Indian Chief: ಭಾರತದಲ್ಲಿ ಬಿಡುಗಡೆಯಾಗಲಿದೆ ಇಂಡಿಯನ್ ಚೀಫ್ ಬೈಕ್

By Suvarna News  |  First Published Feb 17, 2021, 1:24 PM IST

ಕಂಪನಿಗೆ ನೂರು ವರ್ಷಗಳ ತುಂಬಿರುವ ಹಿನ್ನೆಲೆಯಲ್ಲಿ ಇಂಡಿಯನ್ ಮೋಟಾರ್ ಸೈಕಲ್ ತನ್ನ ಐಕಾನಿಕ್ ಚೀಫ್ ಮೋಟಾರ್ ಸೈಕಲ್‌ಗಳನ್ನು ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆ ಮಾಡಲಿದೆ. ಈ ಮೂರು  ಬೈಕು ತುಂಬ ಶಕ್ತಿಶಾಲಿಯಾಗಿವೆ. ಹೊಸ ಮಾದರಿಯ ವಿನ್ಯಾಸಗಳೊಂದಿಗೆ ಭಾರತೀಯ ರಸ್ತೆಗೆ ಇಳಿಯಲು ಸನ್ನದ್ಧವಾಗಿವೆ.


ಬಹುಶಃ ಇಂದಿನ ತಲೆಮಾರಿಗೆ ಇಂಡಿಯನ್ ಮೋಟರ್‌ಸೈಕಲ್ ದ್ವಿಚಕ್ರವಾಹನಗಳ ಬಗ್ಗೆ ಅಷ್ಟು ಗೊತ್ತಿಲ್ಲ. ಆದರೆ, ಈ ದ್ವಿಚಕ್ರವಾಹನಗಳು ಮತ್ತೆ ಭಾರತದ ರಸ್ತೆಗಳಿಗೆ ಇಳಿಯುವ ಕಾಲ ಸನ್ನಿಹಿತವಾಗಿದ್ದು, ಮುಂದಿನ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿವೆ.

ದೇಶದ ಮೊದಲ ಸಿಎನ್‌ಜಿ ಟ್ರಾಕ್ಟರ್ ಬಿಡುಗಡೆ: ಈ ಟ್ರಾಕ್ಟರ್ ಯಾರದ್ದು ಗೊತ್ತಾ?

Tap to resize

Latest Videos

undefined

ಕೆಲವು ವಾರಗಳ ಹಿಂದೆಯಷ್ಟೇ ಇಂಡಿಯನ್ ಮೋಟರ್‌ಸೈಕಲ್ ತನ್ನ ಹೊಸ ಬ್ರ್ಯಾಂಡ್ ಚೀಫ್ ವ್ಯಾಪ್ತಿಯ ಮೂರು ಬ್ರ್ಯಾಂಡ್ ನ್ಯೂ ಬೈಕ್‌ಗಳನ್ನು ಅನಾವರಣ ಮಾಡಿತ್ತು. ಕಂಪನಿಯ ಆರಂಭವಾಗಿ 100 ವರ್ಷಗಳನ್ನು ಪೂರೈಸುತ್ತಿರುವ ಈ ಹೊತ್ತಿನಲ್ಲಿ ಇಂಡಿಯನ್ ಮೋಟರ್‌ಸೈಕಲ್ ಈ ಹೊಸ ಬ್ರ್ಯಾಂಡ್‌ಗಳ ಮೂಲಕ ಮತ್ತೆ ಭಾರತಕ್ಕೆ ಕಾಲಿಡುತ್ತಿದೆ.

ಇಂಡಿಯನ್ ಮೋಟರ್‌ಸೈಕಲ್ ಹೊಸ ತಲೆಮಾರಿನ ಇಂಡಿಯನ್ ಚೀಫ್(Indian Chief), ಚೀಫ್ ಬಾಬ್ಬರ್ (Chief bobber) ಮತ್ತು ಇಂಡಿಯನ್ ಸೂಪರ್ ಚೀಫ್(Indian Super Chief) ಶಕ್ತಿಶಾಲಿ ಬೈಕ್‌ಗಳನ್ನು ಬಿಡುಗಡೆ ಮಾಡುತ್ತಿದೆ.

