Eelectric Scooter Fire ಚಲಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬೆಂಕಿ, ಬೆಂಗಳೂರಲ್ಲಿ ನಡೆಯಿತು ಘಟನೆ !

Published : Apr 30, 2022, 05:13 PM ISTUpdated : Apr 30, 2022, 05:15 PM IST
Eelectric Scooter Fire ಚಲಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬೆಂಕಿ, ಬೆಂಗಳೂರಲ್ಲಿ ನಡೆಯಿತು ಘಟನೆ !

ಸಾರಾಂಶ

ಚಲಿಸುತ್ತಿದ್ದ ಎಲೆಕ್ಟ್ರಿಕ್ ಬೈಕ್ನಲ್ಲಿ ಕಾಣಿಸಿಕೊಂಡ ಬೆಂಕಿ ಆನೇಕಲ್ ಅತ್ತಿಬೆಲೆ ಗಡಿಯ ಸಮೀಪದ ಜೂಜುವಾಡಿ ಬಳಿ ಘಟನೆ ಸಂಪೂರ್ಣ ಬೆಂಕಿಗೆ ಆಹುತಿಯಾದ ಎಲೆಕ್ಟ್ರಿಕ್ ಸ್ಕೂಟರ್

ಬೆಂಗಳೂರು(ಏ.30): ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗೆ ಆಹುತಿಯಾಗುತ್ತಿರುವ ಘಟನೆ ಹೆಚ್ಚಾಗುತ್ತಿದೆ. ಪ್ರತಿಷ್ಠಿತ ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಅವಘಡಗಳು ಸಂಭವಿಸಿದೆ. ಇದೀಗ ಬೆಂಗಳೂರಿನ ಆನೇಕಲ್‌ನಲ್ಲೂ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ. 

ಚಲಿಸುತ್ತಿದ್ದ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಆನೇಕಲ್ ಅತ್ತಿಬೆಲೆ ಗಡಿಯ ಸಮೀಪದ ಜೂಜುವಾಡಿ ಬಳಿ ಘಟನೆ ನಡೆದಿದೆ. ಸತೀಶ್ ಎಂಬುವವರಿಗೆ ಸೇರಿದ ಎಲೆಕ್ಟ್ರಿಕ್ ಬೈಕ್ ಇದಾಗಿದೆ. ಬೆಳಗ್ಗೆ ಬೊಮ್ಮಸಂದ್ರ ಬಳಿಯ ಕೈಗಾರಿಕೆಯೊಂದರಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಇ-ವಾಹನ ಸ್ಫೋಟ: ಬ್ಯಾಟರಿ ಸ್ಫೋಟಕ್ಕೆ ತಾಪಮಾನ ಏರಿಕೆ ಕಾರಣ, ಗಡ್ಕರಿ ತೀವ್ರ ಆತಂಕ

ಬೆಂಕಿ ಕಾಣಿಸಿಕೊಂಡ ಬೆನ್ನಲ್ಲೇ ಸವಾರ ಸತೀಶ್ ಬೈಕ್ ನಿಲ್ಲಿಸಿ ದೂರ ಸರಿದಿದ್ದಾನೆ. ಕ್ಷಣಾರ್ಧದಲ್ಲೇ ಬೆಂಕಿ ಧಗಧಗಿಸಿದೆ. ಸ್ಕೂಟರ್ ಹೊತ್ತಿ ಉರಿದಿದೆ. ತಕ್ಷಣ ನೆರವಿಗೆ ಬಂದ ಸ್ಥಳೀಯರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ತಿಳಿದಿಲ್ಲ. ಪ್ರಾಥಮಿಕ ಮಾಹಿತಿಗಳ ಪ್ರಕರಾ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಅನ್ನೋ ಮಾತುಗಳು ಕೇಳಿಬಂದಿದೆ.

ದೇಶದಲ್ಲಿ ಇತ್ತೀಚೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಘಟನೆ ಹೆಚ್ಚಾಗಿದೆ. ಈಗಾಗಲೇ ದೇಶದ ಹಲವು ಭಾಗಗಳಲ್ಲಿ ಬೆಂಕಿ ಕಾಣಿಸಿಕೊಂಡ ಸಂಪೂರ್ಣ ಸ್ಕೂಟರ್ ಆಹುತಿಯಾದ ಘಟನೆ ವರದಿಯಾಗಿದೆ. ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕಾ ಕಂಪನಿಗಳಿಗೆ ಕೇಂದ್ರ ಸರ್ಕಾರ ನೋಟಿಸ್ ನೀಡಿದೆ. ಜೊತೆಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೆ ತಡೆ ನೀಡಿದೆ. 

