ರಾಗಿಗುಡ್ಡ-ಕನಕಪುರ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ವಿರೋಧ; ಜನರ ಬೇಡಿಕೆಗಳೇನು?

Published : Oct 10, 2026, 08:37 AM IST
Ragigudda Kanakapura elevated corridor

ಸಾರಾಂಶ

ಬೆಂಗಳೂರಿನ ರಾಗಿಗುಡ್ಡ - ಕನಕಪುರ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣವನ್ನು ವಿರೋಧಿಸಿ ಅಕ್ಟೋಬರ್ 11ರಂದು ಶಾಂತಿಯುತ ಮಾನವ ಸರಪಳಿ ಪ್ರತಿಭಟನೆ ನಡೆಯಲಿದೆ. ಮೆಟ್ರೋಗೆ ಸಮಾಂತರವಾಗಿ ಕಾರಿಡಾರ್ ಬೇಡ ಹಾಗೂ ಕಾವೇರಿ ಪೈಪ್‌ಲೈನ್ ಮೇಲೆ ನಿರ್ಮಾಣ ಬೇಡ ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ.

ಬೆಂಗಳೂರು: ರಾಗಿಗುಡ್ಡ - ಕನಕಪುರ ಎಲಿವೇಟೆಡ್‌ ಕಾರಿಡಾರ್‌ ವಿರುದ್ಧ ಶಾಂತಿಯುತವಾದ ಮಾನವ ಸರಪಳಿ ಪ್ರತಿಭಟನೆಯನ್ನು ಅ.11ರಂದು ಬೆಳ್ಳಗೆ 11ಕ್ಕೆ ನಗರದ ರೋಸ್‌ ಗಾರ್ಡನ್‌ ಪಕ್ಕ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ಯಾವದೇ ಗಲಾಟೆಗಳು ಇರುವುದಿಲ್ಲ, ಮತ್ತೆ ಯಾವುದೇ ಸಂಚಾರಕ್ಕೆ ಮತ್ತು ನಾಗರಿಕರ ಓಡಾಟಕ್ಕೆ ತೊಂದರೆಯಾಗುವುದಲ್ಲ.

ಪ್ರತಿಭಟನಾಕಾರರ ಬೇಡಿಕೆಗಳು ಏನು?

- ಈಗಿರುವ ಮೆಟ್ರೋ ಹಸಿರುಮಾರ್ಗಕ್ಕೆ ಸಮಾಂತರವಾಗಿ ಎಲಿವೇಟೆಡ್‌ ಕಾರಿಡಾರ್‌ ಬೇಡ.ಬದಲಿಗೆ ಮೇಟ್ರೋ ಸಂಚಾರದ ಆವರ್ತನ ಪಾರ್ಕಿಂಗ್‌ ಮತ್ತು ಕೊನೆಯ ಹಂತದ ಸಂಪರ್ಕವನ್ನು ಹೆಚ್ಚಿಸಬೇಕು.

- ಕಾನೂನಿನ ಪ್ರಕಾರ ಕಾವೇರಿ ಪೈಪ್‌ಲೈನ್ ಮೇಲೆ ಯಾವುದೇ ರಚನೆಗಳಿಗೆ ಅವಕಾಶವಿಲ್ಲ. ವಿಶೇಷವಾಗಿ ವಸತಿ ಪ್ರದೇಶಗಳಲ್ಲಿ ಕಾರಿಡಾರ್‌ನ ಅಗತ್ಯವಿಲ್ಲ.

ಕಾರಿಡಾರ್ ಎಲ್ಲಿಂದ ಎಲ್ಲಿಗೆ?

ಮಾರೇನಹಳ್ಳಿ ಮುಖ್ಯ ರಸ್ತೆಯ ರಾಗಿಗುಡ್ಡ ಜಂಕ್ಷನ್‌ನಿಂದ ತಲಘಟ್ಟಪುರ ಜಂಕ್ಷನ್ ಬಳಿಯ ಜಲಮಂಡಳಿ ಪೈಪ್‌ಲೈನ್ ರಸ್ತೆಯ ಮೂಲಕ ನೈಸ್ ರೋಡ್ ಜಂಕ್ಷನ್‌ನಿಂದ ಸ್ವಲ್ಪ ಮುಂದೆ ಕಾರಿಡಾರ್ ಅಂತ್ಯವಾಗುತ್ತದೆ.

ಕಾರಿಡಾರ್‌ನಿಂದ ಯಾರಿಗೆಲ್ಲಾ ಅನುಕೂ?

ನೂತನ ಕಾರಿಡಾರ್ ನಿರ್ಮಾಣದಿಂದ ಸಿಲ್ಕ್‌ಬೋರ್ಡ್ ಜಂಕ್ಷನ್ ಕಡೆಯಿಂದ ಕನಕಪುರ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಈ ಮೇಲ್ಸೇತುವೆ ಅನುಕೂಲವಾಗಲಿದೆ. ಅಲ್ಲದೇ ನೈಸ್ ರಸ್ತೆಗೆ ಕಾರಿಡಾರ್ ಸೇರುವುದರಿಂದ ತುಮಕೂರು ರಸ್ತೆ, ಮೈಸೂರು ರಸ್ತೆ, ಹೊಸೂರು ರಸ್ತೆ ಸೇರಿದಂತೆ ವಿವಿಧ ಭಾಗಗಳಿಗೆ ತೆರಳುವ ಜನರಿಗೆ ಅನುಕೂಲವಾಗಿದೆ. ಕನಕಪುರ ರಸ್ತೆಗೆ ಪರ್ಯಾಯವಾಗಿ ಸಮನಾಂತರವಾಗಿ ಈ ಕಾರಿಡಾರ್ ನಿರ್ಮಾಣವಾಗಲಿದೆ.

ಇದನ್ನೂ ಓದಿ: 1,583 ಕೋಟಿಯ ಯೋಜನೆಗೆ 4,756 ಕೋಟಿ ಟೋಲ್ ಸಂಗ್ರಹಿಸಿ ದರೋಡೆ: NICE ಸಂಸ್ಥೆಯ ವಿರುದ್ಧ ದಾಖಲೆ ಸಮೇತ HDK ವಾಗ್ದಾಳಿ

ಇದನ್ನೂ ಓದಿ: 3,536 ಕೋಟಿ ರೂಪಾಯಿ ವೆಚ್ಚದಲ್ಲಿ ಯಶವಂತಪುರ-ಕೆಆರ್‌ ಪುರ ನಡುವೆ 28 ಕಿ.ಮೀ ಟೋಲ್‌ ಕಾರಿಡಾರ್‌

PREV
Read more Articles on
click me!

Recommended Stories

KSRTC Smart Card: ಇನ್ಮುಂದೆ ರಾಜ್ಯದ ಸರ್ಕಾರಿ ಬಸ್‌ಗಳಿಗೂ ಮೆಟ್ರೋ ರೀತಿ ಸ್ಮಾರ್ಟ್‌ಕಾರ್ಡ್‌! ಹೇಗೆ ರೀಚಾರ್ಜ್ ಮಾಡುವುದು?
Bengaluru: ಮನೆ ಮುಂದೆ ವಾಹನ ನಿಲ್ಲಿಸುವ ಮುನ್ನ ಈ ಹೊಸ ನಿಯಮ ತಿಳಿಯಿರಿ! ಸಂಚಾರ ದಟ್ಟಣೆ ನಿಯಂತ್ರಣ