ಹೋಂಡಾ ಹೈನೆಸ್ ಬೆಲೆ 2,500 ರೂ. ಹೆಚ್ಚಳ

By Suvarna News  |  First Published Jan 9, 2021, 4:34 PM IST

ಹೋಂಡಾ ದ್ವಿಚಕ್ರ ವಾಹನ ಕಂಪನಿಯ ಪ್ರೀಮಿಯಂ ಮೋಟಾರ್ ಸೈಕಲ್ ಹೈನೆಸ್ ಬೆಲೆಯಲ್ಲಿ ಇದೀಗ ಏರಿಕೆಯಾಗಿದೆ. ಹಬ್ಬದ ವೇಳೆ, ಉಳಿತಾಯದ ಆಫರ್ ಘೋಷಿಸಿದ್ದ ಕಂಪನಿ ಇದೀಗ, ಸದ್ದಿಲ್ಲದೇ ಸುಮಾರು 2,500 ರೂ.ನಷ್ಟ ಹೆಚ್ಚಳ ಮಾಡಿದೆ. ಹಾಗಾದರೆ, ಬೈಕ್ ಒಟ್ಟು ಬೆಲೆ ಎಷ್ಟು?


ಭಾರತೀಯ ರಸ್ತೆಗಳಲ್ಲಿ ರಾಯಲ್‌ ಎನ್‌ಫೀಲ್ಡ್ ಮತ್ತು ಜಾವಾ ಬೈಕುಗಳಿಗೆ ಠಕ್ಕರ್ ಕೊಡಲು ಮುಂದಾಗಿರುವ ಹೊಂಡಾ  ಹೈನೆಸ್ ಈಗ ಭಾರಿ ಸದ್ದು ಮಾಡುತ್ತಿದೆ. ಹಬ್ಬದ ಸಂದರ್ಭದಲ್ಲಿ ಬೈಕ್ ಮಾರಾಟದ ಹೆಚ್ಚಳ ದೃಷ್ಟಿಯಿಂದ ಖರೀದಿ ಮೇಲೆ ಒಂದಿಷ್ಟು ಹಣದ ಉಳಿತಾಯದ ಆಫರ್ ಘೋಷಿಸಿತ್ತು. ಆದರೆ, ಈ ಹೊಸ ವರ್ಷದಲ್ಲಿ ಹೋಂಡಾ ಹೈನೆಸ್ ಬೈಕ್  ಖರೀದಿಯಲ್ಲಿ 2500 ರೂಪಾಯಿವರೆಗೆ ಹೆಚ್ಚಳವಾಗಿದೆ.

ಹೋಂಡಾ 2 ವೀಲರ್ ಇಂಡಿಯಾ ಕಂಪನಿಯ ಪ್ರೀಮಿಯಂ ಬೈಕ್ ಎನಿಸಿಕೊಳ್ಳುತ್ತಿರುವ ಹೈನೆಸ್, ಹೊಸ ವರ್ಷದಲ್ಲಿ ಬೆಲೆ ಹೆಚ್ಚಿಸಿಕೊಂಡ ಮೊದಲ ಬೈಕ್ ಆಗಿದೆ. ಹೋಂಡಾ ಕಂಪನಿ ಸದ್ದಿಲ್ಲದೇ ತನ್ನ ಈ ಮಾಡರ್ನ್ ಕ್ಲಾಸಿಕ್ ಮೋಟಾರ್ ಸೈಕಲ್‌ ಹೈನೆಸ್ ಡಿಎಲ್‌ಎಕ್ಸ್ ವೆರಿಯೆಂಟ್ ಮೇಲೆ 1,500 ರೂಪಾಯಿ ಹೆಚ್ಚಿಸಿದ್ದು, ಅದರ ಬೆಲೆ ಈಗ 1,86,500 ರೂ.ಆಗಿದೆ. ಇದೇ ವೇಳೆ, ಸಿಬಿ 350 ಡಿಎಲ್‌ಎಕ್ಸ್ ಪ್ರೋ ವೆರಿಯೆಂಟ್ 2,500 ರೂಪಾಯಿನಷ್ಟು ಹೆಚ್ಚಾಗಿದ್ದು, ನಿಮಗೆ 1,92,500 ರೂಪಾಯಿಯಲ್ಲಿ ಸಿಗಲಿದೆ. ಇಲ್ಲಿ ನಮೂದಿಸಲಾಗಿರುವ ಎಲ್ಲ ಬೆಲೆಗಳು ನ್ಯೂದೆಹಲಿ ಶೋರೂಮ್ ಬೆಲೆಗಳಾಗಿವೆ ಎಂಬುದನ್ನು ಗಮನಿಸಿ.

