ಭಾರತದ ಪ್ರಮುಖ ದ್ವಿಚಕ್ರವಾಹನ ತಯಾರಿಕಾ ಕಂಪನಿಯಾಗಿರುವ ಬಜಾಜ್ ಆಟೋ ಇದೀಗ ಹೊಸ ಪಲ್ಸರ್ 180 ಬಿಡುಗಡೆ ಮಾಡಿದೆ. ಈ ಬೈಕ್ ಬೆಲೆ 1.08 ಲಕ್ಷ ರೂಪಾಯಿಯಾಗಿದೆ. ಬಿಎಸ್ 6 ಆಧರಿತ ಎಂಜಿನ್ ಹೊಂದಿರುವ ಈ ಬೈಕ್ ಹೋಂಡಾ ಹಾರ್ನೆಟ್, ಟಿವಿಎಸ್ ಅಪಾಚೆ ಮತ್ತು ಹೀರೋ ಎಕ್ಸ್‌ಟ್ರೀಮ್‌ಗೆ ತೀವ್ರ ಪೈಪೋಟಿ ನೀಡಬಹುದು.
ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ಸೃಷ್ಟಿಸಿದ ಕ್ರೇಜ್ ಅಷ್ಟಿಷ್ಟಲ್ಲ. 2001ರಲ್ಲಿ ಮೊದಲ ಬಜಾಜ್ ಪಲ್ಸರ್ ಮೋಟಾರ್ ಸೈಕಲ್ ರಸ್ತೆಗಿಳಿಯಿತು. ಆ ನಂತರವೇ ಇತಿಹಾಸವೇ ಸೃಷ್ಟಿಯಾಯಿತು. ಬಜಾಜ್ ಪಲ್ಸರ್ ಪರಿಚಯಿಸುವ ಮೊದಲು ಭಾರತೀಯ ಮಾರುಕಟ್ಟೆಯಲ್ಲಿ ಮೈಲೇಜ್ ನೀಡುವ ಮೋಟಾರ್‌ಸೈಕಲ್‌ಗಲಿಗೆ ಗ್ರಾಹಕರು ಮಣೆ ಹಾಕುತ್ತಿದ್ದರು. ಆದರೆ ಪಲ್ಸರ್ ಬಿಡುಗಡೆಯಾದ ಮೇಲೆ ಇಡೀ ದ್ವೀಚಕ್ರವಾಹನ ಮಾರುಕಟ್ಟೆಯ ಸ್ವರೂಪವೇ ಬದಲಾಗಿ ಹೋಯಿತು. ಪರ್ಫಾಮೆನ್ಸ್ ಮೋಟಾರ್‌ಸೈಕಲ್‌ಗಳತ್ತ ಭಾರತೀಯ ಯುವ ಸಮೂಹ ಹೊರಳಿತ್ತು. ಅದರ ಲಾಭವನ್ನು ಪಲ್ಸರ್ ಪಡೆದುಕೊಂಡಿತು.
Indian Chief: ಭಾರತದಲ್ಲಿ ಬಿಡುಗಡೆಯಾಗಲಿದೆ ಇಂಡಿಯನ್ ಚೀಫ್ ಬೈಕ್
undefined
ಬಜಾಜ್ ಆಟೋ ಇದೀಗ, ಬಿಎಸ್ 6 ಆಧರಿತ ಹೊಸ ಪಲ್ಸರ್ 180 ಮೋಟಾರ ಸೈಕಲ್ ಅನ್ನು ಬಿಡುಗಡೆ ಮಾಡಿದೆ. ಈ ಬೈಕ್ ಕೆಂಪ-ಕಪ್ಪು ಸಮ್ಮಿಶ್ರದ ಬಣ್ಣದಲ್ಲಿ ಮಾರಾಟಕ್ಕೆ ಲಭ್ಯವಿದೆ. ಡಿಸ್‌ಪ್ಲೇ ಮತ್ತು ಟೆಸ್ಟ್ ಡ್ರೈವ್‌ಗಾಗಿ ಈಗಾಗಲೇ ಕಂಪನಿಯು ಈ ಮೋಟಾರ್ ಸೈಕಲ್‌ಗಳನ್ನು ಡೀಲರ್‌ಗಳಿಗೆ ರವಾನಿಸಿದೆ. ಈ ಬೈಕ್ ಬೆಲೆ 1.08 ಲಕ್ಷ ರೂ.(ದಿಲ್ಲಿ ಎಕ್ಸ್‌ಶೋರೂಮ್).
