ಕನ್ನಡಿಗರು ತಯಾರಿಸಿದ ಇ-ಬೈಕ್‌ ಯುರೋಪ್‌ಗೆ: ಒಂದು ಸಲ ಚಾರ್ಜ್‌ ಮಾಡಿದ್ರೆ 323 ಕಿ.ಮೀ ಓಡುತ್ತೆ..!

By Kannadaprabha NewsFirst Published Sep 25, 2024, 12:06 PM IST
Highlights

ಈ ಮೋಟಾರ್‌ ಸೈಕಲ್ಲುಗಳ ಬೆಲೆ ₹2.99 ಲಕ್ಷಗಳಾಗಿದ್ದು, ಈಗಾಗಲೇ ಸ್ಥಳೀಯವಾಗಿಯೂ ಲಭ್ಯವಿದೆ. ಒಂದು ಸಲ ಚಾರ್ಜ್‌ ಮಾಡಿದರೆ 323 ಕಿ.ಮೀ. ದೂರ ಕ್ರಮಿಸಬಹುದಾಗಿದೆ. ಜತೆಗೆ ಯುಎನ್ 38.3 ದರ್ಜೆಯ ಉತ್ಕೃಷ್ಟ ಬ್ಯಾಟರಿ ಇದರಲ್ಲಿ ಇರಲಿದ್ದು, ಇದು ಎ1 ಕ್ಯಾಟಗರಿಗೆ ಸೇರಿದೆ. ಈ ಮೋಟಾರ್‌ ಸೈಕಲ್ಲುಗಳ ರಫ್ತು ವಹಿವಾಟಿನಿಂದ ರಾಜ್ಯ ಮತ್ತು ದೇಶದ ಆರ್ಥಿಕತೆಗೆ ಬಲ ಬರಲಿದೆ.

ಬೆಂಗಳೂರು(ಸೆ.25):  ಉದ್ಯಮಶೀಲ ಕನ್ನಡಿಗರು ಸೇರಿಕೊಂಡು ಸ್ಥಾಪಿಸಿರುವ ಅಲ್ಟ್ರಾವಯೊಲೆಟ್‌ ಕಂಪನಿಯು ತಯಾರಿಸುವ ವಿದ್ಯುತ್‌ ಚಾಲಿತ ಮೋಟಾರು ಸೈಕಲ್ಲುಗಳನ್ನು ಯೂರೋಪಿನ ಹಲವು ರಾಷ್ಟ್ರಗಳಿಗೆ ರಫ್ತು ಮಾಡುವ ಕಾರ್ಯಕ್ರಮಕ್ಕೆ ಕೇಂದ್ರದ ಕೇಂದ್ರ ಬೃಹತ್‌ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ.

ಮುಂದುವರಿದ ರಾಷ್ಟ್ರಗಳಿಗೆ ಎಫ್77-ಸ್ಪೋರ್ಟ್ಸ್‌ ಸ್ತರದ ಇ-ಮೋಟಾರ್‌ ಸೈಕಲ್ಲುಗಳ ರಫ್ತು ಭಾರತದಿಂದ ಇದೇ ಮೊಟ್ಟಮೊದಲ ವಿಕ್ರಮವಾಗಿದೆ. ಅಲ್ಟ್ರಾವಯೊಲೆಟ್‌ ತಯಾರಿತ ಮೋಟಾರ್‌ ಸೈಕಲ್ಲುಗಳನ್ನು ಯೂರೋಪ್‌ ಖಂಡದ ಜರ್ಮನಿ, ಇಟಲಿ, ಟರ್ಕಿ ಮತ್ತು ಸ್ಪೇನ್‌ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತದೆ. ಈ ವಾಹನಗಳನ್ನು ಜಿಗಣಿಯಲ್ಲಿರುವ ಉತ್ಪಾದನಾ ಘಟಕದಲ್ಲಿ ತಯಾರಿಸಲಾಗಿದೆ.

Latest Videos

170 ಕಿ.ಮಿ ಮೈಲೇಜ್ ಕೊಡೋ ಹೊಸ ಎಲೆಕ್ಟ್ರಿಕ್ ಬೈಕ್ ಲಾಂಚ್, ಕೈಗೆಟುಕುವ ಬೆಲೆ!

