ಹ್ಯಾಂಡ್‌ ಬ್ರೇಕ್‌ ಮರೆತು ಕೆಳಗಿಳಿದ ಚಾಲಕ: ಗ್ಯಾಸ್‌ ಆಟೋ ಹರಿದು 5 ವರ್ಷದ ಬಾಲಕಿ ಸಾವು

By Girish Goudar  |  First Published Mar 20, 2022, 8:03 AM IST

*   ಬಾಲಕಿ ಕುತ್ತಿಗೆ ಮೇಲೆ ಆಟೋ ಹರಿದ ಚಕ್ರ
*   ಬೆಂಗಳೂರಿನ ಕಾವೇರಿಪುರದಲ್ಲಿ ನಡೆದ ಘಟನೆ
*   ಕೆಳಗೆ ಬಿದ್ದ ಮಗಳನ್ನು ಎಳೆದುಕೊಳ್ಳಲು ಯತ್ನಿಸಿ ಬಿದ್ದ ತಾಯಿ
 


ಬೆಂಗಳೂರು(ಮಾ.20):  ಗೂಡ್ಸ್‌ ಆಟೋ ಚಕ್ರ ಹರಿದು ಐದು ವರ್ಷ ಬಾಲಕಿ ಮೃತಪಟ್ಟಿರುವ(Death) ಹೃದಯವಿದ್ರಾವಕ ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕಾಮಾಕ್ಷಿಪಾಳ್ಯ ಕಾವೇರಿಪುರದ ನಿವಾಸಿ ಭುವನಾ (5) ಮೃತ ಬಾಲಕಿ. ಮಾ.17ರಂದು ಬೆಳಗ್ಗೆ 10.30ರ ಸುಮಾರಿಗೆ ಕಾವೇರಿಪುರದ 2ನೇ ಮುಖ್ಯರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಭುವನಾ ಹಾಗೂ ಅವರ ತಾಯಿ ಅನಿತಾ ಅವರು ರಸ್ತೆ ಬದಿ ಸೈಕಲ್‌ನಲ್ಲಿ ಮಾರಾಟ ಮಾಡುವ ಎಳೆನೀರು ಕುಡಿಯುತ್ತಿದ್ದರು. ಈ ವೇಳೆ ಗ್ಯಾಸ್‌ ಸಿಲಿಂಡರ್‌ ತುಂಬಿದ್ದ ಆಟೋವೊಂದು(Auto) ಪಟ್ಟೇಗಾರಪಾಳ್ಯ ಕಡೆಯಿಂದ ಅದೇ ಮಾರ್ಗದಲ್ಲಿ ಬಂದಿದೆ.

Latest Videos

undefined

Mandya Accident: ಪಿಲ್ಲರ್‌ಗೆ ಡಿಕ್ಕಿ ಹೊಡೆದ ಟಿಪ್ಪರ್‌ಗೆ ಬೆಂಕಿ: ಡ್ರೈವರ್‌ ಸಜೀವ ದಹನ

ಈ ವೇಳೆ ಆಟೋ ಚಾಲಕ ಆಟೋ ನಿಲ್ಲಿಸಿಕೊಂಡು ಮಹಿಳೆಯೊಬ್ಬರ(Women) ಜೊತೆ ಕೆಲ ಕಾಲ ಮಾತುಕತೆ ನಡೆಸಿದ್ದಾನೆ. ಈ ವೇಳೆ ಆಟೋ ಚಾಲಕ ಹ್ಯಾಂಡ್‌ ಬ್ರೇಕ್‌ ಹಾಕದೆ ಆಟೋದಿಂದ ಕೆಳಗೆ ಇಳಿದಿದ್ದಾನೆ. ರಸ್ತೆ ಕೊಂಚ ಇಳಿಜಾರು ಇದ್ದಿದ್ದರಿಂದ ಆಟೋ ಮುಂದಕ್ಕೆ ಚಲಿಸಿದೆ. ಈ ವೇಳೆ ಎದುರಿಗೇ ನಿಂತಿದ್ದ ಬಾಲಕಿ ಭುವನಾ ಹಾಗೂ ಅನಿತಾ ಅವರಿಗೆ ಆಟೋ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದಿದ್ದ ಭುವನಾಳನ್ನು ತಾಯಿ ಎಳೆದುಕೊಳ್ಳಲು ಪ್ರಯತ್ನಿಸಿ ಮುಗ್ಗರಿಸಿ ಬಿದ್ದಿದ್ದಾರೆ. ಈ ವೇಳೆ ಆಟೋ ಚಕ್ರ ಭುವನಾಳ ಕುತ್ತಿಗೆ ಮೇಲೆ ಹರಿದಿದೆ.

