ಅರ್ಧ ಬೆಂಗಳೂರಿಗೆ ಸೆ.21ರಂದು ಕಾವೇರಿ ನೀರು ಪೂರೈಕೆ ಸ್ಥಗಿತ: ನಿಮ್ ಏರಿಯಾ ಇದೇನಾ ಪಟ್ಟಿ ನೋಡಿ..!

By Sathish Kumar KH  |  First Published Sep 19, 2024, 6:55 PM IST

ಬೆಂಗಳೂರಿನಲ್ಲಿ ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯಿಂದಾಗಿ ಶನಿವಾರ ನಗರದ ಹಲವು ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.


ಬೆಂಗಳೂರು (ಸೆ.19): ಕಾವೇರಿ ನದಿ ನೀರಿನ ಮೇಲೆ ಆಶ್ರಯವಾಗಿರುವ ಬೆಂಗಳೂರಿನ ಅರ್ಧ ಭಾಗಕ್ಕೆ ಶನಿವಾರ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಪ್ರಕಟಣೆಯಲ್ಲಿ ತಿಳಿಸಿದೆ. ಮುಂದಿನ ಎರಡು ದಿನಗಳಲ್ಲಿ ಸರಬರಾಜು ಮಾಡುವ ನೀರಿನ್ನು ಸಂಗ್ರಹಿಸಿ ಇಟ್ಟುಕೊಂಡು ಮಿತವಾಗಿ ಬಳಸುವಂತೆ ಗ್ರಾಹಕರಲ್ಲಿ ಮನವಿ ಮಾಡಿಕೊಂಡಿದೆ.

ಬೆಂಗಳೂರಿಗೆ ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆಯನ್ನು ಚಾಲನೆಗೊಳಿಸುವ ಹಿನ್ನಲೆಯಲ್ಲಿ 5ನೇ ಹಂತದ 700 ಮಿ.ಮೀ ಎಂ.ಎಸ್ ಕೊಳವೆ ಮಾರ್ಗವನ್ನು ಹೆಗ್ಗನಹಳ್ಳಿ ಜಿ.ಎಲ್.ಆರ್ ಆವರಣದಲ್ಲಿ ಹಾಲಿ ಇರುವ 5 ಎಂ.ಎಲ್ ಜಿ.ಎಲ್.ಆರ್ ಗೆ ಇರುವ ಫೇಸ್ 2 ಇನ್‌ಲೆಟ್ 1000 ಮಿ.ಮೀ. ಎಂ.ಎಸ್ ಕೊಳವೆ ಮಾರ್ಗಕ್ಕೆ ಜೋಡಣೆ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಫೇಸ್-2 ಕೊಳವೆ ಮಾರ್ಗದಲ್ಲಿ ನಿರಂತರ 24*7 ನೀರು ಸರಬರಾಜು ಇರುವುದರಿಂದ ಸೆ.21ರಂದು ಶನಿವಾರ ಮಧ್ಯಾಹ್ನ 1.00 ರಿಂದ ರಾತ್ರಿ 10.00 ಗಂಟೆವರೆಗೆ ಒಟ್ಟು 9 ಗಂಟೆಗಳ ಕಾಲ ನೀರು ಸರಬರಾಜು ಸ್ಥಗಿತಗೊಳಿಸುವ (Local Shutdown) ಅವಶ್ಯಕತೆ ಇರುತ್ತದೆ. ಆದ್ದರಿಂದ ಈ ಅವಧಿಯಲ್ಲಿ ಬೆಂಗಳೂರಿನ ಈ ಕೆಳಕಂಡ ಪ್ರದೇಶದಲ್ಲಿ ಶನಿವಾರದಂದು ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Tap to resize

Latest Videos

ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆ ವಿಐಪಿ ಪೇಷಂಟ್ ವಾರ್ಡ್‌ನಲ್ಲಿ ಬೆಂಕಿ: ಮೂವರಿಗೆ ಗಾಯ!

ನೀರು ಸರಬರಾಜು ವ್ಯತ್ಯಯವಾಗುವ ಪ್ರದೇಶಗಳ ಪಟ್ಟಿ ಇಲ್ಲಿದೆ ನೋಡಿ..

click me!