1,084 ಸಿಸಿ ಎಂಜಿನ್, ಅತ್ಯುತ್ತಮ ಸಾಮರ್ಥ್ಯ ಹೊಂದಿರು ಆಫ್ರಿಕನ್ ಟ್ವಿನ್ ಎಂಜಿನ್ ಬೈಕ್ ಬಿಡುಗಡೆಯಾಗಿದೆ. ಹೊಂಡಾದ ಬಹುನಿರೀಕ್ಷಿತ ಬೈಕ್ ಭಾರತದ ಸ್ಪೋರ್ಟ್ಸ್ ಅಡ್ವೆಂಚರ್ ವಿಭಾಗದಲ್ಲಿ ಹೊಸ ಅಧ್ಯಾಯ ಬರೆಯಲಿದೆ. ಈ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ
ನವದೆಹಲಿ(ಜ.12): ಸಾಹಸಮಯ ಸವಾರಿ ಉದ್ದೇಶದ ಮೋಟರ್‍ಸೈಕಲ್ ಉತ್ಸಾಹಿಗಳಿಗಾಗಿ ಉತ್ತೇಜಕರ ಸುದ್ದಿ ನೀಡಿರುವ ಹೋಂಡಾ ಮೋಟರ್‍ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಭಾರತದಲ್ಲಿ ಹೊಸ 2021 ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋಟ್ರ್ಸ್ ಬುಕಿಂಗ್ ಆರಂಭಿಸಿರುವಾಗಿ ಇಂದು ಇಲ್ಲಿ ಪ್ರಕಟಿಸಿದೆ. 2021ನೇ ವರ್ಷದ ಈ ಹೊಸ ಶ್ರೇಣಿಯು ಡಿಸಿಟಿ ಮತ್ತು ಮ್ಯಾನುಅಲ್ ಟ್ರಾನ್ಸ್‌ಮಿಶನ್ ಮಾದರಿಗಳಲ್ಲಿ ಹೊಸ ಬಣ್ಣಗಳಲ್ಲಿ ದೊರೆಯಲಿದೆ.
ಹೋಂಡಾ ಹೈನೆಸ್ ಬೆಲೆ 2,500 ರೂ. ಹೆಚ್ಚಳ
undefined
ಆಫ್ರಿಕಾ ಟ್ವಿನ್, ‘ನಿಜವಾದ ಸಾಹಸ’ದ ಸಾಮಥ್ರ್ಯ ಒಳಗೊಂಡಿದ್ದು, ಈ ಕಾರಣಕ್ಕಾಗಿಯೇ ವಿಶ್ವದಾದ್ಯಂತ ಅಭಿಮಾನಿಗಳ ಮನ ಗೆದ್ದಿದೆ. ಈ ಹೊಸ ವರ್ಷವನ್ನು, ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋರ್ಟ್ಸ್ 2021ರ ಮಾದರಿಯನ್ನು ಭಾರತದಲ್ಲಿ ಪರಿಚಯಿಸುವುದಕ್ಕೆ ಹೋಂಡಾ 2ವ್ಹೀಲರ್ ಹೆಮ್ಮೆಪಡುತ್ತದೆ ಎಂದು ಹೋಂಡಾ ಮೋಟರ್‍ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ, ಅಧ್ಯಕ್ಷ ಮತ್ತು ಸಿಇಒ ಅತ್ಸುಶಿ ಒಗಾಟಾ ಹೇಳಿದರು.
ಎಲ್ಲಿಗಾದರೂ ತೆರಳಿ’ ಸಾಮಥ್ರ್ಯವನ್ನು ನಿರಂತರವಾಗಿ ಮುಂದುವರೆಸಿಕೊಂಡು ಬಂದಿರುವ ಆಫ್ರಿಕಾ ಟ್ವಿನ್, ದೀರ್ಘ ಪಯಣದ ಎಲ್ಲ ಬಗೆಯ ಭೂ ಪ್ರದೇಶಗಳಲ್ಲಿ ಸರಾಗವಾಗಿ ಸವಾರಿ ಮಾಡಲು ಮತ್ತು ವಾರಾಂತ್ಯದ ಪ್ರವಾಸಕ್ಕೆ ತೆರಳುವುದಕ್ಕೆ ಅತ್ಯಂತ ಜನಪ್ರಿಯ ಮೋಟರ್‍ಸೈಕಲ್ ಆಗಿದೆ. ಭಾರತದಲ್ಲಿಯೂ ಆಫ್ರಿಕಾ ಟ್ವಿನ್ ಬಳಸುವವರ ಸಂಖ್ಯೆಯು ದಿನೇ ದಿನೇ ಹೆಚ್ಚಳಗೊಳ್ಳುತ್ತಿದೆ. ಸುಧಾರಿತ ಮಾದರಿಯಾಗಿರುವ ‘2021 ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋಟ್ರ್ಸ್’, ಸಾಹಸಮಯ ಪಯಣ ಮತ್ತು ಸವಾರಿ ಇಷ್ಟಪಡುವವರಿಗೆ ಹಾಗೂ ಇದುವರೆಗೆ ಯಾರೊಬ್ಬರೂ ಭೇಟಿ ನೀಡದ ಹೊಸ ಪ್ರವಾಸಿ ತಾಣಗಳನ್ನು ಅನ್ವೇಷಿಸಲು ತೆರಳಲು ಅಗತ್ಯ ಪ್ರೇರಣೆ ನೀಡಲಿದೆ ಎಂದು ಹೋಂಡಾ ಮೋಟರ್‍ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಯದ್ವಿಂದರ್ ಸಿಂಗ್ ಗುಲೇರಿಯಾ ಹೇಳಿದರು.