ಹೊಸ ಇ-ಸ್ಕೂಟರ್‌ ಬಿಡುಗಡೆಗೆ ಕೇಂದ್ರ ತಡೆ
ಇತ್ತೀಚೆಗೆ ವಿದ್ಯುತ್‌ ಚಾಲಿತ ವಾಹನಗಳಲ್ಲಿ ಬೆಂಕಿ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಸದ್ಯದ ಮಟ್ಟಿಗೆ ದ್ವಿಚಕ್ರ ವಾಹನ ಉತ್ಪಾದಕರಿಗೆ ಹೊಸ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಏಕೆ ಈ ಬೆಂಕಿ ಪ್ರಕರಣ ಸಂಭವಿಸುತ್ತಿವೆ ಎಂಬುದರ ತನಿಖೆ ಪೂರ್ಣಗೊಳ್ಳುವವರೆಗೆ ವಾಹನ ಬಿಡುಗಡೆ ಮಾಡದಂತೆ ತಾಕೀತು ಮಾಡಲಾಗಿದೆ.

ಪ್ಯೂರ್ ಇವಿ ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಮತ್ತೊಂದು ಬೆಂಕಿ ಅವಘಡ

ಕಳೆದ ಸೋಮವಾರ ಇ-ವಾಹನ ಉತ್ಪಾದಕರ ಸಭೆಯನ್ನು ಸರ್ಕಾರ ನಡೆಸಿದ್ದು, ಅದರಲ್ಲಿ ಈ ಸೂಚನೆ ನೀಡಲಾಗಿದೆ. ಒಂದು ವೇಳೆ ಒಂದು ಬ್ಯಾಚ್‌ನಲ್ಲಿನ ವಾಹನಕ್ಕೆ ಬೆಂಕಿ ತಗುಲಿದರೂ ಆ ಬ್ಯಾಚ್‌ನ ಎಲ್ಲ ವಾಹನ ಹಿಂಪಡೆಯಲು ಸೂಚಿಸಲಾಗಿದೆ. ವಾಹನ ಉತ್ಪಾದನೆಯಲ್ಲಾದ ತಪ್ಪು ಸರಿಪಡಿಸಬೇಕು. ಗ್ರಾಹಕರಿಗೆ ವಾಹನ ಚಾಜ್‌ರ್‍ ಹೇಗೆ ಮಾಡಬೇಕು ಎಂಬ ತಿಳುವಳಿಕೆ ನೀಡಬೇಕು ಎಂದು ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಕಳೆದ ಕೆಲ ದಿನಗಳಲ್ಲಿ ಓಲಾ ಸೇರಿದಂತೆ ವಿವಿಧ ಕಂಪನಿಗಳ 26 ಇ-ಸ್ಕೂಟರ್‌ಗಳಿಗೆ ಬೆಂಕಿ ತಗುಲಿತ್ತು. 

ಪುಣೆಯಲ್ಲಿ ಮಾಚ್‌ರ್‍ 26 ರಂದು ಓಲಾ ಇ-ಸ್ಕೂಟರ್‌ಗೆ ಇದ್ದಕ್ಕಿದ್ದಂತೆ ಬೆಂಕಿ ತಗುಲಿತ್ತು. ಈ ಹಿನ್ನೆಲೆಯಲ್ಲಿ ಕಂಪನಿಯು ತನ್ನ ವಾಹನಗಳ ಸುರಕ್ಷತೆಯ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ‘ಹೀಗಾಗಿ ನಿರ್ದಿಷ್ಟಬ್ಯಾಚ್‌ನಲ್ಲಿ ತಯಾರಾದ 1441 ಇ-ಸ್ಕೂಟರ್‌ಗಳನ್ನು ಮಾರುಕಟ್ಟೆಯಿಂದ ಸ್ವಯಂಪ್ರೇರಿತವಾಗಿ ಹಿಂಪಡೆದುಕೊಳ್ಳಲಾಗುತ್ತಿದೆ. ಈ ಎಲ್ಲ ವಾಹನಗಳನ್ನು ಬ್ಯಾಟರಿ ವ್ಯವಸ್ಥೆ, ಉಷ್ಣ ಹಾಗೂ ಸುರಕ್ಷತಾ ವ್ಯವಸ್ಥೆಯ ಬಗ್ಗೆ ಸವೀರ್‍ಸ್‌ ಎಂಜಿನಿಯರ್‌ ಮತ್ತೊಮ್ಮೆ ಪರೀಕ್ಷೆ ನಡೆಸಲಿದ್ದಾರೆ’ ಎಂದು ಕಂಪನಿ ಹೇಳಿದೆ.
 

PREV
Read more Articles on
click me!

Recommended Stories

Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು
ಭರ್ಜರಿಯಾಗಿ ಮರಳಿದ ಭಾರತದ ಕೈನೆಟಿಕ್, ಕೇವಲ 1,000 ರೂಗೆ ಬುಕ್ ಮಾಡಿ ಎಲೆಕ್ಟ್ರಿಕ್ ಸ್ಕೂಟರ್