ಇಟಲಿ ಮೂಲದ ಪ್ರಸಿದ್ಧ ಬೆನೆಲಿ ಕಂಪನಿಯು ಮತ್ತೊಂದು ಸೂಪರ್ ಮೋಟಾರ್‌ಸೈಕಲ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಬೆನೆಲಿ 502ಸಿ ಬಿಡುಗಡೆಯಾದ ಹೊಸ ಬೈಕ್. ಇದು ಹಲವು ವಿಶಿಷ್ಟ ವೈಶಿಷ್ಟ್ಯಗಳನ್ನು ಹೊಂದಿದ್ದು, ಅದ್ಭುತ ರೈಡಿಂಗ್ ಅನುಭವವನ್ನು ನೀಡುತ್ತದೆ.
ಬಿಲ್ಡ್ ಕ್ವಾಲಿಟಿ, ಎಂಜಿನ್ ಕಾರ್ಯಕ್ಷಮತೆ, ಬೈಕ್ ರೈಡಿಂಗ್ ವಿಶಿಷ್ಟ ಅನುಭವಕ್ಕಾಗಿಯೇ ಬೆನೆಲಿ ಮೋಟಾರ್‌ಬೈಕುಗಳು ಫೇಮಸ್. ಇಟಲಿ ಮೂಲದ ಬೆನಿಲೆ ಪ್ರೀಮಿಯಂ ಮೋಟಾರ್‌ಸೈಕಲ್, ಸ್ಕೂಟರ್‌ಗಳ ಉತ್ಪಾದನೆಯಲ್ಲಿ ಅಗ್ರಗಣ್ಯವಾಗಿದೆ. ಈ ಕಂಪನಿ ಈಗ ಭಾರತೀಯ ದ್ವಿಚಕ್ರವಾಹನ ಮಾರುಕಟ್ಟೆಗೆ ಹೊಸ ಬೈಕ್‌ವೊಂದನ್ನು ಲಾಂಚ್ ಮಾಡಿದೆ.
ಹೊಸ ಬೆನೆಲಿ 502ಸಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾದ ಇಟಲಿ ಮೂಲದ ಬೆನೆಲಿ ಕಂಪನಿಯ ಬೈಕ್. ಈ ಹೊಸ ಬೆನೆಲಿ 502ಸಿ ಬೈಕ್ ಬೆಲೆ 4.98 ಲಕ್ಷ ರೂಪಾಯಿ. ಇದು ಎಕ್ಸ್‌ಶೋರೂಮ್ ಬೆಲೆಯಾಗಿದ್ದು, ಆನ್‌ರೋಡ್ ಬೆಲೆ ಇನ್ನೂ ಹೆಚ್ಚಾಗಲಿದೆ. ಅಲ್ಲದೇ ರಾಜ್ಯದಿಂದ ರಾಜ್ಯಕ್ಕೆ ಈ ಬೆಲೆಯಲ್ಲಿ ವ್ಯತ್ಯಾಸ ಕೂಡ ಇರಲಿದೆ.
250 ಕೆಜಿ ಭಾರ ಹೊತ್ತೊಯ್ಯಬಲ್ಲ ಜಿಪ್ ಕಾರ್ಗೊ ಎಲೆಕ್ಟ್ರಿಕ್ ಸ್ಕೂಟರ್!
ಕೆಲವು ತಿಂಗಳಿಂದಲೇ ಬೆನೆಲಿ ಹೊಸ ಬೈಕ್ ಲಾಂಚ್ ಬಗ್ಗೆಸುದ್ದಿಯಾಗುತ್ತಲೇ ಇತ್ತು. ಅಲ್ಲದೇ ಈ ತಿಂಗಳ ಆದಿಯಿಂದಲೇ ಕಂಪನಿ ಬುಕ್ಕಿಂಗ್ ಕೂಡ ಆರಂಭಿಸಿತ್ತು. ಗ್ರಾಹಕರು ಬೆನೆಲಿ ಇಂಡಿಯಾ ಡೀಲರ್‌ಶಿಪ್ ಮತ್ತು ಬೆನೆಲಿ ಕಂಪನಿ ಅಧಿಕೃತ ಜಾಲತಾಣದ ಮೂಲಕ 10 ಸಾವಿರ ರೂ. ಟೋಕನ್ ಹಣ ನೀಡಿ ಬೈಕ್ ಅನ್ನು ಬುಕ್ಕಿಂಗ್ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಈಗ ಅಧಿಕೃತವಾಗಿ ಹೊಸ ಬೆನೆಲಿ 502ಸಿ ಬೈಕ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದ್ದು, ಬೈಕುಗಳ ಡೆಲೆವರಿ ಆಗಸ್ಟ್‌ನಿಂದ ಆರಂಭವಾಗಲಿದೆ. ಗ್ರಾಹಕರು ಈಗಲೂ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಲು ಅವಕಾಶವಿದೆ.
