ಹೋಂಡಾ ಆಕ್ಟಿವಾ 6ಜಿ ಖರೀದಿಸಿದರೆ 5000 ರೂ.ವರೆಗೆ ಕ್ಯಾಶ್‌ಬ್ಯಾಕ್!

By Suvarna NewsFirst Published Dec 16, 2020, 4:59 PM IST
Highlights

ವರ್ಷಾಂತ್ಯದ ಆಫರ್ ಆಗಿ ಹೋಂಡಾ ತನ್ನ ಆಕ್ಟಿವ್ 6ಜಿ ಮಾರಾಟದ ಮೇಲೆ ಕ್ಯಾಶ್‌ಬ್ಯಾಕ್ ಆಫರ್ ಘೋಷಿಸಿದೆ. ಈ ಆಫರ್ ಸೀಮಿತ ಅವಧಿಗೆ ಇದ್ದು, ಗ್ರಾಹಕರು ಲಾಭ ಪಡೆದುಕೊಳ್ಳಬಹುದಾಗಿದೆ. ನೀವು 5000 ರೂ.ವರೆಗೂ ಕ್ಯಾಶ್‌ಬ್ಯಾಕ್ ಪಡೆಯಬಹುದು.

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಯಾವುದು ಎಂದರೆ, ಒಂದು ಕ್ಷಣವೂ ಯೋಚಿಸದೇ ಹೋಂಡಾ ಆಕ್ಟಿವಾ ಎಂದು ತಟ್ಟನೇ ಹೇಳುತ್ತಾರೆ. ಬಹುಶಃ ಸ್ಕೂಟರ್ ಎಂದರೆ ಆಕ್ಟಿವಾ ಎನ್ನುವಷ್ಟರಮಟ್ಟಿಗೆ ಅದು ಜನಪ್ರಿಯತೆ ಪಡೆದುಕೊಂಡಿರುವ ಸಂಗತಿ ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.

ಹೋಂಡಾ ಆಕ್ಟಿವಾ 6ಜಿ ಖರೀದಿಸುವವರಿಗೆ ಇಲ್ಲೊಂದು ಸಿಹಿ ಸುದ್ದಿ ಇದೆ. ವರ್ಷಾಂತ್ಯದ ಆಫರ್ ಆಗಿ ಕಂಪನಿ ಕ್ಯಾಶ್‌ಬ್ಯಾಕ್ ಯೋಜನೆಯನ್ನು ಜಾರಿಗೆ ತಂದಿದೆ. ತನ್ನ ಪಾರ್ಟನರ್ ಬ್ಯಾಂಕ್‌ನೊಂದಿಗೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಇಎಂಐ ಮೇಲೆ 5000 ರೂಪಾಯಿವರೆಗೂ ಕ್ಯಾಶ್‌ಬ್ಯಾಕ್ ಆಫರ್ ನೀಡುತ್ತಿದೆ. ಯಾವುದೇ ಅಡೆ ತಡೆ ಇಲ್ಲದೇ ಡಾಕ್ಯುಮೆಂಟೆಷನ್ ಪ್ರಕ್ರಿಯೆಯ ಭರವಸೆಯನ್ನು ನೀಡುತ್ತಿದೆ.

5000 ರೂ. ಕೊಟ್ಟು ಹೊಸ ಏಪ್ರಿಲಿಯಾ ಎಸ್ಆರ್‌ಎಕ್ಸ್ ಬುಕ್ ಮಾಡಿ

ವರ್ಷದಿಂದ ವರ್ಷಕ್ಕೆ ಗ್ರಾಹಕರ ವಿಶ್ವಾಸರ್ಹತೆಯನ್ನು ಹೆಚ್ಚಿಸಿಕೊಂಡ ಬರುತ್ತಿರುವ ಜಪಾನ್ ಮೂಲದ ದ್ವಿಚಕ್ರವಾಹನ ತಯಾರಿಕಾ ಹೋಂಡಾ, ಆಕ್ಟಿವಾ ಸ್ಕೂಟರ್ ಬಿಲ್ಡ್ ಕ್ವಾಲಿಟಿಯಿಂದ ಹೆಚ್ಚು ಜನರನ್ನು ಸೆಳೆಯುತ್ತಲಿದೆ. ಅದರ ಶಕ್ತಿಶಾಲಿ ಎಂಜಿನ್ ಕೂಡ ಗಮನಾರ್ಹವಾಗಿದೆ.

