Ola Scooter Accident ಓಲಾ ಸ್ಕೂಟರ್ ಅಪಘಾತ, ಮಾಲೀಕನ ಆರೋಪ ತಳ್ಳಿ ಹಾಕಿ ಸಾಕ್ಷಿ ನೀಡಿದ ಕಂಪನಿ!

By Suvarna News  |  First Published Apr 22, 2022, 9:37 PM IST
  • ಓಲಾ ಸ್ಕೂಟರ್ ಅಪಘಾತಕ್ಕೆ ದೋಷಪೂರಿತ ಬ್ರೇಕ್ ಕಾರಣ ಎಂದ ಮಾಲೀಕ
  • ಮಾಲೀಕನ ಆರೋಪ ತಳ್ಳಿ ಹಾಕಿದ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿ
  • ನಿಜಕ್ಕೂ ಓಲಾ ಸ್ಕೂಟರ್ ಅಪಘಾತಕ್ಕೆ ಕಾರಣವೇನು?
     

ಬೆಂಗಳೂರು(ಏ.22): ಅಸ್ಸಾಮ್ ರಾಜಧಾನಿ ಗುವ್ಹಾಟಿಯಲ್ಲಿ ನಡೆದ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅಪಘಾತ ದೇಶದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ದೋಷಪೂರಿತ ಬ್ರೇಕ್ ಕಾರಣ ಅನ್ನೋ ಮಾಲೀಕನ ಆರೋಪಕ್ಕೆ ಇದೀಗ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಉತ್ತರ ನೀಡಿದೆ. ಗ್ರಾಹಕನ ಅತೀ ವೇಗದ ಚಾಲನೆ ಹಾಗೂ ದಿಢೀರ್ ಬ್ರೇಕ್ ಹಾಕಿದ ಕಾರಣ ಅಪಘಾತ ಸಂಭವಿಸಿದೆ ಎಂದು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಸಾಕ್ಷಿ ನೀಡಿದೆ.

ಬಲವಂತ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಓಲಾ ವಿರುದ್ದ ಗಂಭೀರ ಆರೋಪ ಮಾಡಿದ್ದರು. ನನ್ನ ಪುತ್ರ ಓಲಾ ಸ್ಕೂಟರ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಹಂಪ್ ಎದುರಾಗಿದೆ. ಈ ವೇಳೆ ಸ್ಕೂಟರ್ ನಿಯಂತ್ರಣಕ್ಕೆ ತರಲು ಯತ್ನಿಸಿದ್ದ. ಆದರೆ ಓಲಾ ಸ್ಕೂಟರ್ ತನ್ನಷ್ಟಕ್ಕೆ ವೇಗ ಪಡೆದುಕೊಂಡಿದೆ. ಇದರಿಂದ ಅಪಘಾತ ಸಂಭವಿಸಿದೆ. ದೋಷಪೂರಿತ ಓಲಾ ಸ್ಕೂಟರ್‌ನಿಂದ ಪುತ್ರ ಆಸ್ಪತ್ರೆಯಲ್ಲಿದ್ದಾನೆ. ಓಲಾ ದೋಷದಿಂದ ಇದು ಸಂಭವಿಸಿದೆ ಎಂದು ಬಲವಂತ್ ಸಿಂಗ್ ಆರೋಪ ಮಾಡಿದ್ದಾರೆ.

Latest Videos

undefined

ಎಲೆಕ್ಟ್ರಾನಿಕ್‌ ವಾಹನ ಬೆಂಕಿ ಅವಘಡ ವರದಿಗಳ ನಡುವೆಯೇ ಓಲಾ ಸಿಇಓ ಭವೀಶ್‌ ಅಗರ್ವಾಲ್‌-ನಿತಿನ್ ಗಡ್ಕರಿ ಭೇಟಿ

ಆರೋಪದ ಬೆನ್ನಲ್ಲೇ ಓಲಾ ಕಂಪನಿ ತನಿಖೆ ನಡೆಸಿದೆ. ಅಪಘಾತಕ್ಕೀಡಾದ ಸ್ಕೂಟರ್‌ನಲ್ಲಿ ಸಂಗ್ರಹವಾದ ಡೇಟಾ ಹೊರತೆಗೆದಿದೆ. ಈ ಡೇಟಾದಲ್ಲಿ ಅಪಘಾತ ಸಂಭವಿಸುವ ವೇಳೆ ಗ್ರಾಹಕ ಅತೀ ವೇಗದಲ್ಲಿ ಸ್ಕೂಟರ್ ಚಲಾಯಿಸುತ್ತಿದ್ದ ಅನ್ನೋದು ಬಹಿರಂಗವಾಗಿದೆ. 7 ಕಿಲೋಮೀಟರ್ ದೂರ ಕ್ರಮಿಸಲು ಗ್ರಾಹಕ ಪ್ರತಿ ಗಂಟೆಗೆ 115 ಕಿ.ಮೀ ವೇಗದಲ್ಲಿ ಚಲಿಸಿದ್ದಾನೆ. ನಿಯಂತ್ರಣ ಕಳೆದುಕೊಂಡ ಗ್ರಾಹಕ ಭಯದಿಂದ ಬ್ರೇಕ್ ಹಾಕಿದ್ದಾನೆ. ಇದರಿಂದ ಅಪಘಾತ ಸಂಭವಿಸಿದೆ. ಸ್ಕೂಟರ್‌ನಲ್ಲಿ ಯಾವುದೇ ದೋಷವಿಲ್ಲ ಎಂದು ಓಲಾ ಗ್ರಾಹಕನ ಸ್ಕೂಟರ್‌ನಲ್ಲಿನ ಡೇಟಾ ಹೊರತೆಗೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.

