ಗೃಹಲಕ್ಷ್ಮಿ, ಶಕ್ತಿ ಯೋಜನೆ ಬಳಿಕ ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಗುಡ್‌ನ್ಯೂಸ್‌

By Anusha Kb  |  First Published Sep 21, 2024, 9:23 PM IST

ಈಗಾಗಲೇ ಉಚಿತ ಬಸ್ ಪ್ರಯಾಣ, ತಿಂಗಳಿಗೆ ಎರಡು ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆಯ ಮೂಲಕ ಸಾಮಾನ್ಯ ಹೆಣ್ಣು ಮಕ್ಕಳ ಪಾಲಿಗೆ ಅಚ್ಚು ಮೆಚ್ಚು ಎನಿಸಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಈಗ ಉದ್ಯೋಗಸ್ಥ ಮಹಿಳೆಯರಿಗೂ ಒಂದು ಸುಂದರ ಕೊಡುಗೆ ನೀಡಲು ಮುಂದಾಗಿದೆ ಅದೇನು ಮುಂದೆ ಓದಿ.


ಬೆಂಗಳೂರು: ಈಗಾಗಲೇ ಉಚಿತ ಬಸ್ ಪ್ರಯಾಣ, ತಿಂಗಳಿಗೆ ಎರಡು ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆಯ ಮೂಲಕ ಸಾಮಾನ್ಯ ಹೆಣ್ಣು ಮಕ್ಕಳ ಪಾಲಿಗೆ ಅಚ್ಚು ಮೆಚ್ಚು ಎನಿಸಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ಈಗ ಉದ್ಯೋಗಸ್ಥ ಮಹಿಳೆಯರಿಗೂ ಒಂದು ಸುಂದರ ಕೊಡುಗೆ ನೀಡಲು ಮುಂದಾಗಿದೆ ಅದೇನು ಮುಂದೆ ಓದಿ.

ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಸ್ಥ ಮಹಿಳೆಯರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್‌ ನೀಡಲು ಮುಂದಾಗಿದೆ. ಉದ್ಯೋಗಸ್ಥ ಮಹಿಳೆಯರಿಗೆ ಋತು ಸ್ರಾವದ ರಜೆ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಕಾರ್ಮಿಕ ಸಚಿವ ಸಂತೋಷ ಲಾಡ್ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದೆ. ಋತುಸ್ರಾವದ ರಜೆ ನೀಡುವ ಕುರಿತು ಸಲ್ಲಿಕೆಯಾಗಿರುವ ವರದಿಯ ಕುರಿತು ಚರ್ಚೆ ನಡೆದಿದ್ದು, ಋತುಸ್ರಾವದ ರಜೆ ನೀತಿ-2024 ಕಾಯ್ದೆಯನ್ನು ಜಾರಿಗೊಳಿಸುವ ಸಂಬಂಧ ಕಾರ್ಮಿಕ ಸಚಿವರು ಆಸಕ್ತಿ ತೋರಿದ್ದಾರೆ ಎಂದು ತಿಳಿದು ಬಂದಿದೆ.

Tap to resize

Latest Videos

ಮಹಿಳೆಯರಿಗೆ ಪಿರಿಯಡ್ಸ್‌ ರಜೆ, ಒಡಿಶಾ ಸರ್ಕಾರದ ಮಹತ್ವದ ಘೋಷಣೆ!

ಕಾರ್ಮಿಕ ಸಚಿವ ಸಂತೋಷ ಲಾಡ್ ಅವರ ನೇತೃತ್ವದಲ್ಲಿ ನಡೆದ ಈ ಉನ್ನತ ಮಟ್ಟದ ಸಭೆಯಲ್ಲಿ ಡಾ. ಪುಷ್ಪಲತಾ, ಜಯಮ್ಮ, ಡಾ. ಸುಪ್ರಿಯ, ರುತ್‌ ಮನೋರಮಾ, ಅನುರಾಗ್‌ ಸಿಂಗ್ಲಾ ಮುಂತಾದ ಮಹಿಳಾ ವೈದ್ಯರು ಸೇರಿದಂತೆ ಮಹಿಳಾ ಸಂಘಟನೆ ಮುಖಂಡರು ಭಾಗಿಯಾಗಿದ್ದರು.  ಕಾರ್ಮಿಕ ಇಲಾಖೆಯ ಹಿರಿಯ ಅಧಿಕಾರಿಗಳು ಸಚಿವರು ಇದ್ದ ಈ ಸಭೆಯಲ್ಲಿ ರಾಜ್ಯದಲ್ಲಿ ಮಹಿಳೆಯರಿಗೆ ಮುಟ್ಟಿನ ರಜೆ ನೀಡುವ ಬಗ್ಗೆ ಗಂಭೀರ ಸಮಾಲೋಚನೆ ನಡೆದಿದೆ. 