ಅಲ್ಟ್ರಾವಯೊಲೆಟ್‌ ಕಂಪನಿಯ ಸಹ ಸಂಸ್ಥಾಪಕ ಮತ್ತು ನಿರ್ದೇಶಕ ನೀರಜ್‌ ರಾಜಮೋಹನ್‌, ಸಹಾಯಕ ಉಪಾಧ್ಯಕ್ಷ ಧೀರಜ್ ಶೆಟ್ಟಿ ವೈಶಿಷ್ಟ್ಯಗಳನ್ನು ವಿವರಿಸಿದ್ದಾರೆ. ಈ ಮೋಟಾರ್‌ ಸೈಕಲ್ಲುಗಳ ಬೆಲೆ ₹2.99 ಲಕ್ಷಗಳಾಗಿದ್ದು, ಈಗಾಗಲೇ ಸ್ಥಳೀಯವಾಗಿಯೂ ಲಭ್ಯವಿದೆ. ಒಂದು ಸಲ ಚಾರ್ಜ್‌ ಮಾಡಿದರೆ 323 ಕಿ.ಮೀ. ದೂರ ಕ್ರಮಿಸಬಹುದಾಗಿದೆ. ಜತೆಗೆ ಯುಎನ್ 38.3 ದರ್ಜೆಯ ಉತ್ಕೃಷ್ಟ ಬ್ಯಾಟರಿ ಇದರಲ್ಲಿ ಇರಲಿದ್ದು, ಇದು ಎ1 ಕ್ಯಾಟಗರಿಗೆ ಸೇರಿದೆ. ಈ ಮೋಟಾರ್‌ ಸೈಕಲ್ಲುಗಳ ರಫ್ತು ವಹಿವಾಟಿನಿಂದ ರಾಜ್ಯ ಮತ್ತು ದೇಶದ ಆರ್ಥಿಕತೆಗೆ ಬಲ ಬರಲಿದೆ.

ವಾಹನ ಉದ್ಯಮದಲ್ಲಿ ಮೈಲಿಗಲ್ಲು

ಬೆಂ.ದಕ್ಷಿಣ ಎಲೆಕ್ಟಿಕ್ ವಾಹನ ಉದ್ಯಮ ಕ್ಷೇತ್ರದಲ್ಲಿ ಮೈಲಿಗಲ್ಲು ಎಂದು ಪರಿಗಣಿಸಲಾಗಿರುವ ಬೆಳವಣಿಗೆಯಲ್ಲಿ ಕನ್ನಡಿಗರದ್ದೇ ಆದ ಅಲ್ಪಾ ವಯಲೆಟ್ ಆಟೋಮೋಟಿವ್ ಯುರೋ ಪಿಯನ್ ಒಕ್ಕೂಟದ ಮಾರು ಕಟ್ಟೆಗಳಿಗೆ ತನ್ನ ಮೇಡ್ ಇನ್ ಇಂಡಿಯಾ ಎಫ್77 ಮಾಚ್2 ಅಧಿಕ ಸಾಮರ್ಥದ ಎಲೆಕ್ನಿಕ್ ಬೈಕ್‌ಗಳನ್ನು ರಫ್ತು ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಿಗಣಿಯ ಅಲ್ಪಾವಯಲೆಟ್ ಆಟೋಮೋಟಿವ್ ಬೈಕ್‌ಗಳ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಲ್ಪಾವ ಯಲೆಟ್‌ನ ಎಲೆಕ್ನಿಕ್ ಬೈಕ್‌ಗಳ ರಫ್ತು ಭಾರತದ ಆಟೋಮೋಟಿವ್ ಉದ್ಯಮದಲ್ಲಿ ಪ್ರಮುಖ ಘಟ್ಟ ಎನಿಸಲಿದೆ. ಜಾಗತಿಕವಾಗಿ ಭಾರತದ ಉತ್ಪನ್ನಗಳು ಪೈಪೋಟಿ ನೀಡುವ ಸಾಮರ್ಥ್ಯಕ್ಕೆ ಇದು ಪುಷ್ಟಿ ನೀಡಿದೆ. ಭಾರತದ ನವೋದ್ಯಮಗಳು ಎಲೆಕ್ಟ್ರಿಕ್ ಮೊಬಿಲಿಟಿಯಂಥ ಕ್ಷೇತ್ರದಲ್ಲಿಯೂ ಹೊಸತನಕ್ಕೆ ಪ್ರಾಮುಖ್ಯತೆ ನೀಡುತ್ತಿವೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಅಲ್ಪಾವಯಲೆಟ್ ಸಹಸ್ತಾಪಕ, ಸಿಇಒ ನೀರಜ್ ರಾಜಮೋಹನ್, ಜೆಡಿಎಸ್ ಮುಖಂಡ ಮಂಜಣ್ಣ ಇದ್ದರು.

click me!