ಆಟೋ ಚಾಲಕನ ಬಳಿ ಕನ್ನಡದಲ್ಲಿ ದರ ಚೌಕಾಸಿಗೆ ಚಾಟ್‌ಜಿಪಿ ಬಳಸಿದ ವಿದ್ಯಾರ್ಥಿ, ವೈರಲ್ ವಿಡಿಯೋ

Published : Apr 29, 2025, 09:56 AM ISTUpdated : Apr 29, 2025, 10:02 AM IST
ಆಟೋ ಚಾಲಕನ ಬಳಿ ಕನ್ನಡದಲ್ಲಿ ದರ ಚೌಕಾಸಿಗೆ ಚಾಟ್‌ಜಿಪಿ ಬಳಸಿದ ವಿದ್ಯಾರ್ಥಿ, ವೈರಲ್ ವಿಡಿಯೋ

ಸಾರಾಂಶ

ಆಟೋ ಚಾಲಕನ ಬಳಿ ಕನ್ನಡದಲ್ಲಿ ಬೆಲೆ ಮಾತುಕತೆ ನಡೆಸಬೇಕು. ಆದರೆ ಕನ್ನಡ ಗೊತ್ತಿಲ್ಲದ ವಿದ್ಯಾರ್ಥಿ ಚಾಟ್‌ಜಿಪಿಟಿ ಬಳಸಿ ಚೌಕಾಸಿ 200 ರೂಪಾಯಿ ಆಟೋ ದರವನ್ನು 120 ರೂಪಾಯಿಗೆ ಮಾಡಿದ ವಿಡಿಯೋ ಒಂದು ವೈರಲ್ ಆಗುತ್ತಿದೆ.   

ಬೆಂಗಳೂರು(ಏ.29) ಬೆಂಗಳೂರು ತಂತ್ರಜ್ಞಾನ ಬಳಕೆಯಲ್ಲಿ ಇತರ ಎಲ್ಲಾ ನಗರಕ್ಕಿಂತ ಮುಂದಿದೆ. ಪೀಕ್ ಬೆಂಗಳೂರು ಮೂಮೆಂಟ್‌ನಲ್ಲಿ ಹಲವು ವಿಡಿಯೋಗಳು ವೈರಲ್ ಆಗಿದೆ. ಬೆಂಗಳೂರಿನ ಜನಸಾಮಾನ್ಯರು, ಆಟೋ ಚಾಲಕರು, ತಳ್ಳೋ ಗಾಡಿಯಲ್ಲಿ ವ್ಯಾಪಾರ ಮಾಡುವವರು ಸೇರಿದಂತೆ ಬಹುತೇಕರು ಅತ್ಯಾಧುನಿಕ ತಂತ್ರಜ್ಞಾನವನ್ನು ತಮಗೆ ಬೇಕಾದಂತ ಬಳಸಿ ವೈರಲ್ ಆಗಿದ್ದಾರೆ. ಇದೀಗ ವಿದ್ಯಾರ್ಥಿಯೊಬ್ಬ ಬೆಂಗಳೂರಿನ ಆಟೋ ಚಾಲಕನ ಬಳಿಕ ಕನ್ನಡದಲ್ಲಿ ದರ ಚೌಕಾಸಿ ಮಾಡಲು ಚಾಟ್‌ಜಿಪಿಟಿ ಬಳಸಿದ ವಿಡಿಯೋ ವೈರಲ್ ಆಗಿದೆ.

