ಪಿರಿಯಡ್ ಸಮಯದಲ್ಲಿ ಮಹಿಳೆಯರು ಅಸಹನೀಯ ನೋವನ್ನು ಅನುಭವಿಸುತ್ತಾರೆ. ಈಗ ಒಡಿಶಾ ಸರ್ಕಾರವು ಸ್ವಾತಂತ್ರ್ಯ ದಿನಾಚರಣೆಯಂದು ಸರ್ಕಾರಿ ಮತ್ತು ಖಾಸಗಿ ವಲಯದ ಕೆಲಸ ಮಾಡುವ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದೆ.
ಯಾವಾಗ ರಜೆ ತೆಗೆದುಕೊಳ್ಳಬಹುದು..
ಉಪಮುಖ್ಯಮಂತ್ರಿ ಪ್ರವತಿ ಪರಿಡಾ ಅವರು ಕಟಕ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈಗ ಮಹಿಳಾ ನೌಕರರು ತಮ್ಮ ಋತುಚಕ್ರದ ಮೊದಲ ಅಥವಾ ಎರಡನೇ ದಿನ ನಮ್ಮ ಸರ್ಕಾರ ರಜೆ ನೀಡುತ್ತದೆ ಎಂದು ಘೋಷಿಸಿದ್ದಾರೆ.
ರಜೆ ಐಚ್ಚಿಕವಾಗಿರುತ್ತದೆ..
ಇದು ಐಚ್ಛಿಕವಾಗಿರುತ್ತದೆ. ಪಿರಿಯಡ್ಸ್ ಆದಾಗ ಮಳೆಯರು ಮೊದಲ ಅಥವಾ ಎರಡನೇ ದಿನ ರಜೆ ತೆಗೆದುಕೊಳ್ಳಬಹುದು. ಈ ನಿಯಮ ಖಾಸಗಿ ಸಂಸ್ಥೆಗಳಿಗೂ ಅನ್ವಯಿಸುತ್ತದೆ. ಆಗ ಅವರ ವೇತನ ಕಡಿತ ಮಾಡುವ ಹಾಗಿಲ್ಲ.
ಉದ್ದೇಶ ವಿವರಿಸಿದ ಡಿಸಿಎಂ
ಮಹಿಳೆಯರು ತಮ್ಮ ಆರೋಗ್ಯ ಮತ್ತು ಕಲ್ಯಾಣವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ನಾವು ಸಹಾಯ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಪಿರಿಯಡ್ಸ್ ರಜೆ ನೀಡಿದ ಮೊದಲ ರಾಜ್ಯ ಒಡಿಶಾ
ಇದಕ್ಕೂ ಮೊದಲು ಹಲವು ರಾಜ್ಯಗಳಲ್ಲಿ ಮಹಿಳೆಯರು ರಜೆಗಾಗಿ ಒತ್ತಾಯ ಮಾಡಿದ್ದರು. ಆದರೆ, ಪಿರಿಯಡ್ಸ್ ರಜೆ ನೀಡುವ ಮೊದಲ ರಾಜ್ಯ ಒಡಿಶಾ ಎನಿಸಕೊಂಡಿದೆ.
ಸ್ಮೃತಿ ಇರಾನಿ ಹೇಳಿಕೆಗೆ ವಿರೋಧ ವ್ಯಕ್ತವಾಗಿತ್ತು
ಬಿಜೆಪಿಯ ಹಿರಿಯ ಮಹಿಳಾ ನಾಯಕಿ ಸ್ಮೃತಿ ಇರಾನಿ ಈ ವಿಷಯದ ಬಗ್ಗೆ ಹೇಳಿಕೆ ನೀಡಿದಾಗ ದೇಶಾದ್ಯಂತ ಸಂಚಲನ ಮೂಡಿತ್ತು. ಜನರು ಅವರನ್ನು ವಿರೋಧಿಸಲು ಪ್ರಾರಂಭಿಸಿದರು.