ಭಾರತೀಯ ಮಾರುಕಟ್ಟೆಗೆ ಇಟಲಿ ಮೂಲದ ಬೆನೆಲಿ ಕಂಪನಿಯು ಈಗ ಹೊಸ ಬೆನೆಲಿ 502ಸಿ ಬೈಕ್ ಬಿಡುಗಡೆ ಮಾಡುವುದರೊಂದಿಗೆ, ಒಟ್ಟು ಐದು ಬೈಕ್‌ಗಳನ್ನು ಬಿಡುಗಡೆ ಮಾಡಿದಂತಾಗಿದೆ. ಈಗಾಗಲೇ ಬಿಡುಗಡೆಯಾಗಿ ಮತ್ತು ಅದ್ಭುತ ಪ್ರತಿಕ್ರಿಯೆಗಳಿಸುತ್ತಿರುವ ಉಳಿದ ನಾಲ್ಕು ಬೈಕುಗಳು- ಬೆನೆಲಿ ಇಂಪಿರೀಯಲ್ 400, ಬೆನೆಲಿ ಲಿಯೋನಿಸಿನೊ 500, ಬೆನೆಲಿ ಟಿಆರ್‌ಕೆ 502 ಮತ್ತು ಬೆನೆಲಿ ಟಿಆರ್‌ಕೆ 502 ಎಕ್ಸ್. ಬೆನೆಲಿ ಕಂಪನಿಯ ಈ ಬೈಕುಗಳನ್ನು ನೀವು ಭಾರತೀಯ ರಸ್ತೆಗಳಲ್ಲಿ ಓಡಾಡುವುದನ್ನ ಕಾಣಬಹುದಾಗಿದೆ.
ಎಲೆಕ್ಟ್ರಿಕ್ ದ್ವಿಚಕ್ರವಾಹನ ಖರೀದಿಸಿದರೆ ಸ್ಟೇಟ್ GST ರಿಫಂಡ್!
ಈಗಷ್ಟೇ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಬೆನೆಲಿ 502ಸಿ ಬೈಕ್ ಹಲವು ವಿಶಿಷ್ಟ ಫೀಚರ್‌ಗಳನ್ನು, ಸೌಲಭ್ಯಗಳನ್ನು ಒಳಗೊಂಡಿವೆ. ಇದರ ವಿನ್ಯಾಸವೂ ಅದ್ಭುತ ಮತ್ತು ಆಕರ್ಷಕವಾಗಿದೆ. ಬೆನೆಲಿ 502ಸಿ ಬೈಕ್‌ನಲ್ಲಿ ಎಲ್ಇಡಿ ಲೈಟ್ನಿಂಗ್, ಎಲ್ಲ ಡಿಜಿಟಲ್ ಇನ್ಸುಟ್ರುಮೆಂಟ್ ಪ್ಯಾನೆಲ್, ಅಡ್ಜಸ್ಟೇಬಲ್ ಕ್ಲಚ್, ಬೃಹತ್ ಇಂಧನ ಟ್ಯಾಂಕ್, ಪ್ಲೋಟಿಂಗ್ ಸಿಂಗಲ್ ಸೀಟ್, ಡಬಲ್ ಬ್ಯಾರೆಲ್ ಎಕ್ಸಾಸ್ಟ್, ಡುಯಲ್ ಚಾನೆಲ್ ಎಬಿಎಸ್ ಸೇರಿದಂತೆ ಅನೇಕ ಹೊಸ ಹೊಸ ಫೀಚರ್‌ಗಳನ್ನು ನೋಡಬಹುದಾಗಿದೆ.
