ಬೆಂಗಳೂರಿನ ರಾಮೇಶ್ವರಂ ಕೆಫೆ ತಿಂಡಿಗೆ ಮನಸೋತ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ

Published : Jul 10, 2025, 08:44 PM IST
jyotiraditya scindia

ಸಾರಾಂಶ

ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಬೆಂಗಳೂರಿನ ರಾಮೇಶ್ವರಂ ಕೆಫೆಗೆ ಬೇಟಿ ನೀಡಿ ತಿಂಡಿ ಸವಿದಿದ್ದಾರೆ. ದೋಸೆ, ಫಿಲ್ಟರ್ ಕಾಫಿಗೆ ಜ್ಯೋತಿರಾಧಿತ್ಯ ಸಿಂಧಿಯಾ ಮಾರು ಹೋಗಿದ್ದಾರೆ. ಈ ಕುರಿತು ವಿಡಿಯೋ ಹಂಚಿಕೊಂಡ ಸಚಿವ, ಅತ್ಯುತ್ತಮ ಸ್ಥಳ ಎಂದಿದ್ದಾರೆ.

ಬೆಂಗಳೂರು (ಜು.10) ಕೇಂದ್ರ ಟೆಲಿಕಾಂ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಬೆಂಗಳೂರಿನ ಜನಪ್ರಿಯ ರೆಸ್ಟೋರೆಂಟ್ ರಾಮೇಶ್ವರಂ ಕೆಫೆಗೆ ಭೇಟಿ ನೀಡಿ ಖಾದ್ಯ ಸವಿಸಿದ್ದಾರೆ. ಈ ಪೈಕಿ ದೊಸೆ ಹಾಗೂ ಫಿಲ್ಟರ್ ಕಾಫಿಗೆ ಜ್ಯೋತಿರಾಧಿತ್ಯ ಸಿಂಧಿಯಾ ಮಾರು ಹೋಗಿದ್ದಾರೆ. ಈ ಕುರಿತು ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ರಾಮೇಶ್ವರಂ ಕೆಫೆ ತಿಂಡಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕಣ್ಮುಚ್ಚಿ ಬೇರೆಯವರಿಗೆ ರೆಕೆಂಡ್ ಮಾಡಬಹುದು ಎಂದು ಸಿಂಧಿಯಾ ಹೇಳಿದ್ದಾರೆ.

ಜ್ಯೋತಿರಾಧಿತ್ಯ ಸಿಂಧಿಯಾ ಬೆಂಗಳೂರು ಭೇಟಿ ವೇಳೆ ರಾಮೇಶ್ವರಂ ಕೆಫೆಗೆ ಭೇಟಿ ನೀಡಿದ್ದಾರೆ. ಬಳಿಕ ರಾಮೇಶ್ವರ ಕೆಫೆಯ ಮಸಾಲ್ ದೋಸೆ ಸೇರಿದಂತೆ ಕೆಲ ಖಾದ್ಯಗಳನ್ನು ಆರ್ಡರ್ ಮಾಡಿದ್ದಾರೆ. ಆಪ್ತರು, ಅಧಿಕಾರಿಗಳ ಜೊತೆ ರಾಮೇಶ್ವರಂ ಕೆಫೆ ಆಹಾರ ಸವಿದಿದ್ದಾರೆ. ಮಸಾಲೆ ದೋಸೆ ಸೇರಿದಂತೆ ಎಲ್ಲಾ ಖಾದ್ಯಗಳು ಅತ್ಯುತ್ತಮ ಎಂದಿದ್ದಾರೆ. ಈ ಕುರಿತು ವಿಡಿಯೋ ಹಂಚಿಕೊಂಡ ಸಿಂಧಿಯಾ, ಉತ್ತಮ ಸುವಾಸನೆಯುಕ್ತ ದೋಸೆ, ಫಿಲ್ಟರ್ ಕಾಫಿ ತುಂಬಾ ಚೆನ್ನಾಗಿತ್ತು. ಅತ್ಯುತ್ತಮ ಸ್ಥಳ, ಉತ್ತಮ ಕಂಪನಿ ರಾಮೇಶ್ವರಂ ಕೆಫೆ ಎಂದು ಸಿಂಧಿಯಾ ಹೇಳಿದ್ದಾರೆ.

ರಾಮೇಶ್ವರಂ ಕೆಫೆಯಲ್ಲಿ ತಿಂಡಿ ಸವಿದ ಜ್ಯೋತಿರಾಧಿತ್ಯ ಸಿಂಧಿಯಾ ಇದೇ ಕೆಫೆಗೆ ಆಗಮಿಸಿ ತಿಂಡಿ ಸವಿಯುತ್ತಿದ್ದ ಯುವ ಸಮೂಹದ ಜೊತೆ ಮಾತನಾಡಿದ್ದಾರೆ. ಇಷ್ಟದ ತಿಂಡಿ, ಖಾದ್ಯದ ರುಚಿ ಕುರಿತು ಮಾತನಾಡಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

 

ಬೆಂಗಳೂರಿನ ಟೆಲಿಕಾಂ ಇಂಡಸ್ಟ್ರಿಗೆ ಬೇಟಿ

ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಬೆಂಗಳೂರಿನ ಇಂಡಿಯನ್ ಟೆಲಿಫೋನ್ ಇಂಡಸ್ಟ್ರಿಗೆ ಭೇಟಿ ನೀಡಿ ಮಹತ್ವದ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಮಾತನಾಡಿದ ಸಿಂಧಿಯಾ, ಟೆಲಿಕಾಂ ಕ್ಷೇತ್ರದ ಬೆಳೆವಣಿಗೆಯಲ್ಲಿ ಬೆಂಗಳೂರು ಮಹತ್ವದ ಕೊಡುಗೆ ನೀಡಿದೆ ಎಂದಿದ್ದಾರೆ. ರೋಟರ್ಸ್, ಪಿಸಿಬಿ ಬೋರ್ಡ್ ರೋಡಿಯೋ ಸಲಕರಣೆ, ಟೆಲಿಕಾಂ ಸಲಕರಣೆ, ಆ್ಯಕ್ಸೆಸ್ ನೆಟ್‌ವರ್ಕ್ ಸೇರಿದಂತೆ ಹಲವು ಉತ್ಪನ್ನಗಳು ಇದೇ ಬೆಂಗೂರಿನಿಂದ ಉತ್ಪಾದನೆಯಾಗುತ್ತಿತ್ತು. ಕಾಲ ಬದಲಾಗುತ್ತಿದ್ದಂತೆ ಉತ್ಪನ್ನ, ತಂತ್ರಜ್ಞಾನಗಳು ಬದಲಾಗಿತ್ತು. ಇದಕ್ಕೆ ತಕ್ಕಂತೆ ಇಂಡಯನ್ ಟೆಲಿಫೋನ್ ಇಂಡಸ್ಟ್ರಿ ಮಹತ್ತರ ಕೊಡುಗೆ ನೀಡಿದೆ ಎಂದು ಸಿಂಧಿಯಾ ಹೇಳಿದ್ದಾರೆ. ಬೆಂಗಳೂರಿನ ಇಂಡಿಯನ್ ಟೆಲಿಫೋನ್ ಇಂಡಸ್ಟ್ರೀಗೆ ಬೇಟಿ ನೀಡಿರುವುದು ಅತೀವ ಸಂತಸ ಹಾಗೂ ಹೆಮ್ಮೆಯಾಗುತ್ತಿದೆ ಎಂದು ಸಿಂಧಿಯಾ ಹೇಳಿದ್ದಾರೆ.

 

PREV
Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