ನಮ್ಮ ಮೆಟ್ರೋ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಫೆಬ್ರವರಿ 1 ರಿಂದ ದರ ಏರಿಕೆ ಆತಂಕ ಎದುರಿಸುತ್ತಿದ್ದ ಪ್ರಯಾಣಿಕರು ಇದೀಗ ಕೇಂದ್ರ ಸರ್ಕಾರದ ನಿರ್ಧಾರದಿಂದ ನಿರಾಳರಾಗಿದ್ದಾರೆ.
ಬೆಂಗಳೂರು(ಜ.30) ನಮ್ಮ ಮೆಟ್ರೋ ಬೆಂಗಳೂರಿಗರ ಜೀವನಾಡಿಯಾಗಿದೆ. ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ, ಸಮಯದ ಅಭಾವದ ಕೊರತೆ ನೀಗಿಸಿರುವ ಮೆಟ್ರೋ ಲಕ್ಷಾಂತರ ಪ್ರಯಾಣಿಕರ ಪ್ರಯಾಣ ಸುಲಭಗೊಳಿಸಿದೆ. ಆದರೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ದರ ಏರಿಕೆ ಶಾಕ್ ಕೊಡಲು ಮುಂದಾಗಿತ್ತು. ಫೆಬ್ರವರಿ 1 ರಿಂದ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮಾಡಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ ಬಿಎಂಆರ್‍ಸಿಎಲ್ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದೆ. ಮೆಟ್ರೋ ದರ ಏರಿಕೆ ಮಾಡುವ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ತಡೆ ನೀಡಿದೆ. ಈ ಮೂಲಕ ಬೆಂಗಳೂರಿನ ಮೆಟ್ರೋ ಪ್ರಯಾಣಿಕರ ದರ ಏರಿಕೆ ಆತಂಕವನ್ನು ನಿರಾಳಗೊಳಿಸಿದೆ.
ಜನವರಿ 17 ರಂದು ಬಿಎಂಆರ್‌ಸಿಎಲ್‌ನ ದರ ನಿಗಧಿ ಸಮಿತಿ ಮಹತ್ವದ ಸಭೆ ನಡೆಸಿತ್ತು. ಈ ಸಭೆಯಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆಗೆ ಚರ್ಚೆ ನಡಸಲಾಗಿತ್ತು. ಬಳಿಕ ಒಮ್ಮತವಾಗಿ ಮೆಟ್ರೋ ಪ್ರಯಾಣ ದರ ಏರಿಕೆ ಮಾಡಲು ನಿರ್ಧರಿಸಿತ್ತು. ಶೇಕಡಾ 45 ರಷ್ಟು ಟಿಕೆಟ್ ದರ ಏರಿಕೆ ಮಾಡಲು ಮೆಟ್ರೋ ದರ ಸಮಿತಿ ಶಿಫಾರಸ್ಸು ಮಾಡಿತ್ತು. ಈ ಶಿಫಾಸ್ಸಿನ ಪ್ರಕಾರ ಬಿಎಂಆರ್‌ಸಿಎಲ್ ಫೆಬ್ರವರಿ 1 ರಿಂದ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಮಾಡಲು ಮುಂದಾಗಿತ್ತು. ಮೆಟ್ರೋದ ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ಸಂಸದ ಪಿಸಿ ಮೋಹನ್ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದರು. ಇದೀಗ ಕೇಂದ್ರ ಸರ್ಕಾರ ಬಿಎಂಆರ್‌ಸಿಎಲ್ ಪ್ರಯಾಣದರ ಏರಿಕೆ ನಿರ್ಧಾರಕ್ಕೆ ಬ್ರೇಕ್ ಹಾಕಿದೆ.
Namma Metro: ಮೆಟ್ರೋ ನಿಲ್ದಾಣಗಳಲ್ಲಿ ಶಿಶು ಸ್ತನ್ಯಪಾನ ಕೇಂದ್ರ | Karnataka Express | Suvarna News
ಮೆಟ್ರೋ ಪ್ರಯಾಣ ಟಿಕೆಟ್ ದರ ಏರಿಕೆ ಕುರಿತು ಕೇಂದ್ರ ಸರ್ಕಾರ, ಬಿಎಂಆರ್‌ಸಿಎಲ್ ಬಳಿ ಮಾಹಿತಿ ಕೇಳಿದೆ. ಶೇಕಡಾ 45 ರಷ್ಟು ಟಿಕೆಟ್ ದರ ಏರಿಕೆ ಮಾಡಿದರೆ ಪ್ರಯಾಣಿಕರಿಗೆ ಸಮಸ್ಯೆ ಆಗಲಿದೆ. ದರ ಏರಿಕೆಗೆ ಯಾವ ಮಾನದಂಡಗಳನ್ನು ಪಾನೆ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಬಿಎಂಆರ್‌ಸಿಎಲ್ ಬಳಿ ಪ್ರಶ್ನೆ ಮಾಡಿದೆ. ಇದೀಗ ದರ ಏರಿಕೆಗೆ ಕಾರಣವೇನು? ಈ ಕುರಿತು ವಿವರ ವರದಿ ನೀಡುವಂತೆ ಕೇಂದ್ರ ಸರ್ಕಾರ ನಮ್ಮ ಮೆಟ್ರೋಗೆ ಸೂಚಿಸಿದೆ.
ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದ ಇದೀಗ ಬಿಎಂಆರ್‌ಸಿಎಲ್ ಮೆಟ್ರೋ ದರ ಏರಿಕೆ ನಿರ್ಧಾರ ಕೈಬಿಟ್ಟಿದೆ. ಸದ್ಯ ಬಿಎಂಆರ್‌ಸಿಎಲ್ ಕೇಂದ್ರ ಸರ್ಕಾರಕ್ಕೆ ವರದಿ ನೀಡಲು ಮುಂದಾಗಿದೆ. ಇತ್ತ ಸಂಸದ ಪಿಸಿ ಮೋಹನ್, ಇದು ಬೆಂಗಳೂರು ಜನತೆಗೆ ಸಿಕ್ಕ ಗೆಲುವು ಎಂದಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪಿಸಿ ಮೋಹನ್, ಬಿಎಂಆರ್‌ಸಿಎಲ್ ಶೇಕಡಾ 45ರಷ್ಟು ಟಿಕೆಟ್ ಪ್ರಯಾಣ ದರ ಏರಿಕೆಗೆ ಮುಂದಾಗಿತ್ತು. ಫೆ.1ರಿಂದ ದರ ಏರಿಕೆಗೆ ಮುಂದಾಗಿದ್ದ ಮೆಟ್ರೋ ನಿರ್ಧಾರಕ್ಕೆ ಕೇಂದ್ರ ಸರ್ಕಾರ ತಡೆ ನೀಡಿದೆ. ಈ ಕುರಿತು ಸಂಪೂರ್ಣ ವರದಿ ನೀಡುವಂತೆ ಕೇಂದ್ರ ಸರ್ಕಾರ ಬಿಎಂಆರ್‌ಸಿಎಲ್‌ಗೆ ಸೂಚಿಸಿದೆ. ಇದು ಬೆಂಗಳೂರು ಜನತೆಗೆ ಸಿಕ್ಕ ಗೆಲುವು,ಮೂಲಕ ಮೆಟ್ರೋ ದರ ಹೆಚ್ಚಳದಲ್ಲಿನ ಪ್ರಮಾಣ, ಜವಾಬ್ದಾರಿಗಳಲ್ಲಿ ಪಾರದರ್ಶಕತೆ ತರಲು ಕೇಂದ್ರದ ನಿರ್ಧಾರ ಸ್ವಾಗತಾರ್ಹವಾಗಿದೆ ಎಂದಿದ್ದಾರೆ.
ಈ ನಿರ್ಧಾರದಿಂದ ಮೆಟ್ರೋ ಪ್ರಯಾಣಿಕರು ನಿರಾಳರಾಗಿದ್ದಾರೆ. ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಬದುಕು ದುಬಾರಿಯಾಗುತ್ತಿದೆ. ಇದರ ಬೆನ್ನಲ್ಲೇ ಲಕ್ಷಾಂತರ ಮಂದಿ ಪ್ರತಿ ದಿನದ ಪ್ರಯಾಣಕ್ಕೆ ನೆಚ್ಚಿಕೊಂಡಿರುವ ಮೆಟ್ರೋ ಪ್ರಯಾಣ ದರ ಏರಿಕೆ ಜನಸಾಮಾನ್ಯರಲ್ಲಿ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇತ್ತು. ಆದರೆ ಈ ಆತಂಕ ದೂರವಾಗಿದೆ. ಸದ್ಯ ಬಿಎಂಆರ್‌ಸಿಎಲ್ ದರ ಏರಿಕೆ ಕುರಿತು ವರದಿ ನೀಡಬೇಕಿದೆ. ಈ ವರದಿಯಲ್ಲಿ ಕಾರಣಗಳನ್ನೂ ತಿಳಿಸಬೇಕಿದೆ.
ಬೆಂಗಳೂರು: ಮೆಟ್ರೋ ಟಿಕೆಟ್ ದರ 40% ಹೆಚ್ಚಳ ಪ್ರಸ್ತಾಪಕ್ಕೆ ಜನರಿಂದ ತೀವ್ರ ವಿರೋಧ