ಹಗುರ ಮತ್ತು ಬಲಶಾಲಿ
ತನ್ನ ಈ ಮೊದಲಿನ ಜನಪ್ರಿಯ ಮಾದರಿಗಳ ‘ಎಲ್ಲಿಗಾದರೂ ಹೋಗೋಣ’ ಉತ್ಸಾಹವನ್ನು ಮುಂದುವರೆಸಿಕೊಂಡು ಹೋಗಿರುವ ‘ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋಟ್ರ್ಸ್’ ನಾವೀನ್ಯತೆಯ, ಕಾಂಪ್ಯಾಕ್ಟ್ ಆಗಿರುವ ಮತ್ತು ಶಕ್ತಿಯುತ 1,084 ಸಿಸಿ ಸಮಾನಾಂತರ ಟ್ವಿನ್ ಎಂಜಿನ್‍ಗಳನ್ನು ಒಳಗೊಂಡಿದ್ದು, 73 ಕೆಡಬ್ಲ್ಯು ಮತ್ತು 103ಎನ್‍ಎಂ ಟಾರ್ಕ್ ಸಾಮಥ್ರ್ಯ ಹೊರ ಹೊಮ್ಮಿಸಲಿದೆ.
ಲಿಥಿಯಂ ಐಯಾನ್ ಬ್ಯಾಟರಿಯು 1.6 ಪಟ್ಟು ಹೆಚ್ಚಿನ ಜೀವಿತಾವಧಿ ಹೊಂದಿದ್ದು ಸಾಂಪ್ರದಾಯಿಕ ಬ್ಯಾಟರಿಗೆ ಹೋಲಿಸಿದರೆ 4 ಪಟ್ಟು ಸುದೀರ್ಘ ಸಮಯದವರೆಗೆ ಬಾಳಿಕೆ ಬರಲಿದೆ. ಇದು ಬೋಲ್ಟ್ ಆನ್ ಅಲ್ಯುಮಿನಿಯಂ ಸಬ್‍ಫ್ರೇಮ್ ಮತ್ತು ಸ್ವಿಂಗ್ ಆರ್ಮ್ (ಸಿಆರ್‍ಎಫ್450ಆರ್ ಮೋಟೊ- ಕ್ರಾಸರ್‍ನ ಡಕಾರ್ ಮಷಿನ್ ತಂತ್ರಜ್ಞಾನದಿಂದ ಪ್ರೇರಣೆ ಪಡೆದಿರುವುದು) ಸಹ ಒಳಗೊಂಡಿದೆ.
ಐಎಂಯು- ಸಂಪೂರ್ಣ ನಿಯಂತ್ರಣದ ಹಿಂದಿನ ರಹಸ್ಯ
ಅಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋಟ್ರ್ಸ್, ಸಿಕ್ಸ್- ಆ್ಯಕ್ಸಿಸ್ ಇನ್‍ಎರ್ಟಿಯಲ್ ಮೆಸರ್‍ಮೆಂಟ್ ಯುನಿಟ್ (ಐಎಂಯು) ಒಳಗೊಂಡಿರಲಿದ್ದು, ಇದು ವೈರ್‍ನಿಂದ ಥ್ರಾಟಲ್ (ಟಿಬಿಡಬ್ಲ್ಯು) ನಿಯಂತ್ರಿಸಲಿದೆ ಮತ್ತು 7 ಹಂತದ ಹೋಂಡಾ ಸೆಲೆಕ್ಟೇಬಲ್ ಟಾರ್ಕ್ ಕಂಟ್ರೋಲ್ (ಎಚ್‍ಎಸ್‍ಟಿಸಿ) ವಿಸ್ತರಿಸಲಿದೆ.
