ಬೆಂಗಳೂರು(ಜು.24) : ಹೀರೋ ಮೋಟಾರ್ ಸೈಕಲ್ ಇದೀಗ ಗ್ಲಾಮರ್ XTEC ಬೈಕ್ ಬಿಡುಗಡೆ ಮಾಡಿದೆ. ಯುವಜನತೆಯ ಬದಲಾಗುತ್ತಿರುವ ಅಭಿರುಚಿ ಹಾಗು ಇಚ್ಛೆಗಳನ್ನು ಪ್ರತಿನಿಧಿಸುವ ಗ್ಲಾಮರ್ ‘XTEC’ ಸ್ಟೈಲ್, ಸುರಕ್ಷತೆ ಹಾಗು ಕನೆಕ್ಟೆಡ್ ಫೀಚರ್ಸ್ ಹೊಂದಿದೆ ನೂತನ ಗ್ಲಾಮರ್ ‘XTEC’ನ ಬೆಲೆ ರೂ.78,900/-(ಡ್ರಮ್ ಬ್ರೇಕ್)* ಮತ್ತು ರೂ.83,500/-(ಡಿಸ್ಕ್ ಬ್ರೇಕ್) ಆಗಿದೆ. ಈ ಬೆಲೆ ಎಕ್ಸ್ ಶೋ ರೂಂ ಬೆಲೆಗಳಾಗಿವೆ.
ಕಾರಿನಂತೆ ಕನೆಕ್ಟೆಡ್ ಫೀಚರ್ಸ್ ಹೊಂದಿರುವ ಹೊಸ ಮಾಸ್ಟ್ರೋ ಎಡ್ಜ್ 125 ಬಿಡುಗಡೆ!ಸೈಡ್ ಸ್ಟ್ಯಾಂಡ್ ಇಂಜಿನ್ ಕಟ್-ಆಫ್, ಬ್ಯಾಂಕ್ ಆ್ಯಂಗಲ್ ಸೆನ್ಸಾರ್, ಹಾಗು ಎಲ್‍ಇಡಿ ಹೆಡ್‍ಲ್ಯಾಂಪ್‍ನ ಜೊತೆಗೆ, ಮೊಟ್ಟಮೊದಲನೆಯದಾದ ಬ್ಲೂಟೂತ್ ಸಂಪರ್ಕ, ತಿರುವಿನಿಂದ ತಿರುವಿಗೆ ಚಲನೆ, ಸಂಯೋಜಿತ ಯುಎಸ್‍ಬಿ ಚಾರ್ಜರ್, ಮುಂತಾದ ಅಂಶಗಳಿಂದ ಸಜ್ಜಾಗಿರುವ ಈ ಹೊಸ ಗ್ಲಾಮರ್ XTEC ಮಾರುಕಟ್ಟೆ ಪ್ರವೇಶಿಸಿದೆ.
undefined
ಕನೆಕ್ಟೆಡ್ ಫೀಚರ್ಸ್
ತನ್ನ ಕಾರ್ಯಕ್ಷಮತೆ ಹಾಗು ಆರಾಮದಾಯಕ ಚಾಲನೆಗೆ ಸೇರ್ಪಡೆಯಾಗಿ, ಗ್ಲಾಮರ್ ‘‘XTEC’, ಸಂಯೋಜಿತ ಯುಎಸ್‍ಬಿ ಚಾರ್ಜಿಂಗ್’, ಕರೆ ಮತ್ತು ಎಸ್‍ಎಮ್‍ಎಸ್ ಎಚ್ಚರಿಕೆಯಿರುವ ಬ್ಲೂಟೂತ್ ಸಂಪರ್ಕ, ಮತ್ತು ಗೂಗಲ್ ಮ್ಯಾಪ್ ಸಂಪರ್ಕತೆಯೊಂದಿಗೆ ತಿರುವಿನಿಂದ ತಿರುವಿನ ಚಲನೆಯನ್ನು ಒದಗಿಸುತ್ತದೆ. ಉನ್ನತ ಮಟ್ಟದ ಕ್ಲಸ್ಟರ್ ಅಂಶಗಳು, ಗೇರ್ ಪೊಸಿಶನ್ ಇಂಡಿಕೇಟರ್, ಎಕೋ ಮೋಡ್, ಟ್ಯಾಕೋಮೀಟರ್, ಮತ್ತು ರಿಯಲ್ ಟೈಮ್ ಮೈಲೇಜ್ ಇಂಡಿಕೇಟರ್(RTMi) ಮುಂತಾದವನ್ನು ಒಳಗೊಂಡಿದೆ
ಸುರಕ್ಷತೆ