ಹೋಂಡಾ ಪೇಟೆಂಟ್ ಆಗಿರುವ ಪಿಜಿಎಂ-ಎಫ್ಐ(ಪ್ರೋಗ್ರಾಮ್ಡ್ ಫ್ಯೂಯಲ್ ಇಂಜೆಕ್ಷನ್), ಇಎಸ್‌ಪಿ(ಎನಾಹನ್ಸಡ್ ಸ್ಮಾರ್ಟ್ ಪವರ್) ಮತ್ತು ಎಚ್ಇಟಿ(ಹೋಂಡಾ ಇಕೋ ಟೆಕ್ನಾಲಜಿ) ತಂತ್ರಜ್ಞಾನದ 110 ಸಿಸಿ ಏರ್ ಕೋಲ್ಡ್ ಏಂಜಿನ್ ಅನ್ನು ಆಕ್ಟಿವಾ 6ಜಿ ಸ್ಕೂಟರ್ ಹೊಂದಿದೆ. ಈ ಎಂಜಿನ್ ಗರಿಷ್ಠ 7.79 ಪಿಎಸ್ ಪವರ್ ಉತ್ಪಾದಿಸಿದರೆ 8.79 ಎನ್ಎಂ ಟಾರ್ಕ್ ಹೊಂದಿದೆ.

ಈ ಆಕ್ಟಿವಾ 6ಜಿ ಸ್ಕೂಟರ್ ಫುಲ್ ಎಚ್ಇಡಿ ಹೆಡ್ ಲೈಟ್, ಎಕ್ಸಟರ್ನಲ್ ಫ್ಯುಯೆಲ್ ಫಿಲ್ಲಿಂಗ್ ಕ್ಯಾಪ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಸ್ವಿಚ್, ದೊಡ್ಡದಾರ 12 ಇಂಚ್ ಚಕ್ರಗಳು ಮತ್ತು ಟೆಲೆಸ್ಕೋಪಿಕ್ ಸಸ್ಪೆನ್ಸ್‌ ಸೆಟ್‌ಅಪ್‌ನಂಥ ವಿಶಿಷ್ಟ ಫೀಚರ್‌ಗಳೊಂದಿಗೆ ಸಿಗುತ್ತದೆ.

ಈ ಆಕ್ಟಿವಾ 6 ಸ್ಕೂಟರ್ ನಿಮಗೆ ಎರಡು ಮಾದರಿಗಳಲ್ಲಿ ಲಭ್ಯವಿದೆ. ಸ್ಟ್ಯಾಂಡರ್ಡ್ ಮತ್ತು ಡಿಲೆಕ್ಸ್ ಟ್ರಿಮ್ ವೆರಿಯೆಂಟ್‌ಗಳಲ್ಲಿ ದೊರೆಯುತ್ತದೆ. ಲೋಯೆರ್ ಸ್ಟ್ಯಾಂಡರ್ಡ್ ಸ್ಕೂಟರ್ ಬೆಲೆ 65,892 ರೂಪಾಯಿ ಇದ್ದರೆ, ಹೈಯರ್ ಡಿಲೆಕ್ಸ್ ಟ್ರಿಮ್ ನಿಮಗೆ 67,392 ರೂಪಾಯಿಗೆ ಸಿಗುತ್ತದೆ. ಈ ಎರಡು ಬೆಲೆಗಳು ಎಕ್ಸ್ ಶೋರೂಮ್ ಬೆಲೆಗಳಾಗಿವೆ.

2021 ಕೆಟಿಎಂ 125 ಡ್ಯೂಕ್ ಬೈಕ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

ಹೋಂಡಾ ಆಕ್ಟಿವಾ 6ಜಿ ಆರು ಬಣ್ಣಗಳ ಪ್ಯಾಲೆಟ್ ಹೊಂದಿದೆ. ಅಂದರೆ, ನೀಲಿ, ಕೆಂಪು, ಹಳದಿ, ಕಪ್ಪು, ಬಿಳಿ ಮತ್ತು ಬೂದು ಬಣ್ಣಗಳಲ್ಲಿ ಈ ಸ್ಕೂಟರ್ ಸಿಗುತ್ತದೆ. ಇದು ಟಿವಿಎಸ್ ಜುಪಿಟರ್ ಸ್ಕೂಟರ್‌ಗೆ ಪ್ರತಿಸ್ಪರ್ಧಿಯಾಗಿದೆ ಎಂದು ಹೇಳಬಹುದು.

ಭಾರತದಲ್ಲಿ ಹೋಂಡಾ ಆಕ್ಟಿವಾ ಸ್ಕೂಟರ್  ತನ್ನ ಕಾರ್ಯಾಚರಣೆ ಆರಂಭಿಸಿ 20 ವಸಂತಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಆಕ್ಟಿವಾ 6ಜಿ ಸ್ಪೇಷಲ್ ಎಡಿಷನ್ ಹೊರ ತರುವ ಬಗ್ಗೆ ಘೋಷಣೆ ಮಾಡಿತ್ತು ಇಲ್ಲಿ ಸ್ಮರಿಸಬಹುದು.

Yamaha FZS FI ವಿಂಟೇಜ್ ಎಡಿಷನ್ ಬಿಡುಗಡೆ; ನವೆಂಬರ್‌ನಲ್ಲಿ ಭರ್ಜರಿ ಮಾರಾಟ!

 

click me!