ಇವಿಟ್ರಿಕ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ, ಬೆಲೆ 64 ಸಾವಿರ, 75 ಕಿ.ಮೀ ಮೈಲೇಜ್!

By Suvarna NewsFirst Published Aug 3, 2021, 6:23 PM IST
Highlights
  • ಭಾರತದ ಇವಿಟ್ರಿಕ್ ಮೋಟಾರ್ಸ್‌ನಿಂದ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
  • ಒಂದು ಬಾರಿ ಚಾರ್ಜ್ ಮಾಡಿದರೆ 75 ಕಿ.ಮೀ ಮೈಲೇಜ್
  • ಬೆಲೆ 64 ಸಾವಿರ ರೂಪಾಯಿಗಳಿಂದ ಆರಂಭ

ಪುಣೆ(ಆ.03): ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ರಾಂತಿಯಾಗುತ್ತಿದೆ. ಅದರಲ್ಲೂ ಸ್ಕೂಟರ್ ವಿಭಾಗದಲ್ಲಿ ಪ್ರತಿ ತಿಂಗಳು ಹೊಸ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗುತ್ತಿದೆ. ಎಲ್ಲವೂ ಮೇಡ್ ಇನ್ ಇಂಡಿಯಾ ಅನ್ನೋದು ಮತ್ತೊಂದು ವಿಶೇಷ. ಇದೀಗ ಪುಣೆಯ ಇವಿಟ್ರಿಕ್ ಮೋಟಾರ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಎರಡು ವೇರಿಯೆಂಟ್‌ಗಳಲ್ಲಿ ಸ್ಕೂಟರ್ ಲಭ್ಯವಿದೆ.

ಕೇಂದ್ರದಿಂದ ತಾರಮತ್ಯ ಬೇಡ; ಟೆಸ್ಲಾ ಆಮದು ಸುಂಕ ಕಡಿತ ಮನವಿಗೆ ಟಾಟಾ ಮೋಟಾರ್ಸ್ ತಿರುಗೇಟು

ಇವಿಟ್ರಿಕ್ ಆಕ್ಸಿಸ್ ಮತ್ತು ಇವಿಟ್ರಿಕ್ ರೈಡ್ ಎಂಬ ಎರಡು ವೇರಿಯೆಂಟ್ ಸ್ಕೂಟರ್ ಬೆಲೆ  64,994/- ಮತ್ತು ರೂ.67,996/(ಎಕ್ಸ್ ಶೋ ರೂಂ). ನಿಧಾನಗತಿಯ ಇ ಸ್ಕೂಟರ್‌ಗಳಾಗಿದ್ದು,  ಭಾರತದ ಯುವ ಮತ್ತು ಕೌಟುಂಬಿಕ ಗ್ರಾಹಕರನ್ನು ಉದ್ದೇಶಿಸಿ ನಿರ್ಮಾಣ ಮಾಡಲಾಗಿದೆ. 

ಇವಿಟ್ರಿಕ್ಸ್ ಆಕ್ಸಿಸ್ ಮರ್ಕ್ಯುರಿ ವೈಟ್, ಪರ್ಷಿಯನ್ ರೆಡ್, ಲೆಮನ್ ಯೆಲ್ಲೋ, ಮತ್ತು ಎಂಪರರ್ ಗ್ರೇ ಎನ್ನುವ ನಾಲ್ಕು ಅತ್ಯಾಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.  ಇವಿಟ್ರಿಕ್ ರೈಡ್ ಅನ್ನು ಹೆಚ್ಚು ಸೀಟಿಂಗ್ ಸ್ಥಳಾವಕಾಶದೊಂದಿಗೆ ಭಾರತೀಯ ಕುಟುಂಬದ ಅಗತ್ಯಗಳನ್ನು ಗಮನದಲ್ಲಿರಿಸಿ ವಿನ್ಯಾಸಗೊಳಿಸಲಾಗಿದೆ.  ಇದು ಡೀಪ್ ಸೆರೂಲಿಯನ್ ಬ್ಲೂ, ಪರ್ಷಿಯನ್ ರೆಡ್, ಸಿಲ್ವರ್, ನೋಬಲ್ ಗ್ರೇ, ಮರ್ಕ್ಯುರಿ ವೈಟ್ ಗಳ ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ.

500 ಕಿ.ಮೀ ಮೈಲೇಜ್, 10 ಲಕ್ಷ ರೂಪಾಯಿ; ಶೀಘ್ರದಲ್ಲೇ ಟಾಟಾ ಅಲ್ಟ್ರೋಜ್ EV ಬಿಡುಗಡೆ!

