ಕೋತಿಗಳ ತಾಣವಾಯ್ತಾ ನಮ್ಮ ಮೆಟ್ರೋ..?

By Ravi NayakFirst Published Jul 19, 2022, 4:12 PM IST
Highlights

ನಮ್ಮ ಮೆಟ್ರೋದಲ್ಲಿ  ಪ್ರಯಾಣಿಸುವವರಿಗೆ ಇಷ್ಟು ದಿನ ಪಾರಿವಾಳದ ಹಿಕ್ಕೆಗಳ ಕಾಟವಿತ್ತು ಅದರ ಜತೆಗೆ ಇದೀಗ ಮತ್ತೊಂದು ಕಾಟ ಶುರುವಾಗಿದೆ. ಮೆಟ್ರೋದಲ್ಲಿ ಕೋತಿಗಳ ಕಾಟ ಹೆಚ್ಚಾಗಿದ್ದು ದಿನನಿತ್ಯ ಪ್ರಯಾಣಿಕರಿಗೆ ತೊಂದರೆ ಕೊಡುತ್ತಿವೆ. ಮೆಟ್ರೋದಲ್ಲಿ ಓಡಾಡಲು ಹೆದರುತ್ತಿದ್ದಾರೆ.

ವರದಿ; ಮಮತಾ ಮರ್ಧಾಳ ಏಷ್ಯಾನೆಟ್ ಸುವರ್ಣನ್ಯೂಸ್

ಬೆಂಗಳೂರು (ಜು19); ನಮ್ಮ ಮೆಟ್ರೋದಲ್ಲಿ ಪ್ರಯಾಣಿಸೋ ಪ್ರಯಾಣಿಕರಿಗೆ ಈಗ ಕೋತಿಗಳ ಕಾಟ ಶುರುವಾಗಿದೆ. ಟ್ರಾಫಿಕ್ ಕಿರಿಕಿರಿಗೆ ಬ್ರೇಕ್ ಹಾಕಿ ನೆಮ್ಮದಿಯಿಂದ ನಮ್ಮ ಮೆಟ್ರೋ ರೈಲಲ್ಲಿ ಪ್ರಯಾಣ ಮಾಡೋಣ ಅಂದುಕೊಂಡವರಿಗೆ ಶುರುವಾಯ್ತು ಮಂಗಗಳ ಸಮಸ್ಯೆ. ಹೌದು ನಮ್ಮ ಮೆಟ್ರೋ ಸ್ಟೇಷನಲ್ಲಿ ಮಂಗಗಳಿವೆ ಎಚ್ಚರಿಕೆ ಎಂಬ ಬೋರ್ಡ್ ಹಾಕಿ ಪ್ರಯಾಣಿಕರಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ. ಅಲ್ಲದೆ ಮೆಟ್ರೋ ಸ್ಟೇಷನ್ ಒಳಗೆ ಕೋತಿಗಳ ಓಡಾಟ ಜಾಸ್ತಿಯಾಗಿದ್ದು BMRCL ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹಾಡಹಗಲೇ ಲಾಂಗ್ ತೋರಿಸಿ ದರೋಡೆ -ಸಿಸಿಟಿವಿಯಲ್ಲಿ ಸೆರೆ ಆಯ್ತು ಕೃತ್ಯ!

 ಹೀಗಾಗಿ ಕೋತಿಗಳ ಅಟ್ಟಹಾಸಕ್ಕೆ ಪ್ರಯಾಣಿಕರು ಭಯಪಡದಂತೆ ಮನವರಿಕೆ ಮಾಡಲಾಗ್ತಿದೆ. ಜನರ ಮೇಲೆ ಹಠಾತ್ ದಾಳಿ ಮಾಡುವ ಸಾಧ್ಯತೆಯಿದ್ದು ನಾಮಫಲಕ ಹಾಕಲಾಗಿದೆ. ಮಾಗಡಿ ಮೆಟ್ರೋ ಸ್ಟೇಷನ್ ನಲ್ಲಿ ಮಂಗನ ಕಾಟಕ್ಕೆ ಬೆದರಿ ನಮ್ಮ ಮೆಟ್ರೋದಿಂದ ಎಚ್ಚರಿಕೆ ಸಂದೇಶ ಅಳವಡಿಸಲಾಗಿದೆ.  

 ನಮ್ಮ ಮೆಟ್ರೋ, ಇದು ಬೆಂಗಳೂರಿನ  ಟ್ರಾಫಿಕ್ ಸಮಸ್ಯೆ, ಮಾಲಿನ್ಯ ಸಮಸ್ಯೆ ಸೇರಿ ಹಲವು ಸಮಸ್ಯೆಗಳಿಗೆ ಟಾನಿಕ್ನಂತೆ ಬಂದ ಟ್ರಾನ್ಸ್ ಪೋರ್ಟ್ ಸಿಸ್ಟಂ ಹಳಿಗಿಳಿದ ಕೆಲವೇ ವರ್ಷಗಳಲ್ಲಿ ನಿರೀಕ್ಷೆಗೂ ಮೀರಿ ಜನಪ್ರೀಯತೆಯನ್ನು ಗಳಿಸುವಲ್ಲಿ ಸಫಲವಾಗಿತ್ತು . ದಿನಕ್ಕೆ 40 ಲಕ್ಷ ಪ್ರಯಾಣಿಕರಿದ್ರೂ ನಷ್ಟದ ಸವಾರಿ ಮಾಡ್ತಿದ್ದ ಬಿಎಂಟಿಸಿ ನಡುವೆ ನಮ್ಮ ಮೆಟ್ರೋ ಜಸ್ಟ್ 5 ಲಕ್ಷ ಪ್ರಯಾಣಿಕರನ್ನ ಇಟ್ಟುಕೊಂಡು ಲಾಭದಲ್ಲಿದ್ದುಕೊಂಡೆ ಸುದ್ದಿಯಲ್ಲಿದೆ. ಕೋವಿಡ್ ನಿಂದಾಗಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕೊಂಚ ಕಡಿಮೆಯಾಗಿತ್ತು. ಈಗ ನಮ್ಮ ಮೆಟ್ರೋದಲ್ಲಿ ನಿತ್ಯ ಪ್ರಯಾಣಿಕರ ಸಂಖ್ಯೆಯಲ್ಲೆ ಹೆಚ್ಚಳವಾಗ್ತಿದೆ. ಮೆಟ್ರೋದತ್ತ  ಪ್ರಯಾಣಿಕರನ್ನು ಸೆಳೆಯಲು BMRCL ಮೂರು ಹಾಗೂ ಐದು ದಿನಗಳ ಮೆಟ್ರೋ ಪಾಸ್ಗಳನ್ನು ಪರಿಚಯಿಸಿದೆ. ಹೀಗಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಕೊಂಚ ಏರಿಕೆಯಾಗ್ತಿದೆ. ಆದರೆ ಮೆಟ್ರೋ ಪ್ರಯಾಣ ಆರಾಮಾದಾಯಕವಾಗಿದ್ದರೂ ಮೆಟ್ರೋ ನಿಲ್ದಾಣದೊಳಗೆ ವಿಪರೀತ ಎನಿಸುವಷ್ಟು ಪರಿವಾಳೂ ಇವೆ. ಪ್ರಯಾಣಿಕರಿ ಪರಿವಾಳಗಳ ಹಿಕ್ಕೆಯ ವಾಸನೆಯಿಂದ ಅಲರ್ಜಿ ಉಂಟಾಗುತ್ತಿದೆ. ನಮ್ಮ ಮೆಟ್ರೋ ಪರಿವಾಳ ನಿಯಂತ್ರಣಕ್ಕಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ನಮ್ಮ ಮೆಟ್ರೋಗೆ ಕೋತಿಗಳ ಕಾಟವೂ ಸೇರಿಕೊಂಡು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಕಿರಿಕಿರಿಯನ್ನುಂಟುಮಾಡುತ್ತಿರುವುದರಿಂದ ಮೆಟ್ರೋ ಪ್ರಯಾಣಕ್ಕೆ ಹಿಂದೇಟು ಹಾಕುವ ಸಾಧ್ಯತೆ. ಪರಿವಾಳ ಮತ್ತು ಮಂಗಗಳ ಕಾಟಕ್ಕೆ ಪರಿಹಾರ ಸಿಗಲಿ. 

ಇದನ್ನೂ ಓದಿ: ಹೆಬ್ಬಾಳ ಜಂಕ್ಷನ್‌ ಸಮೀಪ ಪಾದಚಾರಿ ಸುರಂಗ ಮಾರ್ಗ ನಿರ್ಮಾಣಕ್ಕೆ ಸೂಚನೆ

ಕಂಟೋನ್ಮೆಂಟ್‌ ನಿಲ್ದಾಣದಿಂದ ಪಾಟರಿ ಟೌನ್‌ ವರೆಗೆ ಮೆಟ್ರೋ ಸುರಂಗ ಸಿದ್ಧ:

ನಮ್ಮ ಮೆಟ್ರೋ ಎರಡನೇ ಹಂತದ ವಿಸ್ತರಣೆ ಮಾರ್ಗದ ರೀಚ್‌ 6ರ ಕಾಮಗಾರಿ ಭರದಿಂದ ಸಾಗುತ್ತಿದ್ದು, ಕಂಟೋನ್ಮೆಂಟ್‌ ನಿಲ್ದಾಣದಿಂದ ಪಾಟರಿ ಟೌನ್‌ವರೆಗೆ ಸುರಂಗ ಕೊರೆದ ಯಂತ್ರ (ಟಿಬಿಎಂ) ಇತ್ತೀಚೆಗ ಹೊರ ಬಂದಿದೆ. 2021ರ ಡಿಸೆಂಬರ್‌ 22ರಂದು ಕಂಟೋನ್ಮೆಂಟ್‌ ನಿಲ್ದಾಣದಿಂದ ಕಾಮಗಾರಿ ಆರಂಭಿಸಿದ್ದ ‘ಊರ್ಜಾ’ ಆರು ತಿಂಗಳಲ್ಲಿ 900 ಮೀಟರ್‌ ಸುರಂಗ ಕೊರೆದು ಹೊರ ಬಂದಿದೆ.

ಇದಕ್ಕೂ ಮೊದಲು 2020ರ ಜುಲೈಯಲ್ಲಿ ‘ಊರ್ಜಾ’ ಕಂಟೋನ್ಮೆಂಟ್‌ನಿಂದ ಶಿವಾಜಿ ನಗರದ ತನಕ 855 ಮೀಟರ್‌ ಸುರಂಗ ಕೊರೆದು 2021ರ ಸೆಪ್ಟೆಂಬರ್‌ 22ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಉಪಸ್ಥಿತಿಯಲ್ಲಿ ಹೊರ ಬಂದಿತ್ತು. ನಾಗವಾರ-ಗೊಟ್ಟಿಗೆರೆ ಮಾರ್ಗದಲ್ಲಿ ಊರ್ಜಾ ಸೇರಿದಂತೆ ಒಟ್ಟು 9 ಟಿಬಿಎಂಗಳು ಸುರಂಗ ಕೊರೆಯುತ್ತಿವೆ. 21.25 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಡೇರಿ ವೃತ್ತದಿಂದ ನಾಗವಾರದ ತನಕ 13.79 ಕಿಮೀ ಸುರಂಗದೊಳಗೆ ಮೆಟ್ರೋ ಸಂಚರಿಸಲಿದೆ. ಈವರಗೆ ಶೇ.30ರಷ್ಟುಸುರಂಗ ಕಾಮಗಾರಿ ನಡೆದಿದೆ.

click me!