ಈ ಸಭೆಯಲ್ಲಿ ರಜೆ ನೀಡುವ ಸಂಬಂಧ ಎಲ್ಲಾ ಇಲಾಖೆಗಳ ಜೊತೆಗೆ ಚರ್ಚೆ ನಡೆಸಲು ತೀರ್ಮಾನಿಸಲಾಗಿದ್ದು,  ರಾಜ್ಯದಲ್ಲಿ ಮಹಿಳೆಯರಿಗೆ ವಾರ್ಷಿಕವಾಗಿ 6 ದಿನಗಳ ರಜೆ ನೀಡುವ ಕುರಿತು ಚಿಂತನೆ ನಡೆದಿದೆ ಎಂದು ತಿಳಿದು ಬಂದಿದೆ. 

ಸಭೆಯ ಬಳಿಕ ಕಾರ್ಮಿಕ ಸಚಿವ ಸಂತೋಷ ಲಾಡ್ ಮಾಧ್ಯಮಗಳ ಜೊತೆ ಮಾತನಾಡಿದ್ದು, ಹೆಣ್ಣುಮಕ್ಕಳಿಗೆ ವರ್ಷಕ್ಕೆ 12 ದಿನಗಳ ರಜೆ ಕೊಡಬೇಕೆಂದು ಚರ್ಚೆಯಾಗಿದೆ. 
ಮಹಿಳೆಯರಿಗೆ ಋತುಸ್ರಾವದ ರಜೆ ಕೊಡಬೇಕೆಂಬ ಒತ್ತಾಯವಿತ್ತು. ಅದಕ್ಕಾಗಿ ಸರ್ಕಾರದಿಂದ ಸಮಿತಿಯೊಂದನ್ನು ರಚಿಸಲಾಗಿತ್ತು, ಹಿರಿಯ ವೈದ್ಯೆ ಡಾ.ಸಪ್ನಾ ಅವರ ನೇತೃತ್ವದಲ್ಲಿ ಕಮಿಟಿ ರಚಿಸಿದ್ದೆವು. ಡಾ.ಸಪ್ನಾ ನೇತೃತ್ವದ ಸಮಿತಿಯಿಂದ ವರದಿ ಸಲ್ಲಿಕೆಯಾಗಿದೆ. ವರದಿಯಲ್ಲಿ ವರ್ಷದಲ್ಲಿ ಕನಿಷ್ಠ 6 ದಿನಗಳ ಋತುಸ್ರಾವದ ರಜೆಯನ್ನಾದರೂ ನೀಡಬೇಕು ಎಂಬ ಶಿಫಾರಸ್ಸು ಇದೆ. ಆದರೆ ಇದರ ಸಾಧಕ ಬಾಧಕಗಳನ್ನ ಅರಿಯಬೇಕಿದೆ. ಎಲ್ಲಾ ಇಲಾಖೆಗಳಿಗೆ ಇದರ ವರದಿ ಕಳಿಸಿ ಕೊಡುತ್ತೇವೆ. ಸಾರ್ವಜನಿಕರಿಂದಲೂ ಅಭಿಪ್ರಾಯ ಸಂಗ್ರಹಿಸುತ್ತೇವೆ. ಎಲ್ಲವನ್ನು ನೋಡಿ ಋತುಸ್ರಾವದ ರಜೆ ನೀಡುವ ಕುರಿತು ತಿರ್ಮಾನ ಮಾಡಲಾಗುತ್ತದೆ ಎಂದು ಸಚಿವು ಹೇಳಿದ್ದಾರೆ.

ಮುಟ್ಟಿನ ರಜೆ ಆದೇಶ ನೀಡೋಲ್ಲ: ಸುಪ್ರೀಂಕೋರ್ಟ್

ಕೇರಳ ಸೇರಿ ಬೇರೆ ಬೇರೆ ರಾಜ್ಯಗಳಲ್ಲಿ ಈ ವ್ಯವಸ್ಥೆಯಿದೆ. ವಾರ್ಷಿಕ 6 ದಿನಗಳ ರಜೆಗೆ ಶಿಫಾರಸು ಮಾಡಿದ್ದಾರೆ, ಇದನ್ನು ಸಾರ್ವಜನಿಕ ಅಭಿಪ್ರಾಯಕ್ಕೆ ಬಿಡುತ್ತೇವೆ ಎಂದು ಸಂತೋಷ್‌  ಲಾಡ್‌ ಹೇಳಿದ್ದಾರೆ. 

click me!