ಇದೊಂದು ಪದಗಳಿಗೆ ಮೀರಿದ ಅನುಭವ, ತ್ರಿವೇಣಿಯಲ್ಲಿ ಮಿಂದೆದ್ದ ಡಿಕೆಶಿ ಪುತ್ರಿ ಐಶ್ವರ್ಯ

Published : Feb 07, 2025, 01:11 PM ISTUpdated : Feb 07, 2025, 01:18 PM IST
 ಇದೊಂದು ಪದಗಳಿಗೆ ಮೀರಿದ ಅನುಭವ, ತ್ರಿವೇಣಿಯಲ್ಲಿ ಮಿಂದೆದ್ದ ಡಿಕೆಶಿ ಪುತ್ರಿ ಐಶ್ವರ್ಯ

ಸಾರಾಂಶ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಡಿಕೆಶಿ ಹೆಗ್ಡೆ ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳಕ್ಕೆ ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. "ದಿ ಸೇಕ್ರೆಡ್ ಶಿಫ್ಟ್ ಕಾನ್ಕ್ಲೇವ್"ನಲ್ಲಿ ಪ್ಯಾನೆಲಿಸ್ಟ್ ಆಗಿ ಭಾಗವಹಿಸಿದರು. ಸಾಮಾಜಿಕ ಜಾಲತಾಣದಲ್ಲಿ ಮೇಳದ ಅನುಭವ ಹಂಚಿಕೊಂಡ ಐಶ್ವರ್ಯ, ಅದನ್ನು ಪದಗಳಿಗೆ ಮೀರಿದ ಅನುಭವ ಎಂದು ಬಣ್ಣಿಸಿದ್ದಾರೆ.

ಪ್ರಯಾಗರಾಜ್ (Prayagraj) ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ (Mahakumbh Mela)ಕ್ಕೆ ಕೋಟ್ಯಾಂತರ ಭಕ್ತರು ಆಗಮಿಸ್ತಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು, ಪಾವನರಾಗ್ತಿದ್ದಾರೆ. ದೇಶದ ಮೂಲೆ ಮೂಲೆಗಳಿಂದ ಪ್ರಯಾಗರಾಜ್ ಗೆ ಭಕ್ತರು ಹರಿದು ಬರ್ತಿದ್ದರೆ ವಿದೇಶದಿಂದ ಬರ್ತಿರುವವರ ಸಂಖ್ಯೆ ಕೂಡ ಕಡಿಮೆ ಏನಿಲ್ಲ. ಕರ್ನಾಟಕದ ಅನೇಕ ಸೆಲೆಬ್ರಿಟಿಗಳು ಈಗಾಗಲೇ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಈಗ ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (Karnataka Deputy Chief Minister DK Shivakumar) ಪುತ್ರಿ ಹಾಗೂ ಉದ್ಯಮಿ ಐಶ್ವರ್ಯ ಡಿಕೆಶಿ ಹೆಗ್ಡೆ (Aisshwarya DKS Hegde) ಸರದಿ. ಯುವಕರಿಗೆ ಸ್ಪೂರ್ತಿಯಾಗಿರುವ ಯುವ ಉದ್ಯಮಿ ಐಶ್ವರ್ಯ, ಮಹಾಕುಂಭ ಮೇಳಕ್ಕೆ ಭೇಟಿ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ ಸುಂದರ ಕ್ಷಣಗಳ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.

ಐಶ್ವರ್ಯ ಡಿಕೆಶಿಹೆಗ್ಡೆ ಅತ್ಯಂತ ಸರಳ ಡ್ರೆಸ್ ನಲ್ಲಿ ಮಹಾ ಕುಂಭ ಮೇಳವನ್ನು ಸುತ್ತಿದ್ದಾರೆ. ಮಾಸ್ಕ್ ಧರಿಸಿ ಕುಂಭ ಮೇಳದ ಪ್ರತಿಯೊಂದು ಜಾಗವನ್ನು ವೀಕ್ಷಣೆ ಮಾಡಿದ ಅವರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ರು. ನಂತ್ರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಅದ್ರ ವಿಡಿಯೋವನ್ನು ಹಂಚಿಕೊಂಡಿರುವ ಐಶ್ವರ್ಯ, ದೊಡ್ಡ ಪೋಸ್ಟ್ ಹಾಕಿದ್ದಾರೆ. 

'ಕುಂಭಮೇಳಕ್ಕೆ ನಾನು ಹೋಗ್ತಿನೋ ಬಿಡ್ತೀನೋ ಅವರಿಗೇನು ಪ್ರಾಬ್ಲಂ?' ಆರ್ ಅಶೋಕ್‌ ವಿರುದ್ಧ ಡಿಕೆ ಶಿವಕುಮಾರ ಗರಂ

ಮಹಾಕುಂಭ 2025, ಇದು ಪದಗಳಿಗೆ ಮೀರಿದ ಅನುಭವ. ವಿಶ್ವದ ಅತಿದೊಡ್ಡ ಕೂಟಗಳಲ್ಲಿ ಒಂದಾದ ಸಂಪೂರ್ಣ ಶಕ್ತಿ, ಏಕತೆ ಮತ್ತು ಆಧ್ಯಾತ್ಮಿಕ ಆಳವು ನನ್ನನ್ನು ಮಂತ್ರಮುಗ್ಧಗೊಳಿಸಿದೆ ಎಂದು ಐಶ್ವರ್ಯ ಬರೆದಿದ್ದಾರೆ. ಅಷ್ಟೇ ಅಲ್ಲ, ಭಕ್ತಿ ಮತ್ತು ಸಾಮೂಹಿಕ ಪ್ರಜ್ಞೆಯು ನಿಜವಾಗಿಯೂ ದೈವಿಕವೆನಿಸುವ ವಾತಾವರಣವನ್ನು ಸೃಷ್ಟಿಸಿತು ಎಂದು ಐಶ್ವರ್ಯ ಹೇಳಿದ್ದಾರೆ..

