ಚರ್ಚ್‌ಸ್ಟ್ರೀಟ್‌ನಲ್ಲಿ ಅನುಮತಿ ಇಲ್ಲದೆ ಯುವತಿಯರ ಫೋಟೋ, ವಿಡಿಯೋ ಮಾಡ್ತಿದ್ದ ವ್ಯಕ್ತಿಯ ಬಂಧನ

Published : Jul 10, 2025, 11:48 AM IST
church street

ಸಾರಾಂಶ

 ಬೆಂಗಳೂರಿನ ಜನಪ್ರಿಯ ಪ್ರದೇಶಗಳಲ್ಲಿ ಯುವತಿಯರ ಒಪ್ಪಿಗೆಯಿಲ್ಲದೆ ರಹಸ್ಯವಾಗಿ ಚಿತ್ರೀಕರಿಸಿ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಮಹಿಳೆಯೊಬ್ಬರು ಇನ್‌ಸ್ಟಾಗ್ರಾಮ್ ಖಾತೆಯ ವಿರುದ್ಧ ದೂರು ನೀಡಿದ್ದಾಳೆ. 

ಬೆಂಗಳೂರು (ಜು.10): ರಾಜಧಾನಿಯ ಚರ್ಚ್ ಸ್ಟ್ರೀಟ್, ಕೋರಮಂಗಲ ಮತ್ತು ಇತರ ಜನಪ್ರಿಯ ಸ್ಥಳಗಳಲ್ಲಿ ಯುವತಿಯರ ಒಪ್ಪಿಗೆಯಿಲ್ಲದೆ ಅವರ ಫೋಟೋ ಹಾಗೂ ವೀಡಿಯೊಗಳನ್ನು ಪೋಸ್ಟ್ ಮಾಡಿದ ಸೋಶಿಯಲ್‌ ಮೀಡಿಯಾ ಪೇಜ್‌ ಬಗ್ಗೆ ಯುವತಿಯೊಬ್ಬರು ಇನ್ಸ್‌ಟಾಗ್ರಾಮ್‌ನಲ್ಲಿ ಕಳವಳ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲಿಯೇ ಬೆಂಗಳೂರು ಪೊಲೀಸರು 26 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ತನಗೆ ತಿಳಿಯದೆ ವಿಡಿಯೋ ಶೂಟ್‌ ಮಾಡಿದ ಯುವತಿಯರಲ್ಲಿ ತಾನೂ ಒಬ್ಬಳು ಎಂದು ಕಂಡುಕೊಂಡ ಮಹಿಳೆ, ಈ ವಿಡಿಯೋವನ್ನು ವರದಿ ಮಾಡಿದ್ದಲ್ಲದೆ ಅದನ್ನು ತೆಗೆದುಹಾಕುವಂತೆ ವಿನಂತಿ ಮಾಡಿದ್ದರು. ಆದರೆ, ವಿಡಿಯೋ ಪೋಸ್ಟ್‌ ಮಾಡಿದ್ದ ವ್ಯಕ್ತಿ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ವೀಡಿಯೊ ಪ್ರಸಾರವಾದ ನಂತರ, ಅವರಿಗೆ ಅಪರಿಚಿತರಿಂದ ಅಶ್ಲೀಲ ಸಂದೇಶಗಳು ಬರಲು ಪ್ರಾರಂಭಿಸಿದವು ಎಂದು ತಿಳಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಖಾತೆಯನ್ನು ಉಲ್ಲೇಖಿಸಿ ಆಕೆ ಬರೆದುಕೊಂಡಿದ್ದು, “ಈ ವ್ಯಕ್ತಿ ಚರ್ಚ್ ಸ್ಟ್ರೀಟ್‌ನಲ್ಲಿ ‘Chaos’ಯನ್ನು ಚಿತ್ರೀಕರಿಸುವಂತೆ ನಟಿಸುತ್ತಾ ಓಡಾಡುತ್ತಾನೆ, ಆದರೆ ವಾಸ್ತವದಲ್ಲಿ, ಅವರು ಮಾಡುವುದೆಲ್ಲವೂ ಮಹಿಳೆಯರನ್ನು ಹಿಂಬಾಲಿಸಿ ಅವರ ಒಪ್ಪಿಗೆಯಿಲ್ಲದೆ ರೆಕಾರ್ಡ್ ಮಾಡುವುದು.” ಎಂದು ಬರೆದುಕೊಂಡಿದ್ದಾರೆ.