Latest Videos

undefined

ಐಕಾನಿಕ್ ಟಾಟಾ ಸಫಾರಿ ಎಸ್‌ಯುವಿ ಮತ್ತೆ ಘರ್ಜನೆಗೆ ಸಿದ್ಧ

ಕಳೆದ ಅಕ್ಟೋಬರ್‌ನಲ್ಲಿ ಹೋಂಡಾ 2 ವೀಲರ್ ಇಂಡಿಯಾ ಕಂಪನಿ ಈ ಹೈನೆಸ್  ಬೈಕ್ ಅನ್ನು ಲಾಂಚ್ ಮಾಡಿತ್ತು. ಬಿಡುಗಡೆಯಾದ ಮೇಲೆ ಇದೇ ಮೊದಲ ಬಾರಿಗೆ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ.

ಈ ಬೆಲೆ ಹೆಚ್ಚಳದಿಂದಾಗಿ ತನ್ನ ಪ್ರತಿಸ್ಪರ್ಧಿ ರಾಯಲ್ ಎನ್‌ಫೀಲ್ಡ್‌ ಮಿಟಿಯರ್ 350ಗಿಂತಲೂ ಹೋಂಡಾ ಹೈನೆಸ್ ಹೆಚ್ಚು ತುಟ್ಟಿಯಾಗಿದೆ. ಎರಡು ಮೋಟಾರ್ ಸೈಕಲ್‌ಗಳ ಬೆಲೆಯಲ್ಲಿ ಹೋಲಿಕೆ ಮಾಡಿದರೆ, ಹೈನೆಸ್ ಮುಂದಿದೆ. ರಾಯಲ್ ಎನ್‌ಫೀಲ್ಡ್ ಮಿಟಿಯರ್ 350 ಬೈಕ್ 1.76 ಲಕ್ಷ ರೂಪಾಯಿಯಿಂದ ಆರಂಭವಾಗಿ, ಟಾಪ್ ಎಂಡ್ ಮಾಡೆಲ್ ಸೂಪರ್‌ನೋವಾ ಮಾಡೆಲ್ 1.90 ಲಕ್ಷ ರೂಪಾಯಿವರೆಗೆ ಸಿಗುತ್ತದೆ. ಆದರೆ, ಹೋಂಡಾ ಹೈನೆಸ್ ಮೋಟಾರ್ ಸೈಕಲ್ ಬೆಲೆಯನ್ನು ಬೆನಿಲಿ ಇಂಪೀರಿಯಲ್‌ಗೆ ಹೋಲಿಸಿದರೆ ತುಸು ಅಗ್ಗವೇ ಆಗಿದೆ. ಬೆನಿಲಿ ಇಂಪಿರಿಯಲ್ 400 ಬೈಕ್ ಎಕ್ಸ್ ಶೋರೂಮ್ ಬೆಲೆ 1.99 ಲಕ್ಷ ರೂಪಾಯಿಯಾಗಿದೆ.

