ಸಿಗರೇಟ್‌ಗಳಲ್ಲಿ ಗಾಂಜಾ ತುಂಬಿಸಿ ಮಾರಾಟ ಮಾಡುತ್ತಿದ್ದ ಇಬ್ಬರು ರೌಡಿಗಳನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿರುವ ಘಟನೆ ಇಸ್ಲಾಂಪುರ ಸಮೀಪ ನಡೆದಿದೆ. ಎಲ್‌ಬಿಎಸ್ ನಗರದ ಸದ್ದಾಂ ಹುಸೇನ್ ಅಲಿ ಯಾಸ್ ಸದ್ದಾಂ ಹಾಗೂ ಕಾಡುಗೋಡಿಯ ಅಜಂಪಾಷ ಸಿಕ್ಕಿಬಿದ್ದಿದ್ದು, ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ಮತ್ತೊಬ್ಬ ಆರೋಪಿ ಇಮ್ರಾನ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಬೆಂಗಳೂರು(ನ.11): ಸಿಗರೇಟ್‌ಗಳಲ್ಲಿ ಗಾಂಜಾ ತುಂಬಿಸಿ ಮಾರಾಟ ಮಾಡುತ್ತಿದ್ದ ಇಬ್ಬರು ರೌಡಿಗಳನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿರುವ ಘಟನೆ ಇಸ್ಲಾಂಪುರ ಸಮೀಪ ನಡೆದಿದೆ.
ಎಲ್‌ಬಿಎಸ್ ನಗರದ ಸದ್ದಾಂ ಹುಸೇನ್ ಅಲಿ ಯಾಸ್ ಸದ್ದಾಂ ಹಾಗೂ ಕಾಡುಗೋಡಿಯ ಅಜಂಪಾಷ ಸಿಕ್ಕಿಬಿದ್ದಿದ್ದು, ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿರುವ ಮತ್ತೊಬ್ಬ ಆರೋಪಿ ಇಮ್ರಾನ್ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳಿಂದ ₹7 ಲಕ್ಷ ಮೌಲ್ಯದ 15 ಕೆ.ಜಿ. ಗಾಂಜಾ ಹಾಗೂ ಕಾರು ಜಪ್ತಿ ಮಾಡಲಾಗಿದೆ.
undefined
ನಿವೃತ್ತ ಐಎಎಸ್ ಅಧಿಕಾರಿ ಪುತ್ರ ಆತ್ಮಹತ್ಯೆ
ಇತ್ತೀಚಿಗೆ ಇಸ್ಲಾಂಪುರ ಸಮೀಪದ ಎಲ್‌ಬಿಎಸ್ ನಗರದಲ್ಲಿ ಗಾಂಜಾ ದಂಧೆ ನಡೆದಿರುವ ಬಗ್ಗೆ ದೂರುಗಳು ಬಂದಿದ್ದ ವು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದಾಗ ಇಬ್ಬ ರು ರೌಡಿಶೀಟರ್‌ಗಳು ಬಲೆಗೆ ಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೆಳತಿಯ ಬಾತ್‌ರೂಮ್‌ನಲ್ಲೇ ಹಿಡನ್ ಕ್ಯಾಮರಾ ಇಟ್ಟ ಮೇಕಪ್ ಮ್ಯಾನ್..!
ಹೊರ ರಾಜ್ಯಗಳಿಂದ ಗಾಂಜಾ ಖರೀದಿ ಸಿ ತಂದು ನಗರದಲ್ಲಿ ವಿಲೇವಾರಿ ಮಾಡುತ್ತಿದ್ದರು. ಸಿಗರೆ ಟ್‌ನ ಲ್ಲಿ ಹೊಗೆಸೊಪ್ಪು ತೆಗೆದು ಅದಕ್ಕೆ ಗಾಂಜಾ ಪುಡಿ ತುಂ ಬಿ ಆರೋಪಿಗಳು ಮಾರಾಟ ಮಾಡುತ್ತಿದ್ದರು. ಇನ್‌ಸ್ಪೆಕ್ಟರ್ ಎಂ.ಮಹಮ್ಮದ್ ಹಾಗೂ ಸಬ್ ಇನ್‌ಸ್ಪೆಕ್ಟರ್ ಪ್ರಶೀಲಾ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.
ಕೇರಳದಿಂದ ಬಂದು IPS ಎಂದೇಳಿ ಮದುವೆಯಾಗ್ತಾರೆ! ಆಮೇಲೆ