ಹೀರೋ ಎಲೆಕ್ಟ್ರಿಕ್, ಒಕಿನಾವ ಸ್ಕೂಟರ್ ಕಂಪನಿಗೆ ಶಾಕ್, FAME II ಸಬ್ಸಿಡಿ ಸ್ಥಗಿತಗೊಳಿಸಿದ ಕೇಂದ್ರ ಸರ್ಕಾರ!

Published : Mar 23, 2023, 04:59 PM ISTUpdated : Mar 23, 2023, 05:00 PM IST
ಹೀರೋ ಎಲೆಕ್ಟ್ರಿಕ್, ಒಕಿನಾವ ಸ್ಕೂಟರ್ ಕಂಪನಿಗೆ ಶಾಕ್, FAME II ಸಬ್ಸಿಡಿ ಸ್ಥಗಿತಗೊಳಿಸಿದ ಕೇಂದ್ರ ಸರ್ಕಾರ!

ಸಾರಾಂಶ

ಹೀರೋ ಎಲೆಕ್ಟ್ರಿಕ್ ಅಥವಾ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ನಿರ್ಧರಿಸಿದ್ದೀರಾ? ಎಲೆಕ್ಟ್ರಿಕ್ ದ್ವಿಚಕ್ರ ವಾಹನ ದುಬಾರಿಯಾಗಿದೆ. ಇದಕ್ಕೆ ಕಾರಣ ಈ ಎರಡು ಕಂಪನಿಗಳ ಎಲೆಕ್ಟ್ರಿಕ್ ದ್ವಿಚಕ್ರ ವಾಹನಕ್ಕೆ ಕೇಂದ್ರ ಸರ್ಕಾರ ನೀಡುತ್ತಿದ್ದ  FAME II ಸಬ್ಸಿಡಿ ಸ್ಥಗಿತಗೊಳಿಸಿದೆ.

ನವದೆಹಲಿ(ಮಾ.23): ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಖರೀದಿಗೆ ಉತ್ತೇಜನ ನೀಡಲು ಕೇಂದ್ರ ಹಾಗೂ ಕೆಲ ರಾಜ್ಯ ಸರ್ಕಾರಗಳು ಹಲವು ವಿಶೇಷ ಯೋಜನೆ ಘೋಷಿಸಿದೆ. ವಿಶೇಷವಾಗಿ ಕೇಂದ್ರ ಸರ್ಕಾರದ  FAME II ಸಬ್ಸಿಡಿ ಅತ್ಯಂತ ಪ್ರಮುಖವಾಗಿದೆ. ಇದರ ಜೊತೆಗೆ ಉಚಿತ ರಿಜಿಸ್ಟ್ರೇಶನ್ ಸೇರಿದಂತೆ ಇತರ ಕೆಲ ಸೌಲಭ್ಯಗಳು ರಾಜ್ಯಗಳು ಘೋಷಿಸಿದೆ. ಎಲ್ಲಾ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳಿಗೆ  FAME II ಸಬ್ಸಿಡಿ ಘೋಷಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಘೋಷಿಸಿದೆ. ಹೀರೋ ಎಲೆಕ್ಟ್ರಿಕ್ ಹಾಗೂ ಒಕಿನಾವಾ ಎಲೆಕ್ಟ್ರಿಕ್ ದ್ವಿಚಕ್ರವಾಹನದ  FAME II ಸಬ್ಸಿಡಿ ಸ್ಥಗಿತಗೊಳಿಸಿದೆ. ಈ ಎರಡು ಕಂಪನಿಗಳ ಸಬ್ಸಡಿ ಸ್ಥಗಿತಗೊಳಿಸಿದೆ. ಇನ್ನುಳಿದ ಕಂಪನಿಗಳ ವಾಹನ ಖರೀದಿಗೆ  FAME II ಸಬ್ಸಿಡಿ ಸೌಲಭ್ಯ ಸಿಗಲಿದೆ.

ಹೀರೋ ಹಾಗೂ ಒಕಿನಾವಾ ಎರಡು ಕಂಪನಿಗಳು ಕೇಂದ್ರ ಸರ್ಕಾರದ FAME II ಸಬ್ಸಿಡಿ ಯೋಜನೆಯಡಿ 10,000 ಕೋಟಿ ರೂಪಾಯಿ ದುರುಪಯೋಗ ಮಾಡಿಕೊಂಡಿದೆ ಅನ್ನೋ ಆರೋಪ ಕೇಳಿಬಂದಿದೆ. ಹೀಗಾಗಿ ಈ ಎರಡು ಕಂಪನಿಗಳ ವಿರುದ್ಧ ತನಿಖೆ ನಡೆಯುತ್ತಿದೆ. ಸತ್ಯಾಂಶ ಹೊರಬರುವವರೆಗೆ ಹೀರೋ ಹಾಗೂ ಒಕಿನಾವ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ.  

ಮಹೀಂದ್ರ ಎಲೆಕ್ಟ್ರಿಕ್ ರಿಕ್ಷಾ ರೈಡ್ ಮಾಡಿದ ಬಿಲ್ ಗೇಟ್ಸ್, ಆಟೋ ಶ್ರೀಮಂತನ ಜಾಲಿ ಸವಾರಿ!