ಈ ಬೈಕುಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳುವ ಮುನ್ನ ಕಂಪನಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

ಇಂಡಿಯನ್ ಚೀಫ್ ಎನ್ನುವುದು ಮೋಟಾರ್‌ಸೈಕಲ್ ಆಗಿದ್ದು, ಹೆಂಡೀ ಮ್ಯಾನುಫ್ಯಾಕ್ಚುರಿಂಗ್ ಕಂಪನಿ ಈ ಬೈಕುಗಳನ್ನು ಉತ್ಪಾದಿಸುತ್ತಿತ್ತು. ಬಳಿಕ ಈ ಬ್ರ್ಯಾಂಡ್‌ನಡಿ ಇಂಡಿಯನ್ ಮೋಟಾರ್‌ಸೈಕಲ್ ಕಂಪನಿ ಬೈಕುಗಳನ್ನು ಉತ್ಪಾದಿಸಲಾರಂಭಿಸಿತು. ಈ ಕಂಪನಿಯು 1922ರಲ್ಲಿ ತನ್ನ ಉತ್ಪಾದನೆಯನ್ನು ಆರಂಭಿಸಿತು. ಮತ್ತು 1953ರಲ್ಲಿ ಮೋಟಾರ್‌ಸೈಕಲ್‌ ಉತ್ಪಾದನೆಯನ್ನು ಸ್ಥಗಿತಗೊಳಿಸಿತು.  ಚೀಫ್‌ ಇಂಡಿಯನ್ ಬಿಗ್ ಟ್ವಿನ್ ಹೆಚ್ಚು ದೊಡ್ಡದಾದ, ಹೆಚ್ಚು ಶಕ್ತಿಶಾಲಿ ಮೋಟಾರ್ ಸೈಕಲ್ ಆಗಿತ್ತು ಇದನ್ನು ಸ್ಕೌಟ್ ಸ್ಪರ್ಧೆ ಮತ್ತು ಕ್ರೀಡಾ ಸವಾರಿಯಲ್ಲಿ ಬಳಸಲಾಗುತ್ತದೆ. ಎರಡನೆಯ ಮಹಾಯುದ್ಧದ ನಂತರ ಇಂಡಿಯನ್ ಕಂಪನಿಯು ನಾಗರಿಕರ ಬಳಕೆಗಾಗಿ ಬೈಕುಗಳ ಉತ್ಪಾದನೆಯನ್ನು ಪುನರಾರಂಭಿಸಿದಾಗ, ಕಂಪನಿಯು ಚೀಫ್ ಲೈನ್ ಮಾದರಿಯನ್ನು ಮಾತ್ರವೇ ಹೆಚ್ಚು ಬಳಸಿಕೊಂಡಿತು.  ಅಂತಿಮವಾಗಿ ಮತ್ತೆ 1953ರಲ್ಲಿ ತನ್ನ ಉತ್ಪಾದನೆಯನ್ನು ಕೊನೆಗೊಳಿಸಿತು.

PiMo ಇ-ಬೈಕ್ ಬೆಲೆ 30 ಸಾವಿರ ರೂ; ಇದನ್ನು ಓಡಿಸೋಕೆ ಬೇಕಿಲ್ಲ ಡಿಎಲ್

ಮತ್ತೆ ಈಗ ಹೊಸದಾಗಿ ಬಿಡುಗಡೆಯಾಗಲಿರುವ ಬೈಕುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..

