ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ: 160 ನಗರಗಳಲ್ಲಿ ಜಾಗೃತಿ ಕಾರ್ಯಕ್ರಮ!

By Suvarna NewsFirst Published Feb 23, 2021, 10:25 PM IST
Highlights

ರಾಷ್ಟ್ರೀಯ ರಸ್ತೆ ಸುರಕ್ಷತೆಯ 32ನೇ ಮಾಸಾಚರಣೆ  ಜಾಗೃತಿ ಕಾರ್ಯಕ್ರಮದಲ್ಲಿ ಭಾರತದ 160 ನಗರಗಳಲ್ಲಿ ಬರೋಬ್ಬರಿ 1.2 ಲಕ್ಷ ಜನರಿಗೆ ಅರುವು ಮೂಡಿಸುವ ಕಾರ್ಯವನ್ನು ಹೋಂಡಾ ಇಂಡಿಯಾ ಟುವೀಲರ್ಸ್ ಮಾಡುತ್ತಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಬೆಂಗಳೂರು(ಫೆ.23): ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ  ಸಚಿವಾಲಯದ ‘ಸಡಕ್ ಸುರಕ್ಷಾ ಜೀವನ್ ರಕ್ಷಾ’ ಧ್ಯೇಯವನ್ನು ರಾಷ್ಟ್ರೀಯ ರಸ್ತೆ ಸುರಕ್ಷತೆಯ 32ನೇ ಮಾಸಾಚರಣೆ (2021ರ ಜನವರಿ 18ರಿಂದ ಫೆಬ್ರುವರಿ 17ರವರೆಗೆ) ಸಂದರ್ಭದಲ್ಲಿ ಹೋಂಡಾ 2ವ್ಹೀಲರ್ಸ್ ಇಂಡಿಯಾ, ತನ್ನ ತಿಂಗಳಪೂರ್ತಿ ವಿಶೇಷ ರಸ್ತೆ ಸುರಕ್ಷತೆಯ ಜಾಗೃತಿ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಅರಿವು ಮೂಡಿಸಿದೆ.

ಭಾರತದಲ್ಲಿ ಹೊಂಡಾ CB350RS ಬೈಕ್ ಬಿಡುಗಡೆ; ಬೆಲೆ 1.96 ಲಕ್ಷ ರೂ!

ಈ 32ನೇ ರಾಷ್ಟ್ರೀಯ ಸುರಕ್ಷತಾ ಮಾಸಾಚರಣೆ ಸಂದರ್ಭದಲ್ಲಿ ಹೋಂಡಾ, 1.2 ಲಕ್ಷದಷ್ಟು ಮಕ್ಕಳು ಮತ್ತು ವಯಸ್ಕರಿಗೆ ರಸ್ತೆ ಸುರಕ್ಷತೆಯ ಅರಿವು ಮೂಡಿಸಿದೆ. ಹಲವಾರು ಪ್ರಾದೇಶಿಕ ಸಾರಿಗೆ ಕಚೇರಿಗಳು (ಆರ್‍ಟಿಒ), ಸಂಚಾರ ನಿಯಂತ್ರಣ ಪೊಲೀಸ್ ವಿಭಾಗ, ಸರ್ಕಾರದ ಆರೋಗ್ಯ ಇಲಾಖೆ, ಕೈಗಾರಿಕಾ ತರಬೇತಿ ಸಂಸ್ಥೆಗಳು, ಶಾಲಾ - ಕಾಲೇಜ್‍ಗಳು, ಕಾರ್ಪೊರೇಟ್‍ಗಳು ಮತ್ತು ತನ್ನ 6,300 ಮಾರಾಟ ಮತ್ತು ಸೇವಾ ಕೇಂದ್ರಗಳ ಸಹಯೋಗದಲ್ಲಿ ಮಹಾನಗರಗಳದಾಚೆಗೂ  ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹೋಂಡಾ 2ವ್ಹೀಲರ್ಸ್ ಹಮ್ಮಿಕೊಂಡಿತ್ತು.

90 ಲಕ್ಷಕ್ಕೂ ಅಧಿಕ ಮಾರಾಟ, ದಾಖಲೆ ಬರೆದ ಹೋಂಡಾ ಶೈನ್

ದೇಶದಾದ್ಯಂತ ಹೋಂಡಾ ರಸ್ತೆ ಸುರಕ್ಷತಾ ಚಟುವಟಿಕೆಗಳನ್ನು ಏರ್ಪಡಿಸಿತ್ತು.  58 ನಗರಗಳಲ್ಲಿ 97 ರಸ್ತೆ ಸುರಕ್ಷತೆ ಉತ್ತೇಜನಾ ರ್ಯಾಲಿಗಳು, 4 ವಾಕ್‍ಥಾನ್‍ಗಳನ್ನು ಆಯೋಜಿಸಿತ್ತು. ಆಸ್ಸಾಂನ ಗುವಾಹಟಿಯಲ್ಲಿ, ಆಸ್ಸಾಂನ ಸಾರಿಗೆ ಇಲಾಖೆಯ ಸಹಯೋಗದಲ್ಲಿ  ಈಶಾನ್ಯ ಭಾರತದಲ್ಲಿನ  ತನ್ನ 7ನೇ ಸುರಕ್ಷಿತ ಚಾಲನೆ ತರಬೇತಿ ಕೇಂದ್ರ (ಎಸ್‍ಡಿಇಸಿ) ಆರಂಭಿಸಿದೆ.  ದಕ್ಷಿಣ ಭಾರತದಲ್ಲಿ  ಹೋಂಡಾದ ಸುರಕ್ಷಿತ ಚಾಲನಾ ತಂಡವು ತಿರುಚ್ಚಿಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡಿತು. ಪಶ್ಚಿಮ ಭಾರತದಲ್ಲಿ ಮಹಾರಾಷ್ಟ್ರದ ಠಾಣೆಯ ಆರೋಗ್ಯ ಇಲಾಖೆಯ ಸರ್ಕಾರಿ ವೈದ್ಯರು ತಮ್ಮ ರಸ್ತೆ ಹೊಣೆಗಾರಿಕೆಯನ್ನು ಕಲಿತುಕೊಂಡರು. ಡಿಜಿಟಲ್‍ನ ಶಕ್ತಿ - ಸಾಮಥ್ರ್ಯ ಬಳಸಿಕೊಂಡ ಹೋಂಡಾದ ಸುರಕ್ಷತಾ ತರಬೇತುದಾರರು, 50,000 ಜನರಿಗೆ ಹೋಂಡಾದ ಡಿಜಿಟಲ್ ರಸ್ತೆ ಸುರಕ್ಷತೆಯ ಇ-ಗುರುಕುಲ ಕಾರ್ಯಕ್ರಮದ ಮೂಲಕ ತರಬೇತಿ ನೀಡಿದರು. ಹೋಂಡಾ ದತ್ತು ಪಡೆದುಕೊಂಡಿರುವ 12 ಸಂಚಾರ ತರಬೇತಿ ಪಾರ್ಕ್‍ಗಳಲ್ಲಿ 22,000 ಮಕ್ಕಳಿಗೆ ಮತ್ತು  183 ಶಾಲೆ, ಕಾಲೇಜ್ ಮತ್ತು ಕಾರ್ಪೊರೇಟ್‍ಗಳ ವಯಸ್ಕ ಸಿಬ್ಬಂದಿಗೆ   ಡಿಜಿಟಲ್ ತರಬೇತಿ ನೀಡಲಾಯಿತು. 

ಹೋಂಡಾ ಗ್ರಾಜಿಯಾ ಸ್ಪೋರ್ಟ್ಸ್ ಎಡಿಶನ್ ಬಿಡುಗಡೆ; ಆಕರ್ಷಕ ವಿನ್ಯಾಸ ಹಾಗೂ ಬೆಲೆ!

ಇದಕ್ಕೆ ಹೆಚ್ಚುವರಿಯಾಗಿ, 9,600 ಚಾಲನಾ ಕಲಿಕೆ ಅರ್ಜಿದಾರರು ಮತ್ತು ಸಂಚಾರ ನಿಯಮಗಳನ್ನು ಉಲ್ಲಂಘಿಸಿದವರಿಗೆ, ಸಂಚಾರ ನಿಯಮಗಳು ಮತ್ತು ರಸ್ತೆ ಶಿಸ್ತು ಅಳವಡಿಕೊಳ್ಳುವುದರ ಕುರಿತು ಹೋಂಡಾದ 5 ಸುರಕ್ಷತೆಯ ಚಾಲನಾ ಕೇಂದ್ರಗಳಲ್ಲಿ (ವಿಶಾಖಪಟ್ಟಣ, ವಿಜಯವಾಡಾ, ಉನಾ, ರಾಂಚಿ, ಬೆಂಗಳೂರು) ಮತ್ತು 3 ಸಂಚಾರ ತರಬೇತಿ ಪಾರ್ಕ್‍ಗಳಲ್ಲಿ (ಕರ್ನಾಲ್, ತಿರುಚ್ಚಿ ಮತ್ತು ಕೊಯಿಮತ್ತೂರು) ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಭಾರತದಲ್ಲಿ 2021 ಆಫ್ರಿಕಾ ಟ್ವಿನ್ ಅಡ್ವೆಂಚರ್ ಹೊಂಡಾ ಸ್ಪೋರ್ಟ್ಸ್ ಬೈಕ್ ಲಾಂಚ್!

ಇದುವರೆಗಿನ ಈ  ಅತಿದೊಡ್ಡ ರಸ್ತೆ ಸುರಕ್ಷತೆ ಉತ್ತೇಜನಾ ಕಾರ್ಯಕ್ರಮದ ಬಗ್ಗೆ ವಿವರಿಸಿರುವ ಹೋಂಡಾ ಮೋಟರ್‍ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಬ್ರ್ಯಾಂಡ್ ಮತ್ತು ಸಂವಹನ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿರುವ ಪ್ರಭು ನಾಗರಾಜ್ ಅವರು, ‘ವಾಹನ ಉದ್ದಿಮೆಯ ಪ್ರಮುಖ ಕಾರ್ಪೊರೇಟ್ ಕಂಪನಿಯಾಗಿರುವ ಹೋಂಡಾ, ಸುರಕ್ಷಿತ ವಾಹನಗಳ ತಯಾರಿಕೆಗಷ್ಟೇ ಬದ್ಧವಾಗಿರದೆ, ಜನರು ರಸ್ತೆ ಮೇಲೆ ಸಂಚರಿಸುವಾಗಲೂ ಸುರಕ್ಷಿತವಾಗಿರುವುದನ್ನೂ ಬಯಸುತ್ತದೆ.  ಈ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಸಂದರ್ಭದಲ್ಲಿ ಹೋಂಡಾ ಕುಟುಂಬವು, ‘ಸಡಕ್ ಸುರಕ್ಷಾ ಜೀವನ್ ರಕ್ಷಾ’ ಸಂದೇಶವನ್ನು ಶಾಲೆ – ಕಾಲೇಜ್ ವಿದ್ಯಾರ್ಥಿಗಳಿಂದ ಹಿಡಿದು, ಮೊದಲ ಬಾರಿಗೆ ವಾಹನ ಚಾಲನಾ ಲೈಸನ್ಸ್‍ಗೆ ಅರ್ಜಿ ಸಲ್ಲಿಸಿದವರಿಗೆ, ಬಸ್ ಚಾಲಕದವÀರಿಂದ ಹಿಡಿದು ಪಾದಚಾರಿಗಳೂ ಸೇರಿದಂತೆ ರಸ್ತೆ ಬಳಸುವ ಎಲ್ಲ ವಯೋಮಾನದ 1.2 ಲಕ್ಷ ಜನರಿಗೆ ತಲುಪಿಸಿದೆ.  ಮುಂಬರುವ ದಿನಗಳಲ್ಲಿಯೂ ನಾವು ದೇಶದಾದ್ಯಂತ ಜನರಲ್ಲಿ ರಸ್ತೆ ಸುರಕ್ಷತೆಯ ಅರಿವು ಮೂಡಿಸುವ ಕಾರ್ಯಕ್ರಮವನ್ನು ಮುಂದುವರೆಸಿಕೊಂಡು ಹೋಗಲಿದ್ದೇವೆ’ ಎಂದು ಹೇಳಿದ್ದಾರೆ.

ಹೊಸ ಇತಿಹಾಸ ಸೃಷ್ಟಿಸಿದ ಹೊಂಡಾ ಆ್ಯಕ್ಟಿವಾ ಸ್ಕೂಟರ್!.

ಕರ್ನಾಟಕದಲ್ಲಿ 7,800ಕ್ಕೂ ಹೆಚ್ಚು ಚಿಣ್ಣರು ಮತ್ತು ವಯಸ್ಕರಿಗೆ ಹೋಂಡಾದಿಂದ ರಸ್ತೆ ಸುರಕ್ಷತೆಯ ಪಾಠ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯ ಸಂದರ್ಭದಲ್ಲಿ ಹೋಂಡಾ, ಬೆಂಗಳೂರಿನಲ್ಲಿ 6,700 ಚಿಣ್ಣರು ಮತ್ತು ವಯಸ್ಕರಲ್ಲಿ ರಸ್ತೆ ಸುರಕ್ಷತೆಯ ಅರಿವು ಮೂಡಿಸಿದೆ. ಸವಾರರ ರಸ್ತೆ ಸುರಕ್ಷತಾ ತಿಳಿವಳಿಕೆಯ ಮಟ್ಟ ಹೆಚ್ಚಿಸಲು ಆದ್ಯತೆ ನೀಡಿರುವ ಹೋಂಡಾ, ನಗರದಲ್ಲಿನ 2,000ಕ್ಕೂ ಹೆಚ್ಚು ಕಾರ್ಪೊರೇಟ್ ವೃತ್ತಿಪರರು ಮತ್ತು ಗ್ರಾಹಕರ ಅನುಕೂಲಕ್ಕಾಗಿ ಹೋಂಡಾ 2ವ್ಹೀಲರ್ಸ್ ಇಂಡಿಯಾ, ಡಿಜಿಟಲ್ ರಸ್ತೆ ಸುರಕ್ಷತಾ ತರಬೇತಿ ಕಾರ್ಯಕ್ರಮ ಆಯೋಜಿಸಿತ್ತು. 

click me!