ದುಬಾರಿ ಕಾರಿನ ನಡುವೆ ಕಡಿಮೆ ಬೆಲೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಕಾರಣ ತಿಳಿಸಿದ ಅರ್ಜುನ್ ಕಪೂರ್!

By Chethan Kumar  |  First Published Sep 25, 2024, 4:21 PM IST

ಬಾಲಿವುಡ್ ನಟ ಅರ್ಜುನ್ ಕಪೂರ್ ಇದೀಗ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ದಾರೆ. ಕೋಟಿ ಕೋಟಿ ರೂಪಾಯಿ ಐಷಾರಾಮಿ ವಾಹನದ ನಡುವೆ ಈ ಸ್ಕೂಟರ್ ಖರೀದಿಗೆ ಕಾರಣವನ್ನೂ ಬಿಚ್ಚಿಟ್ಟಿದ್ದಾರೆ.


ಮುಂಬೈ(ಸೆ.25) ಬಾಲಿವುಡ್ ನಟ ಅರ್ಜುನ್ ಕಪೂರ್ ಬಳಿ ಕೋಟಿ ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಕಾರು, ಬೈಕ್‌ಗಳಿವೆ. ಆದರೆ ಇದರ ನಡುವೆ ಅರ್ಜುನ್ ಕಪೂರ್ 1 ಲಕ್ಷ ರೂಪಾಯಿ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿ ಎಲ್ಲರ ಅಚ್ಚರಿಗೊಳಿಸಿದ್ದಾರೆ. ಸ್ಕೂಟರ್ ಖರೀದಿಸಿ ಸ್ವೀಟ್ಸ್ ಹಂಚಿದ ಅರ್ಜುನ್ ಕಪೂರ್, ಈ ಇವಿ ಖರೀದಿಸಲು ಕಾರಣವನ್ನೂ ಬಿಚ್ಚಿಟ್ಟಿದ್ದಾರೆ. ಮನೆಯಿಂದ ಹೊರಬರುವಾಗ, ಅಥವಾ ಇತರೆಡೆಗಳಲ್ಲಿ ಪಾಪರಾಜಿಗಳಿಂದ ತಪ್ಪಿಸಿಕೊಳ್ಳಲು ಈ ಸ್ಕೂಟರ್ ಖರೀದಿಸಿರುವುದಾಗಿ ಹೇಳಿದ್ದಾರೆ.

ಅರ್ಜುನ್ ಕಪೂರ್ BGauss RUV 350 ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ್ದಾರೆ. ಈ ಸ್ಕೂಟರ್ ದೇಶದ ಬಹುತೇಕ ಎಲ್ಲಾ ನಗರಗಳಲ್ಲಿ ಲಭ್ಯವಿದೆ. ಇದು ಭಾರತದ ಮೊದಲ RUV ಸ್ಕೂಟರ್(ರಗ್ಡ್ ಅರ್ಬನ್ ವೆಹಿಕಲ್) ಸಂಪೂರ್ಣ ಮೆಟಲ್ ಬಾಡಿ ಹೊಂದಿರುವ ಈ ಸ್ಕೂಟರ್ ನಗರ, ಗ್ರಾಮ, ಆಫ್ ರೋಡ್ ಸೇರಿದಂತೆ ಯಾವುದೇ ರಸ್ತೆಗಳಿಗೆ ಹೇಳಿ ಮಾಡಿಸಿದ ಸ್ಕೂಟರ್ ಇದಾಗಿದೆ. ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿದೆ. ಇನ್ನು ಸಂಪೂರ್ಣ ಚಾರ್ಜ್‌ಗೆ 2.35 ಗಂಟೆ ತೆಗೆದುಕೊಳ್ಳಲಿದೆ. ಇದರ ಬೆಲೆ 1.10 ಲಕ್ಷ ರೂಪಾಯಿ.

Tap to resize

Latest Videos

undefined

ಮಿಸ್ಟ್ರಿ ಮ್ಯಾನ್ ಜೊತೆ ಮಲೈಕಾ;...ಪ್ರತ್ಯುತ್ತರ ನೀಡಿದ ಅರ್ಜುನ್ ಕಪೂರ್!