ಈ ಮೂರು ಮೋಟಾರ್‌ಸೈಕಲ್‌ಗಳು ಒಂದೇ ಪ್ಲ್ಯಾಟ್‌ಫಾರ್ಮ್‌ನಲ್ಲಿ ತಯಾರಾಗಿದ್ದರೂ ಒಂದಿಷ್ಟು ವ್ಯತ್ಯಾಸಗಳನ್ನು ಹೊಂದಿವೆ. ಬೈಕುಗಳ ಎರ್ಗೋನಾಮಿಕ್ಸ್‌ ತುಸು ಬದಲಾವಣೆಯನ್ನು ಗಮನಿಸಬಹುದು. ಇನ್ನು ವಿನ್ಯಾಸ ಬಗ್ಗೆ ಹೇಳುವುದಾದರೆ, ಈ ಮೂರು ಬೈಕುಗಳು, 2013ರಲ್ಲಿ ಪರಿಚಯಿಸಲಾದ ಪೋಲಾರಿಸ್ ವಿನ್ಯಾಸಕ್ಕಿಂತ ತುಂಬ ಭಿನ್ನವಾಗಿವೆ ಎಂದು ಹೇಳಬಹುದು. ಈ ಹಿಂದಿನ ತಲೆಮಾರಿನ ಬೈಕುಗಳಲ್ಲಿ ಬಳಸಲಾಗುತ್ತಿದ್ದ ಕ್ರೋಮ್ ಥೀಮ್ ಬದಲಿಗೆ ಬ್ಲ್ಯಾಕ್ ಔಟ್ ಥೀಮ್‌ನಡಿ ವಿನ್ಯಾಸಗೊಳಿಸಲಾಗಿದೆ.

ಎಲ್ಲಾ ಮೂರು ಮೋಟರ್‌ಸೈಕಲ್‌ಗಳು ಕಾಸ್ಟ್-ಅಲ್ಯೂಮಿನಿಯಂ ಹಿಂಭಾಗದ ಸಬ್‌ಫ್ರೇಮ್‌ನೊಂದಿಗೆ ಜೋಡಿಸಲಾದ ಹೊಸ ಸ್ಟೀಲ್-ಟ್ಯೂಬ್ ಫ್ರೇಮ್ ಅನ್ನು ಹಂಚಿಕೊಳ್ಳುವ ಸಾಧ್ಯತೆಯಿದೆ ಮತ್ತು ಥಂಡರ್ ಸ್ಟ್ರೋಕ್ 116 ಮೋಟರ್‌ನ ಯುರೋ 5 / ಬಿಎಸ್ 6 ಕಂಪ್ಲೈಂಟ್ ಆವೃತ್ತಿಯಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಇದು 1,890 ಸಿಸಿ ಎಂಜಿನ್ ಆಗಿದ್ದು, 162 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.

ಈಗ ಗೊತ್ತಾಗಿರುವ ಮಾಹಿತಿ ಪ್ರಕಾರ ಈ ಬೈಕುಗಳಲ್ಲಿ 15 ಲೀಟರ್ ಸಾಮರ್ಥ್ಯ ಪೆಟ್ರೋಲ್ ಟ್ಯಾಂಕ್ ಇರಲಿದೆ. ಬಾಬ್ಡ್ ರಿಯರ್ ಫೆಂಡರ್, ಡ್ಯುಯಲ್ ಔಟ್‌ಬೋರ್ಡ್ ಪ್ರಿಲೋಡ್ ಹೊಂದಾಣಿಕೆಯಾಗಬಲ್ಲ ರಿಯರ್ ಶಾಕ್ಸ್‌ಆಬ್ಸವರ್ಸ್, ಎರಡು ಎಕ್ಸಾಸ್ಟ್‌ಗಳು, ಎಲ್ಇಡಿ ಲೈಟ್, ಕೀಲೆಸ್ ಇಗ್ನಿಷನ್, Pirelli Night Dragon ಟೈರ್‌ಗಳು ಇರಲಿವೆ. ಕ್ರೂಸ್ ಕಂಟ್ರೋಲ್ ಜೊತೆಗೆ, ಚೀಫ್ ಸವಾರರು ಸ್ಪೋರ್ಟ್ಸ್, ಸ್ಟ್ಯಾಂಡರ್ಡ್ ಅಥವಾ ಟೂರ್ ಎಂಬ ಆಯ್ಕೆಗಳ ಮೂಲಕ ಮೂರು ರೀತಿಯ ರೈಡ್ ಮೋಡ್‌ಗಳನ್ನು ಥ್ರೋಟಲ್ ಅಡ್ಜಸ್ಟ್ ಮಾಡಿಕೊಳ್ಳುವ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಶಾರುಖ್ ಬಳಿ ಇದೆ ವಿರಳ, ವಿಶಿಷ್ಟ ಲೆಕ್ಸಸ್ ಕಾರು. ಬೆಲೆ ಎಷ್ಟು ಗೊತ್ತಾ?

click me!