ಗ್ರಾಮೀಣ ಪ್ರದೇಶದಲ್ಲಿ ನೆಲೆ ನಿಂತು ಮಕ್ಕಳಿಗೆ ಅನ್ನ, ಆರೋಗ್ಯ ಮತ್ತು ಶಿಕ್ಷಣ ದಾಸೋಹಗಳನ್ನು ನೆರವೇರಿಸಿದ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳು ಕ್ರಾಂತಿಪುರುಷರೆನಿಸಿದ್ದಾರೆ
ಬೆಂಗಳೂರು (ಜು.18): ಗ್ರಾಮೀಣ ಪ್ರದೇಶದಲ್ಲಿ ನೆಲೆ ನಿಂತು ಮಕ್ಕಳಿಗೆ ಅನ್ನ, ಆರೋಗ್ಯ ಮತ್ತು ಶಿಕ್ಷಣ ದಾಸೋಹಗಳನ್ನು ನೆರವೇರಿಸಿದ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳು ಕ್ರಾಂತಿಪುರುಷರು' ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ (Dr. Ashwath Narayan) ಬಣ್ಣಿಸಿದ್ದಾರೆ. ಮಹಾಲಕ್ಷ್ಮಿ ಲೇಔಟ್(Mahalakshmi Layout) ಕ್ಷೇತ್ರದ ವ್ಯಾಪ್ತಿಯಲ್ಲಿನ ವೃಷಭಾವತಿ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಬಾಲಗಂಗಾಧರನಾಥ ಸ್ವಾಮೀಜಿ ಉದ್ಯಾನದ ಉದ್ಘಾಟನಾ ಸಮಾರಂಭದಲ್ಲಿ ಅವರು ಸೋಮವಾರ ಮಾತನಾಡಿದರು.
ಬಾಲಗಂಗಾಧರನಾಥರು(Balagangadharanatha Swamiji) ಕಟ್ಟಿದ ಶಿಕ್ಷಣ (Education) ಸಂಸ್ಥೆಗಳು ಇಂದು ನಾಡಿನಲ್ಲಿ ಶೈಕ್ಷಣಿಕ ಕ್ರಾಂತಿ ಉಂಟುಮಾಡಿವೆ. ಈ ಸಂಸ್ಥೆಗಳಲ್ಲಿ 1.53 ಲಕ್ಷ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರಲ್ಲಿ 7 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ವರ್ಷ ಹತ್ತನೇ ತರಗತಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಅಂಕ ಗಳಿಸಿರುವುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು. ಬೆಳ್ಳೂರಿನಂತಹ ಗ್ರಾಮವನ್ನು ಕೇಂದ್ರವಾಗಿಸಿಕೊಂಡು ವೈದ್ಯಕೀಯ ಕಾಲೇಜನ್ನು ನಿರ್ಮಿಸಿರುವುದು ಅವರ ಸಾಮಾಜಿಕ ಬದ್ಧತೆಯ ಸಂಕೇತವಾಗಿದೆ ಎಂದು ಅವರು ತಿಳಿಸಿದರು. ಇದನ್ನೂ ಓದಿ:ಅಭಿವೃದ್ಧಿಗಾಗಿ ಶೀಘ್ರ ಬಿಬಿಎಂಪಿ ಚುನಾವಣೆ: ಸಿಎಂ ಬೊಮ್ಮಾಯಿ
ಅವರ ಹಾದಿಯಲ್ಲೇ ಈಗಿನ ಸ್ವಾಮೀಜಿಗಳು ಕೂಡ ಸಮುದಾಯವನ್ನು ಕಾಪಾಡುತ್ತಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕು ಎಂದು ಅವರು ಆಶಿಸಿದರು. ಅಷ್ಟೇ ಅಲ್ಲದೇ ಬಾಲ ಗಂಗಾಧರನಾಥ ಮಹಸ್ವಾಮಿಗಳು ಕಾರ್ಯಕ್ರಮದಲ್ಲಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ,(Nirmalanandanatha Swamiji) ಶ್ರೀ ಸೌಮ್ಯನಾಥ ಸ್ವಾಮೀಜಿ,(Sri Soumyanath Swamiji ) ಅಬಕಾರಿ ಸಚಿವ ಗೋಪಾಲಯ್ಯ(K.Gopalaiah), ಪಾಲಿಕೆ ಮಾಜಿ ಸದಸ್ಯರಾದ ಪದ್ಮಾವತಿ ಶ್ರೀನಿವಾಸ್(Padmavati shrinivas), ನಾಗರತ್ನ ಲೋಕೇಶ್(Nagaratna Venkatesh) ಉಪಸ್ಥಿತರಿದ್ದರು.