BGauss RUV 350 ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ ಅರ್ಜುನ್ ಕಪೂರ್ ಪಾಪರಾಜಿಗಳ ಜೊತೆ ಸಂಭ್ರಮಿಸಿದ್ದಾರೆ. ಅರ್ಜನ್ ಕಪೂರ್ ಸ್ಕೂಟರ್ ಹಾಗೂ ನಟನ ಫೋಟೋ ತೆಗೆಯುತ್ತಿದ್ದ ಪಾಪ್ಸ್‌ಗೆ ಸಿಹಿ ಹಂಚಿದ್ದಾರೆ. ಸ್ವೀಟ್ ಬಾಕ್ಸ್ ಹಿಡಿದು ಆಗಮಿಸಿದ ಅರ್ಜುನ್ ಕಪೂರ್ ಹೊಸ ವಾಹನ ಖರೀದಿಸಿದ ಸಂಭ್ರಮ ಹಂಚಿಕೊಂಡಿದ್ದಾರೆ. ಇದೇ ವೇಳೆ ತಮಾಷೆಯಾಗಿ, ನಾನು ಈ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಒಂದು ಕಾರಣವಿದೆ. ಈ ಪಾಪರಾಜಿಗಳಿಂದ ತಪ್ಪಿಸಿಕೊಳ್ಳಲು, ಸಣ್ಣ ಜಾಗದಲ್ಲಿ ತೂರಿ ಹೋಗಲು ಈ ಸ್ಕೂಟರ್ ಖರೀದಿಸಿರುವುದಾಗಿ ಹೇಳಿದ್ದಾರೆ. ಪಾಪರಾಜಿಗಳ ಬೇಡಿಕೆಯಂತೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ರೈಡ್ ಮಾಡಿದ್ದಾರೆ. 

 

 

ಅರ್ಜುನ್ ಕಪೂರ್ ಬಳಿ ಹಲವು ದುಬಾರಿ ವಾಹನಗಳಿವೆ. ಈ ದುಬಾರಿ ವಾಹನಗಳಿಗೆ ಹೋಲಿಸಿದರೆ ಈಗ ಖರೀದಿಸಿರುವ ಎಲೆಕ್ಟ್ರಿಕ್ ಸ್ಕೂಟರ್ ಅತ್ಯಂತ ಕಡಿಮೆ ಬೆಲೆಯ ಸ್ಕೂಟರ್ ಆಗಿದೆ. ಅರ್ಜುನ್ ಕಪೂರ್ ಬಳಿ ಇರುವು ಅತ್ಯಂತ ಕಡಿಮೆ ಬೆಲೆಯ ವಾಹನ ಇದಾಗಿದೆ. ಅರ್ಜುನ್ ಕಪೂರ್ ಬಳಿ 2.43 ಕೋಟಿ ರೂಪಾಯಿ ಮೌಲ್ಯದ ಮರ್ಸಿಡಿಸ್ ಬೆಂಜ್ ಮೇಬ್ಯಾಕ್ ಜಿಎಲ್ಎಸ್ 600 ಕಾರು, 95.35 ಲಕ್ಷ ರೂಪಾಯಿ ಬೆಲೆಯ ಲ್ಯಾಂಡ್ ರೋವರ್ ಡಿಫೆಂಡರ್, 1.64 ಕೋಟಿ ರೂಪಾಯಿ ಮೌಲ್ಯದ ಮೆಸರಾತಿ, 1.30 ಕೋಟಿ ರೂಪಾಯಿ ಬೆಲೆಯ ವೋಲ್ವೋ ಎಕ್ಸ್‌ಸಿ90 ಕಾರು, 67.70 ಲಕ್ಷ ರೂಪಾಯಿ ಮೌಲ್ಯದ ಮರ್ಸಡೀಸ್ ಎಂಎಲ್ 350 ಸೇರಿದಂತೆ ಕೆಲ ದುಬಾರಿ ವಾಹನಗಳಿವೆ.

ಬಾಯ್​ಫ್ರೆಂಡ್​ನ ಹುಟ್ಟುಹಬ್ಬ ಮರೆತು ತೇಪೆಹಚ್ಚುವ ಕೆಲ್ಸ ಮಾಡಿದ ಮಲೈಕಾ ಅರೋರಾ ಸಕತ್​ ಟ್ರೋಲ್​

ಸದ್ಯ ಅರ್ಜುನ್ ಕಪೂರ್ ಕೆಲ ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದ ಸಿಂಘಮ್ 2 ಚಿತ್ರದಲ್ಲಿ ಅಜಯ್ ದೇವಗನ್ ಜೊತೆ ಅರ್ಜನ್ ಕಪೂರ್ ಕಾಣಿಸಿಕೊಂಡಿದ್ದಾರೆ. ವರುಣ್ ಧವನ್ ಜೊತೆ ನೋ ಎಂಟ್ರಿ ಟೂ ಸೇರಿದಂತೆ ಕೆಲ ಚಿತ್ರದಲ್ಲಿ ಅರ್ಜುನ್ ಕಪೂರ್ ನಟಿಸುತ್ತಿದ್ದಾರೆ.
 

click me!