ಅವೈಜ್ಞಾನಿಕ ಕಸ ವಿಲೇವಾರಿ: ಗರುಡಾ ಮಾಲ್‌ಗೆ BBMP ದಂಡ

By Kannadaprabha NewsFirst Published Nov 7, 2019, 8:46 AM IST
Highlights

ಕಸ ವಿಲೇವಾರಿ ಬಗ್ಗೆ ಬಿಬಿಎಂಪಿ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು, ಗರುಡಾ ಮಾಲ್‌ಗೂ ಬಿಸಿ ತಟ್ಟಿದೆ. ಅವೈಜ್ಞಾನಿಕ ಕಸ ವಿಲೇವಾರಿ ಮಾಡಿರುವ ಗರುಡಾ ಮಾಲ್‌ಗೆ 2 ಲಕ್ಷ ರೂ ದಂಡ ವಿಧಿಸಲಾಗಿದೆ.

ಬೆಂಗಳೂರು(ನ.07): ಕಸ ವಿಲೇವಾರಿ ಬಗ್ಗೆ ಬಿಬಿಎಂಪಿ ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು, ಗರುಡಾ ಮಾಲ್‌ಗೂ ಬಿಸಿ ತಟ್ಟಿದೆ. ಅವೈಜ್ಞಾನಿಕ ಕಸ ವಿಲೇವಾರಿ ಮಾಡಿರುವ ಗರುಡಾ ಮಾಲ್‌ಗೆ 2 ಲಕ್ಷ ರೂ ದಂಡ ವಿಧಿಸಲಾಗಿದೆ.

ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ಗರುಡಾ ಮಾಲ್‌ಗೆ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು 2 ಲಕ್ಷ ರು. ದಂಡ ವಿಧಿಸಿದ್ದಾರೆ. ವೈಜ್ಞಾನಿಕ ವಾಗಿ ಕಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯವನ್ನು ವಿಂಗಡಿಸಿ ವಿಲೇವಾರಿ ಮಾಡಬೇಕು. ಆದರೆ, ಗರುಡಾ ಮಾಲ್‌ನಲ್ಲಿ ಇದ್ಯಾವುದನ್ನು ಪಾಲನೆ ಮಾಡದೇ ಇರು ವುದು ಬಿಬಿಎಂಪಿ ಆರೋಗ್ಯ ಅಧಿಕಾರಿಗಳ ತಪಾಸಣೆ ವೇಳೆ ಕಂಡು ಬಂದಿದೆ. ಹಾಗಾಗಿ, ಬಿಬಿಎಂಪಿ ಆರೋಗ್ಯಾಧಿಕಾರಿ ಗಳು ಗರುಡಾ ಮಾಲ್‌ಗೆ 2 ಲಕ್ಷ ರು. ದಂಡ ವಿಧಿಸಿದ್ದಾರೆ.

ಕುವೆಂಪು ಕವನ ವಾಚಿಸಿದ ಉಡುಪಿ ವಿಶ್ವೇಶ ತೀರ್ಥ ಸ್ವಾಮೀಜಿ

ಕಸ ವಿಲೇವಾರಿ ಬಗ್ಗೆ ಹೆಚ್ಚು ಕಾಳಜಿ ವಹಿಸಿರುವ ಬಿಬಿಎಂಪಿ ವಾರ್ಡ್‌ಗಳಲ್ಲಿಯೂ ಸಿಸಿಟಿವಿ ಅಳವಡಿಸಿ ಅವೈಜ್ಞಾನಿಕ ಕಸ ವಿಲೇವಾರಿ ಮಾಡುವವರಿಗೆ ದಂಡ ವಿಧಿಸುತ್ತಿದೆ. ಒಣ ಕಸ, ಹಸಿ ಕಸ ವಿಂಗಡಿಸುವುದು ಸೇರಿ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡಲು ಬಿಬಿಎಂಪಿ ಎಚ್ಚರಿಸುತ್ತಲೇ ಬಂದಿದೆ.

ಸೈನೈಡ್‌ ಪ್ರಸಾದ ತಿನ್ನಿಸಿ 10 ಜನರ ಕೊಂದವ ಬಲೆಗೆ!

click me!