ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಹಿರಿಯ ಸಾಹಿತಿಗಳಾದ ಜಿನದತ್ತ ದೇಸಾಯಿ(Jinadatta Desai), ಡಾ.ನಾ.ಮೊಗಸಾಲೆ (Dr. N Mogasale) ಸೇರಿದಂತೆ ಐವರಿಗೆ 2021ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಹಾಗೂ ಕನ್ನಡಪ್ರಭ ಪತ್ರಿಕೆ ಪುರವಣಿ ಸಂಪಾದಕ ಗಿರೀಶ್ ರಾವ್ ಹತ್ವಾರ್(ಜೋಗಿ)(Girish Rao Hathwar), ಪತ್ರಕರ್ತ ಗಣೇಶ ಅಮೀನಗಡ (Ganesh Aminagada) ಸೇರಿದಂತೆ ಹತ್ತು ಸಾಹಿತಿಗಳಿಗೆ ಸಾಹಿತ್ಯ ಶ್ರೀ ಪ್ರಶಸ್ತಿಯನ್ನು ಘೋಷಿಸಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್ (BV Vasanthakumar), 2021ನೇ ಸಾಲಿನ ವರ್ಷದ ಗೌರವ ಪ್ರಶಸ್ತಿಗೆ ಜಿನದತ್ತ ದೇಸಾಯಿ, ಡಾ.ನಾ.ಮೊಗಸಾಲೆ, ಡಾ.ಸರಸ್ವತಿ ಚಿಮ್ಮಲಗಿ, ಪ್ರೊ.ಬಸವರಾಜ ಕಲ್ಗುಡಿ, ಯಲ್ಲಪ್ಪ ಕೆ.ಕೆ. ಮಠ ಅವರು ಆಯ್ಕೆಗೊಂಡಿದ್ದಾರೆ. ಗೌರವ ಪ್ರಶಸ್ತಿಯು ತಲಾ 50 ಸಾವಿರ ನಗದು, ಪ್ರಶಸ್ತಿ ಫಲಕ, ಶಾಲು, ಪ್ರಮಾಣ ಪತ್ರವನ್ನು ಒಳಗೊಂಡಿದೆ ಎಂದು ತಿಳಿಸಿದರು.
ಸಾಹಿತ್ಯಶ್ರೀ ಪ್ರಶಸ್ತಿ:
ಸಾಹಿತಿಗಳಾದ ಡಾ.ಚಂದ್ರಕಲಾ ಬಿದರಿ(Dr. Chandrakala Bidari,), ಪ್ರೊ.ಎಂ.ಎನ್.ವೆಂಕಟೇಶ್(Prof.M.N. Venkatesh,), ಡಾ.ಚನ್ನಬಸವಯ್ಯ ಹಿರೇಮಠ (Dr. Channabasavya Hiremath), ಡಾ.ಮ.ರಾಮಕೃಷ್ಣ(Dr.M.Ramakrishna,), ಡಾ.ವೈ.ಎಂ.ಭಜಂತ್ರಿ(Dr.Y.M.Bajantri), ಗಿರೀಶ್‌ರಾವ್ ಹತ್ವಾರ್ (ಜೋಗಿ), ಮೈಸೂರು ಕೃಷ್ಣಮೂರ್ತಿ, ಗಣೇಶ್ ಅಮೀನಗಡ, ಆಲೂರು ದೊಡ್ಡನಿಂಗಪ್ಪ ಅವರು ಸಾಹಿತ್ಯಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯು ತಲಾ 25 ಸಾವಿರ ನಗದು, ಪ್ರಶಸ್ತಿ ಫಲಕ, ಶಾಲು, ಪ್ರಮಾಣ ಪತ್ರವನ್ನು ಒಳಗೊಂಡಿದೆ ಎಂದರು.
Bangalore Literature Festival : ಬೆಂಗಳೂರು ಲಿಟರೇಚರ್ ಫೆಸ್ಟಿವಲ್ ಪ್ರಶಸ್ತಿಗೆ ಜೋಗಿ ಭಾಜನ
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಗಮನಾರ್ಹ ಸೇವೆಯನ್ನು ಪರಿಗಣಿಸಿ ಈ 10 ಸಾಹಿತಿಗಳಿಗೆ ಸಾಹಿತ್ಯಶ್ರೀ ಪ್ರಶಸ್ತಿ ನೀಡುತ್ತಿದ್ದು, ಸೃಜನಶೀಲ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದವರಿಗೆ 5 ಪ್ರಶಸ್ತಿಗಳು, ಸೃಜನೇತರ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದವರಿಗೆ 3 ಮತ್ತು ಸಾಹಿತ್ಯ ಪರಿಚಾರಿಕೆ ಹಾಗೂ ಹೊರನಾಡಿನ ಸಾಧಕರಿಗೆ ತಲಾ 1 ಪ್ರಶಸ್ತಿ ನೀಡಲಾಗಿದೆ ಎಂದು ತಿಳಿಸಿದರು.
