ಕಾರಿನಂತೆ ಕನೆಕ್ಟೆಡ್ ಫೀಚರ್ಸ್ ಹೊಂದಿರುವ ಹೊಸ ಮಾಸ್ಟ್ರೋ ಎಡ್ಜ್ 125 ಬಿಡುಗಡೆ!

By Suvarna News  |  First Published Jul 24, 2021, 6:20 PM IST
  • ಕನೆಕ್ಟೆಡ್ ಫೀಚರ್ಸ್ ಹೊಂದಿರುವ ಮಾಸ್ಟ್ರೋ ಎಡ್ಜ್ 125 ಸ್ಕೂಟರ್ ಲಾಂಚ್
  • ನೂತನ ಸ್ಕೂಟರ್ ಬೆಲೆ 72,250 ರೂಪಾಯಿಯಿಂದ ಆರಂಭ
  • ಹತ್ತು ಹಲವು ವಿಶೇಷತೆ ಹೊಂದಿರುವ ನೂತನ ಸ್ಕೂಟರ್ ಮಾಹಿತಿ ಇಲ್ಲಿವೆ

ಬೆಂಗಳೂರು(ಜು.24): ವಿಶ್ವದ ಅತಿದೊಡ್ಡ ಮೋಟಾರುಸೈಕಲ್ ಹಾಗು ಸ್ಕೂಟರ್ ತಯಾರಿಕಾ ಸಂಸ್ಥೆಯಾದ ಹೀರೋ ಮೋಟೋಕಾರ್ಪ್, ಅತ್ಯಾಧುನಿಕವಾದ  ಹಾಗೂ  ಕೆನೆಕ್ಟೆಡ್ ಫೀಚರ್ಸ್ ಹೊಂದಿದ ಹೊಸ ಮಾಸ್ಟ್ರೋ ಎಡ್ಜ್ 125ಅನ್ನು ಪರಿಚಯಿಸಿದೆ

ಭಾರತದ ಅತ್ಯಂತ ಕಡಿಮೆ ಬೆಲೆ ಬೈಕ್ ಹೀರೋ HF 100 ಬಿಡುಗಡೆ!.

Latest Videos

ಮಂಗಳವಾರ ಬಿಡುಗಡೆಯಾದ ಗ್ಲಾಮರ್ Xtecನ ಬೆನ್ನಲ್ಲೇ ಹೊಸ ಮಾಸ್ಟ್ರೋ ಎಡ್ಜ್ 125 ಕೂಡ ಮಾರುಕಟ್ಟೆ ಪ್ರವೇಶಿಸಿದೆ.  ಸ್ಟೈಲ್ ಮತ್ತು ತಂತ್ರಜ್ಞಾನದ ಸೂಕ್ತ ಸಂಯೋಜನೆಯನ್ನು ಒದಗಿಸುತ್ತಿದೆ. ತನ್ನ ವರ್ಧಿತ ಸೌಂದರ್ಯ, ಆಧುನಿಕ ತಂತ್ರಜ್ಞಾನ ಹಾಗು ಚುರುಕಾದ ವಿನ್ಯಾಸದೊಂದಿಗೆ ಈ ಹೊಸ ಸ್ಕೂಟರ್ ಸಂಪರ್ಕಗೊಂಡ ಹಾಗು ವಿಶಿಷ್ಟವಾದ ಅನುಭವವನ್ನು ಒದಗಿಸುತ್ತದೆ.

ಮಾಸ್ಟ್ರೋ ಎಡ್ಜ್ 125,  ಮೊಟ್ಟಮೊದಲನೆಯದಾದ ಪ್ರೊಜೆಕ್ಟರ್ LED ಹೆಡ್‍ಲ್ಯಾಂಪ್, ಸಂಪೂರ್ಣವಾಗಿ  ಡಿಜಿಟಲೀಕರಣ ಸ್ಪೀಡೋಮೀಟರ್, ಹೀರೋ ಕನೆಕ್ಟ್ ಎಂಬ ಬ್ಲೂಟೂತ್ ಸಂಪರ್ಕ ಮತ್ತು ಹೊಸ ಚುರುಕಾದ ವಿನ್ಯಾಸ ಅಂಶಗಳೊಂದಿಗೆ ಅಧಿಕ ಮೌಲ್ಯ ಹಾಗು ಪ್ರೀಮಿಯಮ್ ಅನುಭವ ಒದಗಿಸುತ್ತದೆ.

ಭಾರತದಲ್ಲಿ ಹೀರೋ ಡೆಸ್ಟಿನಿ 125 ಪ್ಲಾಟಿನಂ ಎಡಿಶನ್ ಬಿಡುಗಡೆ

ದೇಶಾದ್ಯಂತ ಇರುವ ಹೀರೋ ಮೋಟೋಕಾರ್ಪ್ ಗ್ರಾಹಕ ಟಚ್‍ಪಾಯಿಂಟ್‍ಗಳಲ್ಲಿ ಕೌತುಕಮಯವಾದ ಹೊಸ ವರ್ಣಗಳಲ್ಲಿ ಲಭ್ಯವಿರುವ ಮಾಸ್ಟ್ರೋ ಎಡ್ಜ್ 125, ರೂ.72,250/-(ಡ್ರಮ್ ಬ್ರೇಕ್)  ಮತ್ತು ರೂ.76,500/-(ಡಿಸ್ಕ್ ಬ್ರೇಕ್)* ಹಾಗು ರೂ.79,750/-(ಕನೆಕ್ಟೆಡ್ ಫೀಚರ್ಸ್)* ಆಕರ್ಷಕ ಬೆಲೆಗಳಲ್ಲಿ ಲಭ್ಯವಿದೆ. ಈ ಬೆಲೆ ಎಕ್ಸ್ ಶೋ ರೂಂ ಆಗಿವೆ.

