ಬೆಂಗಳೂರಿನಲ್ಲಿ 2BHKಗೆ ಮನೆಯೊಡತಿ ಕೇಳಿದ ಡೆಪಾಸಿಟ್ ಎಷ್ಟು: ಶಾಕ್‌ನಲ್ಲಿ ಬಾಡಿಗೆದಾರ

Published : Nov 03, 2025, 06:35 PM IST
Bhartiya city in Bengaluru

ಸಾರಾಂಶ

Bengaluru house rent deposit: ಬೆಂಗಳೂರಿನ ಪ್ರೇಜರ್ ಟೌನ್‌ನಲ್ಲಿ 2BHK ಮನೆಯೊಂದಕ್ಕೆ ಮಾಲೀಕರು 30 ಲಕ್ಷ ರೂಪಾಯಿ ಡೆಪಾಸಿಟ್ ಕೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಮನೆಯೊಡತಿ ಹೇಳಿದ ಡೆಪಾಸಿಟ್ ಕೇಳಿ ಬಾಡಿಗೆದಾರ ಶಾಕ್

ಬೆಂಗಳೂರಿನಲ್ಲಿ ತಾತ್ಕಾಲಿಕವಾಗಿ ವಾಸಿಸುವವರಿಗೆ ಮನೆ ಬಾಡಿಗೆಗೆಗಿಂತ ಅದಕ್ಕೆ ನೀಡಬೇಕಾದ ಡೆಪಾಸಿಟ್ ಹಣವೇ ದೊಡ್ಡ ಸಮಸ್ಯೆ. ಆಗಷ್ಟೇ ಬೆಂಗಳೂರಿಗೆ ದುಡಿಯಲು ಬಂದವರು ಇಷ್ಟೊಂದು ಹಣವನ್ನು ಕೂಡಿಸುವುದು ಅಷ್ಟು ಸುಲಭವಲ್ಲ. ಆದರೆ ಮನೆ ಮಾಲೀಕರಿಗೆ ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಅದೇ ರೀತಿ ಇಲ್ಲೊಂದು ಕಡೆ 2 ಬಿಹೆಚ್‌ಕೆ ಮನೆಗೆ ಮನೆ ಮಾಲೀಕರು 30 ಲಕ್ಷ ಹಣ ಡೆಪಾಸಿಟ್ ಕೇಳಿದ್ದು, ಮನೆ ಕೇಳುತ್ತಾ ಹೋದವರು ಬೆಚ್ಚಿ ಬಿದ್ದಿದ್ದಾರೆ. ಈ ವಿಚಾರವನ್ನು ಮನೆ ಹುಡುಕಲು ಹೊರಟವರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದು, ಈ ಪೋಸ್ಟ್ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಪ್ರೇಜರ್ ಟೌನ್‌ನಲ್ಲಿ 2 ಬಿಹೆಚ್‌ಕೆ ಮನೆಗೆ ಮನೆಯೊಡತಿ ಕೇಳಿದ ಡೆಪಾಸಿಟ್ ಎಷ್ಟು?

ಈ ಫ್ಲಾಟ್‌ಗೆ ಸಂಬಂಧಿಸಿದಂತೆ ವೆಬ್‌ಸೈಟ್‌ನಲ್ಲಿ ಈ ಪ್ಲಾಟ್‌ ಸ್ಟೈಲಿಶ್ ಆಗಿದೆ, ಫರ್ನಿಶ್ಡ್‌ ಆಗಿದೆ, ಡಿಸೈನರ್ ಇಂಟಿರಿಯರ್ ಜೊತೆ ಉತ್ತಮ ಗುಣಮಟ್ಟದ ಬೆಡ್ , ಮಾದರಿಯಾದ ಅಡುಗೆ ಮನೆ ಹಾಗೂ ಉಪಕರಣಗಳು, ಕಾರು ಪಾರ್ಕಿಂಗ್ ಪ್ರದೇಶ ಹಾಗೂ ಸಂಪೂರ್ಣವಾದ ಬ್ಯಾಕಪ್ ಇರುವ ವಿದ್ಯುತ್ ಸೌಲಭ್ಯ ಹಾಗೂ ಭದ್ರತೆ ಇದೆ ಎಂದು ವಿವರಿಸಲಾಗಿದೆ. ಅಂದಹಾಗೆ ಈ ರೀತಿ ಮನೆ ಬಾಡಿಗೆ ಹಾಗೂ ಡಿಪಾಸಿಟ್ ಹಣ ಕೇಳಿರುವುದು ಬೆಂಗಳೂರಿನ ಪ್ರೇಜರ್ ಟೌನ್‌ನಲ್ಲಿರುವ ಮನೆಯೊಂದಕ್ಕೆ ಎಂದು ತಿಳಿದು ಬಂದಿದೆ. ಬೆಂಗಳೂರಿನಲ್ಲಿ ಮನೆ ಮಾಲೀಕರು ಕೈಗೆ ಸಿಗ್ತಿಲ್ಲ ಎಂದು ಬರೆದು ರೆಡಿಟ್ ಬಳಕೆದಾರರೊಬ್ಬರು ಈ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಹೊಸ ಬಿಲ್ಡಿಂಗ್, ಬಾಡಿಗೆ 20 ಸಾವಿರ, ಡೆಪಾಸಿಟ್ ಹಣ 30 ಲಕ್ಷ ಎಂದು ಎಂದು ಬರೆದಿರುವ ಜಾಹೀರಾತಿನ ಸ್ಕ್ರೀನ್‌ಶಾಟನ್ನು ಹಂಚಿಕೊಂಡಿದ್ದಾರೆ.

ನೆಟ್ಟಿಗರಿಂದ ತೀವ್ರ ಆಕ್ರೋಶ

ಈ ಪೋಸ್ಟ್‌ಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 30 ಲಕ್ಷ ಡೆಪಾಸಿಟ್, ಇದರಲ್ಲಿ ನೀವು ಒಂದು ಬಿಲ್ಡರ್ ಫ್ಲಾಟ್ ಖರೀದಿಸಬಹುದು ಹಾಗೂ ಬಾಡಿಗೆ ಬದಲಿಗೆ ಇಎಂಐ ಪಾವತಿ ಮಾಡಬಹುದು. ಯಾರು 30ಲಕ್ಷ ಡೆಪಾಸಿಟ್ ನೀಡಿ ಬಾಡಿಗೆ ಮನೆಗೆ ಹೋಗ್ತಾರೆ ಎಂದು ನನಗೆ ಗೊತ್ತಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ದೊಡ್ಡ ಹಗರಣ, ಬೆಂಗಳೂರಿನ ಮನೆ ಮಾಲೀಕರು ದೊಡ್ಡ ಸ್ಕ್ಯಾಮರ್‌ಗಳು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮನೆ ಮಾಲೀಕ ಇಷ್ಟೊಂದು ಮೊತ್ತದ ಹಣ ಕೇಳುತ್ತಿದ್ದಾನೆ ಎಂದರೆ ಅವನು ಮನೆಯನ್ನು ಬಾಡಿಗೆಗೆ ನೀಡುವ ಬದಲು ಲೀಸ್‌ಗೆ ನೀಡಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಈ ಪೋಸ್ಟ್ ನೋಡಿದ ಅನೇಕರು ಬೆಂಗಳೂರಿನ ಗಗನಕ್ಕೇರುತ್ತಿರುವ ಬಾಡಿಗೆಯಿಂದ ತಾವು ಎದುರಿಸುತ್ತಿರುವ ಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ನೀವು ಒಂಟಿಯಾಗಿದ್ದರೆ ಮತ್ತು ಕೆಲಸ ಮಾಡುತ್ತಿದ್ದರೆ, ಪಿಜಿಗೆ ಹೋಗಿ. ಈ ರೀತಿಯ ಠೇವಣಿ ದೃಶ್ಯಗಳನ್ನು ಮರೆತುಬಿಡಿ. ಇದು ಸಂಪೂರ್ಣ ಅಸಂಬದ್ಧ ಎಂದು ಒಬ್ಬ ಬಳಕೆದಾರರು ಸಲಹೆ ನೀಡಿದ್ದಾರೆ. ಮತ್ತೊಬ್ಬರು ನನಗೆ ವೈಟ್‌ಫೀಲ್ಡ್‌ನಲ್ಲಿ ಬಾಡಿಗೆಗೆ ಪಡೆಯುವುದು ತುಂಬಾ ಕಷ್ಟಕರವಾಗಿದೆ. ಏಕ ಆದಾಯದ ಕುಟುಂಬ, ಮತ್ತು ಹೆಚ್ಚಿನ ಸ್ಥಳಗಳು ದುಬಾರಿ ಬೆಲೆಯದ್ದಾಗಿರುವುದರಿಂದ ನಾನು ಭಯಾನಕ ಪ್ರದೇಶದಲ್ಲಿ ವಾಸಿಸುವುದನ್ನೇ ರಾಜಿ ಮಾಡಿಕೊಳ್ಳಬೇಕಾಗುತ್ತದೆ ಎಂದು ತೋರುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:  ಭ್ರಷ್ಟಾಚಾರ ವಿರೋಧಿ ಭಾಷಣ: ಗಂಟೆಯ ನಂತರ 80000 ಲಂಚದ ಜೊತೆ ಸಿಕ್ಕಿಬಿದ್ದ ACB DSP

ಇದನ್ನೂ ಓದಿ: ಪ್ರಿಯತಮೆಯ ಮೇಲೆ ಕಣ್ಣಿಡಲು ಆಕೆಯ ಮನೆ ಹಿಂದೆಯೇ ಸಿಸಿಟಿವಿ ಫಿಕ್ಸ್ ಮಾಡಿದ ಭಗ್ನಪ್ರೇಮಿ

PREV
Read more Articles on
click me!

Recommended Stories

ಬೆಳಗಾವಿ ಅಧಿವೇಶನ: ವಿರೋಧ ಪಕ್ಷಗಳು ಅವಿಶ್ವಾಸ ಮಂಡಿಸಿದರೆ ಕಾಂಗ್ರೆಸ್ ಒಗ್ಗಟ್ಟಿನ ಹೋರಾಟ
ಡಿಕೆಶಿ ಕಾರ್ಟಿಯರ್‌ ವಾಚ್‌ ಕದ್ದದ್ದಾ? ಚುನಾವಣಾ ಅಫಿಡವಿಟ್‌ನಲ್ಲಿ ಘೋಷಿಸಿಲ್ಲವೇಕೆ?: ಛಲವಾದಿ