ಇ-ಸ್ಕೂಟರ್ ಪ್ರತ್ಯೇಕಿಸಬಹುದಾದ ಲೀಥಿಯಂ-ಅಯಾನ್ ಬ್ಯಾಟರಿ ಆಯ್ಕೆಯೊಂದಿಗೆ ಲಭ್ಯವಿದ್ದು, ಇದು ಬಳಕೆದಾರರಿಗೆ ಚಾರ್ಜಿಂಗ್ ಅನುಕೂಲತೆ ನೀಡುತ್ತದೆ. ಸ್ಕೂಟರ್ 150 ಕೆಜಿಗಳ ತೂಕದ ಸಾಮರ್ಥ್ಯ ಹೊಂದಿದ್ದು, 250W ಮೋಟಾರ್ ಪವರ್ ಸಾಮರ್ಥ್ಯವಿದೆ. ಎರಡೂ ಇ-ಸ್ಕೂಟರ್ ಗಳು ಪೂರ್ಣವಾಗಿ ಬ್ಯಾಟರಿ ಚಾರ್ಜ್ ಮಾಡಲು 3.5 ಗಂಟೆಗಳನ್ನು ತೆಗೆದುಕೊಳ್ಳಲಿದ್ದು, ಇದು ಒಂದು ಬಾರಿ ಚಾರ್ಜ್ ಮಾಡಿದರೆ 75 ಕಿಮೀವರೆಗೆ ಓಡುತ್ತದೆ, ಇದು ಗಂಟೆಗೆ ಗರಿಷ್ಟ 25 ಕಿಮೀ ವೇಗ ಹೊಂದಿದೆ. ಇವಿಟ್ರಿಕ್ ನ ಗ್ರಾಹಕರಿಗೆ, ಬ್ರಾಂಡ್ ವಿಶಿಷ್ಟ ವೈಶಿಷ್ಟ್ಯತೆಗಳ ಶ್ರೇಣಿಯೊಂದಿಗೆ 2+ ವರ್ಷಗಳ ಬ್ಯಾಟರಿ ವಾರಂಟಿ ನೀಡುತ್ತದೆ.

ಉತ್ಪನ್ನ ಎಲ್ ಇ ಡಿ ಹೆಡ್ ಲ್ಯಾಂಪ್ ಗಳು, ರೋಬೋಟಿಕ್ ವೆಲ್ಡಿಂಗ್ ಚಾಸಿಸ್, ಸೈಡ್ ಸ್ಟ್ಯಾಂಡ್ ಸೆನ್ಸಾರ್, 12 ಇಂಚಿನ ಟ್ಯೂಬ್ ಲೆಸ್ ಟೈರ್ ನೊಂದಿಗೆ ಉಬ್ಬುಗಳಿರುವ ರಸ್ತೆಯಲ್ಲಿ ಆರಾಮದಾಯಕವಾಗಿ, ಒತ್ತಡಮುಕ್ತವಾಗಿ ಸಾಗಲು 190 ಮಿಮೀ ಗ್ರೌಂಡ್ ಕ್ಲಿಯರೆನ್ಸ್ ಸಹ ಹೊಂದಿದೆ. ಇ-ಸ್ಕೂಟರ್ ಎಲೆಕ್ಟ್ರಿಕ್ ವೆಹಿಕಲ್ ನಲ್ಲಿ ಬಳಕೆದಾರನ ಅನುಭವವನ್ನು ಹೆಚ್ಚಿಸಲು, ರಿವರ್ಸ್ ಪಾರ್ಕ್ ಅಸಿಸ್ಟ್ ಫಂಕ್ಷನ್ ಹೊಂದಿದ್ದು, ಇದನ್ನು ವೈಶಿಷ್ಟ್ಯತೆಗಳಿಂದ ಕೂಡಿದ ಮೆಷಿನ್ ಆಗಿಸಿದೆ.

ಹೊಚ್ಚ ಹೊಸ XPRES-T ಎಲೆಕ್ಟ್ರಿಕ್ ಕಾರು ಪರಿಚಯಿಸಲಿದೆ ಟಾಟಾ ಮೋಟಾರ್ಸ್!

ಮೊದಲ ಹಂತದಲ್ಲಿ, ಬ್ರಾಂಡ್ ದೆಹಲಿ, ಗುರುಗ್ರಾಮ, ಪುಣೆ, ಔರಂಗಾಬಾದ್, ಬೆಂಗಳೂರು, ತಿರುಪತಿ ಮತ್ತು ಹೈದರಾಬಾದ್ ಈ 7 ನಗರಗಳಲ್ಲಿ ಇ-ಸ್ಕೂಟರ್ ಗಳನ್ನು ವಿತರಿಸಲಿದೆ. ಬ್ರಾಂಡ್ ದೇಶದಲ್ಲಿ 28 ರಾಜ್ಯಗಳಲ್ಲಿ (ಜೊತೆಗೆ ಕೇಂದ್ರಾಡಳಿತ ಪ್ರದೇಶ) ಎಲ್ಲಾ ರಾಜಧಾನಿ ನಗರಗಳಲ್ಲಿ, ಕೇವಲ 6 ತಿಂಗಳ ಅಲ್ಪಾವಧಿಯಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚಿಸುವತ್ತ ಗಮನ ಹರಿಸಿದೆ.

click me!