ತಿಂಗಳ ಹಿಂದೆಯಷ್ಟೇ ಕೆಟಿಎಂ 250 ಅಡ್ವೆಂಚರ್ ಬಿಡುಗಡೆ ಮಾಡಿದ್ದ, ಕಂಪನಿ ಇದೀಗ ಎಂಟ್ರಿ ಲೇವಲ್ ಬೈಕ್ 125 ಡ್ಯೂಕ್‌ನ ಹೊಸ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಮೊದಲು 2018ರಲ್ಲಿ ಕಂಪನಿ ಈ ಎಂಟ್ರಿ ಲೆವಲ್ ಬೈಕ್ ಬಿಡುಗಡ ಮಾಡಿತ್ತು ಮತ್ತೀಗ ಅದನ್ನು ಅಪ್‌ಗ್ರೇಡ್ ಮಾಡಿದೆ.
ಆಫ್‌ರೋಡ್ ಮೋಟಾರ್ ಸೈಕಲ್ ವಿಭಾಗದಲ್ಲಿ ಭಾರಿ ಪ್ರಭಾವ ಹೊಂದಿರುವ ಕೆಟಿಎಂ ಇದೀಗ ತನ್ನ ಎಂಟ್ರಿ ಲೇವಲ್ 125 ಸಿಸಿ ಬೈಕ್‌ನ 2021ರ ಹೊಸ ಆವೃತ್ತಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.
ಈ ಹೊಸ ಕೆಟಿಎಂ 125 ಡ್ಯೂಕ್ ಬೈಕ್‌ನ ಬೆಲೆ 1,50,010(ಎಕ್ಸ್ ಶೋರೂಮ್ ದೆಹಲಿ) ರೂಪಾಯಿ. ಈ ಹಿಂದಿನ ಮಾಡೆಲ್‌ಗೆ ಹೋಲಿಸಿದರೆ ಈ ಹೊಸ ಬೈಕ್‌ನ ಬೆಲೆ 8 ಸಾವಿರ ರೂಪಾಯಿ ಹೆಚ್ಚಳವಾಗಿದೆ. ಭಾರತದಲ್ಲಿ ಮೊದಲ ಬಾರಿಗೆ ಅಂದರೆ 2018ರಲ್ಲಿ ಕೆಟಿಎಂ ತನ್ನ ಎಂಟ್ರಿ ಲೇವಲ್ 125 ಸಿಸಿ ಡ್ಯುಕ್ ಬಿಡುಗಡೆ ಮಾಡಿತ್ತು. ಆಗ ಅದರ ಬೆಲೆ 1.18 ಲಕ್ಷ ರೂಪಾಯಿ.
undefined
ಭಾರತದಲ್ಲಿ KTM 250 ಬೈಕ್ ಬಿಡುಗಡೆ, ಬೆಲೆ 2.48 ಲಕ್ಷ ರೂಪಾಯಿ
ಕೆಟಿಎಂ 125 ಡ್ಯುಕ್ ಬೈಕ್ ಎಲ್ಲ ರೀತಿಯಿಂದಲೂ ನಾವೀನ್ಯತೆಯನ್ನು ಹೊಂದಿದೆ. ಅಂದರೆ, ಹೊಸ ಸ್ಟೈಲ್, ಬಾಡಿ, ಸಸ್ಪೆನ್ಸನ್ ಸೇರಿದಂತೆ ಎಲ್ಲ ವಿಭಾಗದಲ್ಲಿ ಬೈಕ್ ಅನ್ನು ಅಪ್‌ಡೇಟ್ ಮಾಡಲಾಗಿದೆ. ಹಾಗಾಗಿ, ಸವಾರರಿಗೆ ಹೊಸ ಅನುಭವವದ ಭರವಸೆಯನ್ನು ನೀಡುತ್ತದೆ.
ಪ್ರೀಮಿಯಂ ಮೋಟರ್ ಸೈಕಲ್ ಆಗಿರುವ ಕೆಟಿಎಂ ಭಾರತದಲ್ಲಿ ಬಜಾಜ್ ಆಟೋ ಜೊತೆಗಿಡಿ ಮಾರಾಟವನ್ನು ಮಾಡುತ್ತದೆ. ಆಸ್ಟ್ರಿಯನ್ ಮೂಲದ ಈ ಕಂಪನಿಯಲ್ಲಿ ಭಾರತದ ಬಜಾಜ್ ಆಟೋ ಕೂಡ ಪಾಲುದಾರಿಕೆ ಹೊಂದಿದೆ.