ವಿನ್ಯಾಸ
ಹೊಸ ಮಾಸ್ಟ್ರೋ ಎಡ್ಜ್ 125, ಸಂಪೂರ್ಣವಾಗಿ ಹೊಸದಾದ ಚುರುಕಾದ ಹೆಡ್‍ಲ್ಯಾಂಪ್, ಚುರುಕಾದ ಮುಂಬದಿ ವಿನ್ಯಾಸ, ಹೊಸ ಸ್ಪೋರ್ಟಿಡ್ಯುಯಲ್ ಟೋನ್ ಸ್ಟ್ರೈಪ್ ವಿನ್ಯಾಸ, ಮಾಸ್ಕ್ಡ್ ವಿಂಕರ್ಸ್ ಹಾಗು ಹೊಸ ಬಣ್ಣಗಳು ಒಳಗೊಂಡಂತೆ ಅನೇಕ ಹೊಸ ವಿನ್ಯಾಸ ಅಂಶಗಳನ್ನು ಹೊಂದಿದೆ.

ಸಂಪರ್ಕಗೊಂಡ ಅಂಶಗಳು
ಮಾಸ್ಟ್ರೋ ಎಡ್ಜ್ 125,  ಅತ್ಯುತ್ಕೃಷ್ಟ ಡಿಸ್ಪ್ಲೇ ಇರುವ ತಿರುವಿನಿಂದ ತಿರುವಿಗೆ ಚಾಲನೆ, ಮಿಸ್ಡ್ ಕಾಲ್ ಎಚ್ಚರಿಕೆ, ಒಳಬರುತ್ತಿರುವ ಕರೆ ಎಚ್ಚರಿಕೆ, RTMI  (ರಿಯಲ್ ಟೈಮ್ ಮೈಲೇಜ್ ಇಂಡಿಕೇಶನ್), ಇಸಿಒ ಇಂಡಿಕೇಟರ್, ಮತ್ತು ಕಡಿಮೆ ಫ್ಯುಯೆಲ್ ಇಂಡಿಕೇಟರ್ ಮುಂತಾದ ಅಂಶಗಳಿರುವ ಬ್ಲೂಟೂತ್ ಸಂಪರ್ಕತೆಯಿರುವ ಸಂಪೂರ್ಣವಾಗಿ ಡಿಜಿಟೀಕರಣಗೊಂಡ ಸ್ಪೀಡೋಮೀಟರ್‍ಅನ್ನು ಹೊಂದಿದೆ. 

ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜಾದ ಹೀರೋ ಮೋಟಾರ್!

ಹೆಚ್ಚುವರಿಯಾಗಿ, ‘ಹೀರೋ ಕನೆಕ್ಟ್’ ಅನ್ನು ಸಾಮಾನ್ಯ ಫಿಟ್‍ಮೆಂಟ್ ಆಗಿ ಹೊಂದಿರುವ ಮೂಲಕ ಮಾಸ್ಟ್ರೋ ಎಡ್ಜ್ 125, ಗ್ರಾಹಕರಿಗೆ ಹೆಚ್ಚಿನ ಮೌಲ್ಯ ಮತ್ತು ಮನಶ್ಶಾಂತಿಯನ್ನೂ ಒದಗಿಸುತ್ತದೆ. ಹೀರೋ ಕನೆಕ್ಟ್, ಟಾಪಲ್ ಅಲರ್ಟ್, ಥೆಫ್ಟ್ ಅಲರ್ಟ್, ಫೈಂಡ್ ಮೈ ಪಾರ್ಕಿಂಗ್, ಟ್ರ್ಯಾಕ್ ಮೈ ವೆಹಿಕಲ್, ಟ್ರಿಪ್ ಅನಾಲಿಸಿಸ್ ಮುಂತಾದ ಎಂಟಕ್ಕೂ ಹೆಚ್ಚಿನ ಮುಖ್ಯವಾದ ಅಂಶಗಳನ್ನು ಹೊಂದಿದೆ.

ಇಂಜಿನ್
ಮಾಸ್ಟ್ರೋ ಎಡ್ಜ್ 125, ‘XSens  ತಂತ್ರಜ್ಞಾನ’ವಿರುವ 124.6ಸಿಸಿBS-VI, ಫ್ಯುಯೆಲ್ ಇಂಜೆಕ್ಷನ್ ಇಂಜಿನ್‍ನ ಶಕ್ತಿ ಹೊಂದಿದ್ದು, 9 BHP @ 7000 RPM  ದಲ್ಲಿ ಶಕ್ತಿ ಔಟ್‍ಪುಟ್ ಹಾಗು 10.4 NM @ 5500 RPM ನಲ್ಲಿ ಟಾರ್ಕ್-ಆನ್-ಡಿಮ್ಯಾಂಡ್ ಒದಗಿಸುತ್ತದೆ.
 

click me!