ಇದೇ ಸಮಯದಲ್ಲಿ ಐಶ್ವರ್ಯ, ದಿ ಸೇಕ್ರೆಡ್ ಶಿಫ್ಟ್ ಕಾನ್ಕ್ಲೇವ್ ನಲ್ಲಿ ಪಾಲ್ಗೊಂಡಿರುವ ವಿಷ್ಯವನ್ನು ತಿಳಿಸಿದ್ದಾರೆ. ಅವರು ದಿ ಸೇಕ್ರೆಡ್ ಶಿಫ್ಟ್ ಕಾನ್ಕ್ಲೇವ್ ನಲ್ಲಿ ಪ್ಯಾನೆಲಿಸ್ಟ್ ಆಗಿದ್ದರು. ಈ ವೇಳೆ ಸಂಗೀತ ನಿರ್ದೇಶಕ ರಿಕ್ಕಿ ಕೀಚ್ ಜೊತೆ ವೇದಿಕೆ ಹಂಚಿಕೊಳ್ಳುವ ಅವಕಾಶ ಐಶ್ವರ್ಯ ಅವರಿಗೆ ಸಿಕ್ಕಿತ್ತು. ಇನ್ಸ್ಟಾದಲ್ಲಿ ಈ ವಿಷ್ಯವನ್ನೂ ಐಶ್ವರ್ಯ ಬರೆದಿದ್ದಾರೆ. ಅವರ ಪ್ರತಿ ಸಂಭಾಷಣೆ ಮತ್ತು ಆಳವಾದ ಬುದ್ಧಿವಂತಿಕೆಗೆ ನಾನು ಕೃತಜ್ಞನಾಗಿದ್ದೇನೆ ಎಂದು ಐಶ್ವರ್ಯ ಬರೆದಿದ್ದಾರೆ.

ಫೆಬ್ರವರಿ 9 -10 ರಂದು ಡಿಕೆಶಿ, ಮಹಾ ಕುಂಭ ಮೇಳಕ್ಕೆ ಭೇಟಿ ನೀಡೋದಾಗಿ ಹೇಳಿದ್ದಾರೆ. ಅದಕ್ಕೂ ಮುನ್ನ ಮಗಳು ಐಶ್ವರ್ಯ ಭೇಟಿ ನೀಡಿದ್ದಾರೆ. ಐಶ್ವರ್ಯ ವಿಡಿಯೋ ನೋಡಿವ ಬಳಕೆದಾರರು ಸಂತೋಷ ವ್ಯಕ್ತಪಡಿಸಿದ್ದಾರೆ. ಮಹಾಕುಂಭ ಮೇಳಕ್ಕೆ ಭೇಟಿ ನೀಡುವ ಅವಕಾಶ ನಿಮಗೆ ಸಿಕ್ಕಿದ್ದು, ನೀವು ಪುಣ್ಯವಂತರು ಎಂದಿದ್ದಾರೆ. 

ಪ್ರಯಾಗ್‌ರಾಜ್‌ನಲ್ಲಿ ಪವಿತ್ರಾ ಗೌಡ: ಈ ಪುಣ್ಯಸ್ನಾನದ ಬಳಿಕ ನೆಗೆಟಿವ್ ಎನರ್ಜಿಯೆಲ್ಲಾ ಮಾಯ!

ಐಶ್ವರ್ಯ ಸ್ವಂತ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುತ್ತಿದ್ದು, ಬಳಕೆದಾರರು ಇದ್ರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲ್ಲಿ ರಾಜಕೀಯ ಬರುವುದಿಲ್ಲ. ಐಶ್ವರ್ಯ ಶಿಕ್ಷಣ ಸಂಸ್ಥೆ ಮುನ್ನಡೆಸುತ್ತಿರುವ ಕಾರಣ ಅವರು ನಮ್ಮ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಡಿಕೆ ಶಿವಕುಮಾರ್ ನಡೆಸುತ್ತಿರುವ ಹಲವಾರು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಹೊತ್ತಿರುವ ಐಶ್ವರ್ಯ, ಸ್ವಂತ ಶಿಕ್ಷಣ ಸಂಸ್ಥೆಯನ್ನೂ ಮುನ್ನಡೆಸುತ್ತಿದ್ದಾರೆ.  ಐಶ್ವರ್ಯ, ಕೋಟ್ಯಾಂತರ ಆಸ್ತಿಯ ಒಡತಿ. ಆದ್ರೆ ತಮ್ಮ ಸರಳತೆಯಿಂದ ಅವರು ಜನರ ಮನಸ್ಸು ಗೆದ್ದಿದ್ದಾರೆ. ಐಶ್ವರ್ಯ, ಶಾಲಾ ಕಾರ್ಯಕ್ರಮದಲ್ಲಿ ಮೋಟಿವೇಷನಲ್ ಸ್ಪೀಕರ್ ಕೂಡಾ ಹೌದು. ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ಅವರ ಮಗ ಅಮರ್ಥ್ಯರನ್ನು ಐಶ್ವರ್ಯ ವರಿಸಿದ್ದಾರೆ. 

ಮಹಾಕುಂಭ ಮೇಳ ಇದೇ ಫೆಬ್ರವರಿ 26ಕ್ಕೆ ಮುಕ್ತಾಯಗೊಳ್ಳಲಿದೆ. ಹಾಗಾಗಿ ಪ್ರಯಾಗರಾಜ್ಗೆ ಹರಿದು ಬರ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಗಂಗೆ ಸ್ನಾನ ಮಾಡಿದ್ದಾರೆ. 
 

PREV
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!