ಚಾಲಕ ಹಾಗು ಪಿಲಿಯನ್‍ಗೆ ಅತ್ಯಧಿಕ ಸುರಕ್ಷತೆ ಖಾತರಿಪಡಿಸುವ ಈ ಮೋಟಾರುಸೈಕಲ್, ಸೈಡ್ ಸ್ಟ್ಯಾಂಡ್ ವಿಶುವಲ್ ಇಂಡಿಕೇಶನ್, ಮತ್ತು ವರ್ಗದಲ್ಲೇ ಮೊಟ್ಟಮೊದಲನೆಯದಾದ ‘ಸೈಡ್-ಸ್ಟ್ಯಾಂಡ್ ಇಂಜಿನ್ ಕಟ್-ಆಫ್’ ಅಂಶವನ್ನು ಹೊಂದಿದೆ. ಮುಂಬದಿಯ 240 ಮಿಮೀ ಡಿಸ್ಕ್ ಬ್ರೇಕ್‍ಗಳು ಹೆಚ್ಚು ಅಗಲವಾದ ಹಿಂಬದಿ ಟೈರ್ ಮತ್ತು 180 ಮಿಮೀ.ಗಳ ಗ್ರೌಂಡ್ ಕ್ಲಿಯರೆನ್ಸ್, ನಿಜವಾದ ರಸ್ತೆ ಅನುಭವದ ಜೊತೆಗೆ, ವಿಶ್ವಸನೀಯತೆ ಮತ್ತು ಇಡೀ ದಿನ ಆರಾಮದಾಯಕವಾದ ಚಾಲನೆಯನ್ನು ನೀಡುತ್ತದೆ.
ಸ್ಟೈಲ್
ಹೊಸ ಗ್ಲಾಮರ್ ‘XTEC’, ಎಲ್‍ಇಡಿ ಹೆಡ್‍ಲ್ಯಾಂಪ್ ಮತ್ತು ವರ್ಗದಲ್ಲೇ ಅತ್ಯುತ್ತಮವಾದ ಪ್ರಖರತೆ(34% ಅಧಿಕ ಹೆಡ್‍ಲೈಟ್ ತೀವ್ರತೆ) ಇರುವ H-ಸಿಗ್ನೇಚರ್ ಪೊಸಿಶನ್ ಲ್ಯಾಂಪ್‍ನೊಂದಿಗೆ ಮಹತ್ವಾಕಾಂಕ್ಷೆಯುಳ್ಳ ಯುವಜನತೆಗಾಗಿ ವಾಹನದ ಸ್ಟೈಲ್ ಕೋಶೆಂಟ್‍ಅನ್ನು ವರ್ಧಿಸುತ್ತದೆ. 3ಡಿ ಬ್ರ್ಯಾಂಡಿಂಗ್, ರಿಮ್ ಟೇಪ್ಸ್, ಮತ್ತು ಹೊಸ ಮ್ಯಾಟ್ಟ್ ಬಣ್ಣಕ್ಕೆ ನೀಲಿ ಛಾಯೆ ವಾಹನದ ಒಟ್ಟಾರೆ ನೋಟವನ್ನು ಆಕರ್ಷಣೀಯವಾಗಿಸುತ್ತದೆ.
ಇಂಜಿನ್
XSens ಪ್ರೋಗ್ರಾಮ್ ಆದ ಫ್ಯುಯೆಲ್ ಇಂಜೆಕ್ಷನ್ ಇರುವ 125cc BS-VI ಇಂಜಿನ್‍ನ ಶಕ್ತಿ ಹೊಂದಿರುವ ಹೊಸ ಗ್ಲಾಮರ್ ‘XTEC’, 7% ಅಧಿಕ ಇಂಧನ ಸಾಮರ್ಥ್ಯ ಹೊಂದಿದೆ. ಇಂಜಿನ್, 10.7 BHP @ 7500 RPM ಶಕ್ತಿ ಮತ್ತು 10.6 Nm @ 6000 RPM ಟಾರ್ಕ್ ಉತ್ಪಾದಿಸುತ್ತದೆ. ಆಟೋ ಸೈಲ್ ತಂತ್ರಜ್ಞಾನದ ಜೊತೆಗೆ ಹೀರೋ ಮೋಟೋಕಾರ್ಪ್‍ನ ಕ್ರಾಂತಿಕಾರಿ i3S (ಐಡ್ಲ್ ಸ್ಟಾರ್ಟ್-ಸ್ಟಾಪ್ ಸಿಸ್ಟಮ್) ಹೊಂದಿರುವ ಗ್ಲಾಮರ್ ‘XTEC’, ಕಾರ್ಯಕ್ಷಮತೆ ಹಾಗು ಆರಾಮದ ತನ್ನ ಬ್ರ್ಯಾಂಡ್ ವಾಗ್ದಾನವನ್ನು ಪೂರೈಸುತ್ತದೆ.