ಹೈನೆಸ್ ವಿಶೇಷತೆಗಳೇನು?
ಐದು ಸ್ಟ್ರೋಕ್ ಒಎಚ್‌ಸಿ ಸಿಂಗಲ್ ಸಿಲೆಂಡರ್ ಇಂಜಿನ್ ಹೊಂದಿರುವ ಹೈನೆಸ್ 3000 ಆರ್‌ಪಿಎಂಗೆ 30 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಂಥದ್ದೇ ರೋಡುಗಳಲ್ಲೂ ಚಲಿಸುವಂತೆ ಬೈಕ್ ರೂಪಿಸಾಗಿದೆ ಎಂಬುದು ಹೋಂಡಾ ಸಂಸ್ಥೆಯ ಭರವಸೆಯಾಗಿದೆ. 1107 ಮಿಮೀ ಎಂತ್ತರ, 181 ಕೆಜಿ ಭಾರದ ಈ ಬೈಕು 166 ಮಿಮೀ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಆರು ಬಣ್ಣಗಳಲ್ಲಿ  ಈ ಬೈಕ್ ಗ್ರಾಹಕರಿಗೆ ಲಭ್ಯವಿದೆ.

1 ಲಕ್ಷ ಕೋಟಿ ರೂ. ದಾಟಿದ ಬಜಾಜ್‌ನ ಮಾರುಕಟ್ಟೆ ಬಂಡವಾಳ!

ಎಲ್ಇಡಿ ಲೈಟ್‌ಗಳು, ಟ್ರಾಕ್ಷನ್ ಕಂಟ್ರೋಲ್, ಡುಯಲ್ ಎಬಿಎಸ್ ಹೋಂಡಾ ಹೈನೆಸ್ ಬೈಕ್‌ನ ಪ್ರಮುಖ ಆಕರ್ಷಣೆಗಳು ಎಂದು ಹೇಳಬಹುದು. ಫೋನ್‌ಗೆ ಬ್ಲೂಟೂಥ್ ಮೂಲಕ ಸ್ಮಾರ್ಟ್ ಫೋನ್ ಕನೆಕ್ಟ್ ಮಾಡಿಕೊಂಡರೆ ಧ್ವನಿ ಮೂಲಕವೇ ಮ್ಯೂಸಿಕ್, ಕರೆಗಳನ್ನು ನಿರ್ವಹಣೆ ಮಾಡಬಹುದಾದ ಸ್ಮಾರ್ಟ್ ವಾಯ್ಸ್ ಕಂಟ್ರೋಲ್ ಸಿಸ್ಟಮ್ ಕೂಡ ಈ ಬೈಕ್‌ನಲ್ಲಿದ್ದು, ಅದು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. 350 ಸಿಸಿ ಸಾಮರ್ಥ್ಯದ ಈ ಬೈಕು ಎರಡು ಮಾದರಿಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. ನೋಡುವುದಕ್ಕೂ ತುಂಬಾ ಆಕರ್ಷಕವಾಗಿರುವ ಈ ಬೈಕಿನ ರೈಡಿಂಗ್ ಕೂಡ ನಿಮಗೆ ಅತ್ಯದ್ಭುದವಾದ ಅನುಭವವನ್ನು ನೀಡುತ್ತದೆ.

ಭಾರತದ ದ್ವಿಚಕ್ರವಾಹನದ ಮಾರುಕಟ್ಟೆಯಲ್ಲಿ ಅದರಲ್ಲೂ 350 ಸಿಸಿ ಎಂಜಿನ್ ಸೆಗ್ಮೆಂಟ್‌ನಲ್ಲೂ ಸ್ವಾಮತ್ಯ ಸಾಧಿಸಿರುವ ರಾಯಲ್ ಎನ್‌ಫೀಲ್ಡ್ ಕಂಪನಿಯ ದ್ವಿಚಕ್ರವಾಹನಗಳಿಗೆ ಸ್ಪರ್ಧೆ ನೀಡುವ ಭರವಸೆಯನ್ನು ಹೋಂಡಾ ಈ ಹೈನೆಸ್ ಹೊರ ಹಾಕಿದೆ. ಈಗಾಗಲೇ ಅನೇಕ ಬಳಕೆದಾರರು ಈ ಬೈಕಿನ ಬಗ್ಗೆ ಉತ್ತಮ

8 ವರ್ಷದಲ್ಲೇ ಅತ್ಯಧಿಕ ಟಾಟಾ ಪ್ರಯಾಣಿಕ ವಾಹನಗಳ ಮಾರಾಟ!

 

click me!