ಏನಿದೆ ಈ ವಿಡಿಯೋದಲ್ಲಿ? 
ಈ ವಿಡಿಯೋದಲ್ಲಿ ಕನ್ನಡ ಬರದ ವಿದ್ಯಾರ್ಥಿಯೊಬ್ಬ ಆಟೋ ಚಾಲಕನಲ್ಲಿ ದರ ಇಳಿಕೆ ಮಾಡಲು ಟೆಕ್ ಮೊರೆ ಹೋಗಿದ್ದಾನೆ. ಚಾಟ್‌ಜಿಪಿಟಿಗೆ ಪ್ರಾಂಪ್ಟ್ ನೀಡಿದ್ದಾರೆ. ಆಟೋ ಚಾಲಕ ಪ್ರಯಾಣಕ್ಕೆ 200 ರೂಪಾಯಿ ದರ ಹೇಳುತ್ತಿದ್ದಾನೆ. ಆದರೆ ನನಗೆ 100 ರೂಪಾಯಿಗೆ ಚೌಕಾಸಿ ಮಾಡಬೇಕು. ಚಾಲಕನ ಬಳಿಕ ವಿನಯದಿಂದ ಕನ್ನಡದಲ್ಲಿ ಚೌಕಾಸಿ ಮಾಡಿ 100 ರೂಪಾಯಿಗೆ ದರ ಇಳಿಸುವಂತೆ ಚಾಟ್‌ಜಿಪಿಟಿಗೆ ಪ್ರಾಂಪ್ಟ್ ನೀಡಿದ್ದಾನೆ. ಈ ಪ್ರಾಂಪ್ಟ್ ಪಡೆದ ಚಾಟ್‌ಜಿಪಿಟಿ ಕನ್ನಡದಲ್ಲಿ ಅಣ್ಣಾ ನಮಸ್ಕಾರ, ಇಬ್ಬರು ವಿದ್ಯಾರ್ಥಿಗಳು ಪ್ರತಿದಿನ ಇಲ್ಲಿ ಪ್ರಯಾಣ ಮಾಡುತ್ತಾರೆ. ದಯವಿಟ್ಟು ಸ್ವಲ್ಪ ಪ್ರಯಾಣ ದರ ಕಡಿಮೆ ಮಾಡುತ್ತೀರಾ? ಎಂದು ಪ್ರಶ್ನಿಸಿದೆ. ಇದಕ್ಕೆ ಆಟೋ ಚಾಲಕ ಸಾಧ್ಯವಿಲ್ಲ, 150 ಹೇಳಿದ್ದೆ ಇದೀಗ 120 ಲಾಸ್ಟ್ ಅದಕ್ಕಿಂತ ಕಳಕ್ಕೆ ಸಾಧ್ಯವಿಲ್ಲ ಎಂದಿದ್ದಾನೆ. ಇತ್ತ ಪ್ರತಿ ದಿನದ ಗ್ರಾಹಕರು ಎಂದು ಕಡಿಮೆ ಮಾಡಲು ಚಾಟ್‌ಜಿಪಿಟಿ ಮನವಿ ಮಾಡಿದೆ. ಈ ವೇಳೆ ಆಟೋ ಚಾಲಕ 30 ರೂಪಾಯಿ ಕಡಿಮೆ ಮಾಡಿದ್ದೀನಿ ಎಂದು ಉತ್ತರಿಸಿದ್ದಾನೆ. ಧನ್ಯವಾದ ಅಣ್ಣಾ, 120 ರೂಪಾಯಿ ಎಂದು ಚಾಟ್‌ಜಿಪಿಟಿ ಹೇಳಿದೆ.

ವರ್ಕ್ ಫ್ರಮ್ ಆಟೋ, ಬೆಂಗಳೂರು ಚಾಲಕನ ಐಡಿಯಾಗೆ ಮನಸೋತ ಜನ

ಚಾಟ್‌ಜಿಪಿಟಿ ಬಳಕೆ
ಈ ವಿಡಿಯೋಗೆ ನೀಡಿದ ಮಾಹಿತಿಯಂತೆ ವಿದ್ಯಾರ್ಥಿ ಹಾಗೂ ಆಟೋ ಚಾಲಕನ ನಡುವೆ ಅಸಲಿ ಸಂಭಾಷಣೆ ಇದಲ್ಲ ಅನ್ನೋ ಮಾತುಗಳು ಕೇಳಿಬಂದಿದೆ. ಇದು ನಕಲಿ ಎಂದು ಹಲವು ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಮೂಲಗಳ ಪ್ರಕಾರ ಇದು ಚಾಟ್‌ಜಿಪಿಟಿ ಬಳಕೆ ಕುರಿತು ಮಾಡಿದ ವಿಡಿಯೋ ಎಂದು ಹೇಳಲಾಗಿದೆ. ಇಬ್ಬರು ಯುವಕರು ಚಾಟ್‌ಜಿಪಿಟಿ ಮೂಲಕ ಆಟೋ ಚಾಲಕರಲ್ಲಿ ದರ ಚೌಕಾಸಿ ಮಾಡಲು ಸಾಧ್ಯವಿದೆ ಅನ್ನೋದು ತೋರಿಸಲು ಮಾಡಿದ ವಿಡಿಯೋ ಏನ್ನಲಾಗಿದೆ. ಆದರೆ ಈ ವಿಡಿಯೋವನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಖಚಿತಪಡಿಸುತ್ತಿಲ್ಲ. ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಹಾಗೂ ಅದರ ಸುತ್ತಲಿನ ಮಾತುಗಳ ಕುರಿತು ಇಲ್ಲಿ ನೀಡಲಾಗಿದೆ.

ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಎಲ್ಲಾ ಕ್ಷೇತ್ರದಲ್ಲಿ ಬಳಕೆಯಾಗುತ್ತಿದೆ. ಜನಸಾಮಾನ್ಯರು ತಮ್ಮ ಪ್ರತಿ ನಿತ್ಯದ ದಿನಚರಿಯಲ್ಲೂ ಇದೀಗ ಎಐ ಬಳಕೆ ಮಾಡುತ್ತಿದ್ದಾರೆ. ಈ ಮೂಲಕ ಜೀವನ ಸುಲಭಗೊಳಿಸುತ್ತಿದ್ದಾರೆ. ಇದರ ಒಂದು ಭಾಗವಾಗಿ ಆಟೋ ದರ ಚೌಕಾಸಿ ವಿಡಿಯೋ ಹೊರಬಂದಿದೆ.ಇದೇ ರೀತಿ ಹಲವು ಕಡೆಗಳಲ್ಲಿ ಚಾಟ್‌ಜಿಪಿಯನ್ನು ಬಳಕೆ ಮಾಡಲಾಗುತ್ತಿದೆ.

 

 

ಬೆಂಗಳೂರಿನಲ್ಲಿ ಈ ರೀತಿ ಟೆಕ್ ಬಳಕೆ ಮಾಡುತ್ತಿರುವುದು ಹೊಸದೇನಲ್ಲ. ಪಾವತಿಗಾಗಿ ತನ್ನ ಸ್ಮಾರ್ಟ್‌ವಾಚ್‌ನಲ್ಲೇ ಕ್ಯೂಆರ್ ಕೋಡ್ ನೀಡಿದ ಚಾಲಕ, ಕ್ರಿಪ್ಟೋ ಕರೆನ್ಸಿ ಸ್ವೀಕರಿಸಲಾಗುತ್ತದೆ ಅನ್ನೋ ನಾಮಫಕಲ, ವಾಯ್ಸ್ ಅಸಿಸ್ಟ್ ಸೇವೆ ನೀಡಿದ ಚಾಲಕ ಸೇರಿದಂತೆ ಹಲವು ಘಟನೆಗಳು ಬೆಂಗಳೂರಿನಲ್ಲಿ ವರದಿಯಾಗಿದೆ. ಇದೀಗ ಚಾಟ್‌ಜಿಪಿಟಿ ಕೂಡ ಬಳಕೆ ಕುರಿತ ವಿಡಿಯೋ ವೈರಲ್ ಆಗುತ್ತಿದೆ.

ಟೆಕ್ಕಿಗಳ ಮೀರಿಸುತ್ತಿದೆ ಅಡುಗೆ ಕೆಲಸದ ರಿತು ದೀದಿ ರೆಸ್ಯೂಮ್, ಇದು ಬೆಂಗಳೂರಲ್ಲಿ ಮಾತ್ರ!
 

PREV
Read more Articles on
click me!

Recommended Stories

ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್
Bengaluru: ಫ್ರೀಡಂ ಪಾರ್ಕ್‌ನಲ್ಲಿ ಕೈಗೆ ಕೋಳ ಹಾಕಿಕೊಂಡು 'STOP killing Men' ಪ್ರತಿಭಟನೆ ಮಾಡಿದ ಪುರುಷರು!