ಹೆಚ್ಚುವರಿಯಾಗಿ, ಐಎಂಯು, 4 ತಂತ್ರಜ್ಞಾನಗಳನ್ನೂ ನಿಯಂತ್ರಿಸಲಿದೆ:
ವ್ಹೀಲ್ ಕಂಟ್ರೋಲ್ – ಇದು ಸವಾರನು 3 ಹಂತದ ಇನ್‍ಪುಟ್ ಆಯ್ಕೆ ಮಾಡಿಕೊಳ್ಳಲು ಅವಕಾಶ ಒದಗಿಸಲಿದೆ. ಲೆವೆಲ್-1 , ಉದ್ದೇಶಪೂರ್ವಕವಾಗಿ ಚಕ್ರ ಎತ್ತಲು ಅವಕಾಶ ನೀಡುವುದು ಆದರೆ, ಯಾವುದೇ ಬಗೆಯ ಹಠಾತ್ ಚಲನೆ ತಡೆಗಟ್ಟಲಿದೆ. ಲೆವೆಲ್ 3 – ಮುಂದಿನ ಚಕ್ರದ ಎತ್ತರಕ್ಕೆ ತಡೆ ಒಡ್ಡಲಿದೆ ಮತ್ತು ಲೆವೆಲ್-2 ಇವೆರೆಡರ ಮಧ್ಯೆ ಚಕ್ರವನ್ನು ನಿಯಂತ್ರಿಸಲಿದೆ.
ಕಾರ್ನರಿಂಗ್ ಎಬಿಎಸ್ ವಿತ್ ಆಫ್ ರೋಡ್ ಸೆಟ್ಟಿಂಗ್- ಮೋಟರ್ ಸೈಕಲ್ ಸಾಗುತ್ತಿರುವ ವೇಗ ಆಧರಿಸಿ ಗರಿಷ್ಠ ಮಟ್ಟದ ಬ್ರೇಕ್ ಬಲವನ್ನು ಪ್ರತಿಯೊಂದು ಚಕ್ರಕ್ಕೆ ವರ್ಗಾಯಿಸುತ್ತದೆ. ಇದರಿಂದ ಅಪಾಯಕಾರಿ ಪರಿಸ್ಥಿತಿಯಲ್ಲಿ ಅತ್ಯುತ್ತಮವಾಗಿ ಬ್ರೇಕ್ ಹಾಕಿ ವೇಗವನ್ನು ಸಮರ್ಥವಾಗಿ ನಿಭಾಯಿಸಬಹುದು. ಆಫ್‍ರೋಡ್ ಸೆಟ್ಟಿಂಗ್- ನಗರ ಪ್ರದೇಶಗಳಲ್ಲಿನ ಸವಾರಿಗೂ ಸೂಕ್ತವಾಗಿ ಹೊಂದಿಕೊಳ್ಳಲಿದೆ. ಮೋಟರ್ ಸೈಕಲ್‍ನಲ್ಲಿ ಅಂತರ್ಗತವಾಗಿರುವ ಬಳಕೆದಾರರಿಗೆ ನೆರವಾಗುವ ಟೂರ್ ಮತ್ತು ಗ್ರ್ಯಾವೆಲ್ ಸೆಟ್ಟಿಂಗ್ಸ್, ಬಹುತೇಕ ಸವಾರಿ ಪರಿಸ್ಥಿತಿಯನ್ನು ಒಳಗೊಂಡಿರಲಿದೆ.
ರಿಯರ್ ಲಿಫ್ಟ್ ಕಂಟ್ರೋಲ್- ಶಕ್ತಿಯುತವಾಗಿ ಬ್ರೇಕ್ ಹಾಕಿದಾಗ ಇದು ಹಿಂದಿನ ಚಕ್ರವು ನೆಲ ಬಿಟ್ಟು ಮೇಲೆ ಎತ್ತುವಂತೆ ಮಾಡುತ್ತದೆ. ಡಿಸಿಟಿ ಮಾದರಿಯಲ್ಲಿನ ಕಾರ್ನರಿಂಗ್ ಪತ್ತೆಹಚ್ಚುವ ಸೌಲಭ್ಯ- ಬೈಕ್‍ನ ಟೈರ್ ಜಾರುವ ಹಂತದಲ್ಲಿ ಇದ್ದಾಗ ಅದನ್ನು ಗುರುತಿಸಿ ಸಹಜ ಬಗೆಯಲ್ಲಿ ಗೇರ್ ಬದಲಾವಣೆಯನ್ನು ಹೊಂದಾಣಿಕೆ ಮಾಡಲಿದೆ.
ಆರಾಮದಾಯಕ ಪ್ರಯಾಣ
‘ನಿಜವಾದ ಸಾಹಸ’ ಪರಿಕಲ್ಪನೆಗೆ ಹೆಚ್ಚು ಸೂಕ್ತವಾಗಿರುವ ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋಟ್ರ್ಸ್ - ಸ್ಲಿಮ್ ಸೆಕ್ಷನ್ ಸೀಟ್ ಮತ್ತು ಹೈ-ಸೆಟ್ ಹ್ಯಾಂಡಲ್‍ಬಾರ್ಸ್ ಒಳಗೊಂಡಿದೆ. ಹೆಚ್ಚು ಪರಿಣಾಮಕಾರಿಯಾದ ಚೌಕಟ್ಟು ಮತ್ತು ಕಾಂಪ್ಯಾಕ್ಟ್ ಬಗೆಯ ವಿನ್ಯಾಸವು ರಸ್ತೆ ಇಲ್ಲದ ಪ್ರದೇಶದಲ್ಲಿನ ಸವಾರಿಗೆ ಹೆಚ್ಚು ಅನುಕೂಲವಾಗಲೆಂದೇ ವಿನ್ಯಾಸ ಮಾಡಲಾಗಿದೆ.
5 ಹಂತದ ಹೊಂದಾಣಿಕೆ ಮಾಡಬಹುದಾದ ವಿಂಡ್‍ಸಕ್ರೀನ್ , ಹೊಂದಾಣಿಕೆ ಮಾಡಬಹುದಾದ ಸೀಟ್ ಮತ್ತು ಹೀಟೆಡ್ ಗ್ರಿಪ್ಸ್ – ಆರಾಮದಾಯಕ ಸವಾರಿಯನ್ನು ಖಚಿತಪಡಿಸಲಿವೆ. ಟ್ಯೂಬ್‍ಲೆಸ್ ಟೈರ್ಸ್, ರಸ್ತೆ ಬದಿ ದುರಸ್ತಿಯ ತಲೆನೋವನ್ನು ದೂರ ಮಾಡಿದೆ.ಡ್ಯುಯೆಲ್ ಎಲ್‍ಇಡಿ ಹೆಡ್‍ಲೈಟ್ಸ್: ಹಗಲು ಹೊತ್ತಿನಲ್ಲಿ ಉರಿಯುವ ದೀಪಗಳು (ಡಿಆರ್‍ಎಲ್), ಬೈಕ್‍ನ ಮುಂಭಾಗದ ನೋಟಕ್ಕೆ ಹೊಸ ರೂಪ ನೀಡಿರುವುದರ ಜತೆಗೆ ಸುಸ್ಥಿರ ಬಗೆಯ ಹಗಲು ಗೋಚರತೆ ಒದಗಿಸಲಿವೆ.
ಕಾರ್ನರಿಂಗ್ ಲೈಟ್ಸ್ – ಮೋಟರ್ ಸೈಕಲ್‍ನ ಬಾಗುವ ಕೋನ ಮತ್ತು ವೇಗ ಆಧರಿಸಿ ಬ್ಲೈಂಡ್ ಸ್ಪಾಟ್‍ಗಳಲ್ಲಿ ಸ್ವಯಂಚಾಲಿತವಾಗಿ ಈ ದೀಪಗಳು ಬೆಳಗಲಿವೆ. ಎಸಿಸಿ ಚಾರ್ಜಿಂಗ್ ಸಾಕೆಟ್ ನೆರವಿನಿಂದ ಸವಾರರು ವಾಹನ ಸವಾರಿ ಮಾಡುತ್ತಲೇ ತಮ್ಮೆಲ್ಲ ಎಲೆಕ್ಟ್ರಾನಿಕ್ ಸಾಧನಗಳನ್ನು ಚಾರ್ಜ್ ಮಾಡುವ ಸೌಲಭ್ಯವು ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋಟ್ರ್ಸ್‍ನಲ್ಲಿ ಇರಲಿದೆ. 2021 ಆಫ್ರಿಕಾ ಟ್ವಿನ್ ಬೆಲೆ ರೂ 15.96 ಲಕ್ಷದಿಂದ ಆರಂಭಗೊಳ್ಳುತ್ತದೆ (ದೇಶದಾದ್ಯಂತ ಎಕ್ಸ್ ಷೋರೂಂ ಬೆಲೆ)