ಬೆಂಗಳೂರಿನ ಬೃಹತ್ ಜಿನ ಸಮ್ಮಿಲನ 2019ಕ್ಕೆ ಕೌಂಟ್‌ಡೌನ್!

Published : Dec 27, 2019, 11:23 AM IST
ಬೆಂಗಳೂರಿನ ಬೃಹತ್ ಜಿನ ಸಮ್ಮಿಲನ 2019ಕ್ಕೆ ಕೌಂಟ್‌ಡೌನ್!

ಸಾರಾಂಶ

ಬೆಂಗಳೂರಿನಲ್ಲಿ ಜಿನ ಸಮ್ಮಿಲನ 2019 ಕಾರ್ಯಕ್ರಮವನ್ನುಆಯೋಜಿಸಲಾಗಿದೆ. ಧಾರ್ಮಿಕ, ಸಾಂಸ್ಕೃತಿಕ, ಕ್ರೀಡೆ, ಮನೋರಂಜನೆ ಸೇರಿದಂತೆ ಹಲವು ಕಾರ್ಯಕ್ರಮಗಳು ಸಮ್ಮಿಲನ ಈ ಜಿನ ಸಮ್ಮಿಲನದ ವಿಶೇಷ. ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವು ಪ್ರಮುಖ ನಾಯಕರು ಈ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 

ಬೆಂಗಳೂರು(ಡಿ.27): ಸುಹಾಸ್ತಿ ಜೈನ್ ಮಿಲನ್ ಹಾಗೂ ಎಸ್.ಎಸ್.ಎಂ.ಆರ್‌.ವಿ. ಡಿಗ್ರಿ ಕಾಲೇಜು ಸಹಯೋಗದೊಂದಿಗೆ ಉದ್ಯಾನ ನಗರಿಯಲ್ಲಿ ಬೃಹತ್ ಜಿನ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ. ಡಿ.29(ಭಾನುವಾರ)  ಜಯನಗರದ ಎಸ್.ಎಸ್.ಎಂ.ಆರ್‌.ವಿ. ಡಿಗ್ರಿ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ.

ಇದನ್ನೂ ಓದಿ: ನಗರದ ಜಂಜಾಟದ ಬದುಕಿಗೆ ಮುಕ್ತಿ ನೀಡಿದ ಜೈನ್ ಸಹಕಾರ್ ಕ್ರೀಡೋತ್ಸವ!

ಧಾರ್ಮಿಕ, ಸಾಂಸ್ಕೃತಿಕ, ಕ್ರೀಡೆ, ಮನೋರಂಜನೆ ಸೇರಿದಂತೆ ಹಲವು ಕಾರ್ಯಕ್ರಮಗಳು ಜಿನ ಸಮ್ಮಿಲನ 2019ರ ಕಾರ್ಯಕ್ರಮದಲ್ಲಿ ಮೇಳೈಸಲಿವೆ. ಜಿನ ಸಮ್ಮಲನ 2019ರಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ. ಇದರ ಜೊತೆಗೆ ಥ್ರೋ ಬಾಲ್, ಚಿತ್ರಕಲೆ, ರಂಗೋಲಿ ಹಾಗೂ ಆಶುಭಾಷಣ ಸ್ಪರ್ಧೆಯನ್ನ ಏರ್ಪಡಿಸಲಾಗಿದೆ. 

ಕಳೆದ ಹಲವು ವರ್ಷಗಳಿಂದ  ಯುವಕರ ಸಂಘಟನೆ ಸುಹಾಸ್ತಿ ಯುವ ಜೈನ್ ಮಿಲನ್ ಜಿನ ಸಮ್ಮಿಲನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ಬರುತ್ತಿದ. ಸ್ವಚ್ಛ ಭಾರತ, ಪರಿಸರ ಕಾಳಜಿ, ಕ್ರೀಡೆ-ಮನೋರಂಜನೆ, ಸೇವೆ ಸಂಸ್ಕೃತಿ ಸಂಸ್ಕಾರ ಹೀಗೆ  ಸದಾಭಿರುಚಿಯ ಕಾರ್ಯಕ್ರಮಗಳನ್ನು  ಆಯೋಜಿಸಿರುವ  ಸುಹಾಸ್ತಿ ಯುವ ಜೈನ್ ಮಿಲನ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಅದ್ಧೂರಿ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ ವಿಶೇಷ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮವನ್ನು ಕರ್ನಾಟಕ ಜೈನ್ ಸಂಸ್ಥೆ ಬೆಂಗಳೂರಿನ ಅಧ್ಯಕ್ಷರಾದ ಪ್ರಸನ್ನಯ್ಯ ಉದ್ಘಾಟಿಸಲಿದ್ದಾರೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಧ್ಯಕ್ಷರಾದ ಡಿ.ಸುರೇಂದ್ರ ಕುಮಾರ್ ಹಾಗೂ ವಿಶೇಷ ಆಹ್ವಾನಿತರಾಗಿ ಉಪ ಮುಖ್ಯಮಂತ್ರಿಗಳಾದ ಅಶ್ವಥ್ ನಾರಾಯಣ್ ಪಾಲ್ಗೊಳ್ಳುತ್ತಿದ್ದಾರೆ.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!