2021 ಕೆಟಿಎಂ ಬೈಕ್ ವಿನ್ಯಾಸಕ್ಕೆ ಕೆಟಿಎಂ 1290 ಸೂಪರ್ ಡ್ಯೂಕ್ ಆರ್ ಸ್ಫೂರ್ತಿಯಾಗಿದೆ. ಹಾಗೆಯೇ, ಈ ಬೈಕ್ ಸ್ಟೀಲ್ ಟ್ರೆಲ್ಸ್ ಫ್ರೇಮ್ ಚಾಸೀಸ್ ಹೊಂದಿರುವುದನ್ನು ನೀವು ಕಾಣಬಹುದು. ದೊಡ್ಡದಾದ ಸ್ಟೀಲ್ ಇಂಧನ ಟ್ಯಾಂಕ್ ಇದ್ದು, 13.5 ಲೀಟರ್ ಸಾಮರ್ಥ್ಯದ್ದಾಗಿದೆ. ಜೊತೆಗೆ ಡಬ್ಲ್ಯೂಪಿ ಸಸ್ಪೆನ್ಸನ್ ಕೂಡ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಎಲೆಕ್ಟ್ರಾನಿಕ್ ಆರೇಂಜ್ ಮತ್ತು ಸೆರಾಮಿಕ್ ವೈಟ್ ಎರಡು ಬಣ್ಣಗಳಲ್ಲಿ ಈ ಕೆಟಿಎಂ 125 ಡ್ಯೂಕ್ ಮೋಟಾರ್ ಸೈಕಲ್ ಮಾರಾಟಕ್ಕೆ ದೊರೆಯಲಿದೆ.
ಹೊಸ ಆವೃತ್ತಿಯ ಈ ಕೆಟಿಎಂ 125 ಡ್ಯೂಕ್ ಬೈಕ್‌ನ ರೈಡರ್ ಮತ್ತು ಪ್ಯಾಸೆಂಜರ್ ಸೀಟ್‌ಗಳನ್ನೂ ಪರಿಷ್ಕರಿಸಲಾಗಿದ್ದು, ಹೆಚ್ಚು ಕಮಾಂಡಿಗ್ ರೈಡಿಂಗ್ ಅನುಭವವನ್ನು ನೀಡುತ್ತದೆ. ಬೈಕ್‌ನ ಎರೋಗಾನಾಮಿಕ್ಸ್ ಕೂಡ ಬದಲಿಸಲಾಗಿದೆ. ಕೆಟಿಎಂ 200 ಡ್ಯೂಕ್, ಕೆಟಿಎಂ 250 ಡ್ಯೂಕ್ ಮತ್ತು ಕೆಟಿಎಂ 390 ಡ್ಯೂಕ್ ಸೇರಿದಂತೆ ಡ್ಯೂಕ್ ಕುಟುಂಬದ ಬೈಕ್‌ಗಳ ಸ್ಟೈಲ್ ಅನ್ನು ಈ ಹೊಸ ಬೈಕ್ ಕೂಡ ಹೋಲುತ್ತದೆ.
125 ಸಿಸಿ ಸಿಂಗಲ್ ಸಿಲೆಂಡರ್ ಇದ್ದು, 9,250 ಆರ್‌ಪಿಎಂನಲ್ಲಿ 14.3 ಬಿಎಚ್‌ಪಿ ಪವರ್ ಉತ್ಪಾದಿಸುತ್ತದೆ. ಹಾಗೆಯೇ 8000 ಆರ್‌ಪಿಎಂನಲ್ಲಿ ನಿಮಗೆ 12 ಎಂನ್‌ಎಂ ಶಕ್ತಿ ದೊರೆಯುತ್ತದೆ.
Yamaha FZS FI ವಿಂಟೇಜ್ ಎಡಿಷನ್ ಬಿಡುಗಡೆ; ನವೆಂಬರ್‌ನಲ್ಲಿ ಭರ್ಜರಿ ಮಾರಾಟ!