ಗಂಭೀರವಾಗಿ ಗಾಯಗೊಂಡಿದ್ದ(Injured) ಭುವನಾಳನ್ನು ಅನಿತಾ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ವೈದ್ಯರ ಸಲಹೆ ಮೇರೆಗೆ ನಾಗರಬಾವಿಯ ಖಾಸಗಿ ಆಸ್ಪತ್ರೆಯೊಂದಕ್ಕೆ(Hospital) ಕರೆದೊಯ್ದಿದ್ದಾರೆ. ಈ ವೇಳೆ ಪರೀಕ್ಷಿಸಿದ ವೈದ್ಯರು(Doctor) ಭುವನಾ ಮೃತಪಟ್ಟಿರುವುದಾಗಿ ಘೋಷಿಸಿದರು. ಘಟನೆ ಬಳಿಕ ಆಟೋ ಚಾಲಕ ಧನಂಜಯ ಸ್ಥಳದಲ್ಲೇ ಆಟೋ ಬಿಟ್ಟು ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್‌(Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಂಬಾರ್ ಗೆ ಬಿದ್ದು 2 ವರ್ಷದ ಬಾಲಕಿ ದುರ್ಮರಣ

ವಿಜಯವಾಡ: ಇದೊಂದು ದಾರುಣ ಘಟನೆ.  ಕೃಷ್ಣಾ (Vijayawada) ಜಿಲ್ಲೆಯ ವಿಜನ್ನಪೇಟ ವಲಯದಲ್ಲಿ ದುರಂತ (Tragedy)ಸಂಭವಿಸಿದೆ. ಸಾಂಬಾರ್  ಪಾತ್ರೆಗೆ ಬಿದ್ದು ಎರಡು ವರ್ಷದ ತೇಜಸ್ವಿನಿ (Death) ಸಾವನ್ನಪ್ಪಿದ ಘಟನೆ ಫೆ. 15 ರಂದು ನಡೆದಿತ್ತು.ಕರುಮಂಚಿ ಶಿವ, ಬನ್ನು ದಂಪತಿಯ ಪುತ್ರಿ ತೇಜಸ್ವಿನಿ ದಾರುಣ ಸಾವಿಗೀಡಾಗಿದ್ದಳು. ತಂದೆ ತಾಯಿ ಮಗಳನ್ನು ಕರೆದುಕೊಂಡು ಹುಟ್ಟುಹಬ್ಬದ (Birth Day) ಆಚರಣೆಗಾಗಿ ತಮ್ಮ ಊರಿಗೆ ತೆರಳಿದ್ದರು. ಅಲ್ಲಿ ಹುಟ್ಟುಹಬ್ಬ ಆಚರಿಸಲು ಊಟದ ವ್ಯವಸ್ಥೆ ಮಾಡಲಾಗಿತ್ತು. 

ಅಪಘಾತದಲ್ಲಿ ತೀರಿಕೊಂಡ ಮಗನ ನೆನಪಿಗೆ ಪ್ರತಿಮೆ ಪ್ರತಿಷ್ಠಾಪನೆ

ಅದೇ ವೇಳೆ ಡೈನಿಂಗ್ ಏರಿಯಾದಲ್ಲಿ ಕುರ್ಚಿಯಲ್ಲಿ ಕುಳಿತಿದ್ದ ತೇಜಸ್ವಿನಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಸಾಂಬಾರ್ ಬೌಲ್ ಗೆ ಬಿದ್ದಿದ್ದಾರೆ. ಕುಟುಂಬಸ್ಥರು ತೇಜಸ್ವಿನಿ ಅವರನ್ನು ತಿರುವೂರಿನ ಖಾಸಗಿ ಆಸ್ಪತ್ರೆಗೆ (Hospital)ಕರೆದೊಯ್ದರು. ಪ್ರಥಮ ಚಿಕಿತ್ಸೆಯ ಬಳಿಕ ವಿಜಯವಾಡಕ್ಕೆ ಸ್ಥಳಾಂತರಿಸಲಾಯಿತು. ತೇಜಸ್ವಿನಿ ವಿಜಯವಾಡ ಆಸ್ಪತ್ರೆಯಲ್ಲಿ ಸೋಮವಾರ ನಿಧನವಾಗಿದ್ದಳು.  ಇಂಥದ್ದೇ ಘಟನೆ:  ಜನವರಿ 31, 2020 ರಂದು ಸಂಭವಿಸಿದ ಇದೇ ರೀತಿಯ ಘಟನೆಯಲ್ಲಿ ನಾಲ್ಕು ವರ್ಷದ ಬಾಲಕ ಸಾವನ್ನಪ್ಪಿದ್ದ.ಸಂಬಂಧಿಕರ ಮನೆಗೆ ತೆರಳಿದ್ದ ಬಾಲಕ ಸಾಂಬಾರ್ ಪಾತ್ರಯಲ್ಲಿ ಬಿದ್ದಿದ್ದ.  ಗಾಯಗೊಂಡಿದ್ದ ಬಾಲಕನನ್ನು  ಚಿಕಿತ್ಸೆಗಾಗಿ ಗಾಂಧಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ದುಪ್ಪಟ್ಟಾ ಕೊರಳಿಗೆ ಸುತ್ತಿ ಸಾವು:   ಡ್ಯಾನ್ಸ್ ಮಾಡುತ್ತಿದ್ದ ವೇಳೆ ಕೊರಳಿಗೆ ದುಪ್ಪಟ್ಟ ಸುತ್ತಿಕೊಂಡು 11 ವರ್ಷದ ಬಾಲಕಿ ಮೃತಪಟ್ಟಿದ್ದಳು. ಗುಜರಾತ್‌ನ ಸೂರತ್‌ ನಿಂದ ಪ್ರಕರಣ ವರದಿಯಾಗಿತ್ತು.

click me!