Bengaluru: ಮನೆ ಮುಂದೆ ವಾಹನ ನಿಲ್ಲಿಸುವ ಮುನ್ನ ಈ ಹೊಸ ನಿಯಮ ತಿಳಿಯಿರಿ! ಸಂಚಾರ ದಟ್ಟಣೆ ನಿಯಂತ್ರಣ

Published : Oct 10, 2026, 07:35 AM IST
bengaluru parking pass

ಸಾರಾಂಶ

Bengaluru: ಜಯನಗರದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಶೀಘ್ರದಲ್ಲೇ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ. ವಾಣಿಜ್ಯ ರಸ್ತೆಗಳಲ್ಲಿ ಮಾತ್ರ ಬೆಳಗ್ಗೆ 9ರಿಂದ ರಾತ್ರಿ 10ರವರೆಗೆ ಪಾರ್ಕಿಂಗ್ ಶುಲ್ಕ ಅನ್ವಯವಾಗಲಿದೆ.

ಬೆಂಗಳೂರು: ನಗರದ ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಜಯನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಿಸಲು ಹಾಗೂ ವಾಹನ ಸವಾರರಿಗೆ ಸುಲಭವಾಗಿ ನಿಲುಗಡೆ ಜಾಗ ಲಭ್ಯವಾಗುವಂತೆ ಮಾಡಲು ಶೀಘ್ರ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್.ರಮೇಶ್ ತಿಳಿಸಿದರು.

ಮನೆಗಳ ಮುಂದೆ ವಾಹನ ನಿಲ್ಲಿಸಲು ಯಾವುದೇ ಶುಲ್ಕ ಇಲ್ಲ

ದಕ್ಷಿಣ ಪಾಲಿಕೆ ಕಚೇರಿಯಲ್ಲಿ ಶುಕ್ರವಾರ ನಡೆದ ಅಧಿಕಾರಿಗಳು, ಖಾಸಗಿ ಸಂಸ್ಥೆಗಳು,ವ್ಯಾಪಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಯನಗರದ ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯನ್ನು ಕೇವಲ ಮುಖ್ಯ ವಾಣಿಜ್ಯ ರಸ್ತೆಗಳಲ್ಲಿ ಮಾತ್ರ ಜಾರಿಗೆ ತರಲಾಗುತ್ತಿದ್ದು, ಜಯನಗರದಲ್ಲಿ ನಾಗರೀಕರು ತಮ್ಮ ವಾಸದ ಮನೆಗಳ ಮುಂದೆ ವಾಹನ ನಿಲ್ಲಿಸಲು ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನು ವಾಣಿಜ್ಯ ರಸ್ತೆಗಳಲ್ಲಿ ಬೆಳಗ್ಗೆ 9 ರಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಪಾರ್ಕಿಂಗ್ ಶುಲ್ಕ ಅನ್ವಯವಾಗಲಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ತರಲಾಗಿರುವ ಈ ಯೋಜನೆಗೆ ವ್ಯಾಪಾರಿಗಳು, ಗ್ರಾಹಕರು ಸಹಕರಿಸಬೇಕು ಎಂದು ಆಯುಕ್ತರು ಮನವಿ ಮಾಡಿದರು.

ಸ್ಮಾರ್ಟ್ ಪಾರ್ಕಿಂಗ್ ಹಿನ್ನೆಲೆಯಲ್ಲಿ ಜಯನಗರ ಟ್ರೇಡರ್ಸ್ ಅಸೋಸಿಯೇಷನ್ ಮುಖಂಡರು ಪಾರ್ಕಿಂಗ್ ಶುಲ್ಕ ತಗ್ಗಿಸಲು, ವಾಹನಗಳಿಗೆ ಮೊದಲ 30 ನಿಮಿಷಗಳ ಕಾಲ ಉಚಿತ ಪಾರ್ಕಿಂಗ್ ಸೇರಿದಂತೆ ಇನ್ನಿತರ ಅಹವಾಲುಗಳನ್ನು ಆಯುಕ್ತರ ಗಮನಕ್ಕೆ ತಂದರು.

ಸಾಧಕ ಬಾಧಕಗಳ ಚರ್ಚೆ

ವ್ಯಾಪಾರಿಗಳ ಅಹವಾಲುಗಳ ಅನುಷ್ಠಾನ ಕುರಿತಂತೆ ವಾಸ್ತವವಾಗಿ ಉಂಟಾಗುವ ಸಾಧಕ ಬಾಧಕಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ತಿಳಿಸಿದರು. ಈ ವೇಳೆ ಮುಖ್ಯ ಎಂಜಿನಿಯರ್ ಬಸವರಾಜ್ ಕಬಾಡೆ, ಸಂಚಾರ ಪೊಲೀಸರು, ಯೋಜನಾ ವಿಭಾಗದ ಎಂಜಿನಿಯರ್‌ಗಳು ಹಾಗೂ ವರ್ತಕ ಸಂಘಟನೆಗಳ ಪ್ರತಿನಿಧಿಗಳು ಇದ್ದರು.

PREV
Read more Articles on
click me!

Recommended Stories

ಜಾಲಹಳ್ಳಿ ಕ್ರಾಸ್ ಕೆಳಸೇತುವೆ ಕಾಮಗಾರಿ; 26 ಆಸ್ತಿಗಳ ಭೂ ಸ್ವಾಧೀನ ಪ್ರಕ್ರಿಯೆ ಆರಂಭಕ್ಕೆ ಸೂಚನೆ
ಬೆಂಗಳೂರು ಟ್ರಾಫಿಕಲ್ಲಿ ಕಳೆವ ಸಮಯ 1 ತಿಂಗಳ ದುಡಿಮೆಗೆ ಸಮ; ಸಾವಿನ ಅಪಾಯ ಶೇ.7.5ರಷ್ಟು ಹೆಚ್ಚಳ