19 ಸಾಹಿತ್ಯ ಪ್ರಕಾರಗಳಿಗೆ ಪ್ರಶಸ್ತಿ:
ಇದೇ ವೇಳೆ 2020ರಲ್ಲಿ ಪ್ರಕಟವಾದ ವಿವಿಧ 19 ಸಾಹಿತ್ಯ ಪ್ರಕಾರದ ಕೃತಿಗಳನ್ನು ಈ ವರ್ಷದ ಅತ್ಯುತ್ತಮ ಕೃತಿಗಳೆಂದು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅತ್ಯುತ್ತಮ ಕೃತಿ ಪ್ರಶಸ್ತಿಯು ತಲಾ 25 ಸಾವಿರ ನಗದು, ಪ್ರಶಸ್ತಿ ಫಲಕ, ಶಾಲು, ಪ್ರಮಾಣ ಪತ್ರವನ್ನು ಒಳಗೊಂಡಿದೆ ಎಂದು ತಿಳಿಸಿದರು. ಅಲ್ಲದೆ, 10 ದತ್ತಿ ಬಹುಮಾನ ಪಡೆದವರ ಹೆಸರನ್ನು ಅವರು ಘೋಷಿಸಿದರು.
++++
ಅತ್ಯುತ್ತಮ ಕೃತಿ ಪ್ರಶಸ್ತಿ ಪಡೆದವರು:
ಆರಸನಕಟ್ಟೆ ರಂಗನಾಥ-ಕಾರುಣ್ಯದ ಮೋಹಕ ನವಿಲುಗಳೆ(ಕಾವ್ಯ), ಮಂಜುಳಾ ಹಿರೇಮಠ (Manjula Hiremath)- ಗಾಯಗೊಂಡವರಿಗೆ (ನವಕವಿಗಳ ಪ್ರಥಮ ಸಂಕಲನ), ಎಚ್.ಟಿ.ಪೋತೆ: ಬಯಲೆಂಬೊ ಬಯಲು(ಕಾದಂಬರಿ), ಎಸ್.ಸುರೇಂದ್ರನಾಥ್- ಬಂಡಲ್ ಕತೆಗಳು (ಸಣ್ಣಕತೆ), ಟಿ.ಎಸ್.ಮಂಗಳ- ಅರೋಹಿ (ನಾಟಕ), ಎನ್.ರಾಮನಾಥ(N. Ramanath)- ನಿದ್ರಾಂಗನೆಯ ಸೆಳವಿನಲ್ಲಿ (ಲಲಿತ ಪ್ರಬಂಧ). ಬಿ.ವಿ.ಭಾರತಿ (BV Bharathi) ನಕ್ಷತ್ರಗಳ ಸುಟ್ಟನಾಡಿನಲ್ಲಿ(ಪ್ರವಾಸ ಸಾಹಿತ್ಯ), ಕೃಷ್ಣ ಕೊಲ್ಹಾರಕುಲಕರ್ಣಿ- ಗ್ರಾಮ ಸ್ವರಾಜ್ಯ ಸಾಕಾರಗೊಳಿಸಿದ ರಾಮಪ್ಪ ಬಾಲಪ್ಪ ಬಿದರಿ(ಆತ್ಮಕಥೆ), ಬಸವರಾಜ ಸಬರದ- ಹೈದ್ರಾಬಾದ್ ಕರ್ನಾಟಕದ ಆಧುನಿಕ ಸಾಹಿತ್ಯ ಮೀಮಾಂಸೆ(ಸಾಹಿತ್ಯ ವಿಮರ್ಶೆ), ಕೆ.ರವೀಂದ್ರನಾಥ- ಲಿಂಗಣ್ಣ ಕವಿಯ ವರರಮ್ಮ ರತ್ನಾಕರ(ಗ್ರಂಥ ಸಂಪಾದನೆ)
ವಿಜಯಪುರ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮರಾಠಿ ನೃತ್ಯ, ಮಹೇಶ್ ಜೋಶಿ ಆಕ್ರೋಶ..!