ಹೊಸ ಬೆನೆಲಿ 502ಸಿ ಬೈಕ್ ಎಂಜಿನ್ ಕೂಡ ಪವರ್‌ಫುಲ್ ಆಗಿದೆ. 500 ಸಿಸಿ, 4 ಸ್ಟ್ರೋಕ್, ಲಿಕ್ವಿಡ್ ಕೂಲ್ಡ್, ಪ್ಯಾರಲಾಲ್ ಟ್ವಿನ್ ಎಂಜಿನ್ ಅನ್ನು ಈ ಬೈಕ್ ಹೊಂದಿದೆ. ಲಿಯೋನಿಸಿನೋ, ಟಿಆರ್‌ಕೆ 502 ಮತ್ತು ಟಿಆರ್‌ಕೆ 502 ಎಕ್ಸ್ ಬೈಕ್‌ಗಳಲ್ಲೂ ಇದೇ ಎಂಜಿನ್ ಅನ್ನು ಕಂಪನಿ ಬಳಸಿದ್ದನ್ನು ನೀವು ಗಮನಿಸಬಹುದು. ಈ ಎಂಜಿನ್ 46 ಎನ್ಎಂ ಪೀಕ್ ಟಾರ್ಕ್ ಮತ್ತು 47.5 ಪಿಎಸ್ ಗರಿಷ್ಠ ಶಕ್ತಿಯನ್ನು ಉತ್ಪಾದಿಸುತ್ತದೆ. 6 ಸ್ಪೀಡ್ ಟ್ರಾನ್ಸಿಮಿಷನ್ ಇದೆ. ಮ್ಯಾಟ್ ಕೊಗ್ನಾಕ್ ರೆಡ್ ಮತ್ತು ಗ್ಲಾಸೀ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಈ ಬೆನೆಲಿ 502ಸಿ ಬೈಕ್ ಸಿಗಲಿದೆ.
ಸ್ಟೀಲ್ ಟ್ರೆಲ್ಲಿಸ್ ಫ್ರೇಮ್ ಆಧರಿಸಿ, ಕ್ರೂಸರ್ ಮುಂಭಾಗದಲ್ಲಿ ಯುಎಸ್‌ಡಿ ಪೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಅನ್ನು ಬೈಕ್ ಬಳಸಿಕೊಳ್ಳುತ್ತದೆ. ಪಿರೆಲ್ಲಿ ಏಂಜಲ್ ಜಿಟಿ ಟೈರ್‌ಗಳೊಂದಿಗೆ 17 ಇಂಚಿನ ಅಲಾಯ್ ವೀಲ್ಸ್‌ಗಳಿವೆ.
499 ರೂಪಾಯಿ ಕೊಟ್ಟು Ola Electric ಸ್ಕೂಟರ್ ಬುಕ್ ಮಾಡ್ಕೊಳ್ಳಿ!
ಹೊಸ ಬೆನೆಲಿ 502ಸಿ ಬೈಕ್‌ನ ಮುಂಭಾಗದ ಚಕ್ರವು ಡ್ಯುಯಲ್ 280 ಎಂಎಂ ಡಿಸ್ಕ್ ಹೊಂದಿದ್ದಾರೆ. ಹಿಂಭಾಗದ ಚಕ್ರವು 240 ಎಂಎಂ ಡಿಸ್ಕ್ ಅನ್ನು ಪಡೆಯುತ್ತದೆ. ಇದರ ಆಸನ 750 ಎಂಎಂ ಎತ್ತರವಾಗಿದ್ದರೆ, ಗ್ರೌಂಡ್ ಕ್ಲಿಯರೆನ್ಸ್ 210 ಎಂಎಂ ಇದೆ. ಇಂಧನ ಟ್ಯಾಂಕ್ 21 ಲೀಟರ್ ಸಾಮರ್ಥ್ಯವನ್ನು ಹೊಂದಿದೆ.