ಈ ಹೊಸ ಪಲ್ಸರ್ 180 ಮೋಟಾರ್ ಸೈಕಲ್ ವಿನ್ಯಾಸವು ಅತ್ಯಾಕರ್ಷಕವಾಗಿದೆ. ಅವಳಿ ಡಿಆರ್‌ಎಲ್‌ಗಳೊಂದಿಗೆ ಸಿಂಗಲ್ ಪಾಡ್ ಹೆಡ್‌ಲೈಟ್ ಹೊಂದಿದೆ. ಹೆಡ್‌ಲೈಟ್‌ನ ತುಸು ಮುಂಭಾಗವನ್ನು ಟಿಂಟೆಡ್ ಮೂಲಕ ಮುಚ್ಚಲಾಗಿದೆ. ಈ ಮೋಟಾರ್ ಸೈಕಲ್‌ನ ಪೆಟ್ರೋಲ್ ಟ್ಯಾಂಕ್ ಸ್ಟೈಲ್ ಆಕರ್ಷಕವಾಗಿದೆ. ಸ್ಪಿಟ್ ಸ್ಟೈಲ್ ಆಸನಗಳು, ಎಂಜಿನ್ ವಿನ್ಯಾಸ, ಸೆಮಿ ಡಿಜಿಟಲ್ ಇನ್ಸುಟ್ರುಮೆಂಟಲ್ ಕ್ಲಸ್ಟರ್ ಎಲ್ಲವೂ ಆಕರ್ಷಕ ಹಾಗೂ ನಾವೀನ್ಯತೆಯಿಂದ ಕೂಡಿದೆ.
ಈ ಮೋಟಾರ್ ಸೈಕಲ್ ಕೂಡ ಪಲ್ಸರ್ 180ಎಫ್ ರೀತಿಯಲ್ಲಿ ಶಕ್ತಿಶಾಲಿಯಾಗಿದೆ. ಈ ಬೈಕ್ ಎಂಜಿನ್ 178.6 ಸಿಸಿ ಪವರ್ ಉತ್ಪಾದಿಸುವ ಸಿಂಗಲ್ ಸಿಲೆಂಡರ್ ಹೊಂದಿದ್ದು, ಏರ್ ಕೂಲ್ಡ್ ವ್ಯವಸ್ಥೆಯನ್ನು ಇದೆ. 8,5000 ಆರ್‌ಪಿಎಂನಲ್ಲಿ ಗರಿಷ್ಠ 16.7 ಬಿಎಜ್‌ಪಿ ಪವರ್ ಉತ್ಪಾದಿಸುತ್ತದೆ. 6,500 ಆರ್‌ಪಿಎಂನಲ್ಲಿ ಗರಿಷ್ಠ 14.52 ಟಾರ್ಕ್ ಉತ್ಪಾದಿಸುತ್ತದೆ. ಫೈವ್ ಸ್ಪೀಡ್ ಗೇರ್‌ಬಾಕ್ಸ್ ಇದೆ. ಈಗಾಗಲೇ ಗೊತ್ತಿರುವಂತೆ ಪಲ್ಸರ್ ತನ್ನ ಶಕ್ತಿಶಾಲಿ ಪ್ರದರ್ಶನದಿಂದಲೇ ಯುವಕರನ್ನು ತನ್ನತ್ತ ಸೆಳೆಯಲು ಯಶಸ್ವಿಯಾಗಿದ್ದು, ಈ ಬೈಕ್ ಕೂಡ ಪರಂಪರೆಯನ್ನು ಮುಂದುವರಿಸಿದೆ. ಈ ಬೈಕ್ ಕೂಡ ಶಕ್ತಿಲಾಲಿಯಾಗಿದೆ.
ಬಜಾಜ್ ಪಲ್ಸರ್ 180 ಮೋಟಾರ್‌ಸೈಕಲ್‌ಗೆ ಮುಂಭಾಗದಲ್ಲಿ ಟೆಲೆಸ್ಕೋಪಿಕ್ ಪೋರ್ಕ್ಸ್ ಮತ್ತು ಹಿಂಬದಿಯಲ್ಲಿ ಗ್ಯಾಸ್ ಚಾರ್ಜ್ಡ್ ಟ್ವಿನ್ ಸ್ಪ್ರಿಂಗ್ಸ್ ಇರುವ ಶಾಕ್‌ಆಬ್ಸರ್ ನೀಡಲಾಗಿದೆ. ಇನ್ನು ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಹೇಳುವುದಾದರೆ, ಫ್ರಂಟ್ ಗಾಲಿಗೆ 280 ಎಂಎಂ ಸಿಂಗಲ್ ಡಿಸ್ಕ್ ಬ್ರೇಕ್ ಇದ್ದರೆ, ಹಿಂಬದಿ ಚಕ್ರಕ್ಕೆ 230 ಎಂಎಂ ಸಿಂಗಲ್ ರೂಟರ್ ಡಿಸ್ಕ್ ಬ್ರೇಕ್ ನೀಡಲಾಗಿದೆ. ಈ ಬ್ರೇಕ್‌ಗಳು ಸಿಂಗಲ್ ಚಾನೆಲ್ ಎಬಿಎಸ್ ತಂತ್ರಜ್ಞಾನವನ್ನು ಹೊಂದಿವೆ.