ಅಪಘಾತದ 30 ನಿಮಿಷದ ಎಲ್ಲಾ ಡೇಟಾವನ್ನು ಓಲಾ ಬಹಿರಂಗ ಪಡಿಸಿದೆ. ಗ್ರಾಹಕನ ವೇಗ, ಬ್ರೇಕ್ ಹಾಕಿದ ಸಂದರ್ಭ ಹಾಗೂ ಸಮಯ ಬಳಿಕ ಅಪಘಾತ ಎಲ್ಲವೂ ಬಯಲಾಗಿದೆ. ಹೈಪರ್ ಮೂಡ್‌ನಲ್ಲಿ ಗ್ರಾಹಕ ಅತೀ ವೇಗವಾಗಿ ರೈಡ್ ಮಾಡಿರುವುದೇ ಈ ಅಪಘಾತಕ್ಕೆ ಕಾರಣ ಎಂದು ಓಲಾ ಹೇಳಿದೆ.

 

Our statement on the Guwahati scooter accident pic.twitter.com/LbwDLXNh3P

— Ola Electric (@OlaElectric)

 

ಬಿಜ್ಲಿ ಬಿಜ್ಲಿ ಹಾಡಿಗೆ ಡಾನ್ಸ್‌ ಮಾಡಿದ ಓಲಾ ಬಾಸ್‌: ವಿಡಿಯೋ ವೈರಲ್

ಎಲೆಕ್ಟ್ರಿಕ್‌ ಸ್ಕೂಟರ್‌ ಆಯ್ತು, ಓಲಾದಿಂದ ಈಗ ಎಲೆಕ್ಟ್ರಿಕ್‌ ಕಾರು!
ಎಲೆಕ್ಟ್ರಿಕ್‌ ಸ್ಕೂಟರ್‌ ಬಳಿಕ ಬೆಂಗಳೂರು ಮೂಲದ ಓಲಾ ಸಂಸ್ಥೆ ಇದೀಗ ವಿದ್ಯುತ್‌ ಚಾಲಿತ ಕಾರು ಉತ್ಪಾದನೆಯ ತನ್ನ ದೂರದೃಷ್ಟಿಯೋಜನೆಯನ್ನು ಪ್ರಕಟಿಸಿದೆ. ಎಲೆಕ್ಟ್ರಿಕ್‌ ಕಾರಿನ ಚಿತ್ರವನ್ನು ಶುಕ್ರವಾರ ಟ್ವೀಟ್‌ ಮಾಡಿರುವ ಓಲಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭವೇಶ್‌ ಅಗರ್‌ವಾಲ್‌ ಅವರು, ‘ಇದನ್ನು ನೀವು ಗೋಪ್ಯವಾಗಿ ಇಟ್ಟುಕೊಳ್ಳುವಿರಾ?’ ಎಂದು ಕಾರಿನ ಚಿತ್ರ ಪ್ರಕಟಿಸಿ ಗ್ರಾಹಕರ ಕುತೂಹಲವನ್ನು ಕೆರಳಿಸಿದ್ದಾರೆ. ಆದಾಗ್ಯೂ, ಈ ಎಲೆಕ್ಟ್ರಿಕ್‌ ವಾಹನದ ಹೆಸರು ಸೇರಿದಂತೆ ಇನ್ನಿತರ ಯಾವುದೇ ಮಾಹಿತಿಗಳನ್ನು ಅವರು ಬಹಿರಂಗಪಡಿಸಿಲ್ಲ. ಇತ್ತೀಚೆಗಷ್ಟೇ ಓಲಾ ಸಂಸ್ಥೆ ಭಾರತದ ಮಾರುಕಟ್ಟೆಗೆ ಎರಡು ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿತ್ತು.

ಅಡೆತಡೆ ಎದುರಿಸಿದ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ಯಶಸ್ವಿ 
ಓಲಾ ಎಲೆಕ್ಟ್ರಿಕ್‌ ಕಂಪನಿ ಬಿಡುಗಡೆ ಮಾಡಿದ್ದ ಎಸ್‌ 1 ಮತ್ತು ಎಸ್‌ 1 ಪ್ರೋ ಸ್ಕೂಟರ್‌ಗಳನ್ನು ಬುಕ್‌ ಮಾಡಿದ್ದ ಮೊದಲ 100 ಕಸ್ಟಮರ್‌ಗಳಿಗೆ ಯಾವುದೇ ಅಡೆ ತಡೆ ಇಲ್ಲದೆ ಸ್ಕೂಟರ್ ಡೆಲಿವರಿ ಮಾಡಲಾಗುತ್ತಿದೆ. ಆರಂಭಿಕ ಹಂತದಲ್ಲಿ ಸ್ಕೂಟರ್ ವಿತರಣೆ ಅತೀ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಬುಕಿಂಗ್ ಮಾಡಿದ ಗ್ರಾಹಕರಿಗೆ ನಿಗದಿತ ಸಮಯಕ್ಕೆ ಸ್ಕೂಟರ್ ವಿತರಣೆ ಸಾಧ್ಯವಾಗದೇ ಸಮಸ್ಯೆ ಎದುರಾಗಿತ್ತು.  

click me!