ವೈ.ಜಿ.ಭಗವತಿ- ಮತ್ತೆ ಹೊಸ ಗೆಳೆಯರು (ಮಕ್ಕಳ ಸಾಹಿತ್ಯ), ಎಸ್.ಪಿ.ಯೋಗಣ್ಣ- ಆಧ್ಯಾತ್ಮಿಕ ಆರೋಗ್ಯ ದರ್ಶನ(ವಿಜ್ಞಾನ ಸಾಹಿತ್ಯ), ಎಂ.ಎಂ.ಗುಪ್ತ- ಗಾಂಧೀಯ ಅರ್ಥಶಾಸ್ತ್ರ(ಮಾನವಿಕ), ಪಿ.ತಿಪ್ಪೇಸ್ವಾಮಿ ಚಳ್ಳಕೆರೆ- ಮ್ಯಾಸಬೇಡರ ಮೌಖಿಕ ಕಥನಗಳು (ಸಂಶೋಧನೆ), ಕೇಶವ ಮಳಗಿ- ದೈವಿಕ ಹೂವಿನ ಸುಗಂಧ (ಭಾರತೀಯ ಭಾಷೆಯಿಂದ ಅನುವಾದ), ಸುಧಾಕರನ್ ರಾಮಂತಳಿ- ಶಿವಂಡೆ ಕುಡುಂತುಡಿ (ಕನ್ನಡದಿಂದ ಭಾರತೀಯ ಭಾಷೆಗೆ ಅನುದಾನ), ನರಹಳ್ಳಿ ಬಾಲಸುಬ್ರಹ್ಮಣ್ಯ- ಪದಸೋಪಾನ (ಅಂಕಣ ಬರಹ), ಸಿದ್ದಗಂಗಯ್ಯ ಹೊಲತಾಳು- ಸುವರ್ಣಮುಖಿ(ಸಂಕೀರ್ಣ), ಎಸ್.ಬಿ.ಬಸೆಟ್ಟಿ- ಭಾರತದ ರಾಷ್ಟ್ರಧ್ವಜ:ವಿಕಾಸ ಹಾಗೂ ಸಂಹಿತೆ(ಲೇಖಕರ ಮೊದಲ ಸ್ವತಂತ್ರಕೃತಿ) ಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿವೆ.
10 ದತ್ತಿ ಬಹುಮಾನ ಪುರಸ್ಕಾರ:
ಬೆಳದಿಂಗಳ ಚೆಲುವು- ಪದ್ಮಜಾ ಜಯತೀರ್ಥ ಉಮರ್ಜಿ(ಚಿ.ಶ್ರೀನಿವಾಸರಾಜು ದತ್ತಿನಿಧಿ), ದೊಡ್ಡತಾಯಿ-ಎಂ.ಎಸ್.ವೇದಾ(ಚದುರಂಗ ದತ್ತಿನಿಧಿ), ವಠಾರ ಮೀಮಾಂಸೆ- ಆರತಿ ಘಟಿಕಾರ್(ವಿ.ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿನಿಧಿ), ಕಾಗೆ ಮುಟ್ಟಿದ ನೀರು- ಪುರುಷೋತ್ತಮ ಬಿಳಿಮಲೆ(ಸಿಂಪಿ ಲಿಂಗಣ್ಣ ದತ್ತಿನಿಧಿ), ಕುವೆಂಪು ಸ್ತ್ರೀ ಸಂವೇದನೆ- ತಾರಿಣಿ ಶುಭದಾಯಿನಿ(ಪಿ.ಶ್ರೀನಿವಾಸರಾವ್ ದತ್ತಿನಿಧಿ), ಸೀತಾ- ಪದ್ಮರಾಜ ದಂಡಾವತಿ(ಎಲ್.ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ), ಕೂಗ್‌ರ್ ರೆಜಿಮೆಂಟ್- ಕುಶ್ವಂತ್ ಕೋಳಿಬೈಲು(ಮಧುರಚೆನ್ನ ದತ್ತಿನಿಧಿ), ದಿ ಬ್ರೈಡ್ ಇನ್ ದಿ ರೈನಿ ಮೌಂಟೆನ್ - ಕೆ.ಎಂ.ಶ್ರೀನಿವಾಸಗೌಡ, ಜಿ.ಕೆ.ಶ್ರೀಕಂಠ ಮೂರ್ತಿ(ಅಮೆರಿಕನ್ನಡ ದತ್ತಿನಿಧಿ), ಸಮರಸದ ದಾಂಪತ್ಯ- ನಡಹಳ್ಳಿ ವಸಂತ(ಬಿ.ವಿ.ವೀರಭದ್ರಪ್ಪ ದತ್ತಿನಿಧಿ) ಮತ್ತು ಪುರಂದರದಾಸರ ಬಂಡಾಯ ಪ್ರಜ್ಞೆ- ಶ್ರೀನಿವಾಸ ಸಿರನೂರಕರ್(Srinivasa Siranurkar)(ಶ್ರೀಮತಿ ಜಲಜಾ ಶ್ರೀಪತಿ ಆಚಾರ್ಯಗಂಗೂರ್ ದತ್ತಿನಿಧಿ) ಅವರು ದತ್ತಿ ಪ್ರಶಸ್ತಿಗಳಿಗೆ ಆಯ್ಕೆಯಾಗಿದ್ದಾರೆ.