ಏಪ್ರಿಲ್ 1 ರಿಂದ ಹೀರೋ ದ್ವಿಚಕ್ರ ವಾಹನ ಬೆಲೆ ಹೆಚ್ಚಳ, ಕೈಗೆಟುವ ಬೈಕ್ ಇನ್ನು ದುಬಾರಿ!

Published : Mar 22, 2023, 06:05 PM ISTUpdated : Mar 22, 2023, 06:06 PM IST
ಏಪ್ರಿಲ್ 1 ರಿಂದ ಹೀರೋ  ದ್ವಿಚಕ್ರ ವಾಹನ ಬೆಲೆ ಹೆಚ್ಚಳ, ಕೈಗೆಟುವ ಬೈಕ್ ಇನ್ನು ದುಬಾರಿ!

ಸಾರಾಂಶ

ಹೊಸ ಆರ್ಥಿಕ ವರ್ಷ ಏಪ್ರಿಲ್ 1 ರಿಂದ ಆರಂಭಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಹಲವು ಆಟೋಮೊಬೈಲ್ ಕಂಪನಿಗಳು ಬೆಲೆ ಏರಿಕೆಗೆ ಮುಂದಾಗಿದೆ. ಇದೀಗ ಹೀರೋ ಮೋಟೋಕಾರ್ಪ್ ಆಯ್ದ ಬೈಕ್ ಬೆಲೆ ಹೆಚ್ಚಿಸುತ್ತಿದೆ.   

ನವದೆಹಲಿ(ಮಾ.22): ಕರ್ನಾಟಕ ಸೇರಿದಂತೆ ಭಾರತದಲ್ಲಿ ಯುಗಾದಿ ಹಬ್ಬ ಸಂಭ್ರಮದಿಂದ ಆಚರಿಸಲಾಗಿದೆ. ಆದರೆ ಹೊಸ ವರ್ಷದ ಆರಂಭದಲ್ಲೇ ಹಲವು ಆಟೋಮೊಬೈಲ್ ಕಂಪನಿಗಳು ಗ್ರಾಹಕರಿಗೆ ಶಾಕ್ ನೀಡಿದೆ. ಇದರಲ್ಲಿ ಹೀರೋ ಮೋಟೋಕಾರ್ಪ್ ಇಂದು ಮಹತ್ವದ ಘೋಷಣೆ ಮಾಡಿದೆ. ಏಪ್ರಿಲ್ 1 ರಿಂದ ಹೀರೋ ಮೋಟೋಕಾರ್ಪ್ ಆಯ್ದ ಬೈಕ್ ಬೆಲೆ ಹೆಚ್ಚಳವಾಗುತ್ತಿದೆ. ಕಂಪನಿ ಪ್ರಕಾರ, ಶೇಕಡಾ 2 ರಷ್ಟು ಬೆಲೆ ಹೆಚ್ಚಳ ಅನಿವಾರ್ಯವಾಗಿದೆ ಎಂದಿದೆ. ಉತ್ಪಾದನಾ ವೆಚ್ಚ ಹೆಚ್ಚಳವಾಗಿರುವ ಕಾರಣ, ಬೈಕ್ ಬೆಲೆಯೂ ಹಚ್ಚಳ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಹೀರೋ ಮೋಟೋಕಾರ್ಪ್ ಹೇಳಿದೆ.

ಏಪ್ರಿಲ್ 1 , 2023ರಿಂದ ಹೀರೋ ಬೈಕ್ ಬೆಲೆ(ಎಕ್ಸ್ ಶೋ ರೂಂ) ಹೆಚ್ಚಳವಾಗಲಿದೆ. ಹೀರೋ ಮೋಟೋಕಾರ್ಪ್ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ. ಏಪ್ರಿಲ್ 1 ರಿಂದ ಹೀರೋ ಬೈಕ್ ಅಥವಾ ಸ್ಕೂಟರ್ ಬುಕ್ ಮಾಡುವ ಗ್ರಾಹಕರು ಪರಿಷ್ಕತ ಬೆಲೆಗೆ ಅನುಗುಣವಾಗಿ ಪಾವತಿ ಮಾಡಬೇಕು. ಈಗಾಗಲೇ ದ್ವಿಚಕ್ರ ವಾಹನ ಬುಕ್ ಮಾಡಿ, ಡೆಲವರಿಗಾಗಿ ಕಾಯುತ್ತಿರುವ ಗ್ರಾಹಕರ ಪಾವತಿ ಹಾಗೂ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.

ಕೈಗೆಟುಕುವ ದರ, ಕೆನೆಕ್ಟಿವಿಟಿ ಫೀಚರ್ಸ್, ಹೊಚ್ಚ ಹೊಸ ಸೂಪರ್ ಸ್ಪ್ಲೆಂಡರ್ XTEC ಬಿಡುಗಡೆ!

ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಹೀಗಾಗಿ ದ್ವಿಚಕ್ರವಾಹನಗಳ ಬೆಲೆ ಹೆಚ್ಚಿಸಬೇಕಾಗಿದೆ. ಕಚ್ಚಾವಸ್ತುಗಳ ಬೆಲೆ ಏರಿಕೆ, ಆಮದು ಸುಂಕ, ಉತ್ಪಾದನಾ ವೆಚ್ಚ ಸೇರಿದಂತೆ ಎಲ್ಲಾ ವರ್ಗಾದಲ್ಲೂ ಬೆಲೆ ಏರಿಕೆಯಿಂದ ಬೈಕ್ ಬೆಲೆ ಹೆಚ್ಚಿಸುತ್ತಿದ್ದೇವೆ. ಆದರೆ ಗ್ರಾಹಕರಿಗೆ ಆರ್ಥಿಕ ನೆರವು ನೀಡಲು ಕಂಪನಿ ಬದ್ಧವಾಗಿದೆ. ಸುಲಭ ಸಾಲ, ಕಡಿಮೆ ಬಡ್ಡಿ ದರ ಸೇರಿದಂತೆ ಹಲವು ನೆರವು ಕಂಪನಿ ಜೊತೆ ಒಪ್ಪಂದದಲ್ಲಿರುವ ಬ್ಯಾಂಕ್ ನೀಡಲಿದೆ ಎಂದಿದೆ.

ಸದ್ಯ ಹೀರೋ ಮೋಟೋಕಾರ್ಪ್ ಯಾವೆಲ್ಲಾ ಬೈಕ್ ಹಾಗೂ ಸ್ಕೂಟರ್ ಬೆಲೆ ಹೆಚ್ಚಾಗಲಿಗೆ ಅನ್ನೋ ಮಾಹಿತಿ ನೀಡಿಲ್ಲ. ಶೀಘ್ರದಲ್ಲೇ ಬೆಲೆ ಹೆಚ್ಚಳವಾಗಲಿರುವ ಬೈಕ್ ಮಾಹಿತಿಯನ್ನು ಹೀರೋ ಕಂಪನಿ ಬಿಡುಗಡೆ ಮಾಡಲಿದೆ. ಸದ್ಯ ಹೀರೋ ಕಂಪನಿ ಎರಡನೇ ಹಂತದ ಬಿಎಸ್‌6 ಎಮಿಶನ್ ವಾಹನ ಉತ್ಪಾದನೆಯಲ್ಲಿದೆ. ಇದರಿಂದ ಉತ್ಪದನಾ ವೆಚ್ಚ ಅಧಿಕವಾಗಿದೆ. ಭಾರತದಲ್ಲಿ ಎಮಿಶನ್ ನಿಯಮ ಕಠಿಣ ಮಾಡಲಾಗಿದೆ. ಹೀಗಾಗಿ ಗ್ರಾಹಕರಿಗೆ ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಬರದಂತೆ ಈಗಿನಿಂದಲೇ ಎರಡನೇ ಹಂತದ ಬಿಎಸ್‌6 ಎಂಜಿನ್ ಉತ್ಪಾದನೆಯಲ್ಲಿ ತೊಡಗಿದೆ.

ಆಕರ್ಷಕ ಬೆಲೆಯಲ್ಲಿ ಭಾರತದಲ್ಲಿ ಹೀರೋ XOOM ಸ್ಕೂಟರ್ ಬಿಡುಗಡೆ!

ಇತ್ತೀಚೆಗೆ ಹೀರೋ ಹೀರೋ ಮೋಟೋಕಾಪ್‌ ಸೂಪರ್ ಸ್ಪ್ಲೆಂಡರ್ XTEC ಬಿಡುಗಡೆ ಮಾಡಿದೆ. ಫ್ಯಾಮಿಲಿ ಬೈಕ್‌ ಅಂತಲೇ ಫೇಮಸ್‌ ಆಗಿರೋ ಸ್ಪೆಂಡರ್‌  ಹೊಸ ರೂಪ, ಹೊಸ ವಿನ್ಯಾಸದಲ್ಲಿ ಬಿಡುಗಡೆ ಮಾಡಲಾಗಿತ್ತು. 125 ಸಿಸಿ ಸಾಮರ್ಥ್ಯದ ಸೂಪರ್‌ ಸ್ಪ್ಲೆಂಡರ್ XTEC ಬೈಕ್‌ನ ಮೈಲೇಜ್‌ ಲೀಟರ್‌ಗೆ 68 ಕಿಮೀ ನೀಡಲಿದೆ. ಎರಡು ಮಾದರಿಗಳಲ್ಲಿ ಈ ಬೈಕ್‌ ಲಭ್ಯ. ಇದರ ಬೆಲೆ ಎಕ್ಸ್‌ ಶೋ ರೂಮ್‌ ಬೆಲೆ : 83,368 ರು. (ಡ್ರಮ್‌ ವೇರಿಯೆಂಟ್‌), 87,268 ರು. (ಡಿಸ್ಕ್ ವೇರಿಯೆಂಟ್‌). ಇದೀಗ ಈ ಬೆಲೆಯೂ ಹೆಚ್ಚಳವಾಗಲಿದೆ. 

PREV
Read more Articles on
click me!

Recommended Stories

Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು
ಭರ್ಜರಿಯಾಗಿ ಮರಳಿದ ಭಾರತದ ಕೈನೆಟಿಕ್, ಕೇವಲ 1,000 ರೂಗೆ ಬುಕ್ ಮಾಡಿ ಎಲೆಕ್ಟ್ರಿಕ್ ಸ್ಕೂಟರ್