಮ್ಯಾಪ್‌ ಮಾಡಿದ್ದು ಅದು ಇಸಿಯು ಮತ್ತು ಸ್ಮಾರ್ಟ್‌ ಕೀ ನಡುವೆ ಇಲೆಕ್ಟ್ರಾನಿಕ್‌ ರೂಪದಲ್ಲಿ ಹೊಂದಿಸುವ ಮೂಲಕ -(ಐಡಿ) ಒಂದು ಸುರಕ್ಷತಾ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಆ ಮೂಲಕ ವಾಹನ ಕಳವಾಗುವುದನ್ನು ತಡೆಯುತ್ತದೆ. ಸ್ಮಾರ್ಟ್‌ ಬೀಗದ ಕೈಯಲ್ಲಿ ಚಲನೆಸಾಧ್ಯವಿಲ್ಲದ (ಇಮ್ಮೊಬಿಲೈಸರ್)‌ ವ್ಯವಸ್ಥೆಯೊಂದು ಇದೆ. ಅದರಿಂದಾಗಿ ನೋಂದಾಯಿತವಲ್ಲದ ಯಾವುದೇ ಕೀಯಿಂದ ಆ ವಾಹನದ ಎಂಜಿನನ್ನು ಶುರು ಮಾಡಲು ಸಾಧ್ಯವಾಗುವುದಿಲ್ಲ. ಸ್ಮಾರ್ಟ್‌ ಕೀಯೊಂದಿಗೆ ಸುಭದ್ರ ಸಂಪರ್ಕ ಇಲ್ಲದಿದ್ದರೆ ಚಲನೆರಹಿತ (ಇಮ್ಮೊಬಿಲೈಸರ್)‌ ವ್ಯವಸ್ಥೆಯು ಸಕ್ರಿಯವಾಗುವುದಿಲ್ಲ.

ಯಾಂತ್ರಿಕ (ಮೆಕ್ಯಾನಿಕಲ್) ಫೀಚರ್‌ಗಳು ಕಡಿಮೆ ಪ್ರಯತ್ನದೊಂದಿಗೆ ಎಂಜಿನ್‌ ಆರಂಭಕ್ಕೆ ನೆರವಾಗುತ್ತವೆ - ಮೊದಲನೆಯದು ಸ್ವಲ್ಪವೇ ತೆರೆದಿರುವ ಎಕ್ಸಾಸ್ಟ್‌ ವಾಲ್ವ್‌ಗಳ (ಕಂಪ್ರೆಶನ್‌ ಸ್ಟ್ರೋಕ್‌  ಆರಂಭದಲ್ಲಿ) ಒತ್ತಡ ನಿವಾರಣೆಯ (ಡಿಕಂಪ್ರೆಶನ್)‌ ದಕ್ಷ ಬಳಕೆ ಹಾಗೂ ನಂತರ ಎಂಜಿನನ್ನು ಸ್ವಲ್ಪ ವಿರುದ್ಧ ದಿಕ್ಕಿನಲ್ಲಿ ಸುತ್ತಿಸುವ ಸ್ವಿಂಗ್‌ ಬ್ಯಾಕ್‌ ಫೀಚರ್.‌ ಅದು ಪಿಸ್ಟನ್‌ "ಓಡುವ ಆರಂಭ"ಕ್ಕೆ  (ರನ್ನಿಂಗ್‌ ಸ್ಟಾರ್ಟ್)‌ ಅವಕಾಶ ನೀಡುತ್ತದೆ, ಆ ಮೂಲಕ ಸ್ವಲ್ಪವೇ ಶಕ್ತಿಯಿಂದ ಎಂಜಿನನ್ನು ಆರಂಭಿಸಲು ಸಾಧ್ಯವಾಗುತ್ತದೆ.

ಸ್ವಯಂಚಾಲಿತ ಚೋಕ್‌ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುವ ಸ್ಟಾರ್ಟ್‌ ಸೊಲೆನಾಯಿಡ್‌, ಗಾಳಿ ಮತ್ತು ಇಂಧನದ ಸಮೃದ್ಧ ಮಿಶ್ರಣವನ್ನು ಖಾತರಿಪಡಿಸುತ್ತದೆ. ಮತ್ತು ಯಾವಾಗ ಬೇಕಾದರೂ ಒಂದು ಸಮಯದ ಆರಂಭದ ಅನುಕೂಲವನ್ನು ಕಲ್ಪಿಸುತ್ತದೆ. ಹೋಂಡಾ ಎಸಿಜಿ ಸ್ಟಾರ್ಟರ್‌ ಐಡ್ಲಿಂಗ್‌ ಸ್ಟಾಪ್‌ ವ್ಯವಸ್ಥೆಯ* ಆಗಾಗ್ಗೆ ಆರಾಮದಾಯಕ  ಕಾರ್ಯಾಚರಣೆಯನ್ನು ಖಾತರಿಪಡಿಸುತ್ತದೆ. ಐಡ್ಲಿಂಗ್‌ ಸ್ಟಾಪ್‌ ವ್ಯವಸ್ಥೆಯು ಟ್ರಾಫಿಕ್‌ ಲೈಟ್‌ ಹಾಗೂ ಇತರ ಸಂಕ್ಷಿಪ್ತ ನಿಲುಗಡೆಗಳಲ್ಲಿ ಎಂಜಿನನ್ನು ಸ್ವಯಂಚಾಲಿತವಾಗಿ ಆಫ್‌ ಮಾಡುತ್ತದೆ. ಇದರಿಂದ ಅನಗತ್ಯ ಇಂಧನ ಬಳಕೆ ನಿವಾರಣೆಯಾಗುತ್ತದೆ ಹಾಗೂ ಹೊಗೆ ಉಗುಳುವಿಕೆಯೂ ಕಡಿಮೆಯಾಗುತ್ತದೆ. ಕೊರಳನ್ನು (ಥ್ರಾಟಲ್‌) ಸರಳವಾಗಿ ತಿರುಗಿಸುವ ಮೂಲಕ ಎಂಜಿನನ್ನು ಸುಲಭವಾಗಿ ಮರು-ಆರಂಭ ಮಾಡಬಹುದು.

click me!