ಆ ವಿಡಿಯೋದಲ್ಲಿ, "ಇದನ್ನು ಮಾಡಲು ಇಷ್ಟವಿರಲಿಲ್ಲ, ಆದರೆ ಇಲ್ಲಿಯವರೆಗೆ ಏನೂ ಕೆಲಸ ಮಾಡಿಲ್ಲ. ನಾನು ಬೆಂಗಳೂರಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿ. ಚರ್ಚ್ ಸ್ಟ್ರೀಟ್‌ನಲ್ಲಿ ಸಾರ್ವಜನಿಕವಾಗಿ ನನ್ನ ಶೂಟ್‌ ಮಾಡಿದ್ದಾರೆ, ತುಂಬಾ ಅನುಚಿತವಾಗಿ ನನ್ನ ಚಿತ್ರೀಕರಿಸಲಾಗಿದೆ, ನಂತರ ನನ್ನ ಒಪ್ಪಿಗೆಯಿಲ್ಲದೆ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊ ಇತ್ತು" ಎಂದು ಹೇಳಿದ್ದಾಳೆ.

"ಬೀದಿ ದೃಶ್ಯಗಳನ್ನು" ಪ್ರದರ್ಶನ ಮಾಡುವುದಾಗಿ ಹೇಳಿಕೊಂಡ ಖಾತೆಯು 10,000 ಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದು, ವಾಸ್ತವವಾಗಿ ಮಹಿಳೆಯರನ್ನು ಹಿಂಬಾಲಿಸಿ ರಹಸ್ಯವಾಗಿ ಚಿತ್ರೀಕರಣ ಮಾಡುವ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಹೆಚ್ಚಿನ ಯುವತಿಯರಿಗೆ ತನ್ನ ವಿಡಿಯೋ ರೆಕಾರ್ಡ್‌ ಆಗುತ್ತಿದೆ ಅನ್ನೋದೇ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನು "ಸಮ್ಮತಿಯ ಗಂಭೀರ ಉಲ್ಲಂಘನೆ" ಎಂದು ಕರೆದ ಅವರು, ಸಾರ್ವಜನಿಕ ಸ್ಥಳದಲ್ಲಿರುವುದು ಅಥವಾ ಸಾರ್ವಜನಿಕ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಹೊಂದಿರುವುದು ಚಿತ್ರೀಕರಣಕ್ಕೆ ಒಪ್ಪಿಗೆ ನೀಡುವುದಾಗಿ ಅರ್ಥವಲ್ಲ ಎಂದು ಒತ್ತಿ ಹೇಳಿದರು.

ವರದಿ ಮಾಡಿದ ನಂತರ ಪುಟವನ್ನು ನೇರವಾಗಿ ಟ್ಯಾಗ್ ಮಾಡಲು ಸಾಧ್ಯವಾಗದ ಕಾರಣ, ಸಹಾಯಕ್ಕಾಗಿ ಮಾಡಿದ ಮನವಿಯಲ್ಲಿ ಅವರು @blrcitypolice ಮತ್ತು @cybercrimecid ಅನ್ನು ಟ್ಯಾಗ್ ಮಾಡಿದ್ದಾರೆ. ಆಕೆಯ ದೂರಿನ ಮೇರೆಗೆ ಬೆಂಗಳೂರು ಪೊಲೀಸರು ಖಾತೆಯ ಹಿಂದಿನ ವ್ಯಕ್ತಿ ಎಂದು ಗುರುತಿಸಲಾದ 26 ವರ್ಷದ ಗುರುದೀಪ್ ಸಿಂಗ್ ಅವರನ್ನು ಬಂಧಿಸಿದ್ದಾರೆ.

 

PREV
Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