ಇತ್ತೀಚಿನ ಬಿಎಸ್ 6 ನಿಯಮಗಳ ಅನುಗುಣವಾಗಿ ಎಂಜಿನ್ ಅನ್ನು ಸ್ವಲ್ಪ ಬದಲಿಸಿದ್ದರೂ ಅದರ ಒಟ್ಟಾರೆ ಸಾಮರ್ಥ್ಯದಲ್ಲಿ ವ್ಯತ್ಯಾಸವಾಗಿಲ್ಲ. 6-ಸ್ಪೀಡ್ ಗೇರ್‌ಬಾಕ್ಸ್, ಸಿಂಗಲ್ ಫ್ರಂಟ್ ಡಿಸ್ಕ್ ಮತ್ತು ಸಿಂಗಲ್-ಚಾನೆಲ್ ಎಬಿಎಸ್ ಹೊಂದಿರುವ ಬ್ರೇಕಿಂಗ್ ಸಿಸ್ಟಮ್ ಸಹ 2021 ಮಾದರಿಯಲ್ಲಿ ಬದಲಾಗದೆ ಹಾಗೆಯೇ ಉಳಿದಿದೆ.
ಕೆಟಿಎಂ 250 ಅಡ್ವೈಂಚರ್ ಬೈಕ್
ಕೆಟಿಎಂ ತಿಂಗಳ ಹಿಂದೆಯಷ್ಟೇ ಅಡ್ವೆಂಚರ್ ಮಾಡೆಲ್ ಕೆಟಿಎಂ 250 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿತ್ತು. ಈ ಹೊಸ ಕೆಟಿಎಂ 250 ಅಡ್ವೆಂಚರ್ ಬೈಕ್, ಭಾರತೀಯ ಮಾರುಕಟ್ಟೆಯಲ್ಲಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್, ಬಿಎಂಡಬ್ಲ್ಯೂ ಜಿ 310 ಮತ್ತು ಹೀರೋ ಎಕ್ಸ್‌ಪಲ್ಸ್ 200 ಬೈಕ್‌ಗಳಿಗೆ ಪೈಪೋಟಿ ನೀಡುವ ಸಾಧ್ಯತೆಯಿದೆ.ಕೆಟಿಎಂ 250 ಮತ್ತು ಕೆಟಿಎಂ 390 ಬೈಕ್‌ಗಳು ಕೆಲವು ಸಾಮತ್ಯೆಗಳನ್ನು ಹೊಂದಿವೆ ಮತ್ತು ಬಿಡಿ ಭಾಗಗಳಲ್ಲೂ ಅಂಥ ವ್ಯತ್ಯಾಸಗಳೇನೂ ಇಲ್ಲ. ಆದರೂ ನೀವು ಕೆಲವು ಬದಲಾವಣೆಗಳನ್ನು ಗುರುತಿಸಬಹುದಾಗಿದೆ. ಕೆಟಿಎಂ 250 ಬೈಕ್‌ನಲ್ಲಿ ಎಲ್‌ಇಡಿ ಡಿಆರ್‌ಎಲ್‌ನೊಂದಿಗೆ ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ನಂತಹ ವಿಭಿನ್ನ ಬದಲಾವಣೆಗಳನ್ನು ಕಾಣಬಹುದು. ಈ ಬೈಕ್ 14.5 ಲೀಟರ್ ಇಂಧನ ಟ್ಯಾಂಕ್‌ನೊಂದಿಗೆ ಬರುತ್ತದೆ ಮತ್ತು 400 ಕಿ.ಮೀ.ವರೆಗೂ ಸಂಚರಿಸಬಹುದು. ಆಯ್ಕೆ ಮಾಡಬಹುದಾದ ಆಫ್-ರೋಡ್ ಎಬಿಎಸ್ ಜೊತೆಗೆ ಎಲ್‌ಸಿಡಿ ಸ್ಕ್ರೀನ್ ಇದೆ. ಜಿಪಿಎಸ್ ಬ್ರಾಕೆಟ್, ರೇಡಿಯೇಟರ್ ಪ್ರೊಟೆಕ್ಷನ್ ಗ್ರಿಲ್, ಕ್ರ್ಯಾಶ್ ಬಂಗ್ಸ್, ಹೆಡ್‌ಲ್ಯಾಂಪ್ ಪ್ರೊಟೆಕ್ಷನ್ ಮತ್ತು ಹ್ಯಾಂಡಲ್‌ಬಾರ್ ಪ್ಯಾಡ್‌ಗಳು ಸೇರಿದಂತೆ ಹಲವು ಫೀಚರ್‌ಗಳನ್ನು ನೀವು ಬೈಕ್‌ನಲ್ಲಿ ಕಾಣಬಹುದಾಗಿದೆ.
ವರ್ಷಾಂತ್ಯದ ಆಫರ್: ಕ್ವಿಡ್, ಟ್ರೈಬರ್, ಡಸ್ಟರ್ ಖರೀದಿಸಿದ್ರೆ 70,000 ರೂ.ವರೆಗೂ ಲಾಭ!