ಕೇಂದ್ರ ಸರ್ಕಾರದ ಸಬ್ಸಿಡಿ ಪಡೆಯಲು ಆಮದು ಮಾಡಿಕೊಂಡ ಘಟಕಗಳನ್ನು ಬಳಸಿ, ಸ್ಥಳೀಯ ಘಟಕ ಎಂದು ಕೇಂದ್ರ ಸರ್ಕಾರಕ್ಕೆ ಲೆಕ್ಕ ತೋರಿಸಿದೆ. ಅಂದರೆ ಎಲೆಕ್ಟ್ರಿಕ್ ಕಾಂಪೋನೆಂಟ್‌ಗಳನ್ನು ವಿದೇಶದಿಂದ ಆಮದು ಮಾಡಿಕೊಂಡು ಭಾರತದಲ್ಲಿ ಸ್ಕೂಟರ್‌ಗೆ ಜೋಡಣೆ ಮಾಡಿದೆ. ಬಳಿಕ ಸ್ಥಳೀಯವಾಗಿ ಉತ್ಪಾದಿಸದ ಕಾಂಪೋನೆಂಟ್ ಬಳಸಲಾಗಿದೆ ಎಂದು ಕೇಂದ್ರ ಸರ್ಕಾರಕ್ಕೆ ಲೆಕ್ಕ ತೋರಿಸಿ 10,000 ಕೋಟಿ ರೂಪಾಯಿ ಹಗರಣ ನಡೆಸಿದೆ ಅನ್ನೋ ಆರೋಪವಿದೆ.

ಎರಡೂ ಕಂಪನಿಗಳಿಗೆ ಸೂಕ್ತ ದಾಖಲೆ ಸಲ್ಲಿಸುವಂತೆ ಸೂಚಿಸಲಾಗಿದೆ. PMP ಯೋಜನಾ ನಿಯಮ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಈ ಕುರಿತು ಪ್ರತ್ಯೇಕ ತನಿಖೆ ನಡೆಯುತ್ತಿದೆ. ಎರಡೂ ಕಂಪನಿಗಳ ಮೇಲೆ ಸಂಪೂರ್ಣ ತನಿಖೆ ನಡೆಯಲಿದೆ. ಕಂಪನಿಗಳಿಗೆ ಸೂಕ್ತ ದಾಖಲೆ ಸಲ್ಲಿಸಲು ಅವಕಾಶ ನೀಡಲಾಗಿದೆ. 

ಕೇಂದ್ರ ಸರ್ಕಾರ ಫೇಮ್ 2 ಯೋಜನೆಯಡಿ ಎಲೆಕ್ಟ್ರಿಕ್ ದ್ವಿಚಕ್ರವಾಹನ, ಮೂರು ಚಕ್ರ ವಾಹನ ಹಾಗೂ ನಾಲ್ಕು ಚಕ್ರ ವಾಹನಗಳಿಗೆ ಪ್ರತ್ಯೇತವಾಗಿ ಸಬ್ಸಿಡಿ ಘೋಷಿಸಿದೆ. ಕೇಂದ್ರ ಸರ್ಕಾರದ ಸಬ್ಸಿಡಿ ಸೌಲಭ್ಯ ಪಡೆದು ಸದ್ಯ ಎಲ್ಲಾ ಕಂಪನಿಗಳು ತಮ್ಮ ವಾಹನದ ಎಕ್ಸ್ ಶೋ ರೂಂ ಬೆಲೆ ಘೋಷಿಸಿದೆ. ಕೇಂದ್ರದ ಸಬ್ಸಿಡಿ ಹಣ ಸ್ಥಗಿತಗೊಂಡರೆ ಎಲೆಕ್ಟ್ರಿಕ್ ವಾಹನ ಬೆಲೆ ಗಣನೀಯವಾಗಿ ಏರಿಕೆಯಾಗಲಿದೆ. ಇದೀಗ ಹೀರೋ ಎಲೆಕ್ಟ್ರಿಕ್ ಹಾಗೂ ಒಕಿನಾವ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಏರಿಕೆಯಾಗಲಿದೆ.

ಬೆಂಗಳೂರಿನ ರಿವರ್ ಸ್ಟಾರ್ಟ್‌ಅಪ್‌ನಿಂದ ಇಂಡೀ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!

ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮಾರಾಟಕ್ಕೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಈ ಸಬ್ಸಿಡಿ ಯೋಜನೆ ಘೋಷಿಸಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಬೆಲೆ ದುಬಾರಿಯಾಗಿದೆ. ಹೀಗಾಗಿ ಸಬ್ಸಿಡಿ ಘೋಷಿಸಲಾಗಿದೆ. ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಸರಾಸರಿ 70 ರಿಂದ 1 ಲಕ್ಷ ರೂಪಾಯಿ ಆಗಿದ್ದರೆ, ಎಲೆಕ್ಟ್ರಿಕ್ ಕಾರುಗಳ ಸರಾಸರಿ ಬೆಲೆ 10 ಲಕ್ಷ ರೂಪಾಯಿ ಆಗಿದೆ. ಸಬ್ಸಿಡಿ ಪಡೆದರೂ ಎಲೆಕ್ಟ್ರಿಕ್ ವಾಹನ ಬೆಲೆ ಕೈಗೆಟುಕುತ್ತಿಲ್ಲ. ಇದರ ನಡುವೆ ಸಬ್ಸಿಡಿ ಸ್ಥಗಿತದಿಂದ ಹೀರೋ ಎಲೆಕ್ಟ್ರಿಕ್ ಹಾಗೂ ಒಕಿನಾವಾ ಸ್ಕೂಟರ್ ಮತ್ತಷ್ಟು ದುಬಾರಿಯಾಗಲಿದೆ.

PREV
click me!

Recommended Stories

Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು
ಭರ್ಜರಿಯಾಗಿ ಮರಳಿದ ಭಾರತದ ಕೈನೆಟಿಕ್, ಕೇವಲ 1,000 ರೂಗೆ ಬುಕ್ ಮಾಡಿ ಎಲೆಕ್ಟ್ರಿಕ್ ಸ್ಕೂಟರ್