ಮಹಿಳೆಯರಿಗೆ ಶುಭ ಸುದ್ದಿ ನೀಡಿದ ನಮ್ಮ ಮೆಟ್ರೋ..'ಪೆಪ್ಪರ್ ಸ್ಪ್ರೇ' ಕೊಂಡೊಯ್ಯಲು ಅವಕಾಶ

By Suvarna News  |  First Published Dec 4, 2019, 9:00 PM IST

ಮಹಿಳೆಯರಿಗೆ ಶುಭ ಸುದ್ದಿ ನೀಡಿದ ನಮ್ಮ ಮೆಟ್ರೋ/ ಮಹಿಳೆಯರು ಪೆಪ್ಪರ್ ಸ್ಪ್ರೈ ತೆಗೆದುಕೊಂಡು ಹೋಗಲು ಅಡ್ಡಿ ಇಲ್ಲ/ ಹೈದರಾಬಾದ್ ಪ್ರಕರಣದ ನಂತರ ಮಹಿಳಾ ಸುರಕ್ಷತೆ ವಿಚಾರ ಚರ್ಚೆ/ ಅವಕಾಶ ನೀಡಲು ಒಪ್ಪಿಗೆ ನೀಡಿದ ಬಿಎಂಆರ್ ಸಿಎಲ್


ಬೆಂಗಳೂರು(ಡಿ. 04)  ಹೈದರಾಬಾದಿನ ಪ್ರಕರಣ ಸಹಜವಾಗಿಯೇ ಎಲ್ಲರಲ್ಲಿಯೂ ಒಂದು ಆತಂಕ ಸೃಷ್ಟಿ ಮಾಡಿದೆ. ಇದೀಗ ಬೆಂಗಳೂರು ನಮ್ಮ ಮೆಟ್ರೋ ಮಹಿಳೆಯರ ಪರವಾಗಿ ನಿಂತಿದ್ದು ಮಹಿಳೆಯರ ಸ್ವಯಂ ರಕ್ಷಣೆಗಾಗಿ ಪೆಪ್ಪರ್ ಸ್ಪ್ರೇ ಕೊಂಡೊಯ್ಯಲು ಬಿಎಂಆರ್ ಸಿಎಲ್ ಅವಕಾಶ ನೀಡಲು ನಿರ್ಧರಿಸಿದೆ.

ಸೋಮವಾರದಿಂದ ಮಹಿಳೆಯರು ಪೆಪ್ಪರ್ ಸ್ಪ್ರೈ ಕೊಂಡೊಯ್ಯಲು ಅವಕಾಶ ನೀಡುವಂತೆ ಎಲ್ಲಾ ನಿಲ್ದಾಣದಲ್ಲಿನ ಭದ್ರತಾ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ . ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದ್ದು, ಮಹಿಳೆಯರು ಪೆಪ್ಪರ್ ಸ್ಪ್ರೈ ತೆಗೆದುಕೊಂಡು ಹೋಗಲು ಅಡ್ಡಿ ಇರುವುದಿಲ್ಲ ಎಂದು ಬಿಎಂಆರ್ ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಲ್. ಯಶವಂತ್ ಚಾವ್ಹಾಣ್ ಮಾಹಿತಿ ನೀಡಿದ್ದಾರೆ.

Latest Videos

undefined

ಆರು ಬೋಗಿಗಳ ಸೇವೆ ಆರಂಭ: ಪುಲ್ ಡಿಟೇಲ್ಸ್

ಪೇಪರ್ ಸ್ಪ್ರೆ ಕುರಿತ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿಯೂ ನಡೆದಿದ್ದವು. ಕೆಲವು ನಿಲ್ದಾಣಗಳಲ್ಲಿ ಅವಕಾಶ ನೀಡಲಾಗುತ್ತಿಲ್ಲ ಎಂಬ ದೂರುಗಳು ಬಂದಿದ್ದವು. ಇದೆಲ್ಲವೂ ಒಂದು ಹಂತಕ್ಕೆ ಬಂದಿದ್ದು ಈಗ ಅಧಿಕೃತವಾಗಿ ಕೊಂಡೊಯ್ಯಬಹುದು ಎಂದು ತಿಳಿಸಲಾಗಿದೆ.

ಕೆಲ ನಿಲ್ದಾಣಗಳಲ್ಲಿ ಮಹಿಳೆಯರು ಪೆಪ್ಪರ್ ಸ್ಪ್ರೈ ಕೊಂಡೊಯ್ಯಲು ಭದ್ರತಾ ಸಿಬ್ಬಂದಿ ಬಿಡುತ್ತಿಲ್ಲ ಎಂದು ಪಬ್ಲಿಕ್ ಪಾಲಿಸಿ ರಿಸರ್ಚರ್ ಒಬ್ಬರು ಬಿಎಂಆರ್ ಸಿಎಲ್ ಟ್ವೀಟರ್ ಗೆ ಟ್ವೀಟ್ ಮಾಡಿದ ನಂತರ ಈ ವಿಚಾರ ಚರ್ಚೆಗೆ ಬಂದಿತ್ತು.

ನಮ್ಮ ಮೆಟ್ರೋದಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಬೋಗಿಯೂ ಇದೆ. ಪೆಪ್ಪರ್ ಸ್ಪ್ರೇ ತೆಗೆದುಕೊಂಡು ಹೋಗಲು ಅನುಮತಿ ನೀಡದಿರುವುದು ಬಿಎಂಆರ್‌ಸಿಎಲ್ ತೀರ್ಮಾನವೇ?, ಭದ್ರತಾ ಸಿಬ್ಬಂದಿಯ ತೀರ್ಮಾನವೇ? ಎಂದು ಹಲವು ಪ್ರಯಾಣಿಕರು ಟ್ವೀಟರ್ ಮೂಲಕ ಪ್ರಶ್ನೆ ಮಾಡಿದ್ದರು ಇದಾದ ಮೇಲೆ ಅಂತಿಮವಾಗಿ ಅಧಿಕೃತ ಉತ್ತರ ಲಭಿಸಿದಂತೆ ಆಗಿದೆ. 

click me!