Aero India 2027: ಬೆಂಗಳೂರಿನಲ್ಲಿ 16ನೇ ಆವೃತ್ತಿಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ದಿನಾಂಕ ಘೋಷಣೆ

Published : Sep 02, 2026, 01:54 PM IST
Aero India

ಸಾರಾಂಶ

ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ 'ಏರೋ ಇಂಡಿಯಾ' 16ನೇ ಆವೃತ್ತಿಯು ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 8 ರಿಂದ 12 ರವರೆಗೆ ನಡೆಯಲಿದೆ. 100ಕ್ಕೂ ಹೆಚ್ಚು ರಾಷ್ಟ್ರಗಳು ಭಾಗವಹಿಸುವ ಈ ಮೇಳದಲ್ಲಿ, ಕೊನೆಯ ಎರಡು ದಿನ ಸಾರ್ವಜನಿಕರಿಗೆ ಪ್ರವೇಶವಿದ್ದು, ಸ್ವದೇಶಿ 'ತೇಜಸ್' ಮತ್ತು 'ಧ್ರುವ' ಪ್ರಮುಖ ಆಕರ್ಷಣೆಯಾಗಲಿವೆ.

ಬೆಂಗಳೂರು: ಏಷ್ಯಾದ ಅತ್ಯಂತ ದೊಡ್ಡ ಏರೋಸ್ಪೇಸ್ ಮತ್ತು ರಕ್ಷಣಾ ಪ್ರದರ್ಶನವಾದ 'ಏರೋ ಇಂಡಿಯಾ' (Aero India) 16 ನೇ ಆವೃತ್ತಿಯ ದಿನಾಂಕಗಳು ಅಧಿಕೃತವಾಗಿ ಘೋಷಣೆಯಾಗಿವೆ. ಸಿಲಿಕಾನ್ ಸಿಟಿ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 8 ರಿಂದ 12 ರವರೆಗೆ ಒಟ್ಟು 5 ದಿನಗಳ ಕಾಲ ಈ ವೈಮಾನಿಕ ಪ್ರದರ್ಶನ ನಡೆಯಲಿದೆ.

ಪ್ರದರ್ಶನದ ಮೊದಲ 3 ದಿನಗಳು ಉದ್ಯಮಿಗಳು, ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರು ಮತ್ತು ಆಹ್ವಾನಿತರಿಗೆ ಸೀಮಿತವಾಗಿದ್ದರೆ, ಕೊನೆಯ 2 ದಿನಗಳ ಕಾಲ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗುತ್ತಿದೆ.

100ಕ್ಕೂ ಹೆಚ್ಚು ರಾಷ್ಟ್ರಗಳ ಭಾಗಿ, ಜಾಗತಿಕ ರಕ್ಷಣಾ ಕ್ಷೇತ್ರದ ಕೌತುಕ

ಕೇಂದ್ರ ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ 'ಡಿಫೆನ್ಸ್ ಎಕ್ಸಿಬಿಷನ್ ಆರ್ಗನೈಜೇಷನ್' (DEO) ನೇತೃತ್ವದಲ್ಲಿ ಈ ಬೃಹತ್ ಮೇಳ ಆಯೋಜನೆಗೊಳ್ಳುತ್ತಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನೋಡಲ್ ಏಜೆನ್ಸಿಯಾಗಿ ಹಾಗೂ ಭಾರತೀಯ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಸಹ-ಆಯೋಜಕರಾಗಿ ಕಾರ್ಯನಿರ್ವಹಿಸುತ್ತಿವೆ.

ಈ ಬಾರಿಯ ವೈಮಾನಿಕ ಮೇಳದಲ್ಲಿ ವಿಶ್ವದ 100ಕ್ಕೂ ಹೆಚ್ಚು ರಾಷ್ಟ್ರಗಳ ಏರೋಸ್ಪೇಸ್ ಕಂಪನಿಗಳು, ರಕ್ಷಣಾ ಉತ್ಪನ್ನ ತಯಾರಕರು ಮತ್ತು ತಜ್ಞರು ಪಾಲ್ಗೊಳ್ಳಲಿದ್ದಾರೆ. ಅಮೆರಿಕ, ಬ್ರಿಟನ್, ಇಟಲಿ, ಇಸ್ರೇಲ್ ಮತ್ತು ಜಪಾನ್ ಸೇರಿದಂತೆ ಹಲವು ಪ್ರಮುಖ ದೇಶಗಳು ಹಾಗೂ ಭಾರತೀಯ ವಾಯುಪಡೆಯ ಅತ್ಯಾಧುನಿಕ ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಮುಗಿಲಿನಲ್ಲಿ ರೋಮಾಂಚಕ ಸಾಹಸಗಳನ್ನು ಪ್ರದರ್ಶಿಸಲಿವೆ.

ಸ್ವದೇಶಿ ತಂತ್ರಜ್ಞಾನದ ವೈಭವ

ಭಾರತದಲ್ಲಿಯೇ ನಿರ್ಮಿಸಲಾದ 'ತೇಜಸ್' (Tejas) ಲಘು ಯುದ್ಧ ವಿಮಾನ ಮತ್ತು 'ಧ್ರುವ' (Dhruv) ಹೆಲಿಕಾಪ್ಟರ್‌ಗಳು ಈ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿರಲಿವೆ. ಜಾಗತಿಕ ಮಟ್ಟದಲ್ಲಿ ಭಾರತದ ರಕ್ಷಣಾ ತಂತ್ರಜ್ಞಾನ ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಪ್ರದರ್ಶಿಸಲು ಈ ಮೇಳವು ಪ್ರಮುಖ ವೇದಿಕೆಯಾಗಿದೆ.

ಹೊಸ ವೈಮಾನಿಕ ತಂತ್ರಜ್ಞಾನಗಳ ಅನಾವರಣ, ಜಾಗತಿಕ ಕಂಪನಿಗಳ ನಡುವೆ ಪ್ರಮುಖ ವ್ಯಾಪಾರ ವಹಿವಾಟು ಒಪ್ಪಂದಗಳು ಹಾಗೂ ರೋಚಕ ವೈಮಾನಿಕ ಸಾಹಸಗಳಿಗೆ ಬೆಂಗಳೂರಿನ ಯಲಹಂಕ ವಾಯುನೆಲೆ ಸಂಪೂರ್ಣವಾಗಿ ಸಜ್ಜಾಗುತ್ತಿದೆ.

PREV
Read more Articles on
click me!

Recommended Stories

KPSC ಹಗರಣ: ಸಿಐಡಿ ಕಸ್ಟಡಿಯಲ್ಲಿ ಬಸವರಾಜ ಕನ್ನಾಳೆಗೆ ಸೊಳ್ಳೆ ಟ್ರೀಟ್‌ಮೆಂಟ್! ₹35 ಲಕ್ಷ ಡೀಲ್, 70 ಪ್ರಶ್ನೆ ಲೀಕ್!
Bengaluru: ಸಚಿವ ವಾರ್ನಿಂಗ್ ಬಳಿಕವೂ 222ರಲ್ಲಿ ಕೆಲಸ ಮಾಡದ 140 ಬೀದಿ ದೀಪ, ಪಾಲಿಕೆ ಇಂಜಿನಿಯರ್ ಅಮಾನತು