ಬೆಂಗಳೂರಿನ ಪ್ರಸಿದ್ಧ ಕೆಆರ್‌ ಮಾರುಕಟ್ಟೆಗೆ ಇನ್ನುಂದೆ ಫ್ರೀ ಎಂಟ್ರಿ ಇಲ್ಲ, ಬರಲಿದೆ ಡಿಜಿಟಲ್‌ ಟೋಲ್‌ಗೇಟ್‌

Published : Sep 02, 2026, 03:49 PM IST
Bengaluru KR Market

ಸಾರಾಂಶ

ಬೆಂಗಳೂರಿನ ಐತಿಹಾಸಿಕ ಕೆ.ಆರ್. ಮಾರ್ಕೆಟ್‌ನಲ್ಲಿ ಇನ್ನು ಮುಂದೆ ಸರಕು ಸಾಗಣೆ ವಾಹನಗಳು ಮತ್ತು ವ್ಯಾಪಾರಿಗಳಿಗೆ ಡಿಜಿಟಲ್ ಪ್ರವೇಶ ಶುಲ್ಕ ಕಡ್ಡಾಯವಾಗಲಿದೆ. ಈ ಹೊಸ ವ್ಯವಸ್ಥೆಯು ವಾಹನಗಳ ಪ್ರವೇಶಕ್ಕೆ ಹಾಗೂ ತರಲಾಗುವ ಸರಕುಗಳ ಪ್ರಮಾಣಕ್ಕೆ ಅನುಗುಣವಾಗಿ ಪ್ರತ್ಯೇಕ ಶುಲ್ಕವನ್ನು ನಿಗದಿಪಡಿಸಿದೆ.

ಬೆಂಗಳೂರು (ಸೆ.2): ರಾಜ್ಯ ರಾಜಧಾನಿಯ ಅತ್ಯಂತ ಐತಿಹಾಸಿಕ ಹಾಗೂ ಜನನಿಬಿಡ ಸಗಟು ಮಾರುಕಟ್ಟೆಯಾದ ಕೃಷ್ಣರಾಜೇಂದ್ರ (ಕೆ.ಆರ್.) ಮಾರ್ಕೆಟ್‌ಗೆ ಪ್ರವೇಶಿಸುವ ಸರಕು ಸಾಗಣೆ ವಾಹನಗಳಿಗೆ ಹಾಗೂ ತರಕಾರಿ, ಹೂವು-ಹಣ್ಣು ತರುವ ವ್ಯಾಪಾರಿಗಳಿಗೆ ಇನ್ಮುಂದೆ ಪ್ರವೇಶ ಶುಲ್ಕ ಕಡ್ಡಾಯವಾಗಲಿದೆ. ಮಾರುಕಟ್ಟೆಯ ಸಾರಿಗೆ ವ್ಯವಸ್ಥೆಯನ್ನು ಸುಗಮಗೊಳಿಸಲು ಹಾಗೂ ಆದಾಯ ಸೋರಿಕೆಯನ್ನು ತಡೆಯಲು ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್ (BCCC) 10 ವರ್ಷಗಳ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಡಿಜಿಟಲ್ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಸ್ತಾವನೆ ಸಲ್ಲಿಸಿದೆ.

ಈ ಹೊಸ ಯೋಜನೆಯ ಪ್ರಕಾರ, ಕೆ.ಆರ್. ಮಾರ್ಕೆಟ್‌ಗೆ ಆಗಮಿಸುವ ಸರಕು ವಾಹನಗಳಿಗೆ ನಿಗದಿತ ಎಂಟ್ರಿ ಫೀಸ್ ಇರಲಿದ್ದು, ವ್ಯಾಪಾರಿಗಳು ಮಾರುಕಟ್ಟೆಗೆ ತರುವ ಸರಕು ಮತ್ತು ಕೃಷಿ ಉತ್ಪನ್ನಗಳ ಪ್ರಮಾಣಕ್ಕೆ (Quantity) ಅನುಗುಣವಾಗಿ ಪ್ರತ್ಯೇಕ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ವಾಹನಗಳಿಗೆ ನಿಗದಿತ ಎಂಟ್ರಿ ಫೀಸ್‌ ದರ ಪಟ್ಟಿ

  • ಟ್ರಕ್/6-ಚಕ್ರ ಅಥವಾ ಅದಕ್ಕಿಂತ ದೊಡ್ಡ ವಾಹನಗಳು: ಪ್ರತಿ ಎಂಟ್ರಿ/ಎಕ್ಸಿಟ್‌ಗೆ ₹350
  • 4-ಚಕ್ರದ ಸರಕು ವಾಹನಗಳು: ಪ್ರತಿ ಎಂಟ್ರಿ/ಎಕ್ಸಿಟ್‌ಗೆ ₹100
  • 3-ಚಕ್ರದ ಸರಕು ವಾಹನಗಳು (ಆಟೋ ಸರಕು): ಪ್ರತಿ ಎಂಟ್ರಿ/ಎಕ್ಸಿಟ್‌ಗೆ ₹75

ಸರಕು ಮತ್ತು ಉತ್ಪನ್ನಗಳ ಮೇಲಿನ ಹೆಚ್ಚುವರಿ ಶುಲ್ಕ

ವಾಹನ ಶುಲ್ಕದ ಹೊರತಾಗಿ, ಮಾರುಕಟ್ಟೆಗೆ ತರಲಾಗುವ ಕೃಷಿ ಮತ್ತು ವಾಣಿಜ್ಯ ಉತ್ಪನ್ನಗಳಿಗೂ ಪ್ರತ್ಯೇಕ ಶುಲ್ಕ ನಿಗದಿಪಡಿಸಲಾಗಿದೆ

  • ಹಣ್ಣು, ತರಕಾರಿ, ಹೂವು, ಸೊಪ್ಪು, ಹತ್ತಿ, ತೆಂಗಿನಕಾಯಿ ಸೇರಿದಂತೆ ಇತರೆ ಕೃಷಿ ಉತ್ಪನ್ನಗಳ ಪ್ರತಿ ಚೀಲ ಅಥವಾ ಕಟ್ಟು (Bag/Bundle) ಗೆ ₹5 ಶುಲ್ಕ.
  • ಕೋಳಿ ಮಾಂಸ (ಪೌಲ್ಟ್ರಿ), ಮಾಂಸ ಮತ್ತು ಸೀಫುಡ್ ಉತ್ಪನ್ನಗಳ ಪ್ರತಿ ಬಾಕ್ಸ್ ಅಥವಾ ಟ್ರೇ (Box/Tray) ಗೆ ₹10 ಶುಲ್ಕ.

ಸಂಪೂರ್ಣ ಡಿಜಿಟಲ್ ಪಾವತಿ ವ್ಯವಸ್ಥೆ

ಮಾರುಕಟ್ಟೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಮತ್ತು ಶುಲ್ಕ ಸಂಗ್ರಹವನ್ನು ಆಧುನಿಕಗೊಳಿಸಲು ಯುಪಿಐ (UPI), ಫಾಸ್ಟಾಗ್‌ (FASTag), ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು ಹಾಗೂ ಪಿಒಎಸ್‌ (POS) ಮೆಷಿನ್‌ಗಳ ಮೂಲಕವೇ ಡಿಜಿಟಲ್ ಮಾದರಿಯಲ್ಲಿ ಹಣ ಸಂಗ್ರಹಿಸಲಾಗುತ್ತದೆ. ಪ್ರತಿಯೊಂದು ವಹಿವಾಟಿಗೂ ಎಲೆಕ್ಟ್ರಾನಿಕ್ ರಸೀದಿಯನ್ನು (e-Receipt) ನೀಡಲಾಗುತ್ತದೆ.

ಶುಲ್ಕ ವಂಚಿಸಿದರೆ ಕಠಿಣ ದಂಡ ಮತ್ತು ವಸ್ತುಗಳ ಜಪ್ತಿ!

ಶುಲ್ಕ ಪಾವತಿಸದೆ ನುಸುಳುವುದು, ವಂಚಿಸುವುದು ಅಥವಾ ತಂದಿರುವ ಸರಕಿನ ಪ್ರಮಾಣವನ್ನು ತಪ್ಪಾಗಿ ಘೋಷಿಸಿದರೆ (Under-declaration) ಕಾರ್ಪೊರೇಷನ್ ಭಾರಿ ದಂಡ ವಿಧಿಸಲಿದೆ.

  • ಮೊದಲ ಬಾರಿಯ ನಿಯಮ ಉಲ್ಲಂಘನೆಗೆ: ₹2,500 ದಂಡ
  • ಮೂರನೇ ಬಾರಿಯ ಉಲ್ಲಂಘನೆಗೆ: ₹10,000 ವರೆಗೆ ದಂಡ ಹಾಗೂ ತಂದಿರುವ ಸರಕುಗಳನ್ನು ಸಂಪೂರ್ಣವಾಗಿ ಮುಟ್ಟುಗೋಲು (Confiscation) ಹಾಕಿಕೊಳ್ಳುವ ಎಚ್ಚರಿಕೆಯನ್ನು ಬಿಬಿಸಿಎಸಿ ನೀಡಿದೆ.

PREV
Read more Articles on
click me!

Recommended Stories

Aero India 2027: ಬೆಂಗಳೂರಿನಲ್ಲಿ 16ನೇ ಆವೃತ್ತಿಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ದಿನಾಂಕ ಘೋಷಣೆ
KPSC ಹಗರಣ: ಸಿಐಡಿ ಕಸ್ಟಡಿಯಲ್ಲಿ ಬಸವರಾಜ ಕನ್ನಾಳೆಗೆ ಸೊಳ್ಳೆ ಟ್ರೀಟ್‌ಮೆಂಟ್! ₹35 ಲಕ್ಷ ಡೀಲ್, 70 ಪ್ರಶ್ನೆ ಲೀಕ್!