ದೇಶದ ಮೊದಲ ಸಿಎನ್‌ಜಿ ಟ್ರಾಕ್ಟರ್ ಬಿಡುಗಡೆ: ಈ ಟ್ರಾಕ್ಟರ್ ಯಾರದ್ದು ಗೊತ್ತಾ?
ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ 180 ಸಿಸಿ ಸೆಗ್ಮೆಂಟ್‌ನಲ್ಲಿ ಈಗಾಗಲೇ ಹೋಂಡಾ ಹಾರ್ನೆಟ್ 2.0, ಟಿವಿಎಸ್ ಅಪಾಚೆ ಆರ್‌ಟಿಆರ್ 180 ಮತ್ತು ಹೀರೋ ಎಕ್ಸ್‌ಟ್ರೀಮ್ 160ಆರ್ ಸದ್ದು ಮಾಡುತ್ತಿವೆ. ಈ ದ್ವಿಚಕ್ರವಾಹನಗಳಿಗೆ ಬಜಾಜ್‌ನ ಈ ನೂತನ 180 ಪಲ್ಸರ್ ತೀವ್ರ ಪೈಪೋಟಿ ನೀಡಬಹುದು ಎನ್ನಲಾಗುತ್ತಿದೆ.
ಭಾರತೀಯ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ಪಲ್ಸರ್ ಸಾಧಿಸಿದ ವಿಕ್ರಮ ಅಷ್ಟಿಷ್ಟಲ್ಲ. ಪಲ್ಸರ್ ಮಾರುಕಟ್ಟೆಗೆ ಬರುವ ಮೊದಲು ಇಂಧನ ದಕ್ಷತೆಯ ದ್ವಿಚಕ್ರವಾಹನಗಳದ್ದೇ ಕಾರುಬಾರು ಆಗಿತ್ತು. ಅಂದರೆ 80 ಸಿಸಿಯಿದಂ 125 ಸಿಸಿ ದ್ವಿಚಕ್ರವಾಹನಗಳೇ ಹೆಚ್ಚಾಗಿ ಮಾರಾಟವಾಗುತ್ತಿದ್ದವು. ರಾಯಲ್ ಎನ್‌ಫೀಲ್ಡ್ ಬುಲೆಟ್ 355 ಸಿಸಿ ಮತ್ತು 500 ಸಿಸಿ ಹೊರತುಪಡಿಸಿದರೆ, ಬೇರೆ ಯಾವುದೇ ಹೆಚ್ಚು ಸಿಸಿ ಸಾಮರ್ಥ್ಯ ದ್ವಿಚಕ್ರವಾಹನಗಳು ಮಾರುಕಟ್ಟೆಯಲ್ಲೇ ಇರಲೇ ಇಲ್ಲ. ಆಗ 1999ರಲ್ಲಿ ಹೀರೋ ಹೋಂಡಾ ಸಿಬಿಜೆಡ್ ಲಾಂಚ್ ಮಾಡಿತು ಮತ್ತು ಯಶಸ್ಸು ಕಂಡಿತು. ಉತ್ತಮ ಪ್ರದರ್ಶನ ತೋರುವ ಬೈಕ್‌ಗಳಿಗೆ ಡಿಮ್ಯಾಂಡ್ ಇರುವುದನ್ನು ಹೀರೋ ಹೋಂಡಾ ಸಿಬಿಜಿ ತೋರಿಸಿಕೊಟ್ಟಿತು.
ಈ ಅವಕಾಶವನ್ನು ಬಳಸಿಕೊಂಡ ಬಜಾಜ್ 150 ಸಿಸಿ ಮತ್ತು 180 ಸಿಸಿ ಟ್ವಿಟನ್ ಪಲ್ಸರ್‌ಗಳನ್ನು ಮಾರುಕಟ್ಟೆಗೆ 2001 ನವೆಂಬರ್ 24ರಂದು ಬಿಡುಗಡೆ ಮಾಡಿತು. ಆ ನಂತರ ಇತಿಹಾಸವೇ ಸೃಷ್ಟಿಯಾಯಿತು. ಭಾರತೀಯ ಯುವ ಸಮೂಹವು ಅಗ್ಗದ ದರದಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಬೈಕ್ ಎದುರು ನೋಡುತ್ತಿದ್ದರು. ಆ ಅವಕಾಶವನ್ನು ಬಜಾಜ್ ಪಲ್ಸರ್ ಎರಡೂ ಕೈ ಬಾಚಿಕೊಂಡಿತು.
PiMo ಇ-ಬೈಕ್ ಬೆಲೆ 30 ಸಾವಿರ ರೂ; ಇದನ್ನು ಓಡಿಸೋಕೆ ಬೇಕಿಲ